ಮಿರ್ಜಾ ಗಾಲಿಬ್ – ಗಜಲುಗಳಿಂದ ಆಯ್ದ ತುಣುಕುಗಳು

ಆಗೆಲ್ಲ ನನ್ನ ಪಾಲಿಗೆ ಮಿರ್ಜಾ ಗಾಲಿಬನೆಂದರೆ ದೂರದರ್ಶನದ ’ಮಿರ್ಜಾ ಗಾಲಿಬ್’ ಸೀರಿಯಲ್ಲಿನ ನಾಸೀರುದ್ದೀನ್ ಶಾ. ಗಾಲಿಬನ ಹಲವಾರು ಗಜಲುಗಳನ್ನು ಮೆಲುಕುಹಾಕುತ್ತಲೆ ಬೆಳೆದ ನನಗೆ ಆತನ ಮೇಲೆ ವಿಚಿತ್ರ ಮೋಹ. ನನ್ನವ “ಯು ಮಿಸ್ಡ್ ಹಿಂ ಆಲ್ಮೋಸ್ಟ್ ಬೈ ಎ ಸೆಂಚುರಿ!” ಎಂದು ಸಂತಾಪ ಸೂಚಿಸುತ್ತ ಇರುತ್ತಾನೆ. ಆಗಿನ ಹೆಸರಾಂತ ವಿದ್ವಾಂಸರಿಂದಲೂ ಗಾಲಿಬನ ಸಾಹಿತ್ಯದ ಸರಿಯಾದ ವ್ಯಾಖ್ಯಾನ ಮಾಡಲಾಗುತ್ತಿರಲಿಲ್ಲ. ಗಾಲಿಬನನ್ನು ಓದುವವರಿಗೆ ಪಾಂಡಿತ್ಯದ ಬದಲು ಕೊಂಚ ಹ್ಯುಮಿಲಿಟಿ ಅಗತ್ಯ. ಆತ ಇನ್ನೇನು ಎಟುಕಿದ ಎನ್ನುವಷ್ಟರಲ್ಲಿ ಕಣ್ಣಾಮುಚ್ಚಾಲೆ ಆಡತೊಡಗುತ್ತಾನೆ.

mirzaghalib1.jpg

ಆಕೆಯೆನ್ನ ಮನೆಗೆ ಭೇಟಿಯಿತ್ತಳು, ದೇವರ ಪವಾಡವಿದು!!
ನಾನು ಆಕೆಯನೊಮ್ಮೆ, ಮನೆಯನೊಮ್ಮೆ ದಿಟ್ಟಿಸುತಿರುವೆ.

ದಯೆತೋರೆನ್ನ ಮೇಲೆ, ಕರೆ ವಾಪಾಸು ಬರಲು,
ನಾನೇನು ಕಳೆದುಹೋದ ಸಮಯವಲ್ಲ, ತಿರುಗಿ ಬರದಿರಲು!!

ಪ್ರೇಮದಲಿ ಕಂಬನಿ ಸುರಿಸಿದೆ, ದಿಟ್ಟತನ ಬಂದಿತು
ಹೇಗೆ ತೊಯಿದುಹೋದೆ, ಈಗ ಪರಿಶುದ್ಧ

ಕೊಂಚ ದೂರ ನಡೆವೆ ಈ ರಭಸದ ಹರಿವಿನೊಡನೆ
ಇನ್ನೂ ಈ ಪಥದರ್ಶಕನ ಪರಿಚಯವೆನಗಾಗಿಲ್ಲ

ಮಕ್ಕಳಾಟದ ಮೈದಾನವೀ ಜಗವು ನನ್ನೆದುರು
ಪ್ರತಿಸಂಜೆ ವಿವಿಧ ವಿನೋದಗಳು ನಡೆವುವು ನನ್ನೆದುರು

ಗಾಲಿಬನೇನೊ ಸತ್ತು  ಕಾಲವಾಗಿದೆ, ನೆನಪು ಬರುವುದು
ಮಾತುಮಾತಿಗು ಆತ “ಹೀಗಿದ್ದಿದ್ದರೆ ಹೇಗಿರುತ್ತಿತ್ತು?” ಎಂದು ಹೇಳುವುದು.

Advertisements

2 thoughts on “ಮಿರ್ಜಾ ಗಾಲಿಬ್ – ಗಜಲುಗಳಿಂದ ಆಯ್ದ ತುಣುಕುಗಳು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s