ಒಮ್ಮೊಮ್ಮೆ ಹೀಗೇ
ಚಡಪಡಿಸುವಾಗ
ನಿನ್ನ ದನಿ ಕೇಳಲಿ
ಹಗುರಾಗುವೆ
ಮೆಲ್ಲಗೆ
ಎದೆಯ ಭಾರವಿಳಿದು
ನನ್ನ ಮಾತುಗಳು
ನಿನ್ನೊಂದಿಗೆ
ಮಾತನಾಡುವುದಿಲ್ಲ
ನಮ್ಮ ನಡುವೆ
ಸಂಪೂರ್ಣ
ಮೌನವೂ ಇಲ್ಲ
ಇರುವುದಾದರು
ಏನು?
ರಾತ್ರೆ
ದೀಪವಾರಿದ ಮೇಲೆ
ಕಿಟಕಿಗಾಜಿಗಂಟಿ
ಮಿನುಗುವ
ಮಿಣುಕುಹುಳ
ನನ್ನಂತೆ
ಅದಕು
ಹಂಬಲವಿರಬೇಕು
ನಾನಿಲ್ಲದಾಗಲು
ಅಲ್ಲಿ
ನಿನ್ನ ಬಳಿ
ಎಲ್ಲವೂ
ಹೇಗಿರಬಹುದು
ಎಂದುಕೊಳ್ಳುವೆ
ಏಕೆಂದರೆ
ನಾನೀಗ
ಅಂದಿನಂತಿಲ್ಲ.
Rasheed said
ಹಾಯ್ ಟೀನಾ,
ಕವಿತೆ ಚೆನ್ನಾಗಿದೆ
ಯಾಕೋ ಕನ್ನಡ ನಾಡಿನ ಕವಯತ್ರಿಯರಲ್ಲಿ ನವಿರು ನವಿರುತನ
ಜೋರಾಗುತ್ತಿರುವ ಹಾಗಿದೆ.
ಸ್ವಲ್ಪ scene change ಮಾಡಿ please
Tina said
ಬ್ಲಾಗುರುಗಳೆ,
ನೀವೆ ಹೀಗೆ ಕನ್ನಡನಾಡಿನ ಕವಯಿತ್ರಿಯರನ್ನೆಲ್ಲ generalise ಮಾಡಿಬಿಟ್ಟರೆ ಹೇಗೆ? ಆಮೇಲೆ ನಾವು ಹೆಣ್ಣುಮಕ್ಕಳು serious ಆದ್ರೆ ’ಯಾಕೊ ಸರಿಯಿಲ್ಲ’ ಅನ್ನೋರೂ ನೀವೆ!!
Kannadiga said
Thanks for entering your blogs at http://kannadablogs.co.nr, nice posts, carry on
gnmohan said
i am regular reader of chatter box in kannada times
nice that you started a blog
let it b different
let us graduate to another phase from personal and only personal blogs
the kind of writeups which appered in KT tells us that u have a point to make
welcome to blogmandala
name of the blog is very catchy
bring what all u read and liked also to ur blog
we can share what we liked
keep going-
G N Mohan, Hyderabad
Tina said
Dear Mohan,
Thank you. Felt flattered. I will be posting a few of my ChatterBox writings too on this blog for the benefit of the net-savvy readers. I want this blog to be more interactive in the coming days.