ನಾವು ಪಯಣಿಸುವ ಹಾದಿ.

I travel Not to go anywhere, but to go. I travel for travel’s sake. The great afair is to move. – Robert Louis Stevenson.
ಎಲ್ಲಿಗಾದರು ಪ್ರಯಾಣ ಹೊರಡಬೇಕೆಂದರೆ ಅಮ್ಮನಿಗೆ ಪರದಾಟ ಶುರು. ಸೂಟ್ ಕೇಸುಗಳ ಜತೆ ವ್ಯಾನಿಟಿಬ್ಯಾಗಿನಲ್ಲಿ ಒಂದು ಬಂಡಲು ಪ್ಲಾಸ್ಟಿಕ್ ಚೀಲಗಳು, ಅವಾಮಿನ್ ಮಾತ್ರೆಗಳು. ಮೂವರು ಮಕ್ಕಳು. ಬಸ್ಸು ಹೊರಟು ಎರಡು ಕಿಲೋಮೀಟರು ಕಳೆದಿರಲಿಕ್ಕಿಲ್ಲ, ನನ್ನ ಹೊಟ್ಟೆತೊಳೆಸಲು ಶುರು. ಉದ್ಘಾಟನೆ ನನ್ನದಾದರೆ ವಂದನಾರ್ಪಣೆ ತಮ್ಮನದು. ‘ಯಾಕಾದರು ಪ್ರಯಾಣ ಹೊರಟೆವೊ’ ಎಂದು ಅಪ್ಪ, ಅಮ್ಮ ಪ್ರತಿಸಾರಿ ಶಪಿಸಿಕೊಳ್ಳುವ ಹಾಗೆ ನಮ್ಮ ಕಳಾಹೀನ ಮೂತಿಗಳು. ಅವರು ನಗುಮುಖದಲ್ಲಿ ಪ್ರಯಾಣಿಸಲು ನಾವು ಎಂದೂ ಬಿಡಲಿಲ್ಲ. ಬಸ್ಸಿನ ವಾಸನೆಯೆಂದರೆ ಎಷ್ಟೋ ವರುಷಗಳವರೆಗೆ ದೂರ ಓಡುತ್ತಿದ್ದೆ. ಕಿಟಕಿಸೀಟು ಸಿಗದೆಹೋದರೆ ಮುಂದಿನ ಬಸ್ಸಿಗೆ ಕಾಯಬೇಕಾಗಿ ಬಂದರು ಸರಿಯೆ, ಇಳಿದುಬಿಡುತ್ತಿದ್ದವಳು ನಾನು.

lykiardseasidevillagefromabove24-21.jpg

ಬಾಬಿ ಶಿನ್ ತನ್ನ ಚೈನಾದ ರೆಸ್ತುರಾ ಬಿಟ್ಟು ಭಾರತ, ಸಿಂಗಪೂರ್, ಮಲೇಶಿಯಾ ಮೊದಲಾದೆಡೆ ತುಂಟಹುಡುಗನ ಹಾಗೆ ತಿರುಗುತ್ತ ಪ್ರಾದೇಶಿಕ ತಿನಿಸುಗಳ ತಯಾರಿಕೆಯ ಬಗ್ಗೆ ಮಾಹಿತಿ ಪಡೆಯುತ್ತಾನೆ. ಡಿಸ್ಕವರಿ ‘ಟ್ರಾವೆಲ್ ಎಂಡ್ ಲಿವಿಂಗ್’ ನೋಡುವವರೆಲ್ಲರಿಗೂ ಈತ ‘ವರ್ಲ್ಡ್ ಕೆಫೆ ಏಶಿಯಾ’ ಕಾರ್ಯಕ್ರಮವನ್ನು ಪ್ರಸ್ತುತಪಡಿಸುವವ. ಆದರೆ ಆತನ ತುಂಟತನ, ಪ್ರಯಾಣವನ್ನು ಹಾಸ್ಯಮಿಶ್ರಿತ ಶೈಲಿಯಲ್ಲಿ ಸಾದರಪಡಿಸುವ ಬಗೆ ನಗೆಯುಕ್ಕಿಸುತ್ತದೆ. ಇದೇ ಚ್ಯಾನೆಲ್ಲಿನ ಇನ್ನೊಂದು ಕಾರ್ಯಕ್ರಮ ‘ಗ್ಲೋಬ್ ಟ್ರೆಕರ್’ನ ಇಯಾನ್ ರೈಟ್ ‘ಡಿಸ್ಕವರಿ’ಯ ಆರಂಭದ ದಿನಗಳಿಂದಲು ಪ್ರಪಂಚದ ಮೂಲೆಮೂಲೆಗಳಲ್ಲಿ ಅಲೆದಾಡುತ್ತಲೆ ಇದ್ದಾನೆ. ಈತ ನೋಡದ ಸ್ಥಳಗಳಿಲ್ಲ, ತಿನ್ನದ ತಿನಿಸುಗಳಿಲ್ಲ. ತನ್ನ ಹುಡುಗುಬುದ್ಧಿಗೆ ಪ್ರಖ್ಯಾತನಾಗಿರುವ ಇಯಾನ್ ಈಗಂತೂ ಥೇಟು ಯಾವುದೋ ಬುಡಕಟ್ಟಿನ ಅಲೆಮಾರಿಯ ಥರವೇ ಕಾಣುತ್ತಾನೆ!
***
ನಾನು ಮನೆಯ ಟಿ.ವಿ. ಪರದೆಯಲ್ಲಿ ಇವರನ್ನು ನೋಡುತ್ತ ನಾನು ಪ್ರಯಾಣವನ್ನು ಯಾವಾಗ ಎಂಜಾಯ್ ಮಾಡಲು ಆರಂಭಿಸಿದೆ ಎಂದು ಯೋಚನೆ ಮಾಡುತ್ತಿದ್ದೇನೆ. ಬಹುಶಃ ಡಿಗ್ರಿಯ ಕೊನೆ ವರುಷದಲ್ಲಿ. ಆಗೆಲ್ಲ ಶಿವಮೊಗ್ಗೆಯಿಂದ ಮನೆಗೆ ಒಬ್ಬಳೆ ಓಡಾಡತೊಡಗಿದೆ. ಜೊತೆಗೆ ಬೇಗ ಕಾಲೇಜು ತಲುಪಲು ಮಾಡಿದ ಸಿಟಿಬಸ್ಸಿನ ಸಹವಾಸ ಕೂಡ ನನ್ನ ತೊಂದರೆಯನ್ನು ಕಡಿಮೆ ಮಾಡಿತು. ನೂರೆಂಟು ತಿರುವುಗಳ ಹಾದಿ. ಖಾಲಿ ಬಸ್ಸುಗಳು. ಮಾತು ನಿಲ್ಲಿಸದ ಕಂಡಕ್ಟರುಗಳು. ಕಿಟಕಿಗಳಿಂದ ತೇಲಿಬರುತ್ತಿದ್ದ ಕಾಫಿತೋಟಗಳ ಪರಿಮಳ.. ಅರೆನಿದ್ದೆ, ಅರೆಎಚ್ಚರಗಳ ನಡುವಿನ ವಿಚಿತ್ರಸ್ಥಿತಿಯಲ್ಲಿ ತೇಲಾಡುವ ನಾನು.. ಆಗಿನಿಂದಲೆ ಇರಬೇಕು ನನಗೆ ಪ್ರಯಾಣ ಪ್ರಿಯವಾಗತೊಡಗಿದ್ದು. ಅನಾಮಿಕ ಪ್ರಯಾಣ ನೀಡುವ ಸಂತಸ, ಏಕಾಂತ, ಯೋಚಿಸಲು ಅವಕಾಶ, ಇನ್ನೆಲ್ಲು ದೊರಕದು. ಸುಮ್ಮನೊಂದು ಬಸ್ಸೋ, ಟ್ರೈನೋ ಹತ್ತಿದರಾಯಿತು.. ಎಲ್ಲ ಗದ್ದಲ ಗೌಜಿ ರಶ್ಶುಗಳ ನಡುವೆಯೂ ನನಗೆ ನನ್ನದೊಂದು ಪುಟ್ಟ ಗೂಡು ದೊರಕಿಬಿಡುತ್ತದೆ. ಕಿವಿಯಲ್ಲಿ ಶಾನ್ ಗುನುಗುನಿಸುತ್ತಾನೆ – ’’ಆವೋ, ಮೀಲೋಂ ಚಲೇಂ, ಜಾನಾ ಕಹಾಂ ನಾ ಹೋ ಪತಾ..”
**
ನಮ್ಮ ಪುರಾಣಗಳಲ್ಲಿ ಪ್ರಯಾಣಕ್ಕೆ ಬಹಳ ಅರ್ಥಗಳಿವೆ. ಹೆಚ್ಚಿನ ಅಜ್ಜೀಕಥೆಗಳಲ್ಲಿ ನಾಯಕ, ನಾಯಕಿಯರು ತಮಗೆ ಬೇಕಾದ್ದನ್ನು ಪಡೆದುಕೊಳ್ಳಲು ಏಳುಸಮುದ್ರ, ಏಳುದೇಶ ದಾಟುತ್ತಾರೆ. ಪಾಂಡವರ ಮಹಾಪ್ರಸ್ಥಾನದ ಕಥೆಯನ್ನು ಇಂದು ಕೇಳಿದರೂ ಹೊಸ ಅರ್ಥಗಳು ಹುಟ್ಟಿಕೊಳ್ಳುತ್ತವೆ. ಕಾಲಾನುಕಾಲದಿಂದಲು ಪ್ರವಾಸಿಗರು ತಮ್ಮ ಅನುಭವಗಳನ್ನು ಬರೆದಿಡುವುದರ ಮೂಲಕ ಮಾನವ ಇತಿಹಾಸದ ಬೆಳವಣಿಗೆಗೆ ನೀರೆರೆದು ಪೋಷಣೆ ಮಾಡಿದ್ದಾರೆ. ಶತಮಾನವೊಂದರ ಹಿಂದೆ ಒಂದೂರಿನಿಂದ ಇನ್ನೊಂದೂರಿಗೆ ಚಕ್ಕಡಿಯ ಮೇಲೆ ಪ್ರಯಾಣಿಸುವುದೇ ದೊಡ್ಡದಾಗಿದ್ದರೆ ಇಂದು ಭೂಮಿಯಿಂದ ಚಂದ್ರನೆಡೆಗೆ ಮಿಲಿಯನ್ನುಗಟ್ಟಲೆ ಹಣತೆತ್ತು ಪ್ರಯಾಣ ಮಾಡುವ ಜನರಿದ್ದಾರೆ. ಒಂದು ಆಯಾಮದಿಂದ ಇನ್ನೊಂದು ಆಯಾಮಕ್ಕೆ ಪ್ರಯಾಣದ ಬಗ್ಗೆ ಹಲವಾರು ಪ್ರಯೋಗಗಳು ನಡೆಯುತ್ತಿವೆ.
***
ಪ್ರಯಾಣಗಳು ನಮ್ಮ ಪಾಲಿಗೆ ವಿಶೇಷವಾಗುವುದು ಅವುಗಳು ನೀಡುವ ಹೊಸ ಅನುಭೂತಿಗಳ, ಹೊಸ ಬಣ್ಣಗಳ, ಹೊಸ ರುಚಿ, ವಿಚಾರಗಳ ಮೂಲಕ. ಒಂದೆಡೆ ನಿಂತ ನೀರಾಗುವುದರಿಂದ ಅವು ನಮ್ಮನ್ನು ತಡೆಯುತ್ತವೆ. ನಾವು ಪಯಣಿಸಿದ ದಾರಿಗಳ ಪರಿಮಳ ನಮ್ಮೊಂದಿಗೆ ಇರದು. ನಿಜ. ಆದರೆ ಆ ಪರಿಮಳವನ್ನು ಪುನಃ ಇನ್ನೊಂದೆಡೆ ಆಘ್ರಾಣಿಸುವ ತುಡಿತವನ್ನು ನೀಡುವುದು ಪ್ರಯಾಣದ ಕಲ್ಪನೆ. ಅವು ನಮ್ಮ ದಾರಿಗಳು. ನಾವೇ ಆಯ್ಕೆ ಮಾಡಿಕೊಂಡಂಥವು. ಕೆಲವೊಮ್ಮೆ ಜನಸಂದಣಿ, ಕೆಲವೊಮ್ಮೆ ನಿರ್ಜನ. ಅವುಗಳಿಂದ ನಾವು ನಮಗೇ ಅರಿವಿರದ ಹಾಗೆ ಬದಲಾಗುವುದಂತೂ ನಿಜ! ಕವಿ ರಾಬರ್ಟ್ ಫ್ರಾಸ್ಟ್ ತನ್ನ ಜನಪ್ರಿಯ ಕವಿತೆ ‘ದ ರೋಡ್ ನಾಟ್ ಟೇಕನ್’ ನಲ್ಲಿ ಹೇಳಿದ ಹಾಗೆ:

Two roads diverged in a wood, and I —
I took the one less traveled by,
And that has made all the difference.

ಚಿತ್ರ http://www.kingston.gov.in

9 thoughts on “ನಾವು ಪಯಣಿಸುವ ಹಾದಿ.

 1. ಹಲೋ ಟೀನಾ,
  ಇತ್ತೀಚೆಗೆ ನಾನು ರೋಡ್ ನಾಟ್ ಟೇಕನ್ ಕವಿತೆಯ ಕುರಿತು ಬರೆದಿದ್ದೆ. ಅದೇ ಹೊತ್ತಿಗೆ ನಿಮ್ಮ ಸೊಗಸಾದ ಪ್ರಬಂಧವೂ ಕಣ್ಣಿಗೆ ಬಿತ್ತು. ತುಂಬ ಖುಷಿಕೊಟ್ಟಿತು. ಪಯಣವೆಂದರೆ ನನಗಂತೂ ಎಂಥವೋ ಎಕ್ಸೈಟುಮೆಂಟು. ಕೆ ಎಸ್ ನ ಕವಿತೆಗಳಲ್ಲಿ ಈ ಪಯಣದ ಪ್ರಸ್ತಾಪ ಅಲ್ಲಲ್ಲಿ ಬರುತ್ತದೆ.

  1. ಪಯಣಿಸುವ ವೇಳೆಯಲಿ ಬಂದು ಅಡಿಗೆರಗಿ
  ಮುಂದೆ ನಿಂತಳು ನನ್ನ ಕೈ ಹಿಡಿದ ಹುಡುಗಿ
  ಇನ್ನೆಂದು ಬರುವಿರೆಂದೆನ್ನ ಕೇಳಿದಳು
  ಇನ್ನೊಂದು ತಿಂಗಳಲಿ ಎಂದು ಹೇಳಿದೆನು.

  2. ಬೆಟ್ಟಗಳ ನಡುವೆ ಸಾಗುವ ದಾರಿ ಹಿತವಲ್ಲ
  ಸೀಗೆ ಮೆಳೆಯಲಿ ಸದ್ದು ಹಾವು ಹರಿದು

  3. ನೀ ಬರುವ ದಾರಿಯಲಿ ಬಿಸಿಲು ತಂಪಾಗಿ
  ಬೇಲಿಗಳ ಸಾಲಿನಲಿ ಹಸಿರು ಕೆಂಪಾಗಿ
  ಪಯಣ ಮುಗಿಯುವ ತನಕ
  ಎಳೆಬಿಸಲ ಮಣಿಕನಕ
  ಸಾಲು ಮರಗಳ ನಡುವೆ ಸೊಬಗ ಸುರಿದಿರಲಿ
  (ಇದೇ ಕವಿತೆಯಲ್ಲಿ ಮತ್ತೊಂದು ಸಾಲಿದೆ, ನೆನಪಿಲ್ಲ. ಅದು ಹೀಗೆ ಕೊನೆಯಾಗುತ್ತದೆ-
  ಪಯಣವೋ ನಿಲುಗಡೆಯೋ ತಿಳಿಯದಂತಿರಲಿ)

  ಇದನ್ನೆಲ್ಲ ಥಟ್ಟನೆ ನೆನಪಿಸಿದ್ದಕ್ಕೆ ಥ್ಯಾಾಾಾಾಾಂಕ್ಸೂ..

 2. 1. The real voyage of discovery consists not in seeking new landscapes but in
  having new eyes.
  2. A good traveler has no fixed plans, and is not intent on arriving.
  3. The traveler sees what he sees, the tourist sees what he has come to see.
  4. The longest journey a man must take is the eighteen inches from his head
  to his heart.

 3. The longest journey a man must take is the eighteen inches from his head
  to his heart

  ದಯವಿಟ್ಟು ಹೇಳಿ, ಇದು ಯಾರ ಸಾಲು?
  ನಿನಗೆ ಗೊತ್ತಾ ಟೀನ್?
  ಅಂದ ಹಾಗೆ,
  ” ದ ರೋಡ್ ನಾಟ್ ಟೇಕನ್ ” ಆಗಾಗ ನಾನು ಓದಿಕೊಂಡು ನನ್ನಷ್ಟಕ್ಕೆ enjoy ಮಾಡುವ ಕವಿತೆಗಳಲ್ಲೊಂದು.
  Thank you.

  ಪ್ರೀತಿಯಿಂದ,
  ಚೇತನಾ.

 4. Checked few sources. No mention of who quoted longest journey quote.

  There are quite a few T.V. programs on travel. Some of them, which I have watched are –
  http://www.anthonybourdain.com/ ,
  http://www.ricksteves.com/;
  http://www.palinstravels.co.uk/;
  http://travel.discovery.com/tv/samantha-brown/samantha-brown.html

  Especially, I liked Himalayas by Michael Palin. It is very good. And….you may like this – http://www.palinstravels.co.uk/static-49 :-))

 5. BTW, why have you provided a hyperlink to that quotes site for most part of the post? Was that intentional?

  ಅನಾಮಿಕ ಪ್ರಯಾಣ ನಂಗೂ ತುಂಬ ಇಷ್ಟ. unplanned ಆಗಿದ್ರೆ ಇನ್ನೂ ಖುಶಿ. ಮನಗೆ ಹೋಗ್ಬೇಕಾದ್ರೆ ಬಸ್ ಟಿಕೆಟನ್ನ ಮುಂಗಡವಾಗಿ ಕಾಯ್ದಿರಿಸಿದ್ಡೇ ಇಲ್ಲ. ಹೋಗೋಬರೋ ಬಸ್ಸನ್ನೆಲ್ಲ ತಪಶೀಲಿಸಿ, ಕಂಡಕ್ಟರ್-ಗಳನ್ನ ಗೋಗರೆದು ಹೇಗೋ ಒಂದು ಸೀಟು ಗಿಟ್ಟಿಸಿಕೊಂಡು ಹೋಗೋದಂದ್ರೆ ಏನೋ ಒಂಥರಾ ಖುಶಿ. “ಎಲ್ಲಿಗೆ ಬಸ್ ಸಿಗತ್ತೋ ಅಲ್ಲಿಗೆ ಹೋಗೋಣ ಕಣೋ” ಅಂತ ಬೀದರ್ ,ಗುಲ್ಬರ್ಗ,ಹಂಪಿ, ಬದಾಮಿ ಸುತ್ತಿದ್ದು, ಆ ಜಲಪಾತ, ಈ ಬೆಟ್ಟ ಅಂತ ಯಾರ್ಯಾರದೋ ಮಾತು ನಂಬಿಕೊಂಡು ಚಾರಣ ಹೊರಟು ಕೊನೆಗೆ ಎಲ್ಲೆಲ್ಲೋ ಹೋಗಿ ಒದ್ದಾಡಿದ್ದು, ಪರಿಚಯವಿಲ್ಲದವರನ್ನು ಮಾತನಾಡಿಸಿ ಅವರ ಮನೆಯಲ್ಲುಳಿದದ್ದು, “ಉಡುಪಿಯ, ಕುಂದಾಪುರವ?” ಅಂತ ಹೋಟೆಲ್ ಮಾಣಿಗಳ ಜೊತೆ ಸ್ನೇಹ ಬೆಳೆಸಿದ್ದು….ಏಕೋ ನಮ್ಮೂರಿನ ಬಸ್ಸುಗಳಲ್ಲಿ ಪ್ರಯಾಣಿಸುವುದೆಂದರೆ ತುಂಬ ಪ್ರೀತಿ. ಅದರಲ್ಲೂ ಕಾಲೇಜು ಟೈಮಿನ ಬಸ್ಸುಗಳು…ಏಕೆ ಅಂತ ಗೊತ್ತಲ್ಲ? :-)೦

  ಬಸ್-ಸ್ಟ್ಯಾಂಡುಗಳ ನೆನಪಾದಾಗಲೆಲ್ಲ ನೆನಪಾಗೋದು ಗುಲ್ಬರ್ಗದಲ್ಲಿ ನೋಡಿದ ಹಣ್ಣುಹಣ್ಣು ಮುದುಕಿ. ಅವಳಲ್ಲಿದ್ದ ಅಷ್ಟೂ ‘ರಾಶಿ ಭವಿಷ್ಯ’ ಪುಸ್ತಕಗಳನ್ನು ಕೊಂಡಿದ್ದೆ. ಸ್ನೇಹಿತ ಊಟ ಕೊಡಿಸಿದ್ದ. ಆದರೂ ಪ್ರಯಾಣದುದ್ದಕ್ಕೂ ಆ ದೀನ ಮುಖದ ಚಿತ್ರವನ್ನು ಮರೆಯಲಾಗಲಿಲ್ಲ. ಹೀಗೇ ಹೊರಗೆ ಒಂದು ಸುತ್ತು ಹಾಕಿ ಬಂದರೂ ಅಂತಹ ತುಂಬ ಜನ ಸಿಗುತ್ತಾರೆ. ಆದರೂ ಆಕೆಯ ಚಿತ್ರ ಮಾತ್ರ ಯಾಕೋ ಅಚ್ಚೊತ್ತಿದ ಹಾಗಿದೆ…

 6. Jogiyavare,
  Thanks for the excellent excerpts. I enjoyed reading them. If this writeup reminded you of something delightful, I am glad.

  Chethana,
  HIHIHIIIIIIIIIIIIIIIII.

  Jagali Bhagavathare,
  Tell me something, honestly. Do you by any chance happen to be the head of the bomber section of the US Airforce? Phew. Phew. I am still panting!
  I think Anthony Bourdain is the sexiest chef/foodie ever. My partner has a grudging admiration for him. I will checkout all the links you’ve sent. I am a huge fan of Discovery T&L.
  This has been a good day for me. Your comments, I must say, made it better!! I will keep all your advice in mind.
  Thanks a million!!
  (Do you have an alias? I mean, some Indian name?)

  – Regards for all,
  Tina.

 7. I am. Any doubts??? So you better be careful. Ok? 😀

  Glad that I could make atleast one person’s day better. My existence is justified for today 🙂

  I didn’t give you any advice. They are just my raw thoughts.

  Jagali Bhaagavatha is a pure Indian name. Haven’t you read that nice story of ‘Manju bhaagavatha’ ?:-)) You can call me as ‘JB’ (Don’t try to be creative with alternative fullforms. You know who I am. Don’t you? You don’t want to be bombed by US airforce. Do you?:-))

 8. ಮರುಕೋರಿಕೆ (Pingback): “ಸದ್ದಿನ ವಿಶ್ವವೊಂದು ಹೋಳಾಗುತಿರುವಾಗ..” « Tinazone-ಕಣ್ಣ ಕೋಣೆಯ ಕಿಟಕಿ…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s