ಕಳೆದ ವರುಷ – ಒಂದು ಪಟ್ಟಿ.

2657444480044617040adiggd_fs1.jpg 

ಮತ್ತೊಂದು ಹೊಸ ವರುಷ.
ಹೊಸ ಕಾಯುವಿಕೆ.
ಇನ್ನೇನಾದೀತೊ? ಹೊಸತೇನು ಕಂಡೀತೊ?
ಹೊಸತರ ಸಂಭ್ರಮದಲ್ಲಿ ಹಳೆಯದೆಲ್ಲ ಮರೆತೇ ಹೋಗುವುದು.
ಯಾವುದೊ ತಿಳಿಗೊಳದಂಥ ದಿನ ಮರಳಿ ನೆನಪಾಗುವುದು.

ಅದಕು ಮುನ್ನ..ನೆನೆಸಿಕೊಳ್ಳುವೆ..
ಏನೇನು ಮಾಡಿದೆ ಕಳೆದ ವರುಷ?
ಅದು ಚೆನ್ನಾಗಿತ್ತೊ? ಬೇಸರ ಹುಟ್ಟಿಸಿತೊ?
ಹೇಗಿತ್ತು ಒಟ್ಟಾರೆ?
ಹಾಗು ಹೀಗು ಕಳೆಯಿತು ಎಂದು ಹೇಳಿ ಅದಕ್ಕೆ ಅವಮಾನ ಮಾಡಲಾರೆ.
ನಾಲಕ್ಕು ವರುಷಗಳಿಂದ ಲೇಖನಿ ಎತ್ತದೆ ಕುಳಿತಿದ್ದ ನಾನು, ಹಾಗೆ ಹೇಳಬಹುದೆ?
ಈ ವರುಷ ನಾನು ಬರೆದೆ. ಮನಸಾರೆ.
ಕಥೆ. ಕವಿತೆ. ಅಂಕಣ. ವಿಮರ್ಶೆ…. ಏನೇನೊ.
ಪದಗಳು ತಂದಿಕ್ಕಿದ ಜವಾಬ್ದಾರಿಯ ಹೊತ್ತುಕೊಳ್ಳುವ ಧೈರ್ಯ ಮಾಡಿದೆ.
ನನ್ನ ಭುಜಗಳ ಮೇಲೆ ತಲೆಯಿರುವಂತೆ ನೋಡಿಕೊಂಡೆ.
ಪ್ರೇಮ, ವಿರಹ, ಮಮತೆ, ಕೋಪ, ಪಶ್ಚಾತ್ತಾಪ – 
ಎಲ್ಲವೂ ಸಮಯಕ್ಕೆ ತಕ್ಕನಾಗಿ ಜತೆ ನೀಡಿದವು.
ಕೆಲವು ಮಾತು ಮುರಿದೆ. ಕೆಲವು ನಿಭಾಯಿಸಿದೆ.
ಹಳೆಯ ಗೆಳೆಯರು, ಮರೆತುಹೋಗಿದ್ದವರು, ಎದುರಾದರು.
ಇನ್ನು ಕೆಲವರು ದೂರಾದರು. ಹೊಸಬರು ಪರಿಚಯದ ನಗೆ ನಕ್ಕರು.
ಹೊಸ ಗೂಡು ಮಾಡಿದೆ. ಅದರೊಳಗೆ ಕೆಲದಿನ ಮುದುರಿ ಕುಳಿತೆ.
ಆಮೇಲೆ ಹಂಬಲ ಬಂದು ರೆಕ್ಕೆ ಬಿಚ್ಚಿ ಹಾರಿದೆ.
ಕೆಲವು ಸತ್ಯಗಳ ಎದುರಿಸಲಾಗದೆ ಓಡಬೇಕೆನ್ನಿಸಿದರು ಸುಮ್ಮನೆ ನಿಂತು ಧ್ಯಾನಿಸಿದೆ
ಕೆಲವರ ಬಳಿ ಮುಗುದೆಯೆನ್ನಿಸಿಕೊಂಡೆ, ಕೆಲವರು ಮುಂಗೋಪಿಯೆಂದು ಹಳಿದರು.
ಗೋರ್ಕಲ್ಲ ಮೇಲೆ ಮಳೆ ಸುರಿಯಿತು.
ಒಳಗಿನ ಮೂಢತನಗಳು ಹೊರಬಂದು ಅಣಕಿಸಿದವು.
ಮೂಟೆಕಟ್ಟಿ ಬಿಸಾಡಿದೆ.
ಹವಣಿಕೆಗಳು ನಾಚಿಕೆ ಹುಟ್ಟಿಸಿ ಕೈಬಿಟ್ಟವು.
ನನ್ನ ಮೊದಲ ಸೋಲು ಅನುಭವಿಸಿದೆ. ತಣ್ಣಗೆ. ನಕ್ಕೆ.
ಮೂಲೆಸೇರಿ ಅತ್ತೆ. 
ಇನ್ನೇನು ಎಲ್ಲ ಮುಗಿಯಿತು ಅಂದುಕೊಳ್ಳುವಷ್ಟರಲ್ಲಿ ಒಂದು ಹುಲ್ಲುಕಡ್ಡಿ.
ಎಣಿಸಿರದ ಕಡೆಯಿಂದ ಒಂದು ಮಾಗಿದ ಮಾತು. ಒಂದು ನಗು.
ಸುಲಭವಿರಲಿಲ್ಲ ಅದು. ಕಳೆದ ವರುಷ.
ಕಳೆಯಲಾಗದಷ್ಟು ಹಿಂಸೆಯನ್ನೂ ಕೊಡಲಿಲ್ಲ.
ಉಫ್!!!

ಹೀಗೆಲ್ಲ ಕುಳಿತುಕೊಂಡು ಪಟ್ಟಿ ಮಾಡುವುದು ಚೆನ್ನಿರುತ್ತದೆ ಅಲ್ಲವೆ? ನೀವು ಯಾವಾಗಲಾದರು ಹೀಗೆ ಕಳೆದ ವರುಷವನ್ನು ಅವಲೋಕಿಸಿದ್ದೀರ? ಇನ್ನೂ ಸಮಯವಿದೆ. ಒಂದು ಖಾಲಿಹಾಳೆ, ಲೇಖನಿ ಎದುರಿಗಿಟ್ಟುಕೊಳ್ಳಿ. ನಿಮ್ಮ ಕಳೆದ ವರುಷದ ಅನುಭವಗಳನ್ನೆಲ್ಲ ಒಂದೊಂದಾಗಿ ಪಟ್ಟಿಮಾಡಿ. ಹಳೆಯದರೊಡಗೂಡಿ ಹೊಸ ವರುಷವನ್ನು ಸ್ವಾಗತಿಸಿ. ಹಗುರವೆನ್ನಿಸಬಹುದು. ನಿಮಗಾಗಿ ಹಿಬ್ರೂ ಬೈಬಲ್ಲಿನ ಭಾಗವೊಂದನ್ನು ಅನುವಾದಿಸಿ ನೀಡುತ್ತ ಇದ್ದೇನೆ.

ಎಲ್ಲದಕು ಸರಿಯಾದ ಕಾಲವೊಂದಿರುವುದು,
ಮತ್ತು ಸ್ವರ್ಗದಡಿಯಲಿರುವ ಎಲ್ಲದಕು ಸರಿಯಾದ ಸಮಯವೊಂದಿಹುದು:
ಹುಟ್ಟಿಗೊಂದು ಸಮಯ, ಸಾವಿಗೊಂದು ಸಮಯ;
ಬಿತ್ತಲೊಂದು ಸಮಯ, ಬೆಳೆದದ್ದ ಕೀಳಲೊಂದು ಸಮಯ;
ಕೊಲ್ಲಲೊಂದು ಸಮಯ, ಗಾಯ ವಾಸಿಯಾಗಲೊಂದು ಸಮಯ;
ಕೆಡವಲೊಂದು ಸಮಯ, ಕಟ್ಟಲೊಂದು ಸಮಯ;
ಅಳುವಿಗೊಂದು ಸಮಯ, ನಗಲೊಂದು ಸಮಯ;
ಶೋಕಕ್ಕೊಂದು ಸಮಯ, ನರ್ತಿಸಲೊಂದು ಸಮಯ;
ಕಲ್ಲುಗಳ ಬಿಸಾಡಲೊಂದು ಸಮಯ, ಕಲ್ಲುಗಳ ಪೇರಿಸಿಕೊಳ್ಳಲೊಂದು ಸಮಯ;
ಅಪ್ಪಿಕೊಳಲೊಂದು ಸಮಯ, ಅಪ್ಪುಗೆಯ ನಿರಾಕರಿಸಲೊಂದು ಸಮಯ;
ಪಡೆಯಲೊಂದು ಸಮಯ, ಕಳೆದುಕೊಳಲೊಂದು ಸಮಯ;
ಉಳಿಸಲೊಂದು ಸಮಯ, ಎಸೆಯಲೊಂದು ಸಮಯ;
ಹರಿಯಲೊಂದು ಸಮಯ, ಹೊಲಿಯಲೊಂದು ಸಮಯ;
ಮೌನಕೊಂದು ಸಮಯ, ಮಾತಿಗೊಂದು ಸಮಯ;
ಪ್ರೀತಿಗೊಂದು ಸಮಯ, ದ್ವೇಷಕೊಂದು ಸಮಯ;
ಕದನಕೊಂದು ಸಮಯ, ಶಾಂತಿಗೊಂದು ಸಮಯ.
– ಎಕ್ಲೆಸಿಯಾಸ್ಟೆಸ್ 3:1-8

ಚಿತ್ರ: www.digital-photography-school.com

P.S. As I was scrolling through top ten blogs on my dashboard this evening, spotted avisblog proclaiming Benazir Bhutto’s assassination. Could not believe she came back to her homeland for this gruesome fate. Remembered her father’s death which only matched hers. Whatever she was, she had the credit of being the first woman leader of a fundamentalist-dominated country. She spent her years of exile with painful dignity. Nobody deserved her fate. May her soul rest in peace. May no innocent soul of her country be punished or victimized in the aftermath. 

Advertisements

4 thoughts on “ಕಳೆದ ವರುಷ – ಒಂದು ಪಟ್ಟಿ.

 1. ಚೆನ್ನಾಗಿದೆ ಅನುವಾದ. ಇಷ್ಟೆಲ್ಲಾ ಸಮಯಗಳ ಮಧ್ಯೆ ಸಮಯ ಹೊಂಚಿಕೊಂಡು ಕಳೆದ ವರುಷ ಏನೇನು ಮಾಡಿದೆ ಅಂತ ಯೋಚಿಸುವುದು, ಅದನ್ನು ಬ್ಲಾಗಿಗೆ ಹಾಕುವುದು… ಓಹ್, ಸುಲಭಕ್ಕಿಲ್ಲ!
  ಹೊಸ ವರ್ಷದ ಶುಭಾಶಯಗಳು.. 🙂

 2. ಉಫ್… ಹೊಸ ವರುಷ!
  ಹಳತು ಕಳೆದಿದ್ದು ಗೊತ್ತೆ ಆಗಲಿಲ್ಲ ಟೀನ್… ನೀನು ಹೇಳಿದಂತೆ ಖಾಲಿ ಹಾಳೆ ಹಿಡಿದು ಕೂರುವೆ.
  ಪಟ್ಟಿ ಮಾಡುವೆ.
  ಅದರೊಳಗೆ ಈ ಬ್ಲಾಗ್ ಎಂಬ ಎರಡಕ್ಷರವೂ ಸೇರಬಹುದೇನೋ!?

  ಎಲ್ಲರಿಗೂ HAPPY NEW YEAR.

  ಪ್ರೀತಿಯಿಂದ,
  ಚೇತನಾ ತೀರ್ಥಹಳ್ಳಿ

 3. ಸುಶ್ರುತ,
  ಬಹಳಷ್ಟು ಹೊಳಹುಗಳು ಹೀಗೇ. ಎಷ್ಟು ಸರಳವೆಂದರೆ ಅವನ್ನು ಕಂಡುಕೊಳ್ಳಲು ಒಂದು ಘಳಿಗೆ ವ್ಯಯಿಸಿದರೆ ಸಾಕು.

  ನೀಲಾಂಜನ,
  ಅನುವಾದ ಮೆಚ್ಚಿದ್ದಕ್ಕಾಗಿ ಥ್ಯಾಂಕ್ಯೂ!

  ಚೇತ್,
  ನಿನ್ನ ಪಟ್ಟಿಯಲ್ಲಿ ಟೀನಾ ಅನ್ನುವ ಹೆಸರೂ ಇರತ್ತೆ!
  ಬೇಗ ಬ್ಲಾಗ್ ಲೋಕಕ್ಕೆ ವಾಪಾಸು ಬಾರೆಮಾ!!

  ಆತ್ಮೀಯತೆಯೊಡನೆ,
  ಟೀನಾ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s