ಸ್ವಾತಂತ್ರ್ಯಕ್ಕಿದೋ ಋಷಿಪಂಚಮಿ, ಊಪ್ಸ್, ಷಷ್ಠ್ಯಬ್ದಿ!!

india_flag_background1.jpg

As long as you keep a person down, some part of you has to be down there to hold him down, so it means you cannot soar as you otherwise might.

                                                  -Marian Anderson

ಕೆಲವು ದಿನಗಳ ಹಿಂದೆ ಮನೆಯಲ್ಲಿ ಆರಾಮವಾಗಿ ಕಾಲುಚಾಚಿಕೊಂಡು ಟಿ.ವಿ.ಯಲ್ಲಿ ಚ್ಯಾನೆಲ್ ಸರ್ಫ್ ಮಾಡುತ್ತ ಇದ್ದೆ. ‘ಚಕ್ ದೇ ಇಂಡಿಯಾ’ದ ರಿಲೀಸ್, ಇಂಡಿಯನ್ ಐಡಲ್ ನಿಂದ ಅಭಿಷೇಕ್ ಮತ್ತು ದಿಪಾಲಿಯ ಎಲಿಮಿನೇಶನ್ ಸುದ್ದಿಗಳ ನಡುವೆ ಕಂಡ ದೃಶ್ಯವೊಂದು ನನ್ನ ಆರಾಮವನ್ನೆಲ್ಲ ಹಾಳುಮಾಡಿತು. ಜಮ್ಮು ಕಾಶ್ಮೀರದ ಯಾವುದೊ ಬೀದಿಯ ಫೂಟೇಜ್ ಅದು. ನಾಲಕ್ಕೈದು ಜನ ಮಹಿಳಾ ಪೊಲೀಸ್ ಪೇದೆಗಳು ತಮ್ಮ ಕೈಗೆ ಸಿಕ್ಕ ಮಹಿಳಾ ಪ್ರದರ್ಶನಕಾರ್ತಿಯೊಬ್ಬರನ್ನು ಹಿಡಿದು ಹಿಗ್ಗಾಮುಗ್ಗಾ ಚಚ್ಚುತ್ತಿದ್ದರು. ಕೂದಲು ಹಿಡಿದು ಜಗ್ಗಾಡುತ್ತ ತಲೆ, ಹೊಟ್ಟೆ, ಎದೆ, ಎಲ್ಲೆಂದರಲ್ಲಿ ಒದೆಯುತ್ತಿದ್ದರು, ಕೊನೆಗೆ ಆಕೆ ಪ್ರಜ್ನೆ ಕಳೆದುಕೊಂಡಳೆನ್ನುವಾಗ ಆಕೆಯನ್ನು ದರದರನೆ ಎಳೆದುಕೊಂಡು ಎಲ್ಲಿಗೋ ಹೋದರು. ಇನ್ನಿತರ ಪೊಲೀಸರು ಪ್ರದರ್ಶನ ನಡೆಸುತ್ತಿದ್ದವರಿಗಿಂತ ಮಿಗಿಲಾಗಿ ಕಲ್ಲುಗಳು, ಅಶ್ರುವಾಯು ಸೆಲ್ಲುಗಳು ಇತ್ಯಾದಿಗಳನ್ನು ಎಸೆಯುತ್ತ ಇದ್ದರು. ನನ್ನ ಇಡೀ ದಿನ ಕೆಟ್ಟದಾಗಿ ಕಳೆಯಿತು. ಈ ವಾರ ನಮ್ಮ ಸ್ವಾತಂತ್ರ್ಯ ದಿನಾಚರನೆಯ ಷಷ್ಟ್ಯಬ್ದಿ. ಹೊಡೆಸಿಕೊಂಡ ಮಹಿಳೆಯ ತಪ್ಪು ಏನೆ ಇರಲಿ, ಸ್ವತಂತ್ರ ರಾಷ್ಟ್ರವೊಂದರ ಪ್ರಜೆಯಾಗಿರುವ ಆಕೆಗೆ ಹಾಗೆ ಹೊಡೆದದ್ದು ನಮ್ಮ ಸಂವಿಧಾನಾತ್ಮಕ ಹಕ್ಕು ಮತ್ತು ಕಾನೂನು ಉಲ್ಲಂಘನೆಯಷ್ಟೇ ಅಲ್ಲ, ಒಬ್ಬಂಟಿ ಮಹಿಳೆಯೊಬ್ಬಳ ಮೇಲೆ ಕಾನೂನುಪಾಲಕರಾದ ಮಹಿಳಾ ಪೇದೆಗಳೆ ನಡೆಸಿದ ದೌರ್ಜನ್ಯ ನಮ್ಮಲ್ಲಿ ನಿಯೋಫ್ಯಾಸಿಸ್ಟ್ ಸಂಸ್ಕೃತಿಯ ಬೆಳವಣಿಗೆಗೆ ಸಾಕ್ಷಿಯಾಗಿದೆ.

ಎಲ್ಲ ಪತ್ರಿಕೆಗಳಲ್ಲಿ ‘ಕಳೆದ 60 ವರ್ಷಗಳ ಭಾರತ’, ‘ಸಿನಿಮಾಗಳಲ್ಲಿ ದೇಶಭಕ್ತಿ’.. ಇವೇ ಮುಂತಾದ ಲೇಖನಗಳು ರಾರಾಜಿಸುತ್ತಿವೆ. ‘ಗೂಗಲ್ಲಿ’ಗೆ ಹೋಗಿ ಈ ಸುದ್ದಿಯನ್ನು ಹುಡುಕಲು ಶತಾಯಗತಾಯ ಪ್ರಯತ್ನ ಮಾಡಿದರು ಉಹುಂ.. ಒಂದು ಪತ್ರಿಕೆಯಲ್ಲೂ ನಾನು ಕಂಡ ಸುದ್ದಿ ವರದಿಯಾಗಿರಲೆ ಇಲ್ಲ!! ಅದೇ ಹೆಂಗಸು ಯಾರಾದರೂ ಸಿನೆಮಾನಟಿಯೋ, ರಾಜಕಾರಣಿಯೋ ಆಗಿದ್ದಿದ್ದರೆ!!

ಇದು ನಮ್ಮ ಸ್ವಾತಂತ್ರ್ಯದ ಋಷಿಪಂಚಮಿಯ ಭಾರತ. ಹೆಸರಾಂತ ಅಂಕಣಕಾರ್ತಿ ಬಚ್ಚಿ ಕರ್ಕೇರಿಯಾರ ಪ್ರಕಾರ ಹೇಳುವುದಾದರೆ ‘Menopause of Independence’.

ಹೀಗೆಲ್ಲ ಯೋಚನೆಮಾಡುತ್ತ ಇದ್ದರೆ ನಾನು ಅತಿ ಸಿನಿಕಳಾಗಿಬಿಟ್ಟೆನೆಂಬ ಭಾವನೆ. ಕೆಲವು ವರುಷಗಳ ಹಿಂದೆ ಆಗಸ್ಟ್ ಹದಿನೈದರ ಬೆಳಜಾವ ಶಿವಮೊಗ್ಗೆಯಿಂದ ಊರಿಗೆ ಹೊರಟಿದ್ದೆ. ದಾರಿಯುದ್ದಕ್ಕೂ ಮಕ್ಕಳ ಮೆರವಣಿಗೆ, ಟೀಚರುಗಳ ಸಂಭ್ರಮ, ತಳಿರುತೋರಣ, ಹಾರಾಡುವ ಧ್ವಜಗಳು, ಸಣ್ಣಗೆ ಸುರಿವ ಮಳೆಯ ಮಧ್ಯೆ ಇಣುಕುವ ಹೂಬಿಸಿಲು.. ಇವನ್ನೆಲ್ಲ ನೋಡುತ್ತ ಉಲ್ಲಾಸಗೊಂಡಿದ್ದೆ. ಶಾಲೆಯ ಬ್ಯಾಂಡ್ ತಂಡದಲ್ಲಿದ್ದ ನಾವುಗಳು ತಿಂಗಳಮುಂಚೆಯೆ ನಡೆಸುತ್ತಿದ್ದ ತಯಾರಿ, ಆಗಸ್ಟ್ ಹದಿನೈದರ ನಸುಕಿನಲ್ಲಿಯೆ ಎದ್ದು ನಾವು ಸರಿಯಾಗಿ ತಿಂಡಿಯೂ ತಿನ್ನದೆ ಬೈಸಿಕೊಂಡು ಶಾಲೆಗೆ ಓಡಿಹೋಗುತ್ತಿದ್ದುದು, ಧ್ವಜಾರೋಹಣದ ಸಂತಸ, ಬಂದ ಗಣ್ಯರು ಮಾಡುತ್ತಿದ್ದ ನಮಗೆ ಒಗಟಾಗಿ ಉಳಿಯುತ್ತಿದ್ದ ಭಾಷಣಗಳು, ಊರಬೀದಿಯ ಮೆರವಣಿಗೆ, ಎಲ್ಲ ಮುಗಿದ ನಂತರ ತಂಗಿ ನನಗಾಗಿ ತನ್ನ ಪುಟ್ಟಮುಷ್ಠಿಯಲ್ಲಿ ಉಳಿಸಿಕೊಂಡು ತರುತ್ತಿದ್ದ ಮಿಠಾಯಿಯ ಸಿಹಿ..

ಇನ್ನೂ ಅದೆಲ್ಲ ಕಳೆದಿಲ್ಲ. ನನ್ನ ಆಗಸ್ಟ್ ಹದಿನೈದಕ್ಕೆ ಯಾವಾಗಲೂ ವೃದ್ಧಾಪ್ಯ ಬರದು ಅಂದುಕೊಳ್ಳುತ್ತ ಇದ್ದೇನೆ.

Advertisements

7 thoughts on “ಸ್ವಾತಂತ್ರ್ಯಕ್ಕಿದೋ ಋಷಿಪಂಚಮಿ, ಊಪ್ಸ್, ಷಷ್ಠ್ಯಬ್ದಿ!!

 1. ಪ್ರಿಯ ಚೇತೂ,

  ಆ ಹೆಂಗಸಿಗೆ ಹೊಡೆತ ಬೀಳುತ್ತಿದ್ದ ಫೂಟೇಜು ನೋಡಿದ್ದಿದ್ದ್ರೆ.. ನಿಂಗೂ ಮೈ ಉರಿದುಹೋಗಿರೋದು. ನನ್ನ ಪ್ರಕಾರ 1947ರ ಆಗಸ್ಟಿನಲ್ಲಿ ಯಾವಾಗ ಪಾರ್ಟಿಶನ್ನಿನ ರಕ್ತಪಾತ ಶುರುವಾಯಿತೊ ಅಂದೆ ಭಾರತ, ಪಾಕಿಸ್ತಾನ ಎರಡೂ ಮೈನೆರೆದುಬಿಟ್ಟವು.

 2. Excuse me

  ಈ ಉಪಮೆಗಳ ಬೆನ್ನ ಹಿಂದೆ ಬಿದ್ದರೆ ಹೀಗೇ ಕಳೆಂದಂತಾಗುತ್ತದೆ. ಭಾರತ ದೊಡ್ಡದಾಗಿದೆಯೋ ಇಲ್ಲವೋ ಎನ್ನುವುದು ನಮ್ಮ ನಡುವಿನ ವಾಸ್ತವಗಳನ್ನು ಬೇರೆ ಮಾಡುವುದಿಲ್ಲ ಅಲ್ಲವೇ?

  ಈ ಥರದ ಮಾತುಕತೆಗಳು sensitive ಅನ್ನಿಸಿಬಿಡಬಹುದು ಅನ್ನಿಸಿ ಅಡ್ಡ ಬಂದೆ…

  Please continue

 3. ಎಕ್ಸ್ಕ್ಯೂಸ್ ಮಿ ಕಿರಣಾ,

  ಉಪಮೆಗಳ ಮಾತು ಬದಿಗಿರಲಿ, ನಾವು issueಗಳನ್ನ ಸೆನ್ಸಿಟಿವ್, ಹಾಗೆ ಹೀಗೆ ಅಂತೆಲ್ಲ classify ಮಾಡಿಕೊಂಡು ಅವನ್ನ ಡಿಸ್ಕಸ್ ಮಾಡೋದೇ ಬಿಟ್ಟುಬಿಟ್ರೆ? ನೀನು ಹೇಳುವ ಹಾಗೆ ನಾವು ಏನು ಮಾತಾಡಿದರೂ, ಏನು ಉಪಮೆಗಳನ್ನ ನೀಡಿದರೂ ನಮ್ಮ ನಡುವಿನ ವಾಸ್ತವಗಳು change ಆಗುವುದಿಲ್ಲ, ನಿಜ. ಆದರೆ, ’ಆವರಣ’, ’ಅನುದೇವಾ..’ಗಳ ’sensitive’ ಮಾತುಕತೆಗಳಿಗೆ ಹೋಲಿಸಿದರೆ ನಾನು, ಚೇತನಾ ಮಾತನಾಡಿದ್ದು ನಿನಗೆ ಮಾತ್ರ ಸೆನ್ಸಿಟಿವ್ ಅನ್ನಿಸಿರ್ಬೋದು ಅಂತ ನನ್ನ ಊಹೆ!!

 4. Partition adaga Bharata mai nerediddalla, aga agiddu garbhapata!
  oggattu- jatyatita maulyagala garbhapata….. ottare nemmadi badukina kanasugala garbhapata, Rashtra bhavaneya garbhapata……

  Haudu….. I tharada matu-kathegalu nijakku sensitive a? adhege??

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s