ಬಾಗಿಲು

3doors1.gif

There was the door to which
I found no key,
There was the veil through
Which I could not See.

-Omar Khayyam. ‘Rubaiyat’

ಅಪ್ಪ ಹೋದ ತಿಂಗಳು
ಅಮ್ಮನ ಹತ್ತಿರ ಹೇಳುತ್ತ ಇದ್ದದ್ದು
ಕೇಳಿಸಿತ್ತು – ‘ಅಡುಗೇಮನೇ ಬಾಗಿಲು
ಹಳೇದಾಯ್ತು. ಈ ಸಾರೆ ಹೊಸದು ಹಾಕಿಸಬೇಕು’
ಹಳೆಯದು ಅಂದರೆ
ಒಂದು ಎಂಭತ್ತೈದು ತೊಂಭತ್ತು ವರುಷ.
ಪೇಂಟು ಮುಚ್ಚಿಹಾಕಲಾಗದಿದ್ದ ಒಂದಿಷ್ಟು
ಮೊಂಡು ತೂತುಗಳು, ಬಿರುಕುಗಳು
ಬೀಗ ಹಾಕಲೊಂದು ಸರಪಣಿ, ಕಬ್ಬಿಣದ್ದು.
ಮರದ್ದೇ ಚಿಲಕಗಳೆರಡು……
ಇವಿಷ್ಟೂ ಸೇರೊಂದು ಮರದ ಹಳೆಯ ಬಾಗಿಲು.
ಆಗೇನೂ ಅನ್ನಿಸಿರಲಿಲ್ಲ.
ಹತ್ತನೇ ಕ್ಲಾಸಿನವರೆಗೂ ‘ದೈತ್ಯಾಕಾರ’
ಅನ್ನಿಸುತ್ತಿದ್ದ ಬಾಗಿಲು, ನನಗೂನೂ ಯಾಕೋ
ಯೂನಿವರ್ಸಿಟಿ ದಾರಿ ತುಳಿದ ಮೇಲೆ
‘ತೀರಾ ಸಣ್ಣದು, ಸರಿಯಿಲ್ಲ’
ಎಂದುಕೊಳ್ಳುವಂತಾಗಿತ್ತು.

ಈಗ ಹಾಗನ್ನಿಸುತ್ತಿಲ್ಲ.
ಯಾಕೆಂದರೆ ಈವತ್ತು ರಜೆಗೆಂದು
ಮನೆಗೆ ವಾಪಾಸು ಬಂದಿಳಿದು
ಉಣಗೋಲು ಸರಿಸುತ್ತಿದ್ದಾಗಲೆ
ಹಳೆಯ ಕೊಟ್ಟಿಗೆಯ ಬದಿಗೊರಗಿಸಿಟ್ಟ
ಫ್ರೇಮುಸಹಿತ ಕಿತ್ತ ಬಾಗಿಲೊಂದು ಕಂಡಿತು.
‘ಅರೆ! ಇದು ಅಡುಗೆಮನೆ ಬಾಗಿಲಲ್ಲವೆ?’
ಅಂದುಕೊಳ್ಳುತ್ತ ಒಳಬಂದು ನೋಡಿದೆ-

ಹಳೇದರ ಜಾಗದಲ್ಲಿ ಹೊಚ್ಚಹೊಸ ಬಾಗಿಲು.
ನನಗೆ ಕಿರಿಕಿರಿ.
ಹೊಸ ಬಾಗಿಲಿಗೆ ಹೊಂದಿಕೊಳ್ಳಲಾಗುತ್ತಿಲ್ಲ.
ಕೊಟ್ಟಿಗೆಯ ಬಳಿ ಹಳೆಯ ಬಾಗಿಲು.
ಪ್ರಯತ್ನಿಸುತ್ತೇನೆ…..
ಅದನ್ನೊಂದು ಸಾರಿ ಮೆಲ್ಲಗೆ
ಅಡ್ವರ್ಟೈಸ್ಮೆಂಟುಗಳಲ್ಲಿ ಸವರುವಂತೆ ಮಾಡಿ
ನಾಸ್ಟಾಲ್ಜಿಕ್ ಆಗಲೆ?
ಅದರ ಬಗ್ಗೆ ಖೇದದಿಂದ ಸಂಜೆಗಳಲ್ಲಿ
ಗೆಳೆಯರ ಗುಂಪಿನಲ್ಲಿ ಮಾತನಾಡುತ್ತ
‘ಸೆನ್ಸಿಟೀವ್!’ ‘ರೊಮ್ಯಾಂಟಿಕ್!!’ ಅನ್ನಿಸಿಕೊಳ್ಳಲೆ?
ಹೋಗಲಿ, ಒಂದೆರಡು ತೊಟ್ಟು
ಕಣ್ಣೀರಾದರು ಸುರಿಸಲೆ?
ಇದಾವುದೂ ಆಗದೆ ಪಿಚ್ಚೆನ್ನಿಸುತ್ತಿದೆ……

ನಿರ್ದಾಕ್ಷಿಣ್ಯವಾಗಿ ನಿರಾಕರಿಸಿದ
ಹುಡುಗಿಯ ಹೆಸರಿನಿಂದಲೇ
ಪ್ರೇಮದ ಆವಾಹನೆಯಾಗುತ್ತಿದ್ದ
ಗೆಳೆಯನೊಬ್ಬನಿಗೆ ಲೀಲಾಜಾಲವಾಗಿ-Past is a bucket of ashes!  ಹುಚ್ಚಾ!
Don’t be a fool, ಮರೆತುಬಿಡು!’
ಅಂದಿದ್ದು ನೆನಪಾಗಿ
ಮೆದುಳು ಮರಗಟ್ಟಿದಂತಾಗಿದೆ.

ನನಗೆ ಗೊತ್ತು
ಕಾಲ ಮಾಯಿಸದ ಗಾಯವಿಲ್ಲ.
ಇನ್ನೀ ಬಾಗಿಲು ತೆರೆಯುವುದಿಲ್ಲ.
ಮುಚ್ಚುವುದೂ ಇಲ್ಲ.

(ಇದು ನಾನು ಎಂ.ಎ. ಮೊದಲನೆ ವರ್ಷದಲ್ಲಿದ್ದಾಗ ಬರೆದದ್ದು.)

Advertisements

3 thoughts on “ಬಾಗಿಲು

 1. Hi,
  Nice one. idannu odutta naanu nostalgic agibitte. Unagolu, kottige, bagilu endare yaako naanu bittu banda, nannooru “gundkal’ nenapaguttade. Idakke enoo sambhanda illadiddaroo E kavana oduvaaga nanage lankesh bareda kate “baagilu’ nenapayitu. Thanks again.
  -Parameshwar Gundkal

 2. chatter box,

  nimma kavanadanteye baagila bagge tale kedisikondiruva nanna mitrarobbariddare.
  kalavida m s murthy
  avaroo nanoo namma dodda mitra balagadondige sonangeri emba sulliada mooleya halliyalli baaagilugala bagge hagaloo raathri maatadiddeve.
  avaru baagilu painting series maadiddare
  avaru baagilige hachchiruva arthavideyella..hats off
  vichitra shaktiya, ati maatina, bidade saadhisuva kalavida eetha.

  iththeechege bidugadeyaada avra desi nagu pustakadalliyoo avaru bagila bagge barediddare
  sadhyavadare odhi. he is nice in his ideas.

  nimma bagila baraha nijakkjoo chennagide

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s