ಹಂಗಾಮದ ಗಾನಾ ಈಗ ಅವಧಿಯ ಚೇತನಾ!!

Come and have a look. You may surprise yourself.
-Stuart Rose

ಅವಧಿಯಲ್ಲಿ ಗಾನಾ ಜೋಯ್ಸರ ’ಅಮ್ಮ ಆಗ್ಲಿಕ್ಕೆ ಹೆರಲೇಬೇಕಾ’ ಓದಿ ಪ್ರತಿಕ್ರಿಯಿಸಿದ್ದೆ. ಅದಕ್ಕೆ ಉತ್ತರವೊಂದು ಬಂತು. ಬೇರಾರಿಂದಲೂ ಅಲ್ಲ. ಹಂಗಾಮದ ನಂತರ ಕಾಣಿಸದಿದ್ದ ಗಾನಾ ಈಗ ಚೇತನಾ ಆಗಿ ಪ್ರತ್ಯಕ್ಷರಾಗಿದ್ದಾರೆ!! ಪ್ರಪಂಚ ಏನೆಂದರೂನು ಗುಂಡಗಿದೆ, ಅಲ್ಲವೆ? ಹೀಗೆ ಯಾರಯಾರೊಡನೆಯೊ ಮಾತನಾಡುತ್ತ ಇರುವಾಗ ಯಾರೊ ಮರೆತುಹೋಗಿದ್ದವರು ಧುತ್ತನೆ ಮರಳಿಬಂದು ಇಣುಕಿದರೆ ಏನು ಸಡಗರ!!

ಹೋದ ತಿಂಗಳು ಸಿಂಧುವಿನೊಡನೆ ಮಾತನಾಡುವಾಗ ಶಶಿ ಸಂಪಳ್ಳಿ ಎಲ್ಲಿಂದಲೋ ಬಂದ. ಈಗ ಬ್ಲಾಗುಗಳನ್ನ ಅಡಿಮೇಲು ಮಾಡುತ್ತಿರುವಾಗ ಗುರುದೇವ್ ಎಂಬುವರ ಬ್ಲಾಗು ನೋಡಿದೆ. ಆರೇಳು ವರುಷಗಳ ಹಿಂದೆ ’ನೀನಾಸಂ’ ಸಂಸ್ಕೃತಿ ಶಿಬಿರವೊಂದರಲ್ಲಿ ಭೇಟಿಯಾಗಿದ್ದ ಗುರುದೇವ ಇವರೇನೇ ಎಂದು ಅನ್ನಿಸಿತು. ಶ್ರೀನಿವಾಸರಾಜು ಮೇಷ್ಟರ ಆಭಿನಂದನಾ ಸಮಾರಂಭದ ಕವಿಗೋಷ್ಟಿಗೆ ಕಿರಣನೊಡನೆ ಕುತೂಹಲದಿಂದ ಬಂದವಳಿಗೆ ’ನೀನಾಸಂ’ ನಲ್ಲಿಯೇ ಆತ್ಮೀಯಳಾದ ರಶ್ಮಿ ಹೆಗಡೆ ಭೇಟಿಯಾದಳು. ಚೆಂದವಾಗಿ ಕವನ ಬರೆಯುವ ಹುಡುಗಿ. ಹಾಗೆಯೆ ಅಲ್ಲಿ ಕಂಡವರು ಸ್ನೇಹಿತರಾದ ಆನಂದ ಋಗ್ವೇದಿ ಮತ್ತು ವಿಕ್ರಮ ವಿಸಾಜಿ. ನಮಗೆಲ್ಲ ನಾಸ್ಟಾಲ್ಜಿಯಾ ಉಕ್ಕಿಬಂದು ಗಾಂಭೀರ್ಯವೆಲ್ಲ ಮರೆತುಹೋಗಿ ಯಾರ ಪರಿವೆ ಇಲ್ಲದವರ ಹಾಗೆ ಪರಿಪರಿಯಾಗಿ ನಗಾಡಿಕೊಂಡು ಕೂತಿದ್ದೆವು. ವಿಕ್ರಮನ ಕವನಸಂಕಲನವನ್ನ ಗಾಳಿಬೀಸಿಕೊಳ್ಳಲು ಕೇಳಿ ಬೈಯಿಸಿಕೊಂಡೆ. ಇದಾದ ಕೆಲವು ದಿನಗಳ ಮೇಲೆ ಹೈಸ್ಕೂಲಿನ ಸ್ನೇಹಿತೆ ಪರಿಮಳ ಆರ್ಕುಟ್ಟಿನಿಂದ ಅದು ಹೇಗೋ ನನ್ನನ್ನು ಕಂಡುಹಿಡಿದು ಮುಂಬಯಿಯಿಂದ ಫೋನಾಯಿಸಿ ರಾಶಿ ಮಾತನಾಡಿದಳು. ಈಗ ಮೊನ್ನೆ ರಶ್ಮಿಗೆ ಫೋನು ಮಾಡಿದರೆ ಬಿ.ಎ., ಎಂ.ಎ. ಗಳಲ್ಲಿ ಐದು ವರುಷ ಸಹಪಾಠಿಯಾಗಿದ್ದ ಡಂಕಿನ್ ಝಳಕಿ ಇಲ್ಲಿಯೆ ಇದ್ದಾನೆ ಅಂದಳು.

Whatever. All this did wonders to me.
ಖುಶಿಯಾಗುತ್ತ ಇದೆ.

ಗಾನಾ ಅಲಿಯಾಸ್ ಚೇತನಾ ಮತ್ತು ಅವಧಿ,
ಇದನ್ನೆಲ್ಲ ನೆನಪಿಸಿದ್ದಕ್ಕೆ ಥ್ಯಾಂಕ್ಯೂ!!

Advertisements

10 thoughts on “ಹಂಗಾಮದ ಗಾನಾ ಈಗ ಅವಧಿಯ ಚೇತನಾ!!

 1. tina

  naaanu hyderabadninda onderadu dinakkagi bandiddene. vikram visaji ille iddane. bhashana kuttalu bandiddane. rugvedhige bangalooru dooravalla, chetana (gana) bangalorenalliddare, idallade cha ha raghunath, vasudendra, chidananda sali, srijan, sandeepa, sampalli ivarannella gudde haakuvudu kashtavalla. nataraj huliyar hegadaru maadi kannada timesninda aache eledu tarabahudu. apara mataduvudu kadime adaroo serisikollabahudu. ee varada koneyalli ellaroo over a cup of cofee…sorry..by two coffee seridare hege?

  nimma ee baraha ebbisida ale idu. ageega heege aagadiddalli konege naavella nammannu QUILPAD searchnalli maatra hudukikollabekaguttade. am i right?

 2. O…great.

  ಈ ವಿಕ್ರಮ್ ವಿಸಾಜಿ ಮತ್ತೆ ಮತ್ತೆ ಕಳೆದು ಹೋಗ್ತಾನೆ. ಮೈಸೂರು ರೀಜನಲ್ ಕಾಲೇಜಿನಲ್ಲಿ ಕಮ್ಮಟಕ್ಕೆ ಹೋದಾಗ ಗೆಳೆಯನಾಗಿದ್ದ. ಮತ್ತೆ ಕಳೆದುಹೋಗಿದ್ದ. ಹಂಗಾಮಾದಿಂದ ಮತ್ತೆ ಸಿಕ್ಕ. ಸ್ವಲ್ಪ ದಿನ…. ಮತ್ತೆ ಮಾಯ! ಅಷ್ಟರಲ್ಲೇ ಅವನ ’ತಮಾಷಾ’ ನನ್ನ ಕೈ ಸೇರಿತ್ತು.
  ಈಗ ಮತ್ತೆ ಅವನ ಹೆಸರು ಕೇಳುತ್ತಿದ್ದೇನೆ. ಥ್ಯಾಂಕ್ಸ್ ಟೀನಾ. ಪ್ಲೀಸ್ ಅವನ ನಂಬರ್ ಕೊಡ್ತೀರಾ?
  ನಿಮ್ಮ ಪ್ರತಿಕ್ರಿಯೆಯಿಂದ ವೆಂಕಟರಮಣ ಗೌಡರ ಕಾಂಟ್ಯಾಕ್ಟ್ ಮತ್ತೆ ದೊರಕಿತು.
  ಈಗ ಮತ್ತಷ್ಟು ಬಾಂಧವ್ಯ ಬೆಸೆಯುವ ಸಡಗರ.
  ನಿಮ್ಮ ಸಹವಾಸ ಖುಷಿ ಕೊಡುತ್ತಿದೆ.
  ಥ್ಯಾಂಕ್ಸ್ ಅಗೈನ್.

 3. ಪ್ರೀತಿಯ ಮೋಹನ್ ಮತ್ತು ಚೇತನಾ,

  It was a bolt out of the blues!! I’m overwhelmed. ಸುಮ್ಮನೆ ಬರೆದ ಪೋಸ್ಟ್ ಒಂದರಿಂದ ನಾವೆಲ್ಲ ಒಂದೆಡೆ ಕೂತು ಕಾಫಿ ಹೀರುವ ಸಾಧ್ಯತೆ ಒದಗಬಹುದು ಅಂದುಕೊಂಡಿರ್ಲೇ ಇಲ್ಲ! ಮೋಹನ್, ನೀವು ಕೊಟ್ಟ ವಿಕ್ರಮನ ನಂಬರು ’ನಾಟ್ ವ್ಯಾಲಿಡ್’ ಎಂದು ಕೂಗುತ್ತಿದೆ. ದಯವಿಟ್ಟು ವಿಕ್ರಮನಿಗೆ ಕಿರಣ್ ಇಲ್ಲವೆ ಕನ್ನಡ ಟೈಮ್ಸ್ ಆಫೀಸಿನ ಐಜೂರರ ಬಳಿ ನನ್ನ ನಂಬರು ಇಸಿದುಕೊಳ್ಳಲು ಹೇಳುವಿರಾ? ನಾನು ನಿಮ್ಮಿಬ್ಬರಿಗೂ ಮೆಯಿಲ್ ಮಾಡುವೆ. ಸಿಗುವಾ!!

 4. Hi Tina and Mohan,

  It is a lovely thought to meet for a cup of coffee (though the weather now a days demands Whisky!!!). When can we meet? Please make it either on Friday evening or Sunday evening. I would curse you all if you have it on Saturday evening.
  Mohan, nice to see seniours like you are interacting with us and you make us be creative all the time.

  Thanks,

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s