ಪಡಖಾನೆಯ ಹುಡುಗಿ- ಬಯಕೆಯಂಥ ಮೂರು ಮಾತು

uncoolkidscom.jpg

(ಇದು ತೇದ ಗಂಧದಂಥ ಪರಿಮಳದವನಿಗಾಗಿ)

1.
ನಿನ್ನ ನಗುವನು
ಸುಮ್ಮನೆ
ಬಚ್ಚಿಟ್ಟುಕೊಂಡಿರುವೆ
ಎಲ್ಲರಿಂದ
ಸಂಜೆ ಕಳೆವಾಗ
ಆಕಾಶಮಲ್ಲಿಗೆ ಹೂಗಳ
ಹಾದಿಯಿಂದ
ಹೇಗಾದರು
ಅಚ್ಚರಿ ಉಕ್ಕುವಂತೆ
ಬಂದೀಯ
ಎಂದು ಕಾದು
ಕುಳಿತಿರುವೆ

2.
ನನ್ನ ಈ ಅನುಕೂಲ
ನಿನ್ನ ಮಗುವಿನ ಮುಗ್ಧತೆ
ಅವನ ಮುಗುಳುನಗೆ
ಅವಳ ಹುಬ್ಬುಗಂಟು
ನನ್ನ ಅಸಹಾಯಕತೆ
ನಿನ್ನ ಮಾತುಕತೆ
ಎಲ್ಲವನು ಅಳೆದು ಸುರಿದು
ತೂಕಕ್ಕೆ ಬಿಸುಟು
ನಿನ್ನ ಮತ್ತಿನಲಿ
ಹಾಯಾಗಿ
ಕಾಲು ಚಾಚಬೇಕು
ಎಂಬ ಬಯಕೆ.

3.
ಬಿಸಿ ಹೊಯಿಗೆಯ ಮೇಲೆ
ನೀರು ಹುಯ್ದ ಹಾಗೆ
ನಮ್ಮಿಬ್ಬರ ಸಂಭಾಷಣೆ
ಹೊಗೆಯೆದ್ದು ಭಗ್ಗನೆ
ಎಲ್ಲ ಇಂಗಿದ ಹಾಗಾಗಿ
ಮಾತಿನಲಿ ಇರುವಾಗಲೆ
ಪುನಃ ನೀರಡಿಕೆ

Pic Courtesy: www.uncoolkids.com

Advertisements

8 thoughts on “ಪಡಖಾನೆಯ ಹುಡುಗಿ- ಬಯಕೆಯಂಥ ಮೂರು ಮಾತು

 1. ಮರುಕೋರಿಕೆ (Pingback): ಬಿಳಿ ಮಣ್ಣು « ಮನಕ್ಕೆ ನೆನಹಾಗಿ…

 2. ಟೀನಾ ಅವರೇ,
  ನಿಜಕ್ಕೂ ಅಚ್ಚರಿಯೆನಿಸುತ್ತ್ದೆ, ಪಡಖಾನೆಯ ಹುಡುಗಿಯ ಬಯಕೆಯಂಥ ಮೂರನೇ ಮಾತು ಆಕಾಶ ಮಲ್ಲಿಗೆಯಂತೆಯೇ ಸಹಜವಾಗಿ ಅರಳಿದ ಬಗೆ.
  ಈ ಸಾಲುಗಳನ್ನು ಓದಿ ಮುಗಿಸುವಷ್ಟರಲ್ಲೇ ಮತ್ತೆ ಅದೇ ನೀರಡಿಕೆ, ಇನ್ನಷ್ಟು ಸಾಲುಗಳು ಬೇಕೆಂಬ ಬಾಯಾರಿಕೆ.

  ಮಾತುಗಳು ಮೌನದೊಳಗೆ ಹೆಪ್ಪುಗಟ್ಟಿದಂತಿವೆ. ಮಾತುಗಳನ್ನು ಬರೆಯುತ್ತಿರಿ. ಧನ್ಯವಾದ.
  ನಾವಡ

 3. ಟೀನಾ ಮೇಡಮ್,
  ಬಹಳ ಚೆನ್ನಾಗಿದೆ….
  ನಗುವಿನಲ್ಲಿನ ಪರಿಮಳವನ್ನು ಕಾವ್ಯವಲ್ಲದೆ ಇನ್ಯಾರು ಹೇಳಿಯಾರು!!?
  ಪಡಖಾನೆ ಹುಡುಗಿ ಬಚ್ಚಿಟ್ಟುಕೊಂಡ ನಗು ಆಕೆಯ ಪಾಲಿಗೆ ದಕ್ಕಿ ಹೋಗಿ, ಆಕೆಯದೆ ಇನ್ನಷ್ಟು ಮುಗುಳ್ನಗುವುನೊಂದಿಗೆ, ಕತ್ತಲಲ್ಲಿ ಫಳಕ್ಕನೆ ಹೊಳೆದು ನಮಗೆಲ್ಲಾ ಹೊಸ ಹೊಳಹನ್ನು ನೀಡಲಿ, ಜೊತೆಗೆ ನಮ್ಮೆಲ್ಲರ ದಾಹದ ಮರಳ ಮೇಲೆ ಇನ್ನಷ್ಟು ನೀರಿನ ಬಿಂದುಗಳು ಬೀಳಲಿ ಎಂದು ಆಶಿಸುತ್ತಾ.. .
  ಇಲ್ಲೊಂದು ಕಣ್ಣಿರಿಸುತ್ತೇನೆ!! 😉

 4. ಚೇತ್,
  ತ್ಯಾಂಕು ಕಣೆ

  ಸಂಕೇತ್,
  ಪುನಃ ಧನ್ಯವಾದ! I am glad.

  ಮೋಹನ್,
  ಮರೆತೇಹೋಗಿದೇನೆ ಅಂದುಕೊಂಡಿದ್ದೆ! ನಿಮಗೆ ತೇದ ಗಂಧದಂಥ ಹುಡುಗಿ ನೆನಪಾಗಿದ್ದಕ್ಕೆ ಸಂತಸ.

  ಶಾಂತಲಾ,
  ನಾನು ಕುಂದಾಪುರದವಳಲ್ಲ! ಮಲೆನಾಡ ಕಡೇನೂ ಮರಳಿಗೆ ಹೊಯಿಗೆ ಅಂತಾರೆ.
  ಜೆಬಿ,
  I feel good when appreciation comes from you! ಥ್ಯಾಂಕ್ಯೂ!

  ನಾವಡರೆ,
  ನಿಮ್ಮ ಮಾತುಗಳೇ ಓದಲಿಕ್ಕೆ ಸೊಗಸಾಗಿವೆ. ಬರೀತಿರ್ತೇನೆ. ಖಂಡಿತಾ.

  ಶಂಕರ್,
  ನಿಮ್ಮ ಆಶಯಕ್ಕೆ, ಹಾರೈಕೆಗೆ, ಧನ್ಯವಾದ. ದಕ್ಕದ್ದರಿಂದಲೇ ಸುಮಾರು ವಸ್ತುಗಳಿಗೆ ಬೆಲೆ, ಅಲ್ಲವೆ? ನಿಮ್ಮ ಕಣ್ಣಿನ ಬಗ್ಗೆ ಹುಶಾರಾಗಿರ್ತೇನೆ! 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s