ಪಡಖಾನೆಯ ಹುಡುಗಿ – ಬೇಸರದ ಬಿರುಮಾತುಗಳು

motika_200702_indian_woman_in_red_36x24_acrylic.jpg 

ಭೋರೆಂದು ಹುಯಿಲಿಡುವ ಬಿರುಸುಗಾಳಿ
ಒಂದಿಷ್ಟು ಸುರಿದು ಕಾಣದಾದ
ಮಳೆಹನಿಗಳು
ಬೋಳು ಸೆಟೆದು ನಿಂತ
ಹೆಸರಿಲ್ಲದ ಮರದಲ್ಲಿ
ನಾಲ್ಕು ಚಿಗುರೆಲೆ
ರಾತ್ರೆ ಒಂಬತ್ತೂವರೆಗೆ
ಬಿಡುವ ಟೆಂಟು ಸಿನೆಮಾ
‘ತಿರುಪತಿ ಗಿರಿವಾಸಾ..’ ನಂತರ
ಅವೇ ಹಳೆ ಕನ್ನಡ ಹಾಡುಗಳು…

ಹೌದೋ,
ನಿನ್ನ ನೆನೆದರೆ ವಿಚಿತ್ರ ರೊಚ್ಚೆದ್ದು
ಸುತ್ತಿಗೆಯಾಗಿ
ನನ್ನ ಕುಟ್ಟಿ ಪುಡಿ ಮಾಡಿ
‘ಉಫ್’ ಎಂದು ಗಾಳಿಯೊಡನೆ ಹಾರಿಸಿ
ಹೇಳಬೇಕೆಂದಿದ್ದು ಕಳೆದುಹೋಗಿ
ಇನ್ನೇನೇನೋ ಆಗಿ..
ನನ್ನ ಬೇಸರ
ನಿಗಿನಿಗಿ ಕೆಂಡದಂತೆ
ಕೆಂಪಗೆ ಹೊಳೆದು ಅಣಗಿಸುತ್ತಿದೆ.

ನೀನಲ್ಲಿ ಕುಳಿತು
ನನ್ನ ಗುಟುಕರಿಸುತ್ತ
ನಗುತಿರುವಷ್ಟು ಹೊತ್ತು
ಬೆಳಕು ನನಗೆ.
ಆಮೇಲೆ
ಅಪ್ಪಿಕೊಳಲಾಗದ ನೆನಪುಗಳು
ಕಳೆಯಲಾರದ ಘಳಿಗೆಗಳು
ಲೇಖನಿ, ಹಾಳೆ
ಬರೀ ಧಗೆ.

ಚಿತ್ರಕೃಪೆ: www.picasaweb.google.com
 

Advertisements

9 thoughts on “ಪಡಖಾನೆಯ ಹುಡುಗಿ – ಬೇಸರದ ಬಿರುಮಾತುಗಳು

 1. ಕವಿತೆ ಯ ಬಗ್ಗೆ ಮಾತನಾಡುವಷ್ಟ್ಟುಪ್ರಬುದ್ದತೆ ಇಲ್ಲ ನನಗೆ. ಅನೇಕ ಸಾರ್ತಿ ಈ ನವ್ಯ ಕವಿತೆಗಳು ನನ್ನ ತಲೆ ಮೇಲೆ ಹೋಗುತ್ತವೆ. ಆದ್ರೆ I must complement you for the `variety` on your blog.

 2. ಪ್ರಸಾದ್,
  Thanks for the complement. ನನಗೆ ತಿಳಿದ ಮಟ್ಟಿಗೆ ಕವಿತೆ ಓದಲು, ಮಾತಾಡಲು ಯಾವ ಪ್ರಬುದ್ಧತೆಯ ಅವಶ್ಯಕತೆ ಇಲ್ಲ. ನಿಮಗೆ ಏನನ್ನಿಸುತ್ತೋ ಅದನ್ನೆ ಹೇಳಿ. ನನಗೆ ಅದು ಬಹಳ ಮುಖ್ಯ. ಕವಿತೆಯ ಬಗ್ಗೆಗೇನೆ ಹೆಚ್ಚಾಗಿ ಓದಿಕೊಂಡಿರೋರು ಅದಕ್ಕೆ ತಕ್ಕ ಹಾಗೆ ಹೇಳುತ್ತಾರೆ. ಹಾಗಂತ ನಿಮ್ಮ ಅಭಿಪ್ರಾಯ ವಿಮರ್ಶೆಯ ಕ್ಯಾಟಗರಿಗೆ ಸೇರೋದಿಲ್ಲ ಅನ್ನೋದು ತಪ್ಪಾಗತ್ತಲ್ಲ! ಆಮೇಲೆ ನನ್ನ ಕವಿತೆಗಳನ್ನ, ನವ್ಯ ಅದು ಇದು ಅಂತ ದಯವಿಟ್ಟು ಕ್ಯಾಟಗರೈಸ್ ಮಾಡದಿರಿ ಅಂತ ಕೋರಿಕೆ. ಓದಿದೀರ, ಹೇಳಿಕೊಂಡಿದೀರ, ನನಗೆ ಅದೆ ಸಂತಸದ ವಿಚಾರ!
  -ಟೀನಾ.

 3. ನಿಮ್ಮ ಕವಿತೆ ಎಂದರೆ ಮಾತನಾಡುವಂತಿಲ್ಲ. ಏನು ಚೆಂದ ಬರೀತೀರಿ. ಇದು ಹೊಗಳಿಕೆಯೆಂದಲ್ಲ. ಭಾವಗಳ ಮೆರವಣಿಗೆಯೇ ನೋಡ್ಲಿಕ್ಕೆ ಚೆಂದ. ಶ್ರೀಕಾಂತ್ ರಂತೆಯೇ ಕೊನೆ ಸಾಲುಗಳು ಕಾಡಿದವು.
  ನಾವಡ

 4. ಶ್ರೀಕಾಂತ, ಜಾಮೀರ್, ನಾವಡ, ಮನಸ್ವಿನಿ, ಅಮರ, ಸುದೇಶ್,
  ನಿಮ್ಮೆಲ್ಲರಿಗೆ ಭಾಳ ಠ್ಯಾಂಕ್ಸು ಕಣ್ರಿ. ಕವಿತೆ ನಿಮಗಿಷ್ಟವಾಯಿತು, ನಂಗೆ ಖುಶಿ!
  -ಆತ್ಮೀಯತೆಯೊಡನೆ,
  ಟೀನಾ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s