ಪಡಖಾನೆಯ ಹುಡುಗಿ ಕಳೆದ ಒಂದು ದಿನ

wwwchina-cartcom.jpg

ಹೊಸಿಲಲಿ ಮೂಡಿದ ಬಿಸಿಲ ಹೂ
ಮಾಡ ಮೂಲೆಯಲಿ
ಕಳೆದು ಹೋದ ಸಮಯ
ಸೆಖೆಯಾರಿಸದ ಪಂಖಾ
ಪಕ್ಕದ ಕೋಣೆಯ ಪರಿಚಿತ ಸಂಗೀತ
ಬಿಚ್ಚಿಟ್ಟ ಓಲೆಗಳು ಮತ್ತು
ಎಚ್ಚರದ ಅರಿವಿನೊಡನೆಯೆ
ಪಾಪದಂತೆ ಕಾಡುವ ನೀನು

ನನಗೆ ನಿನ್ನದೆ ಧ್ಯಾನ.
ಮುಡಿಬಿಚ್ಚಿ ಮೂಗಿಗಿಟ್ಟು
ನೇವರಿಸುತ್ತ ಹಠ ಮಾಡುವ
ನಿನ್ನ ಹಾಗೆ ಮೊಂಡು ಮಳೆ
ಅದಕೆ ಸಿಕ್ಕು ಚೆದುರುವ
ಮೊಗ್ಗಿನ ಹಾಗೆ ನನ್ನ ಬಿಗುಮಾನ
ಮಳೆಗೆ ಸಿಕ್ಕಿ ಮೊಗ್ಗು ಸುರಿದವು
ಇಂದು ಅಪರಾಹ್ನ

ಇನ್ನೂ ಆರಿಲ್ಲ ಒದ್ದೆ ಹೆರಳ ಪರಿಮಳ
ಕೊಂಚ ತಾಳು
ನಾನು ಹದವಾಗಲು
ಸ್ವಲ್ಪ ಸಮಯ ಬೇಕು
ಬರಿ ಮಾತೆ ಸಾಕೆ ನಿನಗೆ
ಸಂಜೆಯಾಳಕೆ ಮುಳುಗಲು?
ಬೀದಿದೀಪಗಳಿಗು ಹೇಳು
ನಮ್ಮ ಹೆಜ್ಜೆಗಳ ಸುತ್ತ
ಕೊಂಚ ಕತ್ತಲ ಹರಡಲು.

ಮಾತು ತೋಚದೆ
ದೇಶಾವರಿ ನಗುತ್ತ,
ಪಾಪಗಳ ಬಟ್ಟಲಲಿ ಸುರಿದು ಹೀರುತ್ತ
ಬಳಿ ಕೂರಲಾರೆ
ನಿನ್ನ ಚಡಪಡಿಕೆಯ ಪ್ರತಿಸಾರಿ
ಹೊಸದೆನ್ನುವಂತೆ ಸ್ವಾಗತಿಸಲಾರೆ
ನೀನು ಕೇಳುವ ಪ್ರೇಮ
ನನ್ನ ಹಳೆಯ ಪ್ರಿಯಕರ
ಕತ್ತಲಂತೆಯೆ ನಿಗೂಢವಾಗಿ
ಹುಟ್ಟಿ ದಾರಿಗಾಣದೆ
ಮರೆಯಾಗುವಂಥದು.

 

 

6 thoughts on “ಪಡಖಾನೆಯ ಹುಡುಗಿ ಕಳೆದ ಒಂದು ದಿನ

  1. ಕಳೆದು ಹೋದೆ ಕವನದಲಿ, ಹಾಗಂತ ತಿಳಿಸಿ ನಿಮ್ಮ ಪಡಖಾನೆಯ ಹುಡುಗಿಗೆ…!!😉

  2. ಹೌದು ರೀ, ನಿಮ್ಮ ಕವನ ಮನಸ್ಸಿನೊಳ್ಗೆ ಕೊರೆಯುತ್ತಲ್ರೀ. ಮೇಡಂ, ಕವನ ಬರೆಯೋಕೆ ಕಲಿಸಿಕೊಡಿ.
    ನಾವಡ

  3. ಟೀನಾ, ನಿಮ್ಮ ಮೈಲ್ ಐಡಿ ಇಲ್ಲದ ಕಾರಣ ಇಲ್ಲಿ ಬರೀತಿದ್ದೀನಿ, ಸಾರಿ, ನೀವ್ ನೋಡಿದ್ ಮೇಲೆ ಬೇಕಿದ್ರೆ ಡಿಲೀಟ್ ಮಾಡ್ಬಿಡಿ. ಕೆಂಡಸಂಪಿಗೆಯಲ್ಲಿ ಮಂದಕ್ರಾಂತಾರ ಕವಿತೆಗಳನ್ನ ಸಖತ್ತಾಗಿ ಅನುವಾದಿಸಿದ್ದೀರ, kudos! ಎರಡು ಡೌಟು, ’ಮಂಧತ’ ’ಮಾಂಧಾತ’ ಹಾಗೂ ’ಸಿಖಿಧ್ವಜ’ ’ಶಿಖಿಧ್ವಜ’ ಆಗ್ಬೇಕಿತ್ತಾ ಅಂತ…

  4. ‘ಕಳೆದ’ ಒಂದು ದಿನ,
    ಬಿಚ್ಚಿಟ್ಟ ಓಲೆಗಳು – ಆಹಾ.
    ಮುಗಿಸುವಲ್ಲಿ ಮಾತ್ರ ಯಾಕೋ ತಡಬಡಾಯಿಸಿದಂತಿದೆ.
    ಇಷ್ಟು ತಕ್ಷಣಕ್ಕೆ.

  5. ಪದ್ಯ ಇಷ್ಟವಾಯಿತು. ಸುಧನ್ವಾ ಹೇಳಿರುವ ಸಾಲುಗಳೇ ನಂಗೂ ಇಷ್ಟವಾದವು.
    ~ಅಪಾರ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s