ಪಡಖಾನೆಯ ಹುಡುಗಿಯ ಮೋಕ್ಷ

228957481.jpg

ಮೋಕ್ಷ ಅಂದರೆ
ನನ್ನ ಮುಖ ಸವರುವ
ಗಾಳಿಯುಣ್ಣುತ್ತ ಬಗಲಲ್ಲಿ
ಕೂತ ನೀನು ಒಳಗೊಳಗೆ
ಬೆಚ್ಚಗಾಗುತ್ತ ನಗುವುದು

ಮೋಕ್ಷ ಅಂದರೆ
ನೀನು ಇನ್ನೇನು ಮರೆತೆ
ಎಂದುಕೊಂಡ ತಕ್ಷಣ
ಮರಳಿಬಂದು ಕೇಳಿ ಪೀಡಿಸಿ
ಎಲ್ಲ ನೆನಪಿಸಿ ಬೆವರಿಳಿಸಿದ್ದು

ಮೋಕ್ಷ ಅಂದರೆ
ನಿನ್ನ ಮದವೇರಿದ ಕಣ್ಣು
ಆ ಚಪ್ಪರಿಕೆಯ ಸದ್ದು
ಮಾಡಿನ ಬಿಸಿಲಕೋಲು
ಮತ್ತು ಇದಕ್ಕೆಲ್ಲ ಜೀವವೊಡ್ಡಿ
ಕರಗುವ ನಾನು

ಮೋಕ್ಷ ಅಂದರೆ
ಇವೆಲ್ಲದರ ಬಳಿಕ
ಹೈರಾಣಾಗದೆ ನಾವು
ಮಕ್ಕಳ ಹಾಗೆ ಸಂತಸಪಟ್ಟು
ಗಹಗಹಿಸಿ ನಕ್ಕಿದ್ದು

ಮೋಕ್ಷ ಅಂದರೆ
ನಾನು ತೆರಳುವ ಮುನ್ನ
ಏನಾದರು ಸಿಹಿಯಾಗಿ ಹೇಳು
ನನ್ನ ಪೂರ್ತಿ ಮಣಿಸಿಬಿಡು
ಎನ್ನುತ್ತ ನೀನು ಆರ್ದ್ರನಾದದ್ದು

ಮೋಕ್ಷ ಅಂದರೆ ಇದು.
ನಾನು ಮತ್ತು ನೀನು ಹಾಗು ಇವೆಲ್ಲವೂ.

Advertisements

8 thoughts on “ಪಡಖಾನೆಯ ಹುಡುಗಿಯ ಮೋಕ್ಷ

 1. ಪ್ರಿಯ ಟೀನಾ,
  ಒಂದೊಂದು ಸಲ ಅನಿಸುತ್ತದೆ
  ನಾನು ಅರಿತೆನೆಂದಿರುವ`ಮೋಕ್ಷ’ ಮತ್ತು ನೀವು ಅರಿತಿರುವ `ಮೋಕ್ಷ’
  ಬೇರೆಯದಲ್ಲ ಅಂತ.
  ಒಂದೊಂದು ಸಲ ಅನಿಸುತ್ತದೆ ಇದೆಲ್ಲ ಕಳಚಿ ಬಿಸುಟು
  ಅವಳ ಬಳಿ ಬಿದ್ದು ಬಿಡಬೇಕು ಅಂತ.
  ಎಷ್ಟು ಚೆನ್ನಾಗಿ ಬರೆದಿದ್ದೀರಾ

  ವಿರಾಗಿ

 2. ವಿರಾಗಿ,

  ಧನ್ಯವಾದ.
  ನಿಮ್ಮ ’ಮೋಕ್ಷ’ದ ಅರಿವಿನ ಸುತ್ತಮುತ್ತ ಒಂದು ಹೆಣ್ಣುಜೀವವಿದೆ ಎಂದು ಗೊತ್ತಾಗಿ ಸಂತಸ.
  ನೀವು ಅಂಥ ’ವಿರಾಗಿ’ಯೇನಲ್ಲ ಅನ್ನಿಸುತ್ತದೆ. ನಿಮ್ಮ ಕಳವಳ ಏನೊ ತಿಳಿಯದು.
  ಆದರೆ, ನಮ್ಮೆಲ್ಲ ಮುಖವಾಡಗಳ ಕಳಚಿ ಬೇಕೆಂದಲ್ಲಿಗೆ ಹೊರಟುಬಿಡುವುದು ಸುಲಭವೇನಲ್ಲ.
  ಇದು ನನ್ನ ತಿಳಿವು. ಬರೆಯುತ್ತಿರಿ.

 3. ಹೌದಲ್ಲ?
  ಮೋಕ್ಷ ಅಂದ್ರೆ ಇದು ಕೂಡಾ!!
  ಎಷ್ಟು ಜನ ಇದನ್ನ ತಮಗೆ ತಾವೇ ಹೇಳ್ಕೊಂಡು ನಿರಾಳವಾಗ್ತಾರೋ?

  ಥ್ಯಾಂಕ್ಸ್ ಟೀನಾ

 4. Nangoo kavithegoo ashtagi agi baralla….
  but iro ella kannada bloggaloo kavitha oriented….
  kavithe annodu ‘Malgudi days ‘ serial tarha…full episode nodi meloo kathe artha agalla….climaxnalli train kooon anta saddu madta hogodu,bekku meown anta melinda harodu ishte irutte…
  Chikkonirbekadre andukota idde,eega artha agalla doddavanada mele artha agutte anta…but mostly thats not my cup of coffee(tea andre swalpa agalla)…
  Anyway kavithe chennagide:)

 5. ಸಂದೀಪ,
  ನಮಗೆ ಅರಿವಾಗದ್ದನ್ನು ’ಇದು ತಿಳಿಯಲಿಲ್ಲ’ ಎಂದು ಹೇಳಿಕೊಳ್ಳುವುದು ಎಲ್ಲರಿಂದಲೂ ಆಗದ ಕೆಲಸ.
  ನಿಮ್ಮ ಮಾತುಗಳಲ್ಲಿ ನಿಮ್ಮ ಅರಿವಿಗೆ ಬಾರದಷ್ಟು ಮುಗ್ಡತೆ ಇದೆ.
  ನನಗೆ ನಿಮ್ಮ ತರಹದವರ ನೋಡಿದರೆ ಖುಶಿಯ ಜೊತೆಗೆ ಹೊಟ್ಟೆಕಿಚ್ಚು.
  ಬರೆಯುತ್ತ ಇರಿ.

  ವಸಂತ,
  ನಿಮ್ಮ ಬ್ಲಾಗ್ ಬಹಳ ಗಂಭೀರ ಚಿಂತನೆಗೆ ಹಚ್ಚುತ್ತದೆ.
  ಮೊದಲು ಒಂದೆರಡು ಬರಹ ನೋಡಿ ಮೆಚ್ಚಿದ್ದುಂಟು.
  ನಾನು ನಿಮ್ಮಷ್ಟು ಆಳವಾಗಿ ಯೋಚನೆ ಮಾಡಲಾರೆನೊ ಏನೊ!
  ಚರ್ಚೆಗಳು ನಡೆಯುತ್ತ ಇರಲಿ.
  ನಿಮ್ಮ ’ಬನವಾಸಿ ಬಳಗ’ಕ್ಕೆ ಶುಭಾಶಯಗಳು.

 6. ಐಕ್ಯದ ಗುಂಗಿನಲ್ಲಿ , ಅಧ್ಯಾತ್ಮದ ಹಂಗಿನಲ್ಲಿ ಮೋಕ್ಷದ ಹಾದಿ. ಮೋಕ್ಷ ಅಂದ್ರೆ ನಿನ್ನೊಳಗೆ ನಾನು, ನನ್ನೊಳಗೆ ನೀನು. ಎರಡೂ ಕಡೆ ಬೇಕಾಗಿ ಬರುವ ಸಾಂಗತ್ಯ, ಸಾಮಿಪ್ಯತೆ. ತುಂಬಾ ಚೆನ್ನಾಗಿದೆ. ಬರಿತೀರಿ. ಅಂದ ಹಾಗೆ ನಿಮ್ಮ ಫಾರ್ಮ್ ನಲ್ಲಿ ಏನೆಲ್ಲಾ ಬೆಳೆಸುತ್ತೀರಿ ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s