ಪಡಖಾನೆಯ ಹುಡುಗಿ – ಜನವರಿಯ ಕನವರಿಕೆಗಳು

 winter_fantasy_by_kathy1001.jpg

(ಕನವರಿಕೆ 1)

ಪಡಖಾನೆಯ ಮೂಲೆಯಲ್ಲಿ
ಸಂಜೆಯಂಥದೇನೋ
ಮಂದ ಬೆಳಕು
ಅವನ ಜತೆ ಕೂತ ಆಕೆಗೆ
ತಾನು ಹುಗಿದ ಭೂತದ
ಗೋರಿ ಬಗೆದು
ಬರಿದಾಗಿಸುವ ಆತುರ
ಆತನಿಗೋ
ದೀಪದಡಿ ಮಿನುಗುವ
ಗಂಧವತಿಯ ಕಣ್ಣುಗಳೊಳಗೆ
ಇಳಿದು ಹೋಗುವ ತವಕ.
ಜನವರಿಯ
ಪಿಸುದನಿಗಳಿಗೂ
ಇಬ್ಬನಿಯ ತೂಕ!

(ಕನವರಿಕೆ 2)

ಜನವರಿಯ ಮುಂಜಾವ
ಏಪ್ರಿಲ್ಲಿನಂತಲ್ಲ
ಬೆಚ್ಚಗೆ ಸ್ವೀಡ್ ಜಾಕೆಟ್ ಧರಿಸಿ
ರೈಡಿಂಗ್ ಗ್ಲಾಸು ಶೂಸು ಗ್ಲೌಸು
ತೊಟ್ಟು ಬೈಕೇರಿ
ಅವಳ ಖಯಾಲಿಯಲ್ಲಿ
ಹಾರುವ ಅವನ ಕೇಳಿದರೆ
ಹೇಳಿಯಾನು –
ಜನವರಿಯ
ಪರಿಮಳವೇ ಬೇರೆ!!
ಅವಳು
ಸುಮ್ಮನೊಂದು
ಮುಗುಳ್ನಗೆ ನಕ್ಕಾಳು
ಅವನ ಬೆಚ್ಚನೆ ಹೆಗಲು
ನೆನಪಿಸಿಕೊಂಡು
ಜನವರಿಯ
ಕನಸುಗಳ ತೆಕ್ಕೆಯೊಳಗೇ.
 

Painting from :www.tv.com

Advertisements

6 thoughts on “ಪಡಖಾನೆಯ ಹುಡುಗಿ – ಜನವರಿಯ ಕನವರಿಕೆಗಳು

 1. ಟೀನಾ ಅವರಿಗೆ
  ಹೊಸ ವರ್ಷದ ಶುಭಾಷಯಗಳು.

  ಜನವರಿಯ
  ಪಿಸುದನಿಗಳಿಗೂ
  ಇಬ್ಬನಿಯ ತೂಕ!

  ಈ ಸಾಲು ಚೆನ್ನಾಗಿವೆ. ಹಾಗೆಯೇ ಮೊನ್ನೆ ಊರಿಗೆ ಹೋದಾಗ ನಿಮ್ಮ ಉದಯವಾಣಿ ವಿಶೇಷಾಂಕದ ಕಥೆಯನ್ನೂ ಓದಿದೆ. ಮುದ ನೀಡಿತು.

  ನಾವಡ

 2. ಅವಳು
  ಸುಮ್ಮನೊಂದು
  ಮುಗುಳ್ನಗೆ ನಕ್ಕಾಳು
  ಅವನ ಬೆಚ್ಚನೆ ಹೆಗಲು
  ನೆನಪಿಸಿಕೊಂಡು
  ಜನವರಿಯ
  ಕನಸುಗಳ ತೆಕ್ಕೆಯೊಳಗೇ….

  ಸುಂದರ ಸಾಲುಗಳು
  ಹೊಸವರುಷದ ಮೊದಲ ಪೋಸ್ಟಿಂಗೇ ಸಕತ್ತಾಗಿದೆ. ವರುಷಪೂರ್ತಿ ಹೀಗೇ ಸಾಲಾಗಿ ಬರಲಿ 🙂

 3. ನಾವಡರೆ,
  ಅರ್ಧ ದಿನದಲ್ಲಿ ಬರೆದ ಕಥೆ ಅದು! ‘something’s missing’ ಅಂತ ಸುಮಾರು ಜನರ ಕೈಲಿ ಬೈಸಿಕೊಂಡೆ ಕಣ್ರಿ. ಧನ್ಯವಾದ.

  ವೇಣು,
  ನಿಮ್ಮ ಪೋಸ್ಟುಗಳು ಬಹಳ ಇಷ್ಟವಾದವು. ಮಲ್ಲಿಗೆ ಎಸಳಿನ ಕವಿತೆಗೆ ಕಮೆಂಟು ಕಳಿಸಿದರೆ ’shashismiles’ ಅನ್ನುವ ಹೆಸರಿಗೆ ಹೋಯಿತು. ಅದು ನಾನೇ. ಈ ವರುಷದಲ್ಲಿ ಹೋದಸಲದ ಹಾಗೆ ಉಡಾಫೆ ಮಾಡದೆ ಪಟ್ಟಾಗಿ ಕೂತು ಬರೀಬೆಕು ಅಂತಿದ್ದೇನೆ. ಅದೇನಾಗುತ್ತೋ, ಬರೀದೆಲೆ ಮಾತ್ರ ಇರೋಕಾಗದು!

  ಮಹೇಶ್,
  ಥ್ಯಾಂಕ್ಸು, ತುಂಬಾ. ಬರೀತೇನೆ.

  – ಟೀನಾ.

 4. ಇಬ್ಬನಿ ತೂಕದ ಪಿಸುದನಿಯವಳೇ,

  ಚಳಿಯಲ್ಲಿ ಬೆಚ್ಚಗಿನ ಹೆಗಲಿನ ಹಾಗೇ ಆಪ್ತವಾಗಿದೆ ಸಾಲುಗಳು.
  ಹೊಸವರ್ಷದ ಶುಭಾಶಯ. ನೀವೇ ಹೇಳಿಕೊಂಡಂತೆ ತುಂಬ ಬರೀರಿ.
  ಚಳಿಯಲ್ಲಿ ಬೆಚ್ಚಗೆ, ನಶೆಯೇರುವಂತೆ, ಉರಿಬಿಸಿಲ ಕಾಲಕ್ಕೆ ತಂಬೆಲರಂತೆ, ಮಳೆಗಾಲಕ್ಕೆ ಊರ ಒಲೆಗಳಲ್ಲಿ
  ಸುಡಿಸಿಕೊಂಡು ಘಮ್ಮೆನುವ ಹಪ್ಪಳದಂತೆ. ಈ ಆಪ್ತ ಅನುಭವಗಳಿಗೆ ಕಣ್ಣಾಗಿ ಕಾಯುತ್ತಿರುತ್ತೇನೆ.

  ಸಿಂಧು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s