’ಚಿತ್ರಕವನ’ ಬ್ಲಾಗಿಗಾಗಿ ಹಿಂದೊಮ್ಮೆ ಬರೆದಿದ್ದ ಕವಿತೆ .. ಕೆಲವು ಸುಧಾರಣೆಗಳೊಂದಿಗೆ.
![2707365339_2597b91611[1] 2707365339_2597b91611[1]](http://tinazone.files.wordpress.com/2009/05/2707365339_2597b916111.jpg?w=480&h=316)
ಇಲ್ಲಿ ನಾನು ಪುಸ್ತಕ ದೀಪ
ಸೇರಿ ಒಂದಾಗಿ
ಕತ್ತಲೆಯ ಅನುಭೂತಿ
ಇನ್ನೇನು ಮುಗಿದೇಹೋಯಿತು ಎಣ್ಣೆ
ಅಕ್ಷರ ನುಂಗುವ
ಕಣ್ಣ ನೋಟ
ಕಾಣದ್ದ ಕಂಡುಕೊಂಡೇನೆ ನಾನು
ಎಂದಾದರು?
ಮುಗಿದು ಹೋಗಬಹುದು
ಪುಟ್ಟ ಹುಳಗಳ ಭರಾಟೆ ನನಗೆ ಆಸೆ
ಅಮ್ಮ ಎದ್ದು
ನಿದ್ದೆಯಲೆ ಮುದ್ದಾಗಿ
‘ಎಣ್ಣೆ ತುಂಬಿಸಲೆ ಮಗು?
ಮಂದವಾಗಿದೆ ಬೆಳಕು
ಕಣ್ಣಿಗೆ ಪೆಟ್ಟು
ಕಾಫಿ ಬೇಕೆ?’
ಅಂದಂತೆ
ಅನ್ನಿಸಿ
ಸುತ್ತ ನೋಡುವೆ
ಬೆನ್ನಹುರಿಯಲ್ಲೇಳುವ
ನೋವ ಅದುಮಿ
ಆಕಳಿಸಿ
ಇದೆಲ್ಲವ ಒಳಗಿಳಿಸಬೇಕು
ಜೋಪಾನವಾಗಿ
ದೀಪದಲಿ
ಬೆಳಕು ಮುಗಿವ ಮುನ್ನ.
ಚಿತ್ರಕೃಪೆ: www.flickr.com ನಿಂದ
paraanjape said
chennaagide
ಶಾಂತಲಾ ಭಂಡಿ said
ಟೀನಾ…
ತುಂಬ ಇಷ್ಟವಾದವು ಎಲ್ಲ ಸಾಲುಗಳೂ.
“ಇದೆಲ್ಲವ ಒಳಗಿಳಿಸಬೇಕು
ಜೋಪಾನವಾಗಿ
ದೀಪದಲಿ
ಬೆಳಕು ಮುಗಿವ ಮುನ್ನ”
ಮೇಲಿನ ಎಲ್ಲ ಸಾಲುಗಳನ್ನೂ ಹುದುಗಿಸಿಕೊಳ್ಳಲಿರುವ ಈ ಸಾಲುಗಳು ಇನ್ನಷ್ಟು ಇಷ್ಟವಾದವು.
ಬರೆಯುತ್ತಿರಿ.
shivu.k said
ಸೊಗಸಾದ ಕವನ. ಕವನದ ಎಲ್ಲಾ ಚಿತ್ರಗಳು ತೇಲಿಹೋಗುತ್ತವೆ…
m.s.murthy said
innomme neeve odi kaanabahudu innastu BELAKU-m.s.muthy.
sanket said
Lovely! Thanks.