ಬೇರುಗಳ ಹುಡುಕುತ್ತ ಹೋದೇವು ಎತ್ತ?

ನಾವೆಲ್ಲ ಇತಿಹಾಸದ ಭಾರವನ್ನು ಹೊತ್ತುಕೊಂಡೇ ಬೆಳೆಯುತ್ತೇವೆ. ನಮ್ಮ ಪೂರ್ವಜರು ನಮ್ಮ ದೇಹದ ಪ್ರತಿ ಕಣದಲ್ಲಿ ಸುರುಳಿಯಂತೆ ಪ್ರವಹಿಸುವ ಅದೃಶ್ಯ ಅರಿವಿನಲ್ಲಿ ವಾಸ ಮಾಡುವ ಹಾಗೆಯೆ ನಮ್ಮ ಮೆದುಳುಗಳ ಅಟ್ಟಣಿಗೆಗಳಲ್ಲಿ ವಾಸವಾಗಿರುವರು. -ಶರ್ಲಿ ಆಬಟ್. 
                                                     

“ನಿಮ್ಮಲ್ಲಿ ಎಷ್ಟು ಜನಕ್ಕೆ ನಿಮ್ಮ ಮುತ್ತಜ್ಜ, ಮುತ್ತಜ್ಜಿಯರ ಹೆಸರು ತಿಳಿದಿದೆ?” ಸವಾಲು ಹಾಕಿದೆ. ಗೆಳೆಯರಲ್ಲಿ ಹಲವಾರು ಜನ ತಬ್ಬಿಬ್ಬಾದರು. “ನಮಗೆ ನಮ್ಮ ಕಸಿನ್ನುಗಳ ಹೆಸರೇ ಗೊತ್ತಿಲ್ಲ, ಮುತ್ತಜ್ಜ, ಮುತ್ತಜ್ಜಿ ದೂರದ ಮಾತು!!” ಪ್ರೀತಿ ಮೂಗು ಮುರಿದಳು. “ಅವರೆಲ್ಲ ಹೇಗಿದ್ದರೂ ಅಂತ ಕುತೂಹಲ ಹುಟ್ಟಲ್ವ?” ಕೇಳಿದೆ. “ಅನ್ನಿಸುತ್ತೇನೋ ಸರಿ. ಆದರೆ ರಿಸರ್ಚ್ ಮಾಡೋಕೆ ಸಮಯ ಎಲ್ಲಿದೆ?” ಹರ್ಷ ಕೇಳುತ್ತಿದ್ದ.

ನನಗೆ ದುಗುಡ.

ಅಷ್ಟರತನಕ ಸುಮ್ಮನಿದ್ದ ಶಶಿ, “ನಿಮಗೇನು ಗೊತ್ರೋ ರಿಡಿಸ್ಕವರಿಯ ಖುಶಿ? ನನ್ನ ತಾತ ಸಾಯೋವಾಗಲು ಅವರು ಹುಟ್ಟಿ ಬೆಳೆದ ಊರು ಹೊಳವನಹಳ್ಳಿಯ ಬಗ್ಗೇನೆ ಮಾತಾಡೋರು. ನಮ್ಮಪ್ಪ ಆ ಜಾಗಾನೆ ಗೊತ್ತಿಲ್ಲ ಅಂದರು. ನಾನು ಒಂದು ವೀಕೆಂಡೆಲ್ಲ ಬೈಕಲ್ಲಿ ಅಲೆದೆ. ಕೊನೇಗೆ ಸಿಕ್ತು. ಏನು ಮಸ್ತ್ ಅನ್ನಿಸ್ತು! ತಾತ ಹೇಳ್ತಿದ್ ಗುಡಿ, ಗದ್ದೆ, ಹೊಳೆ ಎಲ್ಲ ನೋಡಿಕೊಂಡು ಬಂದೆ. ತಾತ ಮೇಲೆ ಕೂತು ನಗಾಡ್ತಿದಾರೇನೋ ಅನ್ಸೋಕೆ ಶುರುವಾಯ್ತು.” ಅಂದ. ಎಲ್ಲರೂ ಮೌನವಾಗಿದ್ದರು. ನಾನು “ಶಶಿ, ನೀನು ಒಬ್ಬ ಇಂಡಿಯನ್ ಅಲೆಕ್ಸ್ ಹ್ಯಾಲಿ ಆದೆಯಲ್ಲ!!” ಎಂದು ರೇಗಿಸಿದೆ. ಶಶಿ ನಗುತ್ತ  “ಅವನ್ಯಾರು ಮಾರಾಯಿತಿ?” ಅಂದ.

alex1h11.jpg

ಆಗಸ್ಟ್ 11, 1921 ರಂದು ನ್ಯೂಯಾರ್ಕಿನ ಕಪ್ಪು ಅಮೆರಿಕನ್ ಮನೆಯೊಂದರಲ್ಲಿ ಜನಿಸಿದ ಅಲೆಕ್ಸಾಂಡರ್ ಮರ್ರೆ ಪಾಮರ್ ಹ್ಯಾಲಿಗೆ ತಾನು ಅಮೆರಿಕದ ದೊಡ್ಡ ಚಳುವಳಿಯೊಂದರ ವಕ್ತಾರನಾಗಲಿರುವ ಯಾವ ಸುಳಿವೂ ಇರಲಿಲ್ಲ. ತನ್ನ ತಾಯಿಯ ತವರೂರಾದ ಹೆನ್ನಿಂಗ್ಸ್ ಗೆ ಭೇಟಿ ನೀಡಿದಾಗೆಲ್ಲ ಆತನ ಅಜ್ಜಿ, ಚಿಕ್ಕಮ್ಮಂದಿರು ತಮ್ಮ ಪೂರ್ವಜನಾದ ‘ಕುಂಟಾ ಕಿಂಟೆ’ ಎಂಬಾತ ಆಫ್ರಿಕಾದಿಂದ ಅಪಹರಿಸಲ್ಪಟ್ಟು ‘ನಾಪ್ಲಿಸ್’ ಎಂಬ ಪಟ್ಟಣಕ್ಕೆ ಬಿಳಿಯರ ಗುಲಾಮನಾಗಿ ಬಂದಿದ್ದಾಗಿಯೂ, ಆತ ತನ್ನ ಕಥೆಯನ್ನು ತನ್ನ ಮಕ್ಕಳಿಗೆ ಹೇಳಿ ಅದನ್ನು ಮುಂದಿನ ಪೀಳಿಗೆಯವರಿಗೆ ಹೇಳುವಂತೆ ತಿಳಿಸಿದ್ದನೆಂದೂ ಹೇಳುತ್ತಿದ್ದರು. ಇದಲ್ಲದೆ ಈ ಕುಂಟಾಕಿಂಟೆ ಮಾತಾಡುತ್ತಿದ್ದ ಭಾಷೆಯ ಹಲವಾರು ಪದಗಳನ್ನು ಅವರು ಉಚ್ಛರಿಸಬಲ್ಲವರಾಗಿದ್ದರು. ಅಲೆಕ್ಸನ ಕುತೂಹಲ ಗರಿಗೆದರಿತು. ಆತ ತನ್ನ ಅಜ್ಜಿ ಹೇಳುತ್ತಿದ್ದ ಪದಗಳೊಡನೆ ವಿಶ್ವವಿದ್ಯಾನಿಲಯಗಳ ಭಾಷಾಪರಿಣತರನ್ನು ಸಂಪರ್ಕಿಸಿದರೆ ಆಶ್ಚರ್ಯ ಕಾದಿತ್ತು! ಆ ಪದಗಳು ಆಫ್ರಿಕಾದ ’ಮ್ಯಾಂಡಿನ್ಕಾ’ ಬುಡಕಟ್ಟಿಗೆ ಸಂಬಂಧಿಸಿದವೆಂದು ತಿಳಿದುಬಂತು.  ಆಫ್ರಿಕಾದಿಂದ ಅಮೆರಿಕಾಗೆ ಕುಂಟಾ ಕಿಂಟೆ ಬಂದಿರಬಹುದಾದ ಅಂದಾಜು ಕಾಲವನ್ನು ಲೆಕ್ಕಹಾಕಿ ಹಡಗುಗಳ ದಾಖಲೆಗಳನ್ನು ಹುಡುಕಿದಾಗ ಗ್ಯಾಂಬಿಯಾದಿಂದ ಅನಾಪೊಲಿಸ್(ನಾಪ್ಲಿಸ್?)ಗೆ ಹಡಗೊಂದು ಗುಲಾಮರೊಡನೆ ಬಂದಿದ್ದ ಪುರಾವೆ ದೊರೆಯಿತು. ಅಲೆಕ್ಸ್ ಗ್ಯಾಂಬಿಯಕ್ಕೆ ತೆರಳಿ ಕುಂಟಾ ಕಿಂಟೆಯ ಹಳ್ಳಿ ಜುಫುರಿಯನ್ನು ಪತ್ತೆಹಚ್ಚಿ ಅಲ್ಲಿನ ‘ಗ್ರಿಯಟ್’ ಎಂಬ ವಂಶವೃಕ್ಷಪರಿಣತನನ್ನು ಭೇಟಿಮಾಡಿದ. ಕುಂಟಾ ಆಗ ಹಡಗಿನಲ್ಲಿ ಅಟ್ಲಾಂಟಿಕ್ ಸಾಗರವನ್ನು ದಾಟಿದ ಅನುಭವ ಪಡೆಯಲು ಹಡಗೊಂದರ ನೆಲಮಾಳಿಗೆಯಲ್ಲಿ ಅರೆನಗ್ನನಾಗಿ ಪಯಣಿಸಿದ. ಕುಂಟಾಕಿಂಟೆಯಿಂದ ತನ್ನ ಪೀಳಿಗೆಯವರೆಗಿನ ವಂಶಜರ ಬದುಕಿನ ಹೋರಾಟದ ಕಥೆಯನ್ನು 1976ರಲ್ಲಿ ‘ರೂಟ್ಸ್’ ಎಂಬ ಪುಸ್ತಕದ ಮೂಲಕ ಪ್ರಪಂಚಕ್ಕೆ ಸಾರಿದ. ಅಮೆರಿಕದಲ್ಲಿ ಈ ಪುಸ್ತಕದಿಂದ ಹೊಸತೊಂದು ethnic ಕ್ರಾಂತಿ ಉಂಟಾಯಿತು. ಲಕ್ಷಗಟ್ಟಲೆ ‘ರೂಟ್ಸ್’ ಮಾರಾಟವಾಗಿಹೋದವು. ‘ರೂಟ್ಸ್’ ಆಧರಿತ ಟೆಲಿಸೀರೀಸಿಗೆ ಮಿಲಿಯಗಟ್ಟಲೆ ವೀಕ್ಷಕರು ಹುಟ್ಟಿಕೊಂಡರು. ಕಪ್ಪುಅಮೆರಿಕನ್ನರನ್ನು ಬಿಳಿಯರು ತಕ್ಕಮಟ್ಟಿಗಿನ ಗೌರವದಿಂದ ನೋಡತೊಡಗಿದರು. ಇದು ನನ್ನ ಪ್ರಕಾರ ಅಕ್ಷರಕ್ಕೆ ದೊರಕಿದ ಅತ್ಯುನ್ನತ ಗೌರವಗಳಲ್ಲೊಂದು. ಪುಸ್ತಕದ ಸಾರಾಂಶ ಇನ್ನಾವಾಗಲಾದರು ಹೇಳುವೆ.

alex_haley1.gif

“ಹೌದಲ್ಲ, ನಾವೆಲ್ಲ ಅಮ್ಮ, ಅಜ್ಜಿಯಂದಿರು ಹೇಳುವ ಕಥೆ, ಹಾಡು, ಘಟನೆಗಳನ್ನೆಲ್ಲ ಅಸಡ್ಡೆ ಮಾಡಿರ್ತೀವಿ. ಆದ್ರೆ ಅದರ ಹಿಂದೆ ಒಂದು ಜನಪದ ಟ್ರೆಡಿಶನ್, ಪರಂಪರೇನೇ ಇರುತ್ತೆ ಅಲ್ವಾ? ಆ ಕಥೆಗಳು ಎಲ್ಲೆಲ್ಲಿಂದ ಹೇಗೆ ಶುರುವಾದುವೋ?” ಹರ್ಷ ಗಂಭೀರವಾಗಿ ಹೇಳಿದ.

ಚಿತ್ರ-1:’ರೂಟ್ಸ್’
ಚಿತ್ರ-2: ಅಲೆಕ್ಸ್ ಹ್ಯಾಲಿ ಕುಂಟಾಕಿಂಟೆಯ ಹಳ್ಳಿಯಲ್ಲಿ
 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s