ನಿನ್ನ ಕಣ್ಣು ಥೇಟು
ಪುರಾತನ ಮಾಂತ್ರಿಕನ ಹಾಗೆ
ನೂರೆಂಟು ತಾರೆಗಳನ್ನು
ತುಂಬಿಟ್ಟುಕೊಂಡು ಶತಮಾನಗಳ
ಭರವಸೆ ಸೂಸುತ್ತ
ನಿಗೂಢವಾಗಿ ಮಿನುಗುತ್ತವೆ
***
ಈ ಸೆಳೆತದ ಹುಚ್ಚು
ನಮ್ಮನ್ನು ಕಾಡಿಸುವುದೆ ಅಥವಾ
ನಾವು ಈ ಸೆಳೆತದ ಹುಚ್ಚಿನೊಡನೆ
ಆಟವಾಡುತ್ತಿದ್ದೇವೆಯೆ
ಅರಿವಾಗದೆ
ಒಬ್ಬರನೊಬ್ಬರು ಬಳಸುತ್ತೇವೆ
***
ನನಗೆ ಅವಳಲ್ಲಿ ಮತ್ಸರವಿಲ್ಲ
ಎಂದು ನಾನು ಮಿಥ್ಯೆ ನುಡಿದರೆ
ಕಟುಕನೆ,
ನಿನ್ನ ತುಂಟತನಗಳ ಸಾವಿರ ಕಥೆ
ಹೇಳಿ ಒಳಗೊಳಗೇ ನಕ್ಕು ಕಾಡುವೆಯಲ್ಲ!!
***
ಅಲ್ಲಿ ನಿನ್ನ ಬಗಲಲ್ಲಿ
ಮಲಗಿರುವವಳ ಮೇಲೆ
ನಾನು ವಿಷ ಕಾರುವುದಿಲ್ಲ
ಇಲ್ಲಿ ನನ್ನೆದೆಗೆ ಬೆನ್ನೊತ್ತಿ
ಮಗುವಂತೆ ನಕ್ಕ ನಿನ್ನ ನೆನೆದು
ಮದಿರೆಯ ಬಟ್ಟಲಿಗೆ ತುಟಿಯಿಡುತ್ತೇನೆ.
abba!
antU padakhaaneya hudugi battalige madire tumbuva karune toridaLu!
nashe, chennAgiyE Eritu…
– chetana
ಟೀನಾ,
ಸಂಜೆಗಣ್ಣಿನ ಮಾತುಗಳು ಇಷ್ಟವಾಯಿತು. ಎಷ್ಟು ಚೆನ್ನಾಗಿ ಬರೆದಿದ್ದೀರಿ.
ನಶೆ ಸಿಕ್ಕಾಪಟ್ಟೆ ಇದೆ..
padya chennagide. dhanyavadagalu. NANNANNU KOODA NIMMA PADYA MADIREGE PREREPISIDE.
rajesh
madira…. madhuraa…..