![1921.186[1] 1921.186[1]](http://tinazone.files.wordpress.com/2009/06/1921-1861.jpg?w=269&h=364)
ಸುಮ್ಮನೆ ಉಪಕರಿಸಲೆ ಎಂದು
ಕಾಣಲು ಬಂದರೆ
ನಿನ್ನ ಕಣ್ಣ ಬೆರಗು ಮಾತು ನುಂಗಿತು
ನಾನು ಅಡಗಲು ಜಾಗ ಹುಡುಕಿದೆ
ಬೆಳಗು ಸುಮ್ಮನೆ ಮತ್ತಿನಲ್ಲಿ
ಸುಖಿಸುತ್ತ ಕಳೆದುಹೋಯಿತು
ಅರೆಮಡಚಿದ ಹಾಸಿಗೆ
ಅವಸರದ ಉಪಚಾರ
ಬಿಕ್ಕುವಂತೆ ಹೊತ್ತಿ ಆರುವ ದೀಪ
ಮೂಲೆಯಲಿ ಮುಗುಮ್ಮಾಗಿ ಕುಳಿತ ನೀನು
ಈಗ ಮೇಣದಬತ್ತಿ ಕರಗುವಾಗ
ಅದೆಲ್ಲ ನೆನಪು, ಅರೆಸುಟ್ಟ ಹಾಗೆ.
ಕೊನೆಗೆ ನೀನು ತೆರಳಿದ ಬಳಿಕ
ಬೇಕಿತ್ತೆ ಈ ಇದೆಲ್ಲ ಎಂದು ಕೊರಗುತ್ತ
ಸುಕ್ಕಾದ ಕೌದಿಯೆತ್ತಿ ಕೊಡಹುವೆ
ಆ ಪುರಾತನ ಪ್ರೇಯಸಿ ಕಟ್ಟಿದ
ಮಂಟಪಕ್ಕಾತು ನೀ ದಿಟ್ಟಿಸಿದ ಪರಿಯ
ನೆನೆಯುತ್ತ
’The Brooding Woman’ by Paul Gauguin ಕೃಪೆ: www.worcesterart.org
ಶೆಟ್ಟರು (Shettaru) said
“ಈಗ ಮೇಣದಬತ್ತಿ ಕರಗುವಾಗ
ಅದೆಲ್ಲ ನೆನಪು, ಅರೆಸುಟ್ಟ ಹಾಗೆ.”
ಸಾಲುಗಳು ಎಕೋ ಸೇಳೆದವು..
“ಒಂದು ಪಶ್ಚಾತ್ತಾಪ” ನಮ್ಮಲ್ಲೂ ಹುಟ್ಟಿಸುವಂತಿದೆ ಅನುವಾದ.
ಶೆಟ್ಟರು
ಸುನಾಥ said
ಟೀನಾ,
ಸಂಕೀರ್ಣ ಭಾವಗಳ ಸುಂದರ ಕವನ.
minchulli said
bhaava poorna / poorna bhaava….
shreenidhids said
adestu utkata kavithe bareyutteeri neevu! ah..
srujanart said
ಸೊಗಸಾದ ಪದ್ಯ.
ಕವಿತೆಗೆ ಚಿತ್ರ ಎಷ್ಟು ಚೆಂದ ಮ್ಯಾಚ್ ಆಗಿದೆ.
ಅಭಿನಂದನೆಗಳು
ಸೃಜನ್
ಹನಿ said
chennagide Tina. waiting more.
- Hani
ಆಲಾಪಿನಿ said
ಅರೆ,,, ವ್ಹಾ…! ಎಂಥಾ ಚೆಂದ ಬರಿತೀರಿ…..
prasad said
blog hudukutta kutidakke tumba dina da mele nimma kavana oduva avaksha sikkittu. nice poem
ಪ್ರಸಾದ್.ಜಿ said
ತುಂಭಾ ಚೆನ್ನಾಗಿದೆ
ಸುಪ್ತದೀಪ್ತಿ said
ಮಾತು ನುಂಗುವ ಕಣ್ಣ ಬೆರಗಿನ ಕವಿತೆ ನಮ್ಮ ಮಾತನ್ನೂ ನುಂಗಿದೆ. ಏನು ಹೇಳಲಿ ಇಂಥ ಕವಿತೆ ಕಂಡು?
ಚಂದಿನ said
ಸುಂದರವಾಗಿ ಮೂಡಿಬಂದಿದೆ.
ರಾಘವೇಂದ್ರ ಮಹಾಬಲೇಶ್ವರ said
ಚೆನ್ನಾಗಿ ಬರೆದಿದ್ದೀರಿ..