ಪಡಖಾನೆಯ ಹುಡುಗಿಯ ಪ್ರೇಮಲಹರಿ

daydreamer1.jpg

ಅವನ ಕೈಬೆರಳುಗಳಲಿ ನನ್ನ ಮುಂಗುರುಳು
ನನ್ನ ತುಟಿಯಂಚಲಿ ಅವನ ತುಂಟಾಟದ ಛಾಪು
ಕಣ್ಣಮೇಲೆ ಅವನಿಟ್ಟ ಒಂದು ಪುಟ್ಟ ಮುತ್ತು
ಏಕಾಂತದಲ್ಲು
ಕಿಕ್ಕಿರಿದ ಜನಸಂದಣಿಯ
ಮಧ್ಯೆ ಓಡಾಡುವಾಗಲು
ನಮ್ಮನ್ನು ಕಾಡುವುದೊಂದೇ-
ಸೇರುವ ಮರುಳು.

***
ಅಂದು ಬೀದಿಗಳಲ್ಲಿ ನಿನ್ನ
ಕೈಹಿಡಿದು ನಡೆವಾಗ
ನನ್ನ ಕಿಬ್ಬೊಟ್ಟೆಯ ಕಾವು
ನಿನ್ನ ತಾಕುವುದೇನೋ ಎಂಬ ಮುಜುಗರ
ನನ್ನ ಸೀರೆಯ ಹೊಳೆವ ನಿರಿಗೆ
ನಿನ್ನ ಹೆಜ್ಜೆಯ ಲಹರಿ
ಬೆಚ್ಚಗಿನ ಸ್ಪರ್ಶ
ಬೆರಳತುದಿ ಮಿಂಚು
ನಮ್ಮ ಅಸಂಗತ ಬಯಕೆಗಳು
ಮತ್ತು ಈ ಪೇಟೆಯ ಗೌಜಿ ಗದ್ದಲ
ಅರೆಗತ್ತಲಿನ ಪಿಸುಮಾತುಗಳು ಮುಗಿದು
ನಿನ್ನ ಬೀಳ್ಕೊಡುವಾಗ
ಸಂಜೆಗೂ ಗೊಂದಲ

***
ನಿನ್ನಲೊಂದು ಕೇಳುವೆ
ಕಂಗಳನಾಚೀಚೆ ಸರಿಸದಿರು
ನಿನ್ನ ನೋಟವನೆ ಹೊದ್ದು ಮಲಗುವವಳಿಗೆ
ಕೌದಿಯಿಲ್ಲದಾದೀತು

ಚಿತ್ರ: www.crossedbrushstudio.com 

Advertisements

5 thoughts on “ಪಡಖಾನೆಯ ಹುಡುಗಿಯ ಪ್ರೇಮಲಹರಿ

  1. ಟೀನಾ…….

    ನಿಮ್ಮ ಕವಿತೆಗಳು ಜೀವನ್ಮುಖಿಯಾಗಿವೆ. ಆರ್ದ್ರತೆಯನ್ನು ಸ್ಫುರಿಸುವ ನಿಮ್ಮ ‘ಪಡಖಾನೆಯ ಹುಡುಗಿಯ ಪ್ರೇಮ ಲಹರಿಯು’, ಕೊರಡಿಗೂ ಕಿಚ್ಚನ್ನು ಹಚ್ಚಬಲ್ಲದು. ಲಹರಿಯ ಒಸರು ನಿಮ್ಮಲ್ಲಿ ಸದಾ ಹರಿಯುತ್ತಿರಲಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s