ಅಲೆಮಾರಿ ಹುಡುಗ ಮತ್ತು ಒಂದು ಗಜಲ್.

stars20061.jpg

 “ಆಮೇಲೆ?” ನಾನು ಕೇಳಿದೆ.
“ಥಾಯ್ಲೆಂಡಿಗೆ ಹೋಗ್ತೇನೆ.”
“ಅದಾದ ಮೇಲೆ?”
“ಯೂಎಸ್ಎ ತಿರುಗ್ತೇನೆ!”
“ಆಮೇಲೆ?”
“ಐ ರಿಯಲೀ ಡೋಂಟ್ ನೋ. ಈ ‘ವಾಂಡರಿಂಗ್ ಸೌಲ್’ ಅಂತಾರಲ್ಲ, ಹಾಗಾಗಿಬಿಟ್ಟಿದೀನಿ. ನಂಗೆ ಜೋರ್ಡಾನಿಗೆ ವಾಪಾಸು ಹೋಗಲಿಕ್ಕಾಗದು ಟೀನಾ!” ಎಂದು ಹೇಳಿ ಆ ಹುಡುಗ ತನ್ನ ಸರೋವರಗಳಂಥ ಕಣ್ಣುಗಳಿಂದಲೇ ನಕ್ಕುಬಿಟ್ಟಿದ್ದ. ನನಗೆ ಆತ ನಮ್ಮ ನಾಗರೀಕತೆಯ ಎಲ್ಲ ದುರವಸ್ಥೆಗಳ ಪ್ರತೀಕ ಅನ್ನಿಸಿತ್ತು.

ಏಳು ವರ್ಷಗಳ ಹಿಂದೆ ಮೈಸೂರು ವಿಶ್ವವಿದ್ಯಾನಿಲಯದ ಲೈಬ್ರರಿಯಲ್ಲಿ ಪರಿಚಯವಾದ ಮಹ್ಮೂದ್ ಅಲಿಯಾಸ್ ಶಾಹಿದ್ ಉರ್ಫ್ ಸಬೀಲ್ ಜೋರ್ಡಾನಿನ ಪ್ಯಾಲೆಸ್ತೈನೀ ಮೂಲದ ಹುಡುಗ. ಮೊದಮೊದಲು ಆವನ ಆಂಗ್ಲ ಆಕ್ಸೆಂಟಿಗೆ ಹೊಂದಿಕೊಳ್ಳುವುದು ಕಷ್ಟವಾದರೂ ಮಾತನಾಡಿದೆ. ಆತನ ತಂದೆ ಜೋರ್ಡಾನಿನಲ್ಲಿ ಕಂಪ್ಯೂಟರ್ ಪ್ರೋಗ್ರಾಮರ್. ನಾಲ್ಕು ಅಕ್ಕತಂಗಿಯಂದಿರು, ಆರು ಅಣ್ಣತಮ್ಮಂದಿರು. ನನ್ನ ಓದಿನ ಬಗ್ಗೆ ಹೇಳಿದ್ದನ್ನು ಆಸಕ್ತಿಯಿಂದ ಕೂತು ಕೇಳಿ ಮಾರನೇ ದಿನವೇ ಸುಮಾರು ಬರಹಗಳು, ಪುಸ್ತಕಗಳನ್ನು ತಂದು ನನ್ನೆದುರಿಗಿಟ್ಟ. ಜತೆಗೊಂದು ಕಪ್ಪು ಬಣ್ಣದ ಹೊದಿಕೆಯ ಮೇಲೆ ಚಿನ್ನದ ಬಣ್ಣದ ಅಕ್ಷರಗಳಿದ್ದ ಕುರಾನಿನ ಆಂಗ್ಲ ಅನುವಾದ. ನನಗೆ ಏನು ಹೇಳಬೇಕೊ ತೋಚಲಿಲ್ಲ. ಆತನನ್ನು ಹೇಗೆ ಅವಾಯ್ಡ್ ಮಾಡಲಿ ಎಂದು ಅಲ್ಲಿಯತನಕ ಯೋಚನೆ ಮಾಡುತ್ತ ಇದ್ದ ನನ್ನ ಹಿಪಾಕ್ರಸಿಯನ್ನ ಶಪಿಸಿಕೊಂಡೆ.

ಆತ ಪ್ಯಾಲೆಸ್ತೈನಿನವನೆಂದು ತಿಳಿದ ತಕ್ಷಣ ಜತೆಯ ಹುಡುಗರು ಅವನನ್ನು ದೂರಮಾಡಿಬಿಡುತ್ತಿದ್ದರು. ತಾನು ಮುಸಲ್ಮಾನನೆಂದು ಪ್ರತಿಕ್ಷಣವೂ ಅರಿವು ಮೂಡಿಸುವ ಆತನ ಜೀವನ ಬಹಳ ವಿಚಿತ್ರವಾಗಿ ಕಳೆಯುತ್ತ ಇತ್ತು. ಇಲ್ಲಿನ ಹುಡುಗರು ಕ್ರಿಕೆಟ್ ಆಡುವುದನ್ನು ನೋಡಿದಾಗಲೆಲ್ಲ ಅವನಿಗೆ ತನ್ನೂರ ಫುಟ್ಬಾಲ್ ಮೈದಾನಗಳು ನೆನಪಾಗಿಬಿಡುತ್ತಿದ್ದವು. ಪಾಕಿಸ್ತಾನ, ಅಫಘಾನಿಸ್ತಾನಗಳನ್ನು ಕುತೂಹಲದಿಂದ ನೋಡಲು ಹೋದವ ಜಿಗುಪ್ಸೆ ಹೊಂದಿ ವಾಪಾಸು ಬಂದಿದ್ದ ಮಹ್ಮೂದ್ ಅಲೀಘಡ ವಿಶ್ವವಿದ್ಯಾನಿಲಯದಿಂದ ಆಂಗ್ಲಸಾಹಿತ್ಯದಲ್ಲಿ ಪದವಿ ಪಡೆದಿದ್ದ. ಅಲ್ಲಿನ ಹುಡುಗಿಯೊಬ್ಬನ್ನು ಪ್ರೀತಿಸಿ ಆಕೆಯ ತಂದೆತಾಯಂದಿರು ಮದುವೆಯಾಗಿ ಅಲ್ಲೇ ನೆಲೆಸಲು ಒತ್ತಾಯಿಸಿದಾಗ ಹೇಳದೆ ಕೇಳದೆ ಹೊರಟುಬಂದಿದ್ದ. “ಯಾಕೆ ಹಾಗೆ ಮಾಡಿದೆ?” ನಾನು ಕೇಳಿದ್ದೆ. “ಗೊತ್ತಿಲ್ಲ! ನನ್ನ ಬಗ್ಗೆ ಅವರೇನಂದುಕೊಂಡಿದ್ರೋ? ಈಗ ಅವಳ ಮದುವೆ ಆಗಿಹೋಗಿರಬಹುದು” ಮತ್ತೆ ಆತ ನಕ್ಕಿದ್ದ. ಯಾಕೊ ಆತನ ಕೃತಘ್ನತೆಯ ಮೇಲೆ ಸಿಟ್ಟು ಬಂದಿರಲಿಲ್ಲ.

ಮಹ್ಮೂದನಿಗೆ ಸಿಟ್ಟಿನ ಮೇಲೆ ಹತೋಟಿ ಕಡಿಮೆ ಎಂದು ಆತನೇ ನನಗೆ ತಿಳಿಸಿದ. “ಹೊರದೇಶದಲ್ಲಿದೀಯ. ಹುಶಾರಾಗಿರು.” ಎಚ್ಚರಿಸಿದ್ದೆ. “ನಂಗೊತ್ತು. ಸಿಟ್ಟು ಮಾಡಬಾರದು. ಕೆಟ್ಟದು. ನಮ್ಮ ಹುಡುಗರಿಗೆಲ್ಲ ಹೀಗೇ. ವಿಚಿತ್ರ ಸಿಟ್ಟು. ನನ್ನ ಕಸಿನ್ ಒಬ್ಬ, ಬರೇ ಹದಿನಾರು ವರ್ಷದವ. ಪೊಲೀಸರ ವಿರುದ್ಧ ಗಲಭೆಯಲ್ಲಿ ಭಾಗವಹಿಸಿದ. ಕೈಯಲ್ಲಿ ಬರೀ ಕಲ್ಲುಗಳು. ಅವರ ಕೈಯಲ್ಲಿ ಗನ್ನುಗಳು. ನಾಲ್ಕು ತಿಂಗಳಾಯಿತು ಅವನು ಸತ್ತುಹೋಗಿ!” ಮತ್ತದೇ ನಿರ್ವಿಕಾರ, ನಿರ್ಲಿಪ್ತ ಮುಗ್ಧನಗು. ನಮ್ಮ ಇಪ್ಪತ್ತೊಂದನೇ ಶತಮಾನದ ನಾಗರೀಕತೆಯ ಕೂಸು ಇವನು. ಆತನಿಗೂ ಆಸೆ ಆಕಾಂಕ್ಷೆಗಳಿದ್ದವು, ಒಳ್ಳೆಯ ಸ್ನೇಹಿತರ ಅವಶ್ಯಕತೆಯಿತ್ತು, ಬಾಳಗೆಳತಿಯ ಬಗ್ಗೆ ಕಲ್ಪನೆಗಳಿದ್ದವು. ಆದರೆ ಅಭದ್ರತೆಯಿಂದ ಪ್ರೇರೇಪಿತವಾದ ಅಲೆಮಾರಿತನ ಆತನನ್ನು ಒಂದೆಡೆ ನೆಲೆಸಲು ಬಿಡುತ್ತಿರಲಿಲ್ಲ. ಇಂತಹ ಇನ್ನೆಷ್ಟು ಹುಡುಗ ಹುಡುಗಿಯರು ನಮ್ಮ ನೆಲದ ಮೇಲೆ ಅಲೆದಾಡಬೇಕೊ ಏನೊ?

ಎಲ್ಲ ಕಡೆ ಕಾರ್ತೀಕದ ಬೆಳಕು. ಮಕ್ಕಳ ಕೇಕೆ. ನನ್ನ ಕಿವಿಗಳಲ್ಲಿ ಜಗಜೀತ್ ಸಿಂಗರ ಒಂದು ಗಜಲ್. ಬರೆದವರಾರೊ? ನೆನಪಾಗುತ್ತ ಇಲ್ಲ.

“ಬಚ್ಚೋಂಕೋ ಛೋಟೇ ಹಾಥೋಂಸೆ ಚಾಂದ್ ಸಿತಾರೇ ಛೂನೇ ದೋ..
ಚಾರ್ ಕಿತಾಬೇಂ ಪಢ್ ಕರ್ ವೋ ಭೀ ಹಂ ಜೈಸೇ ಹೋಜಾಯೇಂಗೇ..”
(ಮಕ್ಕಳ ಪುಟ್ಟ ಕೈಗಳು ಮುಟ್ಟಲಿ ಬಿಡು ಚಂದ್ರ ತಾರೆಗಳ
ನಾಲಕ್ಕು ಪುಸ್ತಕಗಳನ್ನೋದಿ ಅವರು ನಮ್ಮಂತೆಯೆ ಆಗಿಹೋಗುವರು..)

ಚಿತ್ರ: www.allendale4kids.org 

Advertisements

11 thoughts on “ಅಲೆಮಾರಿ ಹುಡುಗ ಮತ್ತು ಒಂದು ಗಜಲ್.

 1. MahammUdana kaThe Gakkane nintuhOdantAgi bEjArAyitu Teena…

  NangU nAgarikate mEle EnO asahane. adu nammanna saraLavagi, sahajavAgi, grAmyavAgi badukOke biDOlla.

  I nanna mAtu illigeShTu hondikeyAguttO, ee hottu hAgannisitu, hELikonDe.
  baraha chennAgide. Jagajeetara ee gazal pUrti kaLuhisikoDu.

  Preetiyinda,
  Chetana

 2. ಟೀನಾ,

  ಅಲೆಮಾರಿ ಹುಡುಗನ ಅಪೂರ್ಣ ಹೊಮ್ಮುವಿಕೆಗೆ ಏನು ಬರೆಯಲಿ ಗೊತ್ತಾಗುತ್ತಿಲ್ಲ… ಅವನು ಹಾಗಾಗಲಿಕ್ಕೆ ಬರೀ ಸಮಾಜ, ನಾಗರಿಕತೆ ಕಾರಣವೇ.? ಎಲ್ಲ ದೂರವಿಟ್ಟು ಇಲ್ಲಿ ಬಂದು ಅವನದೇ ಆದ ಬದುಕು ಕಟ್ಟಿಕೊಳ್ಳಲು ಆಗದೇ? ಏನೋ ಯಾರು ಬೇರೆಯವರ ಬಗ್ಗೆ ಬರೆಯಲೂ ಭಯವಾಗುತ್ತೆ ತಪ್ಪೆನಿಸುತ್ತೆ.
  ನಮಗೆ ಕಾಣಿಸುವ ಅವರ ನುಣ್ಣನೆ ಮೇಲ್ಪದರದ ಒಳಗೆ ಎಂತಹ ಬಿರುಕಿದೆಯೋ ಯಾರಿಗೆ ಗೊತ್ತು?! ಆ ಬಿರುಕಿಗೆ ತೇಪೆ ಹಚ್ಚಲಾಗದ ನಾನು ಮಾತನಾಡಲು ಹೇಗೆ ಯೋಗ್ಯಳು..

  ನಿಮ್ಮ ಬರಹಗಳು ಸಂಜೆ ಹೊತ್ತಿನಲ್ಲಿ ಹಳ್ಳಿ ದಾರಿಯ ತಿರುವಿನ ಮರದ ಕೆಳಗೆ ನಿಂತಾಗ ಬೀಸಿ ಬರುವ ತಂಗಾಳಿಯ ಹಾಗನಿಸುತ್ತದೆ ನನಗೆ. ನೋಡಲಿಕ್ಕೆ ಅದು ಗಾಳಿ, ಹೊತ್ತು ತರುವುದು ಮಾತ್ರ ಹಲವಾರು ನೆನಪನ್ನು.. ತಂಪಾಗಿ ಬಂದ ನೆನಪು ಹಾದು ಹೋಗಿ ತಲೆ ಬಿಸಿಯಾಗಿ ಯೋಚನೆಯ ಕತ್ತಲು ಕವಿದುಬಿಡುತ್ತದೆ ಇನ್ನೇನು ಅಷ್ಟರಲ್ಲಿ ನಿಮ್ಮದೊಂದು ಕನ್ ಕ್ಲೂಡಿಂಗ್ ಸಾಲು, ಚುಕ್ಕಿಯ ಮಿನುಗು ಬೆಳಕಾಗಿ ಮನೆ ದಾರಿ ತೋರಿಸುತ್ತದೆ.

  ಪ್ರೀತಿಯಿಂದ
  ಸಿಂಧು.

  (ನಾನು ಗುಲಾಮ್ ಅಲಿಯವರ ಧ್ವನಿಯಲ್ಲಿ ಅ ಗಝಲ್ ಕೇಳುತ್ತಿರುತ್ತೀನಿ. ತುಂಬ ಇಷ್ಟವಾಗುತ್ತದೆ.. – ತನ್ ಹಾ ತನ್ ಹಾ ದುಖ್ ಜೀಲೇಂಗೆ..ಮೆಹಫಿಲ್ ಮೆಹಫಿಲ್ ಗಾಯೇಂಗೆ…ಮತ್ತು ಮಕ್ಕಳ ಕೈಯಲ್ಲಿ ನಕ್ಷತ್ರದಕನಸು..)

 3. ಪ್ರಿಯ ಚೇತನಾ ಮತ್ತು ಸಿಂಧು,
  This is to let you know that what you say always matters to me. ನಿಮ್ಮ ಕಮೆಂಟುಗಳನ್ನ ಓದಿ ಸವಿಯೋದೇ ಒಂದು ಒಳ್ಳೆಯ ಅನುಭವ. ಬರೆ ಪ್ರೋತ್ಸಾಹ ನೀಡುವುದಷ್ಟೆ ಅಲ್ಲ, ನಿಮ್ಮ ಹೊಳಹುಗಳನ್ನ ನಮ್ಮ ಜತೆ ಹಂಚಿಕೊಳ್ಳುತ್ತೀರಲ್ಲ, ಅದು ನೀಡುವ ಸಂತಸ ಇನ್ನಾವುದರಿಂದಲೂ ಸಿಕ್ಕದು. ಈ ಗೆಳೆತನ ಹೊಸ ರೀತಿಯದು, ಆರೋಗ್ಯಕರವಾದ್ದು. ಏನೇನು ಹೊಸಹೊಸ ಬೆಳವಣಿಗೆಗಳಾಗಿವೆ ನಮ್ಮ ಈ ಬ್ಲಾಗುಗಳಿಂದ, ಅಲ್ಲ?
  ಅಕ್ಕರೆಯೊಂದಿಗೆ,
  ಟೀನಾ.

 4. Hosa reetiya geLetana…
  ArOgya…
  ChennAgide ivella. duDime, manege bandu pAtre toLiyO talebisi, vArakkomme dhObhi GhaT AgO hittilu… ivelladara naDuve namma nammadondu nemmadiya blog u. adaralli heegE mAtige, nenapige, Chintanege ondishtu aksharagaLa sAlu.

  😉

 5. Tina,

  Are you sure about this line? – “ಆತ ಪ್ಯಾಲೆಸ್ತೈನಿನವನೆಂದು ತಿಳಿದ ತಕ್ಷಣ ಜತೆಯ ಹುಡುಗರು ಅವನನ್ನು ದೂರಮಾಡಿಬಿಡುತ್ತಿದ್ದರು.”

  I am a bit incredulous about this. In my experience, most Indian youngsters always want to be friends with foreigners.

 6. Dear Seshadriji,

  I observed Mahmoud and talked to him during those days. Many of his batchmates whom I knew asked me to refrain from talking to him, as he was prone to streetfights and regularly got into trouble. He said there was some initial friendliness but wondered why they distanced themselves once they knew he was from Palestine. He also told me about the harassment from the authorities (Police, traffic wardens etc.) while going around in the city. Also, some of the Palestinian students had formed a student organization, which was a bit rebellious in character.. maybe all these things led the Indian guys to avoid him. You know, ‘we’ always like to stay out of trouble!

 7. Tina,

  Your explanation certainly makes sense. If someone is prone to street-fights, runs into trouble with authorities and is associated with rebellious organizations, the natural reaction of most would be to avoid that person.

  Thanks,
  Seshadri

  PS: Hope you didn’t mind me asking the question! I am prone to do that!!

 8. Seshadriji,

  It is a pleasure answering to your comments. Infact, I keep waiting everyday to be questioned!
  Well, as for your question, I am glad that I could clear your doubt. But my point is that Mahmoud was a very confused personality. He was waiting in vain to be loved. I wonder at times whether that was his fault. It was a pleasure to speak to him and look at his superb set of eyes..

 9. Pingback: ಅಲೆಮಾರಿ ಹುಡುಗ ಮತ್ತು ಒಂದು ಗಜ಼ಲ್ – ಟೀನಾ ಶಶಿಕಾಂತ್ « Avadhi / ಅವಧಿ

 10. ಮನಕಲಕುವ, ಅದರ ನಡುವೆಯೂ ವಾಸ್ತವವನ್ನು ತಡಕಿನೋಡುವ ಬರಹ ಟೀನಾ ಮೇಡಮ್.

  ನೀವು ಯೂನಿವರ್ಸಿಟಿಯಾದರೂ ಗೊತ್ತಿರುವ ಸುಸಂಸ್ಕೃತ ಅಲೆಮಾರಿಯ ಬಗ್ಗೆ ಬರೆದಿದ್ದೀರಿ. ಆತನಿಗೋ ನಿಮ್ಮ-ನಮ್ಮಂಥವ್ರ ಜೊತೆ ಮಾತನಾಡಲಿಕ್ಕೆ, ನೋವ ಹಂಚಿಕೊಳ್ಳಲಿಕ್ಕೆ ಸಾಧ್ಯವಾದ್ರೂ ಆಗ್ತದೆ. ಕನಿಷ್ಠ ಎಲ್ಲಿ ಸುತ್ತಬೇಕು ಅಥವಾ ಎಲ್ಲಿಗೆ ಕಾಲಿಡಬಾರದು ಅನ್ನೋ ಆಲೋಚನೆ ಇದೆ. ಆದರೆ ಇಂಥದ್ದೇನೂ ಇಲ್ಲದ, ಎದೆಯೊಳಗೆ ಜ್ವಲಿಸುತ್ತಿದ್ದರೂ ಹಲ್ಲುಕಿರಿಯುತ್ತಾ ಅಂಡಲೆಯುವ ಅಕ್ಷರದ ಅಕ್ಕರೆ ಕಾಣದ ಸಾವಿರಾರು ಯುವಕರು ನಮ್ಮ ನಡುವೆ ಇದ್ದಾರೆ. ನಮ್ಮ ನಡುವಿನ ಇಂತಹ ಸಂಗತಿಗಳಿಗೆ ಹೋಲಿಸಿದರೆ ಆತನದ್ದು ಅಂಥ ಅಲೆಮಾರಿತನ ಅಲ್ಲವೇ ಅಲ್ಲ ಅನ್ನಿಸುತ್ತೆ ನನಗೆ. ಬಹುಶಃ ಅದಕ್ಕೆ ಅನಾಥಪ್ರಜ್ಞೆ ಅನ್ನಬಹುದೇನೋ.
  -ಸಹ್ಯಾದ್ರಿ ನಾಗರಾಜ್

  • ನಾಗರಾಜ್,
   ನೀವು ಹೇಳಿದಂಥ ಯುವಕರು, ಹುಡುಗರು ನಮ್ಮ ನಡುವೆ ಇದ್ದೇ ಇದ್ದಾರೆ. ಇದು ನಾವೇ ಕಟ್ಟಿಕೊಂಡ, ಬೆಳೆಸಿಕೊಂಡ ಸಮಾಜದ ಖೇದಕರವಾದ ಪರಿಣಾಮಗಳಲ್ಲೊಂದು. ಇಲ್ಲಿ ನನಗೆ ಕಂಡದ್ದು ಬಹುಶಃ ನಮಗೆ ತೀರ ಅಪರಿಚಿತವಾದ್ದು ಅನ್ನಬಹುದಾದ ಯುದ್ಧದ ದುಷ್ಪರಿಣಾಮಗಳಿಗೆ ಸಿಲುಕಿ ಒಂದು ಕಡೆ ನೆಲೆ ನಿಲ್ಲಲಾಗದೆ ಒದ್ದಾಡುವ, ನಮ್ಮ ಕಣ್ಣಿಗೆ ಕಾಣದ ಒಂದಿಡೀ ಯುವಪೀಳಿಗೆಯ ಒಂದು ಇಣುಕುನೋಟ ಮಾತ್ರ. ಇಲ್ಲಿ ’ನಮ್ಮ ಸುತ್ತಮುತ್ತ ಕಾಣುವವರದು ಮಾತ್ರ ಕಷ್ಟ, ಈತನದಲ್ಲ’ ಅನ್ನುವಂತಹ ಯೋಚನೆ ಏಕೆ? ನಮ್ಮ ಯುವಪೀಳಿಗೆ ಇಂತಹ ಕರ್ಮಗಳಿಗೆ ಸಿಕ್ಕಿಹಾಕಿಕೊಳ್ಳುವ ಪರಿಸ್ಥಿತಿ ಯಾವತ್ತೂ ಬರದೆ ಇರಲಿ. ಯಾರದೋ ಐಲುತನಕ್ಕೆ ಬಲಿಯಾಗಿ ಮನೆಮಠ ತೊರೆದುಬಿಟ್ಟು ಬಂದಿರುವವರ ಕಷ್ಟ ಯಾರೊಂದಿಗೊ ಹೇಳಿಕೊಂಡ ತಕ್ಷಣ ಕಡಿಮೆಯಾಗಿಬಿಡುತ್ತದೆಯೆ? ನೀವಂದ ಹಾಗೆ ಅನಾಥಪ್ರಜ್ಞೆಯಿಂದಲೆ ಹುಟ್ಟಿರುವ ಅಲೆಮಾರಿತನ ಆತನದು. ಅದು ಆತ ಆಯ್ದುಕೊಂಡ ಜೀವನ ಅಲ್ಲ ಅನ್ನುವದು ನಾನು ಹೇಳಬಯಸಿದ್ದು. ಎರಡನೆಯದಾಗಿ ಯುನಿವರ್ಸಿಟಿ ಮೆಟ್ಟಿಲು ತುಳಿದತಕ್ಷಣ ಜನ ’ಸುಸಂಸ್ಕೃತ’ರಾಗಿಬಿಡುತ್ತಾರೆ ಎಂದು ಖಂಡಿತ ನಂಬುವುದಿಲ್ಲ ನಾನು!! ಸುಶಿಕ್ಷಿತರೋ, ಅಶಿಕ್ಷಿತರೋ, ಸುಸಂಸ್ಕೃತರಾಗಿರಲಿಕ್ಕೆ ಯಾವುದೇ ವಿಶೇಷವಾದ ವಿದ್ಯಾರ್ಹತೆ ಬೇಕಾಗಿಲ್ಲ ಅನ್ನುವದು ನನ್ನ ಅನುಭವಕ್ಕೆ ಬಂದ ಮಾತು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s