ಈ ಥರದ ಜೀವನಶೈಲಿ ತರವೆ?

ನಿನ್ನೆ ವಿಪ್ರೋನ ಚಂದ್ರಶೇಖರ್ ಸಾವನ್ನಪ್ಪಿದ ಸುದ್ದಿ ಓದಿದೆ. ಖೇದ, ಭಯ ಎರಡೂ ಆಯ್ತು. ಎಂಟು ಬಾಟಲ್ ಬಿಯರ್, 50 ಸಿಗರೆಟ್ಟುಗಳು, ಭೇದಿ ತಡೆಯುವ ಎರಡು ಮಾತ್ರೆಗಳು. ಅಷ್ಟೆ!!

ಮೊನ್ನೆ ಸ್ನೇಹಿತರೊಡನೆ ಎಂ.ಜಿ. ರೋಡಿನ ’ಕೋಶೀಸ್’ ನಲ್ಲಿ ಕುಳಿತಿದ್ದೆ. ಒಂದಿಷ್ಟು ಪಿ.ಯು.ಸಿ. ಓದುತ್ತಿರುವವರಂತೆ ಕಾಣುತ್ತಿದ್ದ ಹುಡುಗ ಹುಡುಗಿಯರು ಗಲಾಟೆ ಮಾಡುತ್ತ ಮಗ್ ಮೇಲೆ ಮಗ್ ಬಿಯರ್ ಕುಡಿಯುತ್ತ ಸಿಗರೆಟ್ ಹೊಗೆಯಲ್ಲಿ ಒಬ್ಬರೊಬ್ಬರ ಮುಖ ಕಾಣದಂತೆ ಇದ್ದರೂನೂ ಜೋರಾಗಿ ಮಾತನಾಡುತ್ತ ಕುಳಿತುಕೊಂಡಿದ್ದರು. They looked perfectly happy.

ಹೋದವಾರ ಕಾಫಿಡೇ ಜಾಯಿಂಟೊಂದರ ಮೂಲೆಯಲ್ಲಿ ಎಸ್ಪ್ರೆಸೊ ಹೀರುತ್ತ ಏನೋ ಬರೆಯುತ್ತ ಇದ್ದೆ. ಸುತ್ತಮುತ್ತ ನಾಲಕ್ಕೈದು ಜೋಡಿಗಳು. ಬಾಗಿಲು ತಳ್ಳಿಕೊಂಡು ಡಿಸೈನರ್ ಡ್ರೆಸ್ಸಿನ ನೀಳಕಾಲುಗಳ ಕೃಷ್ಣಸುಂದರಿಯೋರ್ವಳು ಒಳಬಂದಳು. ಆಕೆ ಬಂದಿದ್ದೇ ತಡ ಅಲ್ಲಿದ್ದ ಹುಡುಗರೆಲ್ಲರ ಕಣ್ಣು ಆಕೆಯೆಡೆ ಹೊರಳಿದವು. ಆವರ ಗರ್ಲ್ ಫ್ರೆಂಡುಗಳು ಚಡಪಡಿಸಲಾರಂಭಿಸಿದರು. ಆಕೆ ತನ್ನ ಜಾಕೆಟ್ ಕಳಚಿ ಕಾಫಿಗೆ ಆರ್ಡರ್ ಮಾಡಿ ಒಬ್ಬಳೆ ಸುಮಾರುಹೊತ್ತು ತಲೆತಗ್ಗಿಸಿಕೊಂಡು ಕುಳಿತಿದ್ದಳು. ಆಕೆಯ ಮುಖದ ಮೇಕಪ್ಪಿಗಿಂತ ನನಗೆ ಕಂಡಿದ್ದು ಆಕೆಯ ಒಂಟಿತನ.

_1406449_stress3001.jpg

ಬೆಂಗಳೂರ ಹುಡುಗ ಹುಡುಗಿಯರು ಹುಡುಕಿಕೊಳ್ಳುತ್ತ ಇರುವ de-stressing ವಿಧಾನಗಳು ಎಷ್ಟರ ಮಟ್ಟಿಗೆ ಸರಿ ಎನ್ನುವುದರ ಬಗ್ಗೆ ಚರ್ಚೆ ಮಾಡುವುದಕ್ಕಿಂತ ಈಗ ಮಾತಾಡ್ಬೇಕಾಗಿರುವುದು ಅವರನ್ನ ಹೀಗೆಲ್ಲ ಅಡ್ಡಾದಿಡ್ಡಿ ಜೀವನ ಸಾಗಿಸಲು ಏನು prompt ಮಾಡುತ್ತಿದೆ ಅನ್ನೋದರ ಬಗ್ಗೆ ಅಂತ ಅನ್ನಿಸುತ್ತೆ.

ಎಲ್ಲಕಿಂತ ಮೊದಲ ಕಾರಣ ಒಂಟಿತನ. ಹೆಸರಾಂತ ಪತ್ರಿಕೆಯೊಂದು ನಡೆಸಿದ ಸರ್ವೆಯೊಂದರ ಪ್ರಕಾರ ಇಪ್ಪತ್ತು ವರ್ಷಗಳ ಹಿಂದೆ ಒಬ್ಬ ವ್ಯಕ್ತಿ ಸಾಮಾನ್ಯವಾಗಿ ಹೊಂದಿರುತ್ತಿದ್ದ ಸ್ನೇಹಿತರ, ಆತ್ಮೀಯರ ಸಂಖ್ಯೆ ಕಳೆದ ಐದು ವರ್ಷಗಳಿಂದ ಗಣನೀಯವಾಗಿ ಕಡಿಮೆಯಾಗಿಬಿಟ್ಟಿದೆಯಂತೆ.

ಎರಡನೇ ಮುಖ್ಯ ಕಾರಣ ಕೆಲಸದ stress. ದೂರದ ಮಾತಿರಲಿ, ನಾನೇ ಈ ತೊಂದರೆಗೆ ಸಿಲುಕಿ ಕೌನ್ಸೆಲಿಂಗ್ ಮೊರೆ ಹೋಗಿದ್ದೂ ಇದೆ. ಆಯಾಸ, ದುಗುಡ, ಕೋಪ – ಇವೆಲ್ಲವನ್ನ ಮರೆಯಬೇಕು. ಆತ್ಮೀಯರು ಕೂಡ ಎಲ್ಲ ಸಮಯದಲ್ಲಿ ಬಳಿಯಿರಲು ಸಾಧ್ಯವಿಲ್ಲ. ಏನು ಮಾಡಬೇಕು? ಬೆಂಗಳೂರಿನಲ್ಲಿ ಏನು ಮಾಡಬಹುದು? ಒಂದು ಅಫೇರ್, ಇಂಟರ್ನೆಟ್, ಸಿನೆಮಾ, ಬಾರ್, ಪಬ್?
ನಾವು ಎತ್ತ ಹೋಗುತ್ತಿದೇವೆ?

Advertisements

One thought on “ಈ ಥರದ ಜೀವನಶೈಲಿ ತರವೆ?

  1. ತುಂಬಾ ಒಳ್ಳೆಯ ಬರಹವನ್ನು ಬ್ಲಾಗೊಂದರಲ್ಲಿ ನೋಡಿದಂತಾಯಿತು. ಧನ್ಯವಾದ. ಈ ಸ್ಟ್ರೆಸ್, ಒಂಟಿತನಗಳೇ ಜನರನ್ನು “ಅಮಾನವೀಯ”ಗೊಳಿಸುತ್ತಿವೆ. ಪರಿಹಾರ ಸುಲಭದ್ದಲ್ಲ. ಜೀವನಶೈಲಿಯಲ್ಲಿನ ಮಾರ್ಪಾಡು – ಅದರ ಎಲ್ಲ ಆರ್ಥಿಕ ಸಾಮಜಿಕ ಆಯಾಮಗಳೊಡನೆ-ಮಾಡಿಕೊಳ್ಳಲು ರೆಡಿ ಇರುವವರು ಎಷ್ಟು ಜನರಿದ್ದಾರೆ? ನಮ್ಮ ಸಾಮಾಜಿಕ, ರಾಜಕೀಯ ನಾಯಕರಲ್ಲಿಯೂ ಈ ‘ಜಗನ್ನಾಥ ರಥ ಚಕ್ರ’ವನ್ನು ಎದುರಿಸುವ ಪ್ರಾಕ್ಟಿಕಲ್ ಉಪಾಯಗಳಿದ್ದಂತಿಲ್ಲ. ಆರ್ಥಿಕ ಉನ್ನತಿ = ಸ್ಟ್ರೆಸ್, ಒಂಟಿತನ; ಸಾಮಾಜಿಕತೆ/ಸಹಭಾಗಿತ್ವ=ಆರ್ಥಿಕ ಹಿಂದುಳಿದಿರುವಿಕೆ ಎನ್ನುವ ಚಕ್ರದಿಂದ ಬಿಡುಗಡೆಯ ದಾರಿ ಇದೆಯೇ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s