ನನ್ನೊಳಗಿನ ಝೆನ್ ಹಾಗು ವ್ಯಾಲೆಂಟೈನ್

mischtechn_011.jpg

’ಬುದ್ಧಿ ಕೊಡು, ಬಲ ಕೊಡು ಎಂದು ನಾನು ಕೇಳುವುದಿಲ್ಲ
ಚಳಿಯಾಗುತ್ತಿದೆ – ಮೈ ಕಾಯಿಸಿಕೊಳ್ಳಲು ಒಂದಿಷ್ಟು
ಬೆಂಕಿ ಕೊಡು, ಸಾಕು! ರೆಕ್ಕೆಯಿದ್ದದ್ದೊ ಇಲ್ಲದ್ದೊ
ಇಲ್ಲಿ ನಗೆಮೊಗದ ಯಾವ ದೇವರೂ ನನ್ನನ್ನರಸಿ ಬರುವುದಿಲ್ಲ.’
(ಮೂಲ: ಅನಾ ಅಹ್ಮತೋವಾ, ಅನುವಾದ: ಶಾ. ಬಾಲುರಾವ್.)

ಹೋದ ವಾರ ಸುಳಿವೂ ನೀಡದೆ ಮಳೆ ಬಿದ್ದು ಒಂದಿಷ್ಟು ತಂಪು ಸುರಿಯಿತು. ನಾನು ಗೆಳತಿ ಚೇತನಾ ಕೊಟ್ಟ ಝೆನ್ ಕಥೆಗಳ ಗುಂಗಿನಲ್ಲಿ ಓಡಾಡಿಕೊಂಡು ಆನಂದವಾಗಿದ್ದೆ. ಒಳ್ಳೆಯ ಕಥೆಗಳು ಓದಲು ಸಿಗುವುದೆ ಅಪರೂಪ ಆಗಿರುವಾಗ ಸರಳ, ತೀಕ್ಷ್ಣ ಕಥೆಗಳ ಖಜಾನೆಯೆ ದೊರಕಿದರೆ ಆನಂದ ಆಗದೆ ಇದ್ದೀತೆ? ಬೆಂಗಳೂರಿನಲ್ಲಿ ಎಲ್ಲ ಕಡೆ ವ್ಯಾಲೆಂಟೈನ್ಸ್ ಡೇ ಸಂಭ್ರಮ. ಎಲ್ಲದಕು ಒಂದು ದಿನ, ಸಮಯ ಇರುವ ಹಾಗೇ ಪ್ರೇಮಿಗಳಿಗೂ ಒಂದು ದಿನ. ಎಲ್ಲಾ ರೆಸ್ಟುರಾಗಳೂ ತುಂಬಿ ತುಳುಕುತ್ತ ಸಂತಸದ ನಾಚಿಕೆ ಸೂಸುತ್ತ ಇರುತ್ತವೆ. ಈ ದಿನದ ಬಗ್ಗೆ ಹಿಂದೆಲ್ಲೊ ಓದಿದ್ದ ಕಥೆಯೊಂದು ನೆನಪಾಗುತ್ತಿದೆ.

ಹೀಗೊಂದು ದೇಶ. ಅಲ್ಲೊಬ್ಬ ರಾಜ. ಅವನಿಗೋ ದಿನದ ಇಪ್ಪತ್ತನಾಲ್ಕು ಗಂಟೆಯೂ ಯುದ್ಧಗಳದ್ದೆ ಚಿಂತೆ. ಯುದ್ಧ ಮಾಡಲಿಕ್ಕೆ ಸೈನ್ಯ ಬೇಕಲ್ಲ! ಸೈನ್ಯಕ್ಕೆ ಜನ ಬೇಕಲ್ಲ! ಸರಿ, ಇದ್ದಬದ್ದ ಹುಡುಗರು, ಯುವಕರನ್ನೆಲ್ಲ ಸೈನ್ಯ ಸೇರುವಂತೆ ಕಾನೂನು ಹೇರಿದ. ಜತೆಗೇ ಇನ್ನೊಂದು ಕಾನೂನೂ ಜಾರಿಗೆ ಬಂತು. ಅದೇನಪ್ಪಾ ಅಂದರೆ ಈ ಸೈನಿಕರು ತಮ್ಮ ಪ್ರೇಯಸಿಯರ ಬಳಿ ಹೋಗುವ ಹಾಗಿಲ್ಲ, ಯಾವುದೆ ಹೊಸ ಮದುವೆ ನಡೆಯೋ ಹಾಗಿಲ್ಲ ಅಂತ. ಯಾಕೆ ಈ ವಿಚಿತ್ರ ಕಾನೂನು ಬಂತೂಂದರೆ ಸೈನಿಕರಿಗೆ ತಮ್ಮ ಕರ್ತವ್ಯ ಮರೆತುಹೋಗಿ ಬರಿ ಪ್ರೇಯಸಿಯರ ಗುಂಗಿನಲ್ಲಿ ಮೈ ಮರೆಯಬಾರದು ಅನ್ನುವುದಕ್ಕೆ. ಈ ಕಡೆ ಸೈನ್ಯ ಸೇರಿದ ಪ್ರೇಮಿಗಳ ಕಥೆಯೋ, ಕೇಳಲೆಬೇಡಿ. ಅದೇ ರಾಜ್ಯದಲ್ಲೊಂದು ಚರ್ಚು, ಅಲ್ಲೊಬ್ಬ ಪಾದ್ರಿ. ಆತನ ಹೆಸರು ವ್ಯಾಲೆಂಟೈನ್ ಅಂತ. ಈ ವ್ಯಾಲೆಂಟೈನ್ ಮಹಾಶಯನಿಗೆ ತನ್ನ ಸೈನಿಕ ಸ್ನೇಹಿತರ ಗೋಳು ನೋಡಲಿಕ್ಕಾಗಲಿಲ್ಲ. ಮೆತ್ತಗೆ ರಾಜನಿಗೆ ಅರಿವಾಗದ ಹಾಗೆ ಗುಟ್ಟಾಗಿ ಪ್ರೇಮಿಗಳ ಮದುವೆ ಮಾಡಿಸಿಬಿಟ್ಟ. ರಾಜನಿಗೆ ವಿಷಯ ತಲುಪಿದ್ದೇ ತಡ ಅವ ಕೆಂಡಾಮಂಡಲವಾದ. ಅವತ್ತೇ ಫಾದರ್ ವ್ಯಾಲೆಂಟೈನನನ್ನು ಕಾನೂನುಬಾಹಿರ ಕೆಲಸ ಮಾಡಿದ್ದಕ್ಕೆ ಗಲ್ಲಿಗೇರಿಸಲಾಯಿತು. ಇದಾದ ಎಷ್ಟೋ ವರುಷದ ನಂತರ ವ್ಯಾಲೆಂಟೈನನಿಗೆ ಸಂತಪದವಿ ಅಂದರೆ ‘ಸೆಯಿಂಟ್ ಹುಡ್’ ನೀಡಲಾಯಿತು. ಈವತ್ತು ನಾವು ಆತನ ಮರಣದ ದಿನವನ್ನ ವೈಭವದಿಂದ ಆಚರಿಸುವುದು ‘ಐರಾನಿಕ್’ ಅನ್ನಿಸ್ತದೆ.

ಅದೆಲ್ಲ ಇರಲಿ ಬಿಡಿ. ಏನಾಗತ್ತೆ ಪ್ರೇಮದ ಹಬ್ಬ ಮುಗಿದ ಮೇಲೆ? ಖಾಲಿ ಭಾವನೆ? ಗಿಫ್ಟ್ ಶಾಪುಗಳಲ್ಲಿ ಉಳಿದುಕೊಂಡ ಕಾರ್ಡುಗಳು ಗಿಫ್ಟುಗಳು ಮುಂದಿನ ವರುಷದವರೆಗು ಕೊಳೆಯುತ್ತವೆಯೆ? ಪ್ರೇಮಿಗಳು ತಮ್ಮ ಮನಸಿನ ಮಾತು ಹೇಳಿಕೊಳ್ಳಲು ಆ ಒಂದು ದಿನದ ದಾರಿ ಕಾಯುತ್ತಾರೆಯೆ? ಗೊತ್ತಿಲ್ಲ. ನಿನ್ನೆ ತುಮಕೂರಿನಿಂದ ಬೆಂಗಳೂರಿಗೆ ಬರುತ್ತ ಇರುವಾಗ ಪಕ್ಕದಲ್ಲಿ ಕೂತಿದ್ದ ಈರ್ವರು ಜೋರಾಗಿ ಮಾತುಕತೆ ನಡೆಸಿದ್ದರು. ಆಧ್ಯಾತ್ಮ, ಸತ್ಯ, ಮಿಥ್ಯೆಗಳ ಬಗ್ಗೆ ವಾದ ನಡೆಯುತ್ತ ಇತ್ತು. ಹೊರಗೆ ಅಪರೂಪಕ್ಕೆ ಧೂಳಿರದ ವಾತಾವರಣ. ರಾತ್ರಿ ಮಳೆಸುರಿದ ಥಂಡಿಗಾಳಿ. ಎಲ್ಲಿಂದಲೊ ಮಣ್ಣಿಂದ ಎದ್ದ ಅಕ್ಕಿ ತೊಳೆದಂಥ ಕಮ್ಮಗಿನ ಪರಿಮಳ ಮೂಗಿಗೆ ಅಡರುತ್ತ ಇತ್ತು. ಹೈವೇಯುದ್ದಕ್ಕು ಬೆಳೆಸಿದ ಬೋಗನ್ವಿಲ್ಲಾ ಪೊದೆಗಳು ತಮ್ಮ ಕಣ್ಣಿಗೆ ರಾಚುವ ಮೆಜೆಂಟಾ, ಹಳದಿ, ತಿಳಿಗೆಂಪು ಬಣ್ಣದ ಹೂವುಗಳನ್ನು ರಾಶಿ ಅರಳಿಸಿ ಒನೆದಾಡುತ್ತ ಇದ್ದವು. ಪಕ್ಕದಲ್ಲಿ ಈರ್ವರೂ ಮಾತಿನಲ್ಲಿ ಮುಳುಗಿಹೋಗಿದ್ದರು. ನನಗೆ ಮೊದಲೆ ಆಥರದ ಮಾತುಗಳಂದರೆ ಗಲಿಬಿಲಿ. ಈಚೆಗೆ ಜಿಡ್ಡು ಕೃಷ್ಣಮೂರ್ತಿಯವರ ಪುಸ್ತಕವೊಂದನ್ನ ಓದಲು ಯತ್ನಿಸಿ ತಲೆಕೆಡಿಸಿಕೊಂಡು ಸುಮ್ಮನಾಗಿದ್ದು ನೆನಪಾಯಿತು. ಬ್ಯಾಗಿನೊಳಗೆ ಕೈಹಾಕಿ ತಡಕಿದೆ. ಚೇತನಾಳ ಝೆನ್ ಕಥೆಗಳ ಪುಸ್ತಕವೇ ಕೈಗೆ ಬಂತು. ಪಕ್ಕದಲ್ಲಿದ್ದವರು ‘ಎಲ್ಲಿ ಮೇಡಂ ಪುಸ್ತಕ ಒಂದು ನಿಮಿಷ ಕೊಡಿ’ ಎಂದು ಇಸಿದುಕೊಂಡರು. ನಾನು ಅವರಿಗೆ ‘ದಾರಿ ಉದ್ದಕ್ಕು ಹೂವುಗಳು ಅಷ್ಟೊಂದು ಚನಾಗಿ ಕಾಣ್ತಿತ್ತಲ್ಲ ನೋಡಿದ್ರಾ?’ ಎಂದು ಕೇಳಿದೆ. ‘ಇಲ್ವಲ್ಲ!’ ಅಂದರು ಅವರು. ‘ಮಿಸ್ ಮಾಡ್ಕೊಂಡ್ರಲ್ಲ!’ ಅಂದು ಸುಮ್ಮನಾದೆ. ನನ್ನ ಝೆನ್ ಆಕ್ಷಣ ನನಗೆ ಹೊಳೆಯಿತು. ಅದು ಹೊಳೆಯಿತೊ ಇಲ್ಲವೊ, ಅದು ನನ್ನೊಳಗಿತ್ತೊ ಇಲ್ಲವೊ, ಅದು ಇತ್ತೊ ಇಲ್ಲವೊ. ಚೂಟಿ ಗೆಳೆಯ ಜೆ.ಬಿ. ಹೇಳುವ ಹಾಗೆ ’ಯಾವ ಹುತ್ತದೊಳಗೆ ಯಾವ ಡೆವಿಲೊ?’

ಜಾಸ್ತಿಯಾಯಿತು. ಕೆನ್ನೆಗೆರಡು ಏಟು ಕೊಟ್ಟುಕೊಳ್ಳುತ್ತಿದೇನೆ. ಚೇತನಾಳ ಪುಸ್ತಕ ನಾಳೆಯೆ ವಾಪಾಸು ಮಾಡಬೇಕು. ದೇಹ ದಣಿಯುವ ಹಾಗೆ, ಯೋಚನೆಗಳೂ ಬರದಷ್ಟು ಕೆಲಸ ಮಾಡಬೇಕು.

Pic Courtesy: www.zenmeditation.org
 

Advertisements

19 thoughts on “ನನ್ನೊಳಗಿನ ಝೆನ್ ಹಾಗು ವ್ಯಾಲೆಂಟೈನ್

 1. ಟೀನಾರೇ,
  ಝೆನ್ ಅಪೂರ್ವವಾದುದು. ಆದರೆ ರಜನೀಶರ “ಕ್ರಾಂತಿಬೀಜ’ ಪುಸ್ತಕ ಓದಿ, ಚಿಕ್ಕದು. ಚೆಂದವಾದ ಕಥೆಗಳಿವೆ. ಅದರಲ್ಲೊಂದು “ಶೂನ್ಯನಾವೆ’.
  ಜತೆಗೆ “ಗೋಲ್ಡನ್ ಕ್ಯಾಂಪಸ್’’-ಮೊನ್ನೆ ಸಿ.ಡಿ. ಅಂಗಡಿಗೆ ಹೋದಾಗ ಈ ಫಿಲ್ಮ್ ಇತ್ತು. ಯಾಕೋ ಮನಸ್ಸಾಗಲಿಲ್ಲ. ಐ ಆಮ್ ದಿ ಲೆಜೆಂಡ್ ತೆಗೆದುಕೊಂಡು ಹೋದೆ. ಈ ವಾರದಲ್ಲಿ ಈ ಫಿಲ್ಮ್ ನ್ನು ನೋಡ್ಬೇಕೆನಿಸುವಂತೆ ಮಾಡಿದೆ ಬರಹ. ಧನ್ಯವಾದ.
  ನಾವಡ

 2. ಕೊನೆ ಪ್ಯಾರಾದ ವರ್ಣನೆಗಳು ಸೊಗಸಾಗಿವೆ. ಇರಿಸುಮುರಿಸು ಎಂಬ ಕೆಟ್ಟ ಪದ ಬಳಸುವ ಜಾಗದಲ್ಲಿ ನೀವು ಗಲಿಬಿಲಿ ಎಂದು ಬರೆದಿರುವುದು ಇಷ್ಟವಾಯಿತು. ಮತ್ತೆ ಅದನ್ನೇ ಹೇಳುತ್ತಿದ್ದೇನೆ: ನಿಮ್ಮದು ಸರಳ ಆದರೂ ಚಿತ್ರಕ ಶೈಲಿ. ಅನುಕರಿಸಬೇಕು ಅನಿಸುವಷ್ಟು ಚಂದ.
  ~ಅಪಾರ

 3. naavada,

  golden compass tagolilvaa? duddu ulitu bidi 😉

  Iam Legend chennaagide except for the way it ends. Wil Smith is outstanding.

  Teena,

  baraha chennaagide. premigala dinakke zen pustaka, rajanish pustakagalanna kotre kaamakku milanakku vyatyaasa gottaago badalu vyatirakta parinaamagalu untaaguva sambhavavide ;)……just pulling. read your comments in kuntini’s blog. i agree with you.

  J.B na yaako jilebi anta odkomde.

 4. Instead of expressing your love to your husband/wife/girlfriend/boyfriend on only one day in a year, is it not better to do it everyday…just a thought.

  I sometimes feel that these western concepts are ill-suited for the indian ethos, anyways as long as Archies and Hallmark make their money during these celebrations I am a happy person 🙂

  Vikram is right, the golden compass is like our B V Vithalacharya’s movie,except that it is rich in production values.

  Mayura

 5. ಕನ್ನಡದಲ್ಲಂತೂ ಝೆನ್ ಮಂಡಿಗೆಗಳ ಹತ್ತಾರು ಅನುವಾದ ಪುಸ್ತಕಗಳು ಬಂದಿವೆ, ಬರುತ್ತಿವೆ. ಆದರೆ ಕೆ.ವಿ.ಸುಬ್ಬಣ್ಣ ಮೊತ್ತಮೊದಲು ಅನುವಾದಿಸಿ ಪ್ರಕಟಿಸಿದ ಪುಸ್ತಕದಂತೆ ಯಾವ ಅನುವಾದವೂ ಇಲ್ಲ.

 6. ನಾವಡರೆ,
  ನೀವು ಈಗಾಗಲೆ ’..ಕಾಂಪಾಸ್’ ನೋಡಿದೀರಿ ಅಂದುಕೋತೇನೆ. ರಜನೀಶರ್ ಬಗ್ಗೆ ಆಸಕ್ತಿ ಇದ್ದರು ಇನ್ನುವರೆಗೆ ಅವರ ಕೆಲವು ಮಾತುಗಳನ್ನ ಕೇಳಿದೇನೆಯೆ ಹೊರ್ತು ಓದಲಿಕ್ಕಾಗಿಲ್ಲ. ಶೂನ್ಯ ನಾವೆ ಅನ್ನೋ ಟೈಟಲ್ಲು ಚೇತನಳ ಜತೆ ನಂಗೂ ಬಹಳ ಹಿಡಿಸಿದೆ.

  ಚೇತ್,
  ಬರ್ತಾ ಇದೀನಿ…..

  ಅಪಾರ,
  Feeling flattered!!

  ವಿಕ್ರಂ,
  ನಾನು ಮೂವೀಗಳನ್ನ ನೋಡೋದು ಥೇಟು ಮಕ್ಕಳ ಎಕ್ಸೈಟ್ ಮೆಂಟಿನೊಂದಿಗೆ. ನೀವು ಅದನ್ನ ನೋಡುವ ರೀತಿ ನನಗೆ ಅಪರಿಚಿತ. ನಾನು ನನಗೆ ಇಷ್ಟವಾದ್ದೆಲ್ಲ ನಿಮಗೆ ಕೂಡ ಹಿಡಿಸಬೇಕು ಅನ್ನುವ ಭಾವದಲ್ಲಿ ಬರೆದಿಲ್ಲ. Well, I guess I will take some time to get used to your sense of humour. Thanks for the good words.

  ಹೇಮಂತ್,
  ನಿಮ್ಮ ಮಾತುಗಳನ್ನ ಗಮನದಲ್ಲಿ ಇಟ್ಟುಕೊಳ್ಳುತೇನೆ.

  Mayura,
  That was the very idea behind my writing!!
  I am afraid that we already have crossed the threshold separating Indian ethos and western concepts, which many a times leads to confusion as well as misinterpretation. We comfortably use English to depict our so-called superior social status but when it comes to entertaining western concepts, we stand up united to abhor them as if our culture is weak enough to be destroyed by them.
  I respect each director’s work as they give a piece of themselves in the process. It is their touch, imagination, hardwork. We can easily compare. I believe each work is unique.

  ಸುಧನ್ವ,
  ಸುಬ್ಬಣ್ಣನವರ ಪುಸ್ತಕವನ್ನ ಓದುತ್ತೇನೆ. ಧನ್ಯವಾದ.

  -ಟೀನಾ.

 7. Tina,

  Thanks for your response.

  English is being used the way it is because it has become the lingua franca in business, hence there is not much choice there.

  But imitating blindly western concepts like valnetines day, halloween day etc is something we need to think about, especially when the present generation are not even getting a chance to understand their own rich culture and heritage, due to undue western cultural(?) influence in the media.

  The day may not be too far off, when we shift celebrating independence day from august 15th to July 4th … 🙂

  With warm regards,

  Mayura

 8. Mayura,
  It’s okay when it comes to using the universal language where it cannot be avoided. But I still maintain that we have made it the way it is today. ಆದರೆ ಮಯೂರ, ಸಂಪ್ರದಾಯಗಳ ಮಾತು ಹಾಗಿರಲಿ, ಹಲವಾರು ಕನ್ನಡಿಗರು ಕನ್ನಡವನ್ನ ಆರಾಮ್ವಾಗಿ ಬಳ್ಸಬಹುದು ಅನ್ನೋ ಜಾಗಗಳಲ್ಲು ಹಿಂಜರಿಯುವುದು, ಆಂಗ್ಲವನ್ನ ತಮ್ಮ ಸ್ಟೇಟಸ್ಸು ತೋರೋದಿಕ್ಕೋಸ್ಕರ ಬಳಸಿ ಕೃತಾರ್ಥರಾಗುವುದು ವಿಪರ್ಯಾಸ ಅಲ್ಲವೆ? ನಾವು ಅಗ್ರೆಸಿವ್ ಜನರಲ್ಲ, ಎಂತಲೇ ಎಲ್ಲವನ್ನ ಒಳಗೊಂಡು ಬದುಕೋಣ ಅನ್ನುವ ಈ ಮನೋಭಾವ ನಮಗೆ ಕೆಲವೊಮ್ಮೆ ಒಳ್ಳೇದು ಮಾಡಿದ್ರೂ ಕುತ್ತಾಗಿರೋದೂ ಅಷ್ಟೇ ನಿಜ. ಬಹುಬೇಗ ನಮ್ಮ ವಿಚಾರಗಳು ಯಾವುದೋ ಒಂದು influenceನಿಂದ ಗಟ್ಟಿಯಾಗಿಬಿಡುತ್ತವೆ, ವಿವೇಚನೆಗೆ ಅವಕಾಶಾನೇ ಇರದ ಹಾಗೆ. ಸರಿಯಾದ ಸಂದರ್ಭದಲ್ಲಿ ಪ್ರತಿಭಟಿಸೋಕೆ ಯಾರೂ ಮುಂದೆ ಬರೊಲ್ಲ. ಅಲ್ವೆ?
  ನಿನ್ನೆ ರಾತ್ರೆ ನಾವು ಒಂದು ಸಣ್ಣ ಗೆಟ್ ಟುಗೆದರ್ ಇಟ್ಟುಕೊಂಡಿದ್ವಿ. ಯಾವಾಗಲು ವೆಸ್ಟರ್ನ್ ಸಂಗೀತ ಹಾಕುವ ಜಾಗ ಅದು. ಎಲ್ಲೊ ಒಬ್ಬ ಹುಡುಗ ಒಂದು ಕನ್ನಡ ಹಾಡು ಗುನುಗುನಿಸಿದ ಅಷ್ಟೆ.. ಎಷ್ಟು ಜನ ಎದ್ದುಬಂದು ದನಿಗೂಡಿಸಿದರು ಗೊತ್ತಾ? ಸಂಜೆ ಅದ್ಭುತವಾಗಿ ಕಳೆಯಿತು. ಅಲ್ಲಿಯ್ವರೆಗು ಅವರೆಲ್ಲ ತಮ್ಮ ಮುಖ್ವಾಡಗಳಲ್ಲೆ ಕಳೆದುಹೋಗಿದ್ದರು. ಹೊರಡುವಾಗ ಎಲ್ಲರು ತಾವು ಆ ಸಂಜೆಯನ್ನು ಬಹಳ ಆನಂದದಿಂದ ಕಳೆದೆವು ಅಂತ ಹೇಳಿಹೋದರು. ಆ ಜಾಗದಲ್ಲಿ ಕನ್ನಡ ಹಾಡುಗಳ್ನ ಇಮ್ಯಾಜಿನ್ ಮಾಡೋಕೂ ಸಾಧ್ಯವಿರಲಿಲ್ಲ. ಎಲ್ಲ ನಮ್ಮ ಕೈಯಳತೆಯಲ್ಲೆ ಇರುತ್ತೆ. ಬಾಚಿಕೋಬೇಕು.
  ಖುಶಿಯಾಗತ್ತೆ ಈ ರೀತಿಯ ಸಂವಾದಗಳು. ಮೂವೀ ಖಂಡಿತ ನೋಡ್ತೇನೆ. ಧನ್ಯವಾದ.
  – ಟೀನಾ.

 9. ಮಯೂರ,
  The day may not be too far off, when we shift celebrating independence day from august 15th to July 4th …
  ನನಗೂ ಆ ಭಯ ಇದೆ.

  ಆದರೂ, ಸಾಹಿತ್ಯ- ತಿಳುವಳಿಕೆ ವಿಷಯಗಳಲ್ಲಿ ಮಡಿವಂತಿಕೆ ಸಲ್ಲದು. ನಮ್ಮದನ್ನ ಹೇಳುವ ಬ್ಲಾಗಿಸ್ಟ್ ಗಳು ಸಾಕಷ್ಟಿದ್ದಾರೆ. ಟೀನ್ ಇವೆಲ್ಲದಕ್ಕಿಂತ ಭಿನ್ನವಾದದ್ದನ್ನ ಕೋಡ್ತಿದಾಳೆ ಅನಿಸತ್ತೆ ನಂಗೆ.
  -ಚೇತನಾ

 10. Tina,

  Thanks for your response. I agree with you. Unless we proactively use our langauge in day to day life and spread of culture, we will lose it over a period of time. The incident you mentioned about the kannada song in the get together is heart warming. There was a time when during marriages in Karntaka people used to hire a sound system(?) guy to play gramaphone records, which would be only Kannda film songs. Now a days you see everthing except kannada. I am very dismayed to see our people aping north indian culture wearing ghagra choli, sherwani during marriage receptions. Even the cuisine in marriages now a days is predominantly north indian food.

 11. Chetana,

  Thanks for your response.

  Yes we need not shy away from being exposed to literature and other knowledge related aspects of the west. But at the same time,we need to be cautious about what we pick up from the so called western culture(?). A case in point is tattooing and body piercing, which is a rage with the present generation kids. I am told that tattooing and body piercing shops have mushroomed every where in India and are doing brisk business 🙂
  To add to my earlier comment, do you think the mass media has a larger role to play in promoting indian values,culture, ethos since their reach is much wider compared to blogspots, which are not accessible by everyone.

  I am interested to know your thoughts on this.
  BTW I liked your blogspot ChetanaChaitanya. Are you not updating it regularly?

  Tina/Chetana,

  Here is a website from which you can download Osho’s discourse’s in MP3 format……FREE !!
  There are also all of OSHO’s books published so far….FREE!!
  Enjoy !!

  http://www.oshoworld.com/discourses/audio_eng.asp

  With warm regards,

  Mayura

 12. ಮಯೂರ,
  ವಿದೇಶೀ ಸಭ್ಯತೆ ಮುಂದೆ question mark ಹಾಕುವ ಅಗತ್ಯವಿಲ್ಲ. ಅದು ಅವರ ಸಂಸ್ಕೃತಿ.
  ಮೈ ಕೈ ಚುಚ್ಚಿಕೊಳ್ಳುವ, ಹೊಕ್ಕುಳ ಸುತ್ತ ಹಚ್ಚೆ ಹಾಕುವ ಪಾರ್ಲರ್ ಗಳು ನಾಯಿಕೊಡೆಗಳಂತೆ ನಿಂತಿವೆ, ಸರಿ. ಅದು ಹೊರಗಿಂದ ಅಮದಾಗಿದ್ದಲ್ಲ, ನಮ್ಮಲ್ಲೂ ಹಿಂದೆ ಈ ಪದ್ಧತಿಗಳಿತ್ತಲ್ಲವೇ?
  ಹಾ! ವಿದೇಶಿ ಸಂಸ್ಕೃತಿ ನಮ್ಮ ಮಣ್ಣಿಗೆ, ಹವಾಗುಣಕ್ಕೆ, ಜೀವನ ಶೈಲಿಗೆ ಹೊಂದೋಲ್ಲ, ಹೊಂದಿಸಿಕೊಂಡರೆ ನಮಮ್ತನ ಉಳಿಯೋಲ್ಲ ಅನ್ನೋದನ್ನ ನಾನು ಒಪ್ಪುವೆ. ನನ್ನ ದೇಶ, ನನ್ನ ಸಂಸ್ಕೃತಿ- ಇವೆಲ್ಲ ನನಗೆ ಹುಚ್ಚು ಅನಿಸುವಷ್ಟು ಪ್ರೀತಿ. ಅದರೆ ನಾನಿಲ್ಲಿ ಮಾತಾಡಿದ್ದು ಸಾಹಿತ್ಯದ ಬಗ್ಗೆ.
  ಒಳ್ಳೆಯದು ಎಲ್ಲಿಂದಲಾದರೂ ಬರಲಿ, ಸ್ವೀಕರಿಸೋಣ- ಇದು ನಮ್ಮ ಸಂಸ್ಕೃತಿ. ನಮ್ಮನಮ್ಮದನ್ನೆ ನಾವು ಹೇಳಿಕೊಂದು ಕೂತರೆ ಜಗತ್ತಿನ ಇತರ ಸಾಹಿತ್ಯ ಸಿನೆಮಾ ಲೋಕದ ಪರಿಚಯವಾಗೋದು ಹೇಗೆ? ನೇರಾನೇರ ಅದನ್ನ ಹುಡುಕೋ ಕೆಲಸವಂತೂ ನಮ್ಮಿಂದ ಆಗದು. ಟೀನಾ ಅದನ್ನು ಮಾಡುತ್ತಿದ್ದಾಳೆ. ಇಲ್ಲೂ ಅದನ್ನ ಪ್ರಶ್ನಿಸಿದರೆ ನಾವು ಾಷ್ಟ್ರಾಭಿಮಾನಿಗಳಲ್ಲ, ರಾಷ್ಟ್ರಾಂಧರಾಗಿಬಿಡ್ತೇವಷ್ಟೆ!
  ಓಶೋರನ್ನು ಓದುತ್ತೀರಲ್ಲವೆ? ಮತ್ಯಾಕೆ ಈ ಸಂಕುಚಿತತೆ? ಒಮ್ಮೆ ಸ್ವಾಮಿ ವಿವೇಕಾನಂದರನ್ನೂ ಓದಿ.
  ಉಳಿದಂತೆ, ನಿಮ್ಮ ಚಿಂತನೆಗೆ, ಕಾಳಾಜಿಗೆ ನನ್ನ ತಕರಾರಿಲ್ಲ.

  ವಂದೇ,
  ಚೇತನಾ ತೀರ್ಥಹಳ್ಲಿ

 13. Chetana,

  This is the first sentence in my comment

  >>Yes we need not shy away from being exposed to literature and other knowledge related aspects of the west.>>

  Where is sankuchitathe in this. I am all for accepting western literary works and the knowledge related aspects of the west. Regarding your contention about tattooing (kannadadalli Hacche haakisikolluvudu) was certainly there in India in the past but was confined to the rural india and had a social reason for this. What I am talking about is the rage of our youngsters in doing the same just to ape the western practices which is a very recent phenomenon.

  I am still unable to understand how did you conclude that I am narrow minded and that I am questioning Tina about her blog. I have never done that. All I was trying to do was writing what I feel about the current happenings in our country, which I think is allowed on this blogsite…no ?

  On the contrary I have always had a word of praise for what Tina is writing.

  With warm regards,

  Mayura

 14. ಮಯೂರ,
  ಈ ಬಗ್ಗೆ ಮತ್ತೂ ಹೇಳುವುದಿದೆ. ಆದ್ರೆ, ಅದು ಸಮಜಾಯಿಷಿ ಆಗಿಬಿಡುವ ಅಪಾಯವಿದೆ. ಟೀನಾಳ ಈ ಸ್ಪೇಸ್ ನಲ್ಲೂ ನೀವು ಹಾಗೆ ಎಕ್ಸ್ ಪೆಕ್ಟ್ ಮಾಡಿದ್ದಕ್ಕೆ ಹಾಗಂದೆನಷ್ಟೆ.
  ನಿಮ್ಮೊಟ್ಟಿಗೆ ಈ ವಾದ ಖುಶಿಕೊಡುತ್ತಿದೆ. ಆದರೆ ಇಲ್ಲಿ ಮುಂದುವರೆಸೋದು ಬೇಡ. ನನ್ನ ಬ್ಲಾಗಿಗೆ ಬನ್ನಿ, ಹರಟೋಣ. ಅಥವಾ ನನ್ನ ID: chetanachaitanya@gmail.com ಗೆ ಬರೆಯಿರಿ. ನನಗಂತೂ ಹೀಗೆ ದೇಶದ ಪ್ರಚಲಿತ ಸಮಸ್ಯೆಗಳನ್ನ ಕೇಂದ್ರವಾಗಿಟ್ಕೊಂಡು ಯಾರು ಏನು ಹೇಳ್ತಾರೆ ಅಂತ ಕೇಳೋದರಲ್ಲಿ ಎಲ್ಲಿಲ್ಲದ ಆಸಕ್ತಿ. ನಿಮ್ಮ ಮಾತುಗಳ ಜೋಶ್ ನೋಡಿದರೆ ಖಂಡಿತ ನನಗೆ ಆ ನಿಟ್ಟಿನಲ್ಲಿ ನಿರಾಶೆಯಾಗದು ಅನಿಸುತ್ತೆ.
  ವಂದೇ,ಚೇತನಾ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s