ರಾಬಿಯಾ – ಎರಡು ಸೂಫೀ ಕವಿತೆಗಳು.

grindinggrain10th_16thcenturypersiandictionarygrind_large1.jpg

ರಾಬಿಯಾ ಅಲ್-ಎದವಿಯ್ಯ (ಕ್ರಿ.ಶ. 717 – 801)

ಸೂಫೀ ಪಂಥದ ಪ್ರಪ್ರಥಮ ಮಹಿಳಾ ಕವಿ. ಜನನ ಇಂದಿನ ಇರಾಕಿನ ಬಸ್ರಾ ಪಟ್ಟಣದಲ್ಲಿ. ತನ್ನ ತಂದೆತಾಯಂದಿರ ಮರಣದ ನಂತರ ಗುಲಾಮಳಾಗಿ ಜೀವನ ಸವೆಸಬೇಕಾಗಿ ಬಂತು. ಕೆಲವುಕಾಲ ಗುಲಾಮಗಿರಿಯ ನಂತರ ಆಕೆಯಲ್ಲಿ ಆಧ್ಯಾತ್ಮಿಕ ಬದಲಾವಣೆಗಳು ಕಾಣತೊಡಗಿದವು. ರಾಬಿಯಾ ತನ್ನ ‘ಪ್ರಿಯತಮ’ನ ಸೇವೆ ಮಾಡುತ್ತ ಬಾಳುವೆ ನಡೆಸಲಾರಂಭಿಸಿದಳು. ಆಕೆಯ ಮಾಲೀಕ ಆಕೆಯಿಂದ ಪ್ರಯೋಜನ ಕಾಣದೆ ಬೇಸತ್ತು ಗುಲಾಮಗಿರಿಯಿಂದ ಬಿಡುಗಡೆ ನೀಡಿದ.
ರಾಬಿಯಾಳ ಪ್ರಕಾರ ನಿಜವಾಗಿ ಪ್ರೀತಿಸುವವರ ಪ್ರಜ್ನೆ ಅವರ ಪ್ರೀತಿಪಾತ್ರರ ನಿರಂತರ ಧ್ಯಾನದಲ್ಲಿರುವುದರಿಂದ ಭೌತಿಕ ಅನುಭವಗಳಾದ ನೋವು ಸಂತಸಗಳನ್ನು ಅನುಭವಿಸಲಾರದು. ಇದು ಎಂದೂ ಕಡಿಮೆಯಾಗದ ದಿವ್ಯ ಪ್ರೇಮದಿಂದ ಉಂಟಾಗುವುದು. ಒಮ್ಮೆ ಯಾರೊ ರಾಬಿಯಾಳನ್ನು “ನೀನೀ ಮಟ್ಟಕ್ಕೆ ಹೇಗೆ ತಲುಪಿದೆ?” ಎಂದು ಕೇಳಿದರಂತೆ. ಆದಕ್ಕೆ ರಾಬಿಯಾಳ ಉತ್ತರ ಹೀಗಿತ್ತು: “ನಾನು ನನ್ನ ಪ್ರೀತಿಪಾತ್ರನನ್ನು ಪ್ರಾರ್ಥಿಸುವೆ – ಓ ದೇವರೆ, ನಿನ್ನಿಂದ ನನ್ನ ದೂರ ತಳ್ಳುವ, ನಿನ್ನಿಂದ ನನ್ನ ಗಮನ ಬೇರೆಡೆ ಸೆಳೆವ ಎಲ್ಲದರಿಂದ ತಪ್ಪಿಸಿಕೊಳ್ಳಲು ನಾನು ನಿನ್ನಲ್ಲಿ ಶರಣಾಗುವೆ.”
ಆಕೆಯ ಎರಡು ಕವಿತೆಗಳ ಅನುವಾದ ಇಲ್ಲಿವೆ:

ಪ್ರೀತಿಯಲಿ ಹೃದಯಗಳ ನಡುವೆ ಇರದು ಏನೂ,

ಮಾತು ಹಂಬಲದಿಂದ ಹುಟ್ಟುವುದು,

ನಿಜರುಚಿಯಿಂದ ವಾಸ್ತವಚಿತ್ರ ಹುಟ್ಟುವ ತೆರದಿ. 

ರುಚಿಕಂಡವ ತಿಳಿವ;

ಬಣ್ಣಿಸುವವನದು ಮಿಥ್ಯೆ.

ಯಾರೆದುರು ನಿನ್ನ ಅಸ್ತಿತ್ವ ಅಳಿಸಿಹೋಗುವುದೊ,

ಯಾರ ಜೀವದೊಳಗೆ ನೀನಿರುವೆಯೊ

ಯಾರು ನಿನ್ನೀ ಯಾತ್ರೆಗೆ ಸಾಕ್ಷಿಯಾಗಿ ಬದುಕಿಹರೊ

ಬಣ್ಣಿಸಬಲ್ಲೆಯ ಅವರ ನಿಜರೂಪವನು?

******                                

ನಿನ್ನ ಪ್ರೇಮಿಸಲು ನನಗೆರಡು ದಾರಿ;                                                

ಒಂದು ಸ್ವಾರ್ಥದ ಪ್ರೇಮ                                                       

ಇನ್ನೊಂದು ನಿನಗೆ ಯೋಗ್ಯವಾದುದು.                                                  

ನನ್ನ ಸ್ವಾರ್ಥೀ ಪ್ರೇಮದಲಿ, ನಿನ್ನ ಮಾತ್ರ ನೆನೆವೆ                                       

ಇನ್ನೊಂದು ಪ್ರೇಮದಲಿ, ನೀನೆನ್ನ ಮುಸುಕು ಸರಿಸಿ                                           

ನಿನ್ನ ಜೀವಂತ ಮುಖವ ಕಣ್ತುಂಬಿ ಆಸ್ವಾದಿಸಲು ಬಿಡುವೆ.

Advertisements

7 thoughts on “ರಾಬಿಯಾ – ಎರಡು ಸೂಫೀ ಕವಿತೆಗಳು.

 1. ಪ್ರಿಯ ಟೀನಾ,
  ರಾಬಿಯಾಳ ಹಾದಿಯಲ್ಲಿ ನಡೆಯುವುದು ಬಹಳ ಸುಲಭವಾದದ್ದು. ಆದರೆ ಅಸಾಧ್ಯವೆನಿಸುವುದು ಒಮ್ಮೊಮ್ಮೆ.
  ನಿನ್ನನ್ನು ನೀನು ಇಲ್ಲವಾಗಿಸುವುದು-ಎಲ್ಲವೂ ಅವನೇ ಎಂದು ಭಾವಿಸುವುದು ಸುಲಭವೇನೋ ಸರಿ.
  ಆದರೆ ಅವನು ಪರಿಪೂರ್ಣನೇನೂ ಅಲ್ಲ.ಪರಿಪೂರ್ಣ ಎಂಬುವುದು ಇಲ್ಲವೂ ಇಲ್ಲ.
  ಸುಮ್ಮನೆ ಇದೆಲ್ಲಾ ಮರಳು.
  ನಾನೂ ಹೀಗೇ ಬಲು ಅಲೆದಿರುವೆ.
  ದಾರಿಯೇನೋ ಮನೋಹರವಿರುವುದು.
  ಆದರೆ ಗುರಿ ಸೇರುವುದು ನನಗೇನೋ ದೌರ್ಬಲ್ಯದ ಹಾಗೆ ಕಾಣಿಸುವುದು
  ಅದಕ್ಕಿಂತ ಹುಡುಗು ದಿನಗಳಲ್ಲಿ ಕಾಣಿಸುತ್ತಿದ್ದ ಆಕಾಶದ ಬಣ್ಣ ಈಗಲೂ ಭಗವಂತನ ಹಾಗೆ ಕಾಣಿಸುವುದು
  ಒಮ್ಮೆ ನಮ್ಮ ಆಶ್ರಮಕ್ಕೆ ಬಿಡುವು ಮಾಡಿಕೊಂಡು ಬನ್ನಿ.
  ಬರದಿದ್ದರೂ ಪರವಾಗಿಲ್ಲ. ಹೀಗೇ ಬರೆಯುತ್ತಿರಿ
  ಅಂದ ಹಾಗೆ ನಿಮಗೆ ತುಳು ಬರುತ್ತದಾ?

 2. ವಿರಾಗಿ,
  ಯಾರು ನೀವು? ಕುತೂಹಲ. ನೀವು ’ಆಶ್ರಮ’ದಲ್ಲಿರುವುದು..ಮತ್ತೆ ಹೀಗೆ ಎಲ್ಲದಕ್ಕು ನನ್ನ ಕವಿತೆಗಳನ್ನೆ ನಾಚಿಸುವ ಹಾಗೆ ಪ್ರತಿಕ್ರಿಯೆ ನೀಡುವುದು..ತುಳು, ಮಂಗಳೂರು ಎನ್ನುವುದು..
  ಏನೆ ಇರಲಿ, ವಿರಾಗಿಯ ಈ ಜೀವನಮುಖೀ ಮನಸ್ಥಿತಿ ಸಂತಸ ಉಕ್ಕಿಸುತ್ತದೆ.
  ನನಗೆ ತುಳು ಅರ್ಥವಾಗುತ್ತದೆ..ಒಂತೆ ಒಂತೆ..

 3. ಇಷ್ಟು ಚೆನ್ನಾಗಿ ಬರೆಯುವ ನಿಮ್ಮ ಬ್ಲಾಗಿಗೆ ಇನ್ನೂ ಹೆಚ್ಚು ಬಂದಿಣುಕುವುದು ಸಾಧ್ಯವಾಗದೇ ಇರುವುದಕ್ಕೆ ನನ್ನನ್ನೇ ಬಯ್ದುಕೊಳ್ಳುತ್ತಿದ್ದೇನೆ.
  ಅಕ್ಕನ ಈ ವಚನ ನೋಡಿ-
  ಎನ್ನ ಕಾಯ ಮಣ್ಣು ಜೀವ ಬಯಲು
  ಆವುದ ಹಿಡಿವೆನಯ್ಯ ದೇವ
  ನಿನ್ನನಾವ ಪರಿಯಲಿ ನಾ ನೆನೆವೆನಯ್ಯ
  ಎನ್ನ ಮಾಯೆಯನ್ನು ಮಾಣಿಸಯ್ಯ
  ಚೆನ್ನ ಮಲ್ಲಿಕಾರ್ಜುನಯ್ಯ

  ದೈನಿಂದಕದಲ್ಲಿ ಗುನುಗಿಕೊಳ್ಳಲು ಏಷ್ಟು ಚಂದವಿದೆ ಅಲ್ಲವೆ?
  ಸಂದಿಗ್ಧವೇ ನಿಜ, ದಿಟ ಅನಿಸಿಬಿಡುತ್ತದೆ! ವಿರಾಗಿಯವರು ಹೇಳಿದ ಹಾಗೆ “ಗುರಿ ಸೇರುವ ದೌರ್ಬಲ್ಯ” – ಅಬ್ಬ!

 4. ಪ್ರಿಯ ಅನಿವಾಸಿ,

  ರಾಬಿಯಾಳಲ್ಲಿ ನನಗಿಷ್ಟವಾದದ್ದು ಅಕ್ಕನಂತೆಯೆ ಇರುವ ಆಕೆಯ ಪ್ರೇಮಪರವಶತೆಯ ಅಗಾಧತೆ.
  ಅಲೆಯುವವರೆಲ್ಲ ಗುರಿ ಸೇರಲೆಬೇಕು ಎಂದು ಹೊರಟಿರುವುದಿಲ್ಲ ಎಂದು ನನ್ನ ಭಾವನೆ.
  ಸುಂದರವಾದ ವಚನ. ಧನ್ಯವಾದ.

 5. ನಿಮ್ಮ ಅನುವಾದ ಚೆನ್ನಾಗಿದೆ.ಈ ಕೆಳಗಿನ ಸಾಲುಗಳು ಮೆಚ್ಚುಗೆಯಾದವು.

  ರುಚಿಕಂಡವ ತಿಳಿವ;

  ಬಣ್ಣಿಸುವವನದು ಮಿಥ್ಯೆ.

  ಧನ್ಯವಾದಗಳು, ಇಂಥದ್ದೊಂದು ಒಳ್ಳೆಯ ಅನುವಾದದಿಂದ ನನ್ನ ಹಸಿವನ್ನು ನೀಗಿಸಿದ್ದಕ್ಕೆ.

  ಪ್ರೀತಿಯಿಂದ
  ನಾವಡ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s