![Peppermint_Balls[1] Peppermint_Balls[1]](http://tinazone.files.wordpress.com/2009/05/peppermint_balls1.jpg?w=375&h=375)
ಸಿದ್ದು ದೇವರಮನಿಯ ಕವನ ಸಂಕಲನ ಬಿಡುಗಡೆ ಸಮಾರಂಭಕ್ಕೆ ಸೃಜನ್ ಬರುತ್ತಾರೆ ಅಂತ ಗೊತ್ತಾದಾಗ ನನಗು ಭೇಟಿಯಾಗುವ ಉತ್ಸಾಹ. ಸುಮಾರು ಕಡೆ ಅವರ ಕವರ್ ಪೇಜುಗಳನ್ನ, ಚಿತ್ರಗಳನ್ನ ನೋಡಿದ್ದ ನನಗೆ ಆಸಾಮಿ ಫುಲ್ ವೈಬ್ರೆಂಟ್ ಪರ್ಸನಾಲಿಟಿಯೇ ಇರಬೇಕು ಅಂತ ಖಾತ್ರಿಯಾಗಿತ್ತು. ಅಲ್ಲೆ ಯಾರೊ ’ನೋಡಿ ಅವ್ರೆ ಸೃಜನ್’ ಅಂತ ಬೆಟ್ಟುಮಾಡಿ ತೋರಿದರು. ನೋಡಿದರೆ ಅಲ್ಲಿ ಕಂಡದ್ದು ಸೃಜನ್ ಅಲ್ಲವೆ ಅಲ್ಲ!! ಸಂಕೋಚದ ಮುದ್ದೆಯಾದ ಶ್ರೀಕಾಂತ್ ಅನ್ನುವ ಮನುಷ್ಯ. ನಾನೆ ಪರಿಚಯ ಮಾಡಿಕೊಂಡೆ. ಹೆಚ್ಚು ಮಾತೇ ಇಲ್ಲ. ಅರೆ ಈ ಜನ ಹೀಗಾ? ಅನ್ನಿಸಿದ್ದು ನಿಜ. ಏಕೆಂದರೆ ಸೃಜನ್ ಅಂತಹ ಟ್ಯಾಲೆಂಟೆಡ್ ಮನುಷ್ಯನಾದರು ಅದನ್ನ ಹೊರಗೆಲ್ಲು ತೋರಗೊಡುವುದೆ ಇಲ್ಲ. ನನ್ನ ಥರ ವಟವಟ ಅನ್ನುವರಿಗೆ ಅಂತಹ ಶಾಂತ ಜನರನ್ನು ಕಂಡರೆ ಅಚ್ಚರಿ, ಅಸೂಯೆ ಉಂಟಾಗುವುದರಲ್ಲಿ ವಿಶೇಷವೇನಿಲ್ಲ. ಒಟ್ಟಿನಲ್ಲಿ ಖುಶಿಯಾಯಿತು.
ಈಗ ಅದೇ ನಿಮ್ಮೆಲ್ಲರ ನೆಚ್ಚಿನ ಸೃಜನ್ ತನ್ನದೊಂದು ಬ್ಲಾಗ್ ಬಾಗಿಲು ತೆರೆದಿದ್ದಾರೆ. ಸಿಹಿಯಾದ ಹೆಸರು. ಅವ್ರ ಮಲ್ಟಿಫೇಸೆಟೆಡ್ ವ್ಯಕ್ತಿತ್ವಕ್ಕೆ ಇಲ್ಲಿ ಪುರಾವೆಗಳು ದೊರಕುತ್ತವೆ. ನೋಡಿ, ಮಾತನಾಡಿಸಿ, ಕಮೆಂಟಿಸಿ. ಶ್ರೀಕಾಂತ್ ಎಂಬ ಸೃಜನನ ಮಾತುಗಳು ’ಪೆಪ್ಪರ್ ಮೆಂಟ್’ನಷ್ಟೆ ಸ್ವಾದಿಷ್ಟ ಅನ್ನುವುದು ಮಾತ್ರ ಗ್ಯಾರಂಟಿ!!
ಚಿತ್ರಕೃಪೆ: www.examiner.com
Chetana Teerthahalli said
wah re wah…!
taDavAgiyAdarU bhAree sihiyE sigtA ide!!
Thanks Teen,
Thanx Srujan…
ಶಂಕರ್ said
ಟೀನಾ ಮೇಡಂ,
ಸೃಜನ್ ಅವರ ಬ್ಲಾಗ್ ಅನ್ನು ಲಿಂಕ್ ಮಾಡುವಲ್ಲಿ ಏನೋ ತಪ್ಪಾಗಿರಬೇಕು, ನೋಡಿ…
Kallare said
Yeah.. u r rite!! aadre neevu haakiro pic nodidre ‘HULI UNUGU’ nenapige bantu!! ( red ir kade blk irutte ashte)
Sudhesh said
Tina avare….
Srujan avara blog link work aaguththilla… blog address needuththeera?
Tina said
ಶಂಕರ್, ಸುಧೇಶ್,
ಇವತ್ತಿಡೀ ನನ್ನ ಬ್ಲಾಗ್ ೋಪನ್ ಮಾಡಿಕೊಂಡು ಕೆಲಸ ನಡಿತಿದ್ದಿದ್ದರಿಂದ ಬಹುಶ ಲಿಂಕಿನ ಪ್ರಾಬ್ಲಮಾಗಿರಬೇಕು. ಈಗ ಪುನಹ ಲಿಂಕ್ ಮಾಡಿದೀನಿ.
ತೊಂದರೆಗೆ ಕ್ಷಮೆ ಇರಲಿ.
ಟೀನಾ.