ಪಡಖಾನೆಯ ಹುಡುಗಿ ಹೇಳಿದ್ದು – 1

manet1.jpg

(ಚಿತ್ರ: ಮಾನೆ)

ಎಲ್ಲವ ತೊರೆದು ನಿನ್ನಲ್ಲಿಗೆ
ಬರಬೇಕೆಂದುಕೊಳ್ಳುವಾಗೆಲ್ಲ
ನಿನ್ನ ಕಡುವೈರಾಗ್ಯದ ಗಳಿಗೆಗಳು
ನೆನಪಾಗಿ ಹಿಂಜರಿವೆ

ಬೇಸರವಾದಾಗೆಲ್ಲ 
ಪದಗಳ ತಾಕಲಾಟ
ಒಂದಿಷ್ಟು ಮದಿರೆ, ಸುರುಳಿಹೊಗೆ
ಕಳೆದ ಭೇಟಿಯ ಅಮಲು
ಏಕಾಂತ ಹುಟ್ಟಿಸುವ ಹಾಡು
ಸರಳವಲ್ಲ ನಮ್ಮೀ ಮೋಹ.

ನನ್ನ ದಿಟ್ಟಿಸುತ್ತ ನೀನೆನ್ನುವೆ,
“ಇದು ಬರಿ ಮೋಹವಲ್ಲ.”
ಸುಮ್ಮನೇಕೆ ಸುಳ್ಳು ನುಡಿಯುತ್ತೀಯ?
ಅದೆಲ್ಲ ಬಿಡು ಹಾಳುರಗಳೆ.
ಗಡಿಯಾರದ ಮುಳ್ಳು ನೋಡು
 

Advertisements

3 thoughts on “ಪಡಖಾನೆಯ ಹುಡುಗಿ ಹೇಳಿದ್ದು – 1

  1. ಪ್ರಿಯ ಟೀನಾ,
    ‘ನೀವು ಯಾರೆಂದು ನಾನು ಅರಿಯೆ
    ನಾನು ಯಾರೆಂದು ನೀನೂ…
    ಆದರೂ ಇದೀಗ ಮುಳುಗಿದ ಚಂದ್ರನ ಬೆಳಕಲ್ಲಿ
    ನಮ್ಮಿಬ್ಬರ ಪರಿಮಳವಿತ್ತು’

    ಇದು ನನ್ನ ಕವಿಗುರುವಿನ ಡೈರಿಯಲ್ಲಿದ್ದ ಕೆಲವು ಸಾಲುಗಳು
    ನಿಮ್ಮ ಕವಿತೆ ಓದುತ್ತಾ ನೆನಪಾಯಿತು
    thanks
    ಅಂದ ಹಾಗೆ ನೀವು ಮಂಗಳೂರಿನವರಾ?

  2. ಫ್ರಿಯ ವಿರಾಗಿ,

    ’ಕಡುವೈರಾಗ್ಯ’ದ ಸಾಲುಗಳು ನಿಮ್ಮನ್ನ ಸೆಳೆದುವೇನೋ?
    ನೀವು quote ಮಾಡಿದ ಕವನದ ಸಾಲುಗಳು ಬಹಳ ಚೆನ್ನಾಗಿವೆ.
    ನಿಮ್ಮ ಕವಿಗುರುಗಳಿಗೆ ನಮಸ್ಕಾರ.
    ನನ್ನ ತಂದೆಯ ಕಡೆಯವರು ಮೂಲತಃ ಮಂಗಳೂರ ಕಡೆ.
    ಆದು ಸರಿ, ಈ ಪ್ರಶ್ನೆ ಯಾಕೆ ಬಂತು?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s