ಪಡಖಾನೆಯ ಹುಡುಗಿ – ಎರಡು ಯೋಚನೆಗಳು

schielesitting-woman171.jpg

ಯೋಚನೆ – ೧

ಯಾರೊಡನೋ ಭೇಟಿ, ಎಲ್ಲಿಯೋ ನೋಡುವುದು
ಹುಣ್ಣಿಮೆಯ ಬೀದಿಗಳಲಿ ಕೂದಲ ಹರವಿ ನಡೆಯುವುದು
ಕನ್ನಡಿ ಕಂಡಾಗ ಮುಂಗುರುಳು ಒಪ್ಪ ಮಾಡುವುದು
ನಿನ್ನ ಸೂಳೆಯಂಥ ಕಣ್ಣುಗಳ ನೆನೆದು ತಣಿಯುವುದು
ಹೀಗೆಲ್ಲ ಇರುವುದು
ಎಷ್ಟು ಚೆಂದ
ಎಂದುಕೊಳ್ಳುತ್ತಲೆ ಎಚ್ಚರವಾಗಿ ನನಗೆಂದೆ ಕಾದಿರುವ
ಸೂರ್ಯನನ್ನು ಎದುರಿಸಲು ಅಣಿಯಾಗುತ್ತೇನೆ,
ನಿನ್ನೊಡನೆ ಇರುಳು ಕಳೆದ ಕೋಣೆಯ ಕದ ತೆರೆದು.

ಯೋಚನೆ – ೨

ನಿನ್ನ ಓಣಿ ಬಿಟ್ಟು ನಡೆವಾಗ
ಮದಿರೆಯ ರುಚಿಯೂ ಹಳಸಲು.
ನನ್ನ ಕೊರಳ ಮೂಲೆಯಲಿ ನಿನ್ನ ಪರಿಮಳ
ಮಾಗಿಯ ಬೆಳಗಿನಲ್ಲಿ ಉಣ್ಣೆ ಬಟ್ಟೆಯ ಹಿತ
ನೀನೂ ನನ್ನ ಹಾಗೆಯೇ ಹಾವಿನಂಥವನೆ ಎನಿಸಿ
ತೊಡೆಗಳನು ಎದೆಗವಚಿ ನಗುತ್ತೇನೆ
ತಿಳಿದುಕೋ, ಎಲ್ಲದಕಿಂತ ಮೊದಲು ನಾವಿದ್ದೆವು
ನಾವು ಇದ್ದೇ ಇರುವೆವು, ಎಂದೆಂದಿಗೂ.

(Painting: ‘Sitting Woman’ by Egon Shiele, 1917)

Advertisements

3 thoughts on “ಪಡಖಾನೆಯ ಹುಡುಗಿ – ಎರಡು ಯೋಚನೆಗಳು

 1. ಪ್ರಿಯ ಟೀನಾ:
  ಪಡಖಾನೆಯ ಹುಡುಗಿ–ಕೇವಲ ಒಳ್ಳೆಯ ಪದ್ಯಗಳಾಗದೆ ಒಂದು ವಿಲಕ್ಷಣ motif ಆಗಿ ಬೆಳೆಯುತ್ತಿದೆ. ಅದು ಹೀಗೆಯೇ ಬೆಳೆಯಲೆಂದು ನನ್ನ ಆಶಯ. ಚೆನ್ನಾಗಿ ಬರೆಯುತ್ತೀರಿ. ಬರೆಯುತ್ತಿರಿ.

 2. ಚೇತೂ,
  ನಿಗೂಢ ಅನ್ನುತ್ತೀಯ, ತಿಳಿಯಿತು ಅನ್ನುತ್ತೀಯ.
  ನನಗೆ ನಿಗೂಢವಾಗಿದೆ ಇದೆಲ್ಲ.
  ನಿನಗೆ ಅದೇನು ತಿಳಿಯಿತೊ? ತಿಳಿಯಿತಲ್ಲ ಒಟ್ಟಿನಲ್ಲಿ!!
  ನಿನಗೆ ತಿಳಿದದ್ದ ನನಗೂ ತಿಳಿಸೆ!! ನಾನೂ ನಗುವೆ!
  ಪ್ರೀತಿಯಿರಲಿ,
  ಟೀನ್.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s