‘ಪದ – ಸಂಗೀತಗಳ ಸರದಾರರು’

griot1.jpg

 ’ಟಾಮ್ ಹೇಯ್ಲ್ ಎಂಬ ತರುಣ ತನ್ನ ಬಿ.ಎ.(ಫ್ರೆಂಚ್) ಮುಗಿಸಿದ ನಂತರ ಅಮೆರಿಕದ ಶಾಂತಿಪಡೆಯ ಜತೆಗೆ 1964 ರಿಂದ 1966ರ ವರೆಗೆ ಪಶ್ಚಿಮ ಆಫ್ರಿಕದ ನೈಜರ್ನಲ್ಲಿ ಫ್ರೆಂಚ್ ಭಾಷಾತಜ್ನನಾಗಿ ಕೆಲಸ ಮಾಡುತ್ತ ಇದ್ದ ಸಮಯ ಅದು. ಒಂದು ಕುತೂಹಲಕಾರೀ ಘಟನೆ ನಡೆಯಿತು. ಒಂದು ಬೆಳಜಾವ. ಗಾಢನಿದ್ದೆಯಲ್ಲಿದ್ದ ಟಾಮ್ ಪಕ್ಕದ ಮನೆಯಿಂದ ಕೇಳಿ ಬರುತ್ತಿದ್ದ ವಿಚಿತ್ರವಾದ ಸದ್ದುಗಳಿಂದ ಎಚ್ಚರಗೊಂಡ. ಏನೆಂದು ನೋಡಲು ಹೋದರೆ ಪಕ್ಕದ ಮನೆಯ ಅಂಗಳದಲ್ಲಿ ಒಬ್ಬ ಮನುಷ್ಯ ಮನೆಯೊಡೆಯನೆದುರು ನಿಂತುಕೊಂಡು ಏನೊ ಹಾಡುತ್ತಿದ್ದಾನೆ. ಟಾಮನಿಗೆ ಏನೂ ಅರ್ಥವಾಗಲಿಲ್ಲ. ಆತ ಆ ಮನುಷ್ಯ ಯಾರೊ ಭಿಕ್ಷುಕ ಎಂದುಕೊಂಡು ’ಏ! ಬಾಯಿ ಮುಚ್ಚಿಕೊ!’ ಎಂದು ಗದರಿದ. ಆ ಮನುಷ್ಯ ಈತ ಹೇಳಿದ್ದು ಏನೂ ಅಲ್ಲವೇನೊ ಎನ್ನುವ ಹಾಗೆ ತನ್ನ ಹಾಡನ್ನು ಮುಂದುವರಿಸಿದ. ಟಾಮ್ ಗೆ ಅಸಹನೆ ತಡೆಯಲಾಗದೆ ಪುನಃ ಬೈಯೋಣ ಎಂದು ಹೋಗಿ ನೋಡಿದರೆ ಪಕ್ಕದ ಮನೆಯಾತ ಹಾಡುಗಾರನಿಗೆ ಬೆಲೆಬಾಳುವ ಕೈಮಗ್ಗದ ಕಂಬಳಿಯೊಂದನ್ನ ಉಡುಗೊರೆಯಾಗಿ ನೀಡುತ್ತಿದಾನೆ! ಈ ಘಟನೆಯನ್ನು ಯಾಕೊ ಟಾಮ್ ಮರೆಯಲಿಲ್ಲ. ಇದು ಒಬ್ಬ ‘ಗ್ರಿಯ'(Griot)ನ ಜತೆ ಆತನ ಮೊತ್ತಮೊದಲ ಭೇಟಿಯಾಗಿತ್ತು. ನಂತರ ತಾನು ಬರೆದ ಪುಸ್ತಕ ‘ಗ್ರಿಯಸ್ ಎಂಡ್ ಗ್ರೀಯಾಸ್’ ನಲ್ಲಿ ಗ್ರಿಯರುಗಳನ್ನು ‘ಪದಗಳು ಹಾಗೂ ಸಂಗೀತದ ಸರದಾರರು’ ಎಂದು ಬಣ್ಣಿಸುತ್ತಾನೆ. ಈ ಬದಲಾವಣೆಗೆ ಕಾರಣವೇನು?

‘ಗ್ರಿಯ’ ಸಂಪ್ರದಾಯಕ್ಕೆ ಸುಮಾರು ಸಾವಿರ ವರುಷಗಳ ಹಿನ್ನೆಲೆಯಿದೆ. ಬರಹದ ಬಗ್ಗೆ ಯಾವ ರೀತಿಯ ಅಂದಾಜೂ ಇರದ ಪಶ್ಚಿಮ ಆಫ್ರಿಕದ ಸಹೆಲ್ ಮತ್ತು ಸವನ್ನಾ ಪ್ರಾಂತ್ಯಗಳ ಬುಡಕಟ್ಟುಗಳು ತಮ್ಮ ಚರಿತ್ರೆಯನ್ನು ತಮ್ಮತಮ್ಮ ಭಾಷೆಗಳಲ್ಲಿ ಜಾನಪದ ಸಂಪ್ರದಾಯವೊಂದರ ಮೂಲಕ ಮಹಾಕಾವ್ಯಗಳ ರೂಪದಲ್ಲಿ ಕಾಪಾಡಿಕೊಂಡು ಬಂದಿವೆ! ಗ್ರಿಯಗಳು ಚರಿತ್ರೆಯ ಪಾಲಕರು ಎನ್ನಬಹುದು. ಅಗಾಧವಾದ ನೆನಪಿನ ಶಕ್ತಿ ಹೊಂದಿರುವ ಇವರು ತಮ್ಮ ಬುಡಕಟ್ಟಿನ ಯಾವುದೇ ಮನೆತನದ ನೂರಾರು ವರುಷ ಹಿಂದಿನ ಚರಿತ್ರೆಯನ್ನು ಆರಾಮವಾಗಿ ಹಾಡಿ ಹೇಳಬಲ್ಲರು. ಗಂಡುಚರಿತ್ರಕಾರರನ್ನು ‘ಗ್ರಿಯ’ ಎಂದೂ ಹೆಣ್ಣು ಚರಿತ್ರಕಾರರನ್ನು ‘ಗ್ರೀಯಾ'(Griotte) ಎಂದೂ ಕರೆಯಲಾಗುತ್ತದೆ. ಕಾಲ ಬದಲಾಯಿಸುತ್ತಿದ್ದ ಹಾಗೇ ಇವರ ಸಂಪ್ರದಾಯವೂ ಬದಲಾಗುತ್ತ ಬಂದಿದೆ. ಮುಂಚೆ ಗ್ರೀಯ ಮತ್ತು ಗ್ರೀಯಾಗಳ ಕೆಲಸ ಚರಿತ್ರೆ, ಮನೆತನಗಳ ಚರಿತ್ರೆ, ರಾಜಮನೆತನದವರಿಗೆ ಸಲಹೆ, ಮನರಂಜನೆ, ಸುದ್ದಿಗಾರಿಕೆ, ಹೊಗಳಿಕೆ ಮುಂತಾದ ಕೆಲಸಗಳಿಗೆ ಸೀಮಿತವಾಗಿತ್ತು. ಇಂದು ಅವರು ಟಿ.ವಿ, ರೇಡಿಯೊ ಮಾಧ್ಯಮಗಳ ಮೂಲಕ, ಸಿಡಿಗಳನ್ನು ಹೊರತರುವುದರ ಮೂಲಕ ಎಲ್ಲರನ್ನು ತಲುಪುವಂತೆ ಆಗಿದೆ. ಎಷ್ಟೋ ಗ್ರಿಯ, ಗ್ರೀಯಾಗಳು ಹಳೆಯ ಮಹಾಕಾವ್ಯಗಳನ್ನು ಹೊಸ ರೀತಿಯಲ್ಲಿ ವ್ಯಾಖ್ಯೆ ಮಾಡುವ ಮೂಲಕ ಹೊಸ ಪ್ರಯೊಗಗಳಿಗೆ ಕಾರಣರಾಗಿದ್ದಾರೆ. ತಮ್ಮ ಈ ಸೇವೆಗೆ ಪ್ರತಿಯಾಗಿ ಅವರಿಗೆ ಉಡುಗೊರೆಗಳನ್ನು ನೀಡಲಾಗುತ್ತದೆ. ಗ್ರಿಯಗಳಿಗೆ ಇಂಥದೇ ಉಡುಗೊರೆ ಬೇಕೆಂಬುದಿಲ್ಲ. ಕೆಲವೊಮ್ಮೆ ನಾಣ್ಯಗಳು ದೊರಕಿದರೆ ಒಬ್ಬಾತ ತನ್ನ ಗ್ರೀಯಾಳಿಗೆ ಒಂದು ಪುಟ್ಟ ಏರೋಪ್ಲೇನನ್ನೆ ಉಡುಗೊರೆಯಾಗಿ ನೀಡಿದ ನಿದರ್ಶನವೂ ಇದೆ! ಗ್ರಿಯ ಅಥವಾ ಗ್ರೀಯಾ ಆಗಬೇಕೆಂದರೆ ತೀಕ್ಷ್ಣ ನೆನಪಿನ ಶಕ್ತಿಯ ಜತೆ ಸಂಗೀತಜ್ನಾನ ಕೂಡ ಇರಬೇಕಾದ್ದು ಅವಶ್ಯಕ. ಸಾಮಾನ್ಯವಾಗಿ ಇದು ತಂದೆತಾಯಂದಿರಿಂದ ಮಕ್ಕಳಿಗೆ ದಾಟಿಸಲ್ಪಡುವುದು. ಇಂದಿಗೂ ಅವರನ್ನು ಬುಡಕಟ್ಟುಗಳಲ್ಲಿ ಭಯಭಕ್ತಿಯಿಂದ ಕಾಣುತ್ತಾರೆ.

ಗ್ರೀಯಾಗಳು ಸಾಧಾರಣವಾಗಿ ವಿಶೇಷ ಸಂದರ್ಭಗಳಲ್ಲಿ, ಉತ್ಸವಗಳಲ್ಲಿ, ಸಭೆಸಮಾರಂಭಗಳಲ್ಲಿ ಹಾಡುತ್ತಾರೆ. ಸುಮಾರು ಕಾಲದವರೆಗು ಮಹಾಕಾವ್ಯಗಳನ್ನು ಗ್ರಿಯಗಳು ಮಾತ್ರ ಹಾಡುವುದಾಗಿತ್ತು. ಮಹಾಕಾವ್ಯವನ್ನು ಹಾಡಲು ದಿನಗಟ್ಟಲೆ, ಕೆಲವೊಮ್ಮೆ ವಾರಗಟ್ಟಲೆ ತಗುಲುವುದೆ ಇದಕ್ಕೆ ಕಾರಣ ಇರಬಹುದು. ಗ್ರೀಯಾಗಳು ಮಾಹಾಕಾವ್ಯಗಳ ಕೆಲವು ಭಾಗಗಳನ್ನಷ್ಟೆ ಹಾಡುತ್ತಿದ್ದರು. ಇತ್ತೀಚೆಗೆ ಹಲವಾರು ಗ್ರೀಯಾಗಳು ತಾವೇ ಹಲವಾರು ಮಹಾಕಾವ್ಯಗಳನ್ನು ರಚಿಸುತ್ತಿರುವುದು ಹೊಸ ಬೆಳವಣಿಗೆ. ಪಶ್ಚಿಮ ಆಫ್ರಿಕದಲ್ಲಿ ಪ್ರಚಲಿತವಿರುವ ಇನ್ನೊಂದು ಬಗೆಯ ಕಾವ್ಯಪಠಣವನ್ನು ‘ಸಾಬಿ’ ಎನ್ನಲಾಗುತ್ತದೆ. ಸಾಬೀಗಳು ಗಂಡುಹೆಣ್ಣಿನ ಸಂಬಂಧಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತವೆ. ಈ ಕಾವ್ಯಗಳಲ್ಲಿ ಹೆಣ್ಣು ಗಂಡಿನ ತಾರತಮ್ಯದ ಬಗ್ಗೆ ಹಲವಾರು ಪ್ರಶ್ನೆಗಳನ್ನೆತ್ತಲಾಗಿರುವುದು ಕಂಡುಬರುತ್ತದೆ. ಮದುವೆಯ ಸಮಯದಲ್ಲಿ ಗ್ರೀಯಾಗಳು ಮದುಮಗಳನ್ನು ಕುರಿತು ಹಾಡುವ ಹಾಡೊಂದರ ಅನುವಾದ ಇಂತಿದೆ:
ಅಳುವುದ ನಿಲ್ಲಿಸು, ಎಲೆ ಮದುಮಗಳೆ
ಅಳುವುದ ನಿಲ್ಲಿಸು, ನನಗೆ ಕಿವಿಗೊಡು
ನಿನ್ನ ಅತ್ತೆ ದೂಷಣೆ ಮಾಡಿದರೆ,
ಅತ್ತುಬಿಡು ಅಷ್ಟೆ, ಏನೂ ಹೇಳದಿರು
ನಿನ್ನ ಅತ್ತಿಗೆ ಮೈದುನಂದಿರು ನಿನ್ನ ದೂಷಿಸಿದರೆ,
ಅತ್ತುಬಿಡು ಅಷ್ಟೆ, ಏನೂ ಹೇಳದಿರು
ನಿನ್ನ ಗಂಡನ ತಾಯಿ ನಿನ್ನ ದೂಷಿಸಿದರೆ,
ಅತ್ತುಬಿಡು ಅಷ್ಟೆ, ಏನೂ ಹೇಳದಿರು
ಆದರೆ ನಿನ್ನ ಮನೆಬಿಟ್ಟು ಹೊರಬರುವುದು ಅಪರಾಧವಲ್ಲ.

ಇನ್ನೊಂದು ಸಾಬಿಯಲ್ಲಿ ಮದುಮಗಳಿಗೆ ತನ್ನ ಗಂಡ ತನಗೆ ಮೋಸಮಾಡಿರುವುದು ಹಾಗೂ ತನಗೆ ಸೋಡಚೀಟಿ ನೀಡಲು ಹವಣಿಸುತ್ತಿರುವುದು ತಿಳಿದುಬರುತ್ತದೆ. ಆಕೆ ಗಂಡನಿಗೆ ಸರಿಯದ ಪಾಠ ಕಲಿಸಲು ನಿರ್ಧರಿಸುತ್ತಾಳೆ. ಬಿತ್ತನೆಯ ಸೀಸನ್ನು ಗಂಡ ಉಳುತ್ತ ಹೋಗುತ್ತಿದ್ದಂತೆ ಆಕೆ ಬೀಜ ಬಿತ್ತಬೇಕು. ಆಕೆ ಬೀಜಗಳನ್ನೆಲ್ಲ ಬೇರೆಡೆ ಚೆಲ್ಲಿ ಬಿತ್ತನೆಯಾಯಿತೆಂದು ಸುಳ್ಳು ಹೇಳುತ್ತಾಳೆ. ಗಂಡ ಬಿತ್ತನೆಯ ನಂತರ ‘ಕೆಲಸ ಮುಗಿಯಿತಲ್ಲ! ಇನ್ನು ನನಗೆ ನಿನ್ನ ಅವಶ್ಯಕತೆಯಿಲ್ಲ’ ಎಂದು ಹೇಳಿ ನಾನು ನಿನಗೆ ಡೈವೋರ್ಸು ನೀಡಿದ್ದೇನೆ ಎಂದು ಹೇಳುತ್ತಾನೆ. ಆಕೆ ನಕ್ಕು ‘ನೀನು ನನಗೆ ಡೈವೋರ್ಸು ನೀಡುವ ಮೊದಲೆ ನಾನು ನಿಂಗೆ ಡೈವೋರ್ಸು ನೀಡಿದೇನೆ. ಹೋಗಿ ನಿನ್ನ ಹೊಲ ನೋಡು.’ ಎಂದು ಹೇಳಿ ಹೊರಟುಹೋಗುತ್ತಾಳೆ. ಅಕ್ಕಪಕ್ಕದ ಹೊಲಗಳು ಚಿಗುರಿ ಹಸಿರೊಡೆಯುತ್ತಿದ್ದರೆ ಈತನ ಹೊಲ ಬರಡಾಗಿ ಬಿಕೋ ಅನ್ನುತ್ತಿದೆ! ಆಕೆ ಹಾಗೆ ತನಗೆ ಡೈವೋರ್ಸು ನೀಡಿದಳು ಎಂದು ಗಂಡನಿಗೆ ಅರಿವಾಗುತ್ತದೆ. ಹೆಂಗಸರನ್ನು ಜಾಣ್ಮೆಯಲ್ಲಿ ಸೋಲಿಸಲಾಗದು ಎಂದು ಬಿಂಬಿಸಲು ಗ್ರೀಯಾಗಳು ಈ ಕಥೆ ಹಾಡುತ್ತಾರೆ. ಹೆಚ್ಚಿನ ಗ್ರೀಯಾ ಹಾಡುಗಳಲ್ಲಿ ಸ್ವಾತಂತ್ರ್ಯ, ಸ್ವಾಭಿಮಾನ, ಹೆಣ್ಣಿನ ಸಾಮಾಜಿಕ ಪರಿಸ್ಥಿತಿ ಹಾಗೂ ಗಂಡ ಹಾಗೂ ಆತನ ಕುಟುಂಬದೊಡನೆ ಹೆಣ್ಣಿನ ಸಂಬಂಧಗಳ ಚಿತ್ರಣಗಳು ಕಂಡುಬರುತ್ತವೆ.

ಚಿತ್ರ: http://www.blackstorytellers.com

Advertisements

6 thoughts on “‘ಪದ – ಸಂಗೀತಗಳ ಸರದಾರರು’

 1. ಆಫ್ರಿಕಾದವರೂ ’ಕುರಿತೋದದೆಯುಂ..’ ಜನ. ಅನೇಕ ಸಲ ವಿನಾ ಕಾರಣ ’ಥಿಂಗ್ಸ್ ಫಾಲ್ ಅಪಾರ್ಟ್’ನ ಸಾಲು ನೆನಪಾಗುತ್ತದೆ – “… proverbs are the palm oil with which words are eaten”. They are men and women of letters.

 2. ನನಗನ್ನಿಸುತ್ತೆ, ಪ್ರತಿಯೊಂದು ದೇಶ, ಕಾಲ ಹಾಗು ಸಂಸ್ಕ್ರತಿಯಲ್ಲೂ, ಗ್ರಿಯ ಹಾಗು ಗ್ರೀಯಾ ಗಳಿರುತ್ತಾರೆ, ಇವರಿಂದಲೇ ಬರದಿಡಲಾಗದ ಎಷ್ಟ್ಟೋ ವಿಷಯಗಳು ತಲೆಮಾರಿನಿಂದ ತಲೆಮಾರಿಗೆ ಹರಿದು ಬರುತ್ತದೆ. ನಮ್ಮ ಅಜ್ಜಿ, ಅಮ್ಮಂದಿರು ಹೇಳುವ ಬಹಳಷ್ಟ್ಟು ಸಂಪ್ರದಾಯದ ಹಾಡುಗಳು, ಇವರ courtesy.

 3. ಪ್ರಸಾದ್ ಹೇಳಿದ್ದು ನಿಜ. ಬರೀ ಸಂಪ್ರದಾಯ ಗೀತೆಗಳಷ್ಟೇ ಅಲ್ಲ. ಇಂದು ಮಂಟೇಸ್ವಾಮಿ ಕಾವ್ಯದಿಂದಿಡಿದು ಹಲವು ಕಾವ್ಯಗಳು ಉಳಿದುಕೊಂಡಿದ್ದು, ಇರುವುದು ಇಂಥ ಗ್ರಿಯ ಮತ್ತು ಗ್ರೀಯಾಗಳಿಂದ.
  ಟೀನಾರೇ, ಎಲ್ಲೆಲ್ಲಿಂದ ಹೆಕ್ಕಿ ತರುತ್ತೀರೋ ಕಾಳುಗಳನ್ನು.
  ಧನ್ಯವಾದ.
  ನಾವಡ

 4. Tina,

  Nice article.

  This is the same thing our own Jaanapada singers and story tellers were doing. Carrying on the history of people and places through oral tradition and through singing and story telling. One example is the famous Baalappa Hukkeri. It is a feast to the ears to hear this guy sing.

  After the advent of TV these people have been relegated to the background and are slowly fading away.

  With warm regards,

  Mayura

 5. ಚಕೋರ,
  ಒಳ್ಳೆಯ ಸಾಲುಗಳ ವಾಪಾಸು ಮರಳಿಸಿದ್ದಕ್ಕೆ ತ್ಯಾಂಕು!

  ಚೇತು,
  ಇನ್ನು ನಿನ್ನ ಅನುವಾದ ಮುಗಿದ ಮೇಲೆ ಎಕ್ಸ್ ಚೇಂಜ್ ಇದ್ದೇ ಇದೆ!

  ಪ್ರಸಾದ್ ಮತ್ತು ನಾವಡ ಮತ್ತು ಮಯೂರ ಅವರಿಗೆ,
  ನೀವು ಹೇಳೋದು ನೂರಕ್ಕೆ ನೂರ್ರಷ್ಟು ನಿಜ ಕಣ್ರಿ!

  ಆತ್ಮೀಯತೆಯೊಡನೆ,
  ಟೀನಾ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s