ವಾಟ್ಸ್ ಈಟಿಂಗ್ ಸಂಜು ಬಾಬಾ?

ನಿನ್ನೆ ಸಂಜೆ ಕುಳಿತು ಟಿ.ವಿಯ ನ್ಯೂಸ್ ಚ್ಯಾನೆಲ್ಲುಗಳಲ್ಲಿ ಸಂಜಯ್ ದತ್ತನಿಗೆ ಆರು ವರುಷ ಕಠಿಣ ಸಜೆಯ ವರದಿಗಳನ್ನು ಕೇಳುತ್ತ ಆತ ತನ್ನ ಭಾವನೆಗಳನ್ನು ಅದುಮಿಡಲು ಶತಪ್ರಯತ್ನ ಮಾಡುತ್ತಿರುವುದನ್ನು ನೋಡುತ್ತಿದ್ದರೆ ಯಾವಾಗಲೊ ಜಾನಿ ಡೆಪ್(’ಪೈರೇಟ್ಸ್ ಆಫ್ ಕೆರಿಬಿಯನ್’ ಖ್ಯಾತಿ) ಹಾಗೂ ಲಿಯೊನಾರ್ಡೊ ಡಿ’ಕಪ್ರಿಯೊ(ಬಾಲನಟ-ಆಸ್ಕರ್ ಪ್ರಶಸ್ತಿ) ನಟಿಸಿರುವ ಚಿತ್ರ ’ವಾಟ್ಸ್ ಈಟಿಂಗ್ ಗಿಲ್ಬರ್ಟ್ ಗ್ರೇಪ್?’ ನೆನಪಾಗಿಬಿಟ್ಟಿತು.

whats_eating_gilbert_grape_ver11.jpg

ಗಿಲ್ಬರ್ಟ್ ಗ್ರೇಪ್ ಸಾಯುತ್ತಿರುವ ಎಂಡೊರಾ ಎಂಬ ಪುಟ್ಟ ಊರಿನಲ್ಲಿ ತನ್ನ ಪರಿವಾರದೊಂದಿಗೆ ವಾಸಿಸುತ್ತ ಅದರಾಚೆಗಿನ ಪ್ರಪಂಚದ ಅರಿವೇ ಇಲ್ಲದಂತೆ ಇರುತ್ತಾನೆ. ಯಾವಾಗಲೂ ಕಿತ್ತಾಡುವ ತಂಗಿಯರು, ಮಾನಸಿಕ ಅಸ್ವಸ್ಥ ತಮ್ಮ, ತಂದೆ ಬೇಸ್ ಮೆಂಟಿನಲ್ಲಿ ನೇಣುಹಾಕಿಕೊಂಡಾಗಿಂದ ಮನೆಯ ಟೀವಿಯ ಮುಂದಿನ ಸೋಫಾ ಬಿಟ್ಟು ಅಲ್ಲಾಡಿರದ ಸ್ಥೂಲದೇಹಿ ತಾಯಿ, ಇಬ್ಬರು ಅಡಾವುಡಿ ಸ್ನೇಹಿತರು ಹಾಗೂ ವಿಪರೀತ ಕಾಮಾತುರವುಳ್ಳ ವಿವಾಹಿತ ಪ್ರೇಮಿಕೆ – ಇವರನ್ನೆಲ್ಲ ಸಂಭಾಳಿಸಿಕೊಳ್ಳುತ್ತ ಆತನಿಗೆ ತಾನು, ತನ್ನದು ಎಂಬ ಪದಗಳೆ ಮರೆತುಹೋಗಿರುತ್ತವೆ. ಟ್ರಕ್ಕೊಂದರಲ್ಲಿ ಮನೆಮಾಡಿಕೊಂಡು ತನ್ನ ಅಜ್ಜಿಯೊಡನೆ ಊರೂರು ತಿರುಗುವ ಬೆಕಿ ಎಂಬ ಹುಡುಗಿ ಅಚಾನಕ್ಕಾಗಿ ಇತನ ಜೀವನದಲ್ಲಿ ಪ್ರವೇಶಿಸಿ ಆತನಿಗೆ ತಾನು ಕಳೆದುಕೊಳ್ಳುತ್ತಿರುವ ಜೀವನದ ಬಗ್ಗೆ ತೀವ್ರವಾಗಿ ಯೋಚಿಸುವಂತೆ ಮಾಡುತ್ತಾಳೆ. ಈ ಪ್ರೇಮಕಥೆಗೆ ಗಿಲ್ಬರ್ಟನ ಕುಟುಂಬದ ವಿಚಿತ್ರ ಜೀವನಶೈಲಿ ಅಡ್ಡವಾಗುತ್ತದೆ. ಒಂದು ದಿನ ಗಿಲ್ಬರ್ಟನ ತಾಯಿ ತಾನು ಕೂತ ಜಾಗದಿಂದ ಎದ್ದು ಮೆಟ್ಟಿಲು ಹತ್ತಲು ಹೋಗಿ ಸತ್ತುಹೋಗುತ್ತಾಳೆ. ಆಕೆಯ ಧಡೂತಿ ದೇಹವನ್ನು ಕ್ರೇನು ಹೊರಗೆ ತೆಗೆಯುವದನ್ನು ಊಹಿಸಲಾಗದ ಮಕ್ಕಳು ಮನೆಗೇ ಬೆಂಕಿಹಚ್ಚಿ ತಾಯಿಯ ಅಂತಿಮಸಂಸ್ಕಾರ ಮಾಡುತ್ತಾರೆ.

ಎಲ್ಲಿ ಸಂಜು? ಎಲ್ಲಿ ಗಿಲ್ಬರ್ಟ್? ನನಗೇನೋ ಇವರಿಬ್ಬರ ತೊಂದರೆಗಳೂ ಒಂದೇ ರೀತಿ ಕಾಣಿಸುತ್ತಿವೆ. ಗಿಲ್ಬರ್ಟನಂತೆಯೆ ಸಂಜು ಎಳೆಯ ವಯಸ್ಸಿನಲ್ಲಿಯೆ ಅಪಾರ ಅನುಭವಿ. ಆತ ಯಾವಾಗಲು ’ಮುಗ್ಧ’ನಾಗೇನಿರಲಿಲ್ಲ. ಅನೇಕ ತೊಂದರೆಗಳನ್ನು balance ಮಾಡುತ್ತಲೆ ಬೆಳೆದ ಸಂಜು ಎಲ್ಲದರ ಅರಿವಿರುವಂತೆಯೆ ತಪ್ಪುಗಳನ್ನು ಮಾಡುತ್ತ ಹೋದ. ಗಿಲ್ಬರ್ಟನಂತೆಯೆ ತನ್ನ ಲೈಫು ಕಳೆದುಹೋಗುತ್ತಿದೆ ಎಂದು ಸಂಜುಗೆ ಅರಿವಾಗಿದ್ದು ಬಹಳ ತಡವಾಗಿ. ಎಲ್ಲವನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸುತ್ತಲೆ ಇನ್ನಷ್ಟು ಸುಳಿಗಳೊಳಗೆ ಸಿಕ್ಕಿಕೊಂಡು ಇಬ್ಬರೂ ಪರದಾಡಿದವರೇ. ಸಂಜುವಿನ ಮೇಲು ಗಿಲ್ಬರ್ಟನಂತೆ ಹಲವಾರು ಜನರು ಅವಲಂಬಿತರಾಗಿ ಆತ ಎಲ್ಲವನ್ನು ಸಂಭಾಳಿಸಿಕೊಳ್ಳುತ್ತಾನೆಂದು ನಂಬಿಕೊಂಡಿದ್ದಾರೆ.

ಆದರೆ, ಸಂಜುವಿನ ತೊಂದರೆಗಳೇನು? ಆತನನ್ನು ಏನು ಹರಿದು ತಿನ್ನುತ್ತಿದೆ?
ಆತನ ಮೇಲೆ ಹೂಡಲಾಗಿರುವ ನೂರುಕೋಟಿಯೆ? ವಿದೇಶದಲ್ಲಿ ಅಪರಿಚಿತಳಂತೆ ಬೆಳೆಯುತ್ತಿರುವ ಮಗಳೆ? ಮಾನ್ಯತಾ ಎಂಬ ಆತ ಮದುವೆಯಾಗಲಾರದ ಹುಡುಗಿಯೆ? ಇಬ್ಬರು ತಂಗಿಯರೆ? ಅಸಂಖ್ಯಾತ ಅಭಿಮಾನಿಗಳೆ? ಕಾದಿರುವ ಉದ್ದನೆಯ ಅಸಹನೀಯ ಜೈಲುವಾಸವೆ? ತಾನು ಒಂದು ಕ್ಷಣ ಮೈಮರೆತು ಮಾಡಿದ ತಪ್ಪಿಗೆ ಅನುಭವಿಸುತ್ತಿರುವ ಯಾತನೆಯೆ?
ಯಾವುದೋ ಚ್ಯಾನೆಲ್ಲಿನಲ್ಲಿ ಸಂಜುವಿನ ಮಗಳು ತ್ರಿಶಲಾಳ ಟೆಲಿಫೋನ್ ಸಂದರ್ಶನ ಪ್ರಸಾರವಾಗುತ್ತಿತ್ತು. ಸಂದರ್ಶಕಿ ಎಲ್ಲವನ್ನೂ ಬಿಟ್ಟು “ನಿನ್ನ ತಂದೆ ಮಾನ್ಯತಾಳನ್ನು ಮದುವೆಯಾಗುತ್ತಾನಾ? ಆತ ಮದುವೆಯಾಗುವುದಿಲ್ಲ ಅಂತ ನಿನಗೆ ಪ್ರಾಮಿಸ್ ಮಾಡಿದ್ದಾನಾ?” ಅಂತೆಲ್ಲ ಆಕೆಗೆ ಹಿಂಸೆ ಮಾಡುತ್ತಿದ್ದಳು. ಇವತ್ತು ಬೆಳಿಗ್ಗೆ ಸಂಜುವಿಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶ ಮಾನ್ಯ ಕೋಡೆಯವರು “ನಾನು ನಿನ್ನ ಜೀವನದಲಿ ಕೇವಲ ಆರು ವರುಷ ತೆಗೆದುಕೊಂಡಿದೇನೆ. ನೀನು ನೂರು ವರುಷ ತುಂಬುವವರೆಗೂ ನಟಿಸು” ಎಂದದ್ದು ಓದಿದೆ. ತನ್ನ ತಪ್ಪುಗಳಿಂದ ಪಾಠ ಕಲಿತ ಸಂಜುವಿಗೆ ಇದು ಸ್ವಲ್ಪ ನೆಮ್ಮದಿಯನ್ನಾದರು ಕೊಟ್ಟಿರಬೇಕು. ನಾವೆಲ್ಲ ಸಂಜುವಿಗೋಸ್ಕರ ಕಾಯುತ್ತಿರುತ್ತೇವೆ.

ಚಿತ್ರದ ಕೊನೆಯಲ್ಲಿ ಗಿಲ್ಬರ್ಟನ ತಂಗಿಯರು ತಮ್ಮ ಜೀವನಗಳನ್ನರಸಿಕೊಂಡು ಹೋಗುತ್ತಾರೆ. ಆತ ತನ್ನ ತಮ್ಮನೊಂದಿಗೆ ಬೆಕಿಯ ಗಾಡಿಯಲ್ಲಿ ತನ್ನ ಅಖಂಡ ಪ್ರಯಾಣ ಪ್ರಾರಂಭಿಸುತ್ತಾನೆ. ಚಿತ್ರದಲ್ಲಿ ಉಧೃತವಾಗುವ ನನಗೆ ಬಲು ಇಷ್ಟವಾದ ವಾಕ್ಯವೊಂದು ಇಂತಿದೆ: “Life hasn’t passed Gilbert by… it has only taken a slight detour.”

ಈ ವಾಕ್ಯ ಸಂಜುವಿಗೆ ಎಷ್ಟು ಅನ್ವಯವಾಗುತ್ತದೆ. ಅಲ್ಲವೆ?

Advertisements

2 thoughts on “ವಾಟ್ಸ್ ಈಟಿಂಗ್ ಸಂಜು ಬಾಬಾ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s