ಪ್ಯಾಬ್ಲೊ ನೆರೂದಾ, ಒಂದು ವಿರಹದ ಕವಿತೆ

(ಈ ಕವಿತೆ ಈಗಾಗಲೆ ಕನ್ನಡಕ್ಕೆ ಅನುವಾದಿಸಲ್ಪಟ್ಟಿದೆ ಎಂದು ಸ್ನೇಹಿತರೊಬ್ಬರು ತಿಳಿಸಿದರು. ನಾನು ಅವ್ಯಾವನ್ನೂ ನೋಡಿಲ್ಲ. ಆದರೆ ಈ ಕವನವನ್ನು ಆಂಗ್ಲದಲ್ಲಿ ಓದಿದ ಕೂಡಲೆ ಇಂಪಲ್ಸಿವ್ ಆಗಿ ಮಾಡಿದ ಅನುವಾದವಿದು. ಯಾರ ಬಳಿಯಲ್ಲಾದರು ನೆರೂದಾನ ’Tonight I can Write the Saddest Lines’ನ ಇತರ ಅನುವಾದಗಳಿದ್ದರೆ..ದಯವಿಟ್ಟು ಈ ಪುಟದಲ್ಲಿ ಪೋಸ್ಟ್ ಮಾಡಿ!!)

ಈ ರಾತ್ರಿ ನಾ ಬರೆಯಬಲ್ಲೆ ಅತ್ಯಂತ ದುಃಖತಪ್ತ ಸಾಲುಗಳ

starry_night-vincent_vangogh1152x8641.jpg

ಈ ರಾತ್ರಿ ನಾ ಬರೆಯಬಲ್ಲೆ ಎಲ್ಲಕಿಂತ ದುಃಖತಪ್ತ ಕವಿತೆಯ

ಉದಾಹರಣೆಗೆ ಬರೆವೆ, ರಾತ್ರಿ ತಾರೆಗಳಿಂದ ತುಂಬಿದೆ
ನೀಲಿ ತಾರೆಗಳು ದೂರದಲಿ ನಡುಗುತಿವೆ

ನಿಶೆಯ ಗಾಳಿ ಆಗಸದಲ್ಲಿ ಸುಳಿಸುತ್ತಿ ಹಾಡುತ್ತಿದೆ

ಈ ರಾತ್ರಿ ನಾ ಬರೆಯಬಲ್ಲೆ ಅತ್ಯಂತ ದುಃಖತಪ್ತ ಕವಿತೆಯ
ನಾನಾಕೆಯ ಪ್ರೇಮಿಸಿದೆ, ಪ್ರೇಮಿಸಿದಳೆನ್ನ ಒಮ್ಮೊಮ್ಮೆ ಆಕೆಯೂ.

ಇಂಥದೇ ರಾತ್ರಿಗಳಲ್ಲಿ ಅವಳೆನ್ನ ತೆಕ್ಕೆಯಲಿದ್ದಾಗ
ಅನಂತ ಆಗಸದಡಿ ಚುಂಬಿಸಿದ್ದೆ ಹಲವು ಸಾರಿ

ನಾನಾಕೆಯ ಪ್ರೇಮಿಸಿದೆ, ಪ್ರೇಮಿಸಿದಳೆನ್ನ ಒಮ್ಮೊಮ್ಮೆ ಆಕೆಯೂ.
ಅವಳ ವಿಶಾಲ, ಸ್ತಬ್ದ ಕಂಗಳ ಪ್ರೀತಿಸದೆ ಇರಬಹುದಿತ್ತಾದರು ಹೇಗೆ?

ಈ ರಾತ್ರಿ ನಾ ಬರೆಯಬಲ್ಲೆ ಅತ್ಯಂತ ದುಃಖತಪ್ತ ಕವಿತೆಯ
ಆಕೆ ನನ್ನವಳಲ್ಲವೆಂದು ಯೋಚನೆ. ಅವಳ ಕಳೆದುಕೊಂಡ ಭಾವನೆ.

ಈ ಭಾರೀ ರಾತ್ರಿಯ ಸದ್ದುಗಳ ಕೇಳುವೆ, ಅವಳಿಲ್ಲದೆ ಭಾರವಿದು ಇನ್ನೂ
ಹುಲ್ಲ ಮೇಲೆ ಇಬ್ಬನಿ ಬೀಳುವಂತೆ ಆತ್ಮದೊಳಗೆ ಕವಿತೆಯಿಳಿವುದು

ನನ್ನ ಪ್ರೇಮ ಅವಳನಿರಿಸಿಕೊಳ್ಳಲಿಲ್ಲ, ಹಿರಿಯ ವಿಷಯವಲ್ಲ.
ಆದರೆ ಈ ರಾತ್ರಿ ತಾರೆಗಳು ಮಿನುಗುತ್ತಿವೆ. ಅವಳೆನ್ನ ಬಳಿಯಿಲ್ಲ.

ಅಷ್ಟೆ. ಬಲುದೂರದಲಿ ಯಾರದೊ ಹಾಡು ಕೇಳುತ್ತಿದೆ. ಬಲುದೂರ.
ಕಳೆದುಹೋಗಿದೆ ನನ್ನಾತ್ಮ, ಅವಳಿಲ್ಲದೆಯೆ.

ನನ್ನ ಕಂಗಳು ಅರಸುತಲಿವೆ ಅವಳ ಮರಳಿ ಹತ್ತಿರ ತರುವ ತೆರದಲಿ
ನನ್ನ ಹೃದಯ ಅವಳನರಸುತಿದೆ, ಅವಳೆನ್ನ ಬಳಿಯಿಲ್ಲ.

ಇಂದು ಕೂಡ ರಾತ್ರಿ ವೃಕ್ಷಗಳಿಗೆ ಶ್ವೇತವರ್ಣ ಎರಚಿದೆ.
ನಾವು, ನಾವಾಗಿದ್ದವರು, ಇಂದು ಅಂತಿಲ್ಲ.

ನಾನೀಗ ಅವಳ ಪ್ರೇಮಿಸುವುದಿಲ್ಲ, ನಿಜ, ಆಕೆಯನದೆಷ್ಟು ಪ್ರೇಮಿಸಿದ್ದೆ.
ಗಾಳಿಯನರಸುತಿತ್ತು ನನ್ನ ದನಿ, ಆಕೆಯ ಕಿವಿಯ ತಲುಪಲು.

ಯಾರದೊ ಪಾಲು. ಆಕೆ ಯಾರದೊ ಪಾಲು. ಆಕೆಯೊಮ್ಮೆ ನನ್ನ ಮುತ್ತುಗಳ
ಪಾಲಾಗಿದ್ದ ಹಾಗೆ.
ಅವಳ ದನಿ, ಅವಳ ಹಗುರ ದೇಹ. ಅವಳ ಅನಂತ ಕಂಗಳು.

ನಾನೀಗ ಅವಳ ಪ್ರೇಮಿಸುವುದಿಲ್ಲ, ನಿಜ, ಪ್ರೇಮಿಸುತ್ತಿರುವೆನೊ ಏನೊ ಬಹುಶಃ
ಪ್ರೇಮ ಅಲ್ಪಕಾಲ ಉಳಿವುದು, ಮರೆವು ಬರಲು ಬಲು ತಡ.

ಇಂಥದೇ ರಾತ್ರಿಗಳಲ್ಲಿ ಅವಳೆನ್ನ ತೆಕ್ಕೆಯಲಿದ್ದಳು, ಹಾಗೆಂದೆ
ಕಳೆದುಹೋಗಿದೆ ನನ್ನಾತ್ಮ, ಅವಳಿಲ್ಲದೆಯೆ.

ಇದು ಅವಳೆನಗೆ ನೀಡಿದ ಕೊನೆಯ ನೋವಾಗಿದ್ದರು ಸರಿ,
ಇದು ನಾನವಳಿಗೆ ಬರೆವ ಕೊನೆಯ ಕವಿತೆಯಾಗಿದ್ದರು ಸರಿ.

(English translation by: Puedo Escribir. Painting: Vincent Van Gogh’s ‘Starry Night’)
 

Advertisements

8 thoughts on “ಪ್ಯಾಬ್ಲೊ ನೆರೂದಾ, ಒಂದು ವಿರಹದ ಕವಿತೆ

 1. ಮರುಕೋರಿಕೆ (Pingback): ಈ ರಾತ್ರಿ ನಾ ಬರೆಯಬಲ್ಲೆ ಅತ್ಯಂತ ದುಃಖತಪ್ತ ಸಾಲುಗಳ | DesiPundit

 2. ಪ್ರಿಯ ಸಂಕೇತ್,
  ಅನುವಾದ ನಿಮಗಿಷ್ಟವಾಯಿತೆಂದು ತಿಳಿದು ಖುಶಿಯಾಯಿತು. ನಿಮ್ಮ ಕನ್ನಡ ಪುಟದ ಲಿಂಕಿಗಾಗಿ ಧನ್ಯವಾದ. ನಿಮ್ಮ’ದೇಸೀಪಂಡಿತ್.ಕಾಂ’ ಬಹಳ ಚೆನ್ನಾಗಿದೆ. ಇನ್ನುಮುಂದೆ ರೆಗ್ಯುಲರ್ ಆಗಿ ನೋಡುವೆ.

  ಗಿರಿ,
  Initially I had thought of deleting this post when I came to know that the likes of Nisaar Ahmed and Tejaswini Niranjana have translated it. Thanks for making me confident.

 3. ಮರುಕೋರಿಕೆ (Pingback): Global Voices Online » Kannada: Bow to the Cynara within!

 4. ಮರುಕೋರಿಕೆ (Pingback): ಪ್ಲಾಬ್ಲೋ ನೆರೂದನ ಒಂದು ಕವಿತೆ… « ಓ ನನ್ನ ಚೇತನಾ…

 5. ಮರುಕೋರಿಕೆ (Pingback): ಸಂಕೋಚದಿಂದಲೇ…. « ಓ ನನ್ನ ಚೇತನಾ…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s