ಪರಿಚಯ: ಹೀಗೊಬ್ರಿದಾರೆ ವೆಂಕಟೇಶ್ ಅಂತ!!

ನಮಸ್ಕಾರ ಎಲ್ಲರಿಗೂ,

ನನಗೆ ಕೆಲದಿನಗಳ ಹಿಂದೆ ’ಏನು ಮಾಡಬಹುದು?’ ಮತ್ತು ’ಹೀಗೆ ಶುರು ಮಾಡೋಣವೆ?’ ಪೋಸ್ಟುಗಳಿಗೆ ಬಹಳ ನಿರೀಕ್ಷಿಸಿದ್ದಕ್ಕಿಂತ ಉತ್ತಮ ಪ್ರತಿಕ್ರಿಯೆ ದೊರಕಿತು. ಸರಿ ಏನಾದರು ಆಗಲಿ ಒಂದೆಡೆ ಭೇಟಿಯಾಗಿ ಈ ಬಗ್ಗೆ ಚರ್ಚೆ ಮಾಡಲೆಬೇಕೆಂಬ ಹುಮ್ಮಸ್ಸು ಹೊತ್ತು ಪ್ಲಾನು ಮಾಡುತ್ತಿರುವಾಗ ಶ್ರೀಯುತ ವೆಂಕಟೇಶರೆಂಬ ಮಹಾನುಭಾವರು ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದರು. ಅದಕ್ಕೆ ನಮ್ಮ ಅಭಿಪ್ರಾಯಗಳನ್ನು ನಾವು ವ್ಯಕ್ತಪ ಡಿಸಿದರೆ ವೆಂಕಟೇಶರು ನಾವು ನಿರೀಕ್ಷಿಸಿರದ ಮಟ್ಟದ ವಿಕೃತಮನೋಭಾವನೆಯನ್ನು ಪದಗಳಲ್ಲಿ ವ್ಯಕ್ತಪಡಿಸಿ ತಾವು ಎಂಥವರೆಂದು ಪ್ರಪಂಚಕ್ಕೇ ಸಾರುವ ಹುಂಬತನವನ್ನು ತೋರಿದ್ದಾರೆ. ಈ ಮನುಷ್ಯನ ಐಡಿ ವೆಬ್ ದುನಿಯಾದ್ದಾಗಿದ್ದರು ಸ್ನೇಹಿತ ತವಿಶ್ರೀಯವರು ವೆಬ್ ದುನಿಯಾವನ್ನು ಸಂಪರ್ಕಿಸಿದಾಗ ಅವರು ತಮ್ಮಲ್ಲಿಈ  ಹೆಸರಿನ ಯಾವ ವ್ಯಕ್ತಿ ಇಲ್ಲವೆಂದೂ, ಈ ಐಡಿಯನ್ನು ವೆಬ್ ದುನಿಯಾ ಉಪಯೋಗಿಸುವವರಿಗೆ ನೀಡಲಾಗುವುದರಿಂದ ಇದು ಬೇರಾರೋ ಇರಬೇಕೇಂಬ ಸಮಜಾಯಿಶಿಯನ್ನು ನೀಡಿದರು. ಇದಲ್ಲದೆ ಅಚ್ಚರಿಹುಟ್ಟಿಸುವ ವಿಚಾರವೆಂದರೆ ಗೆಳತಿ ಚೇತನಾಳ ಬಗ್ಗೆ ಏಕವಚನ ಬಳಸಿ ಹೊಲಸಾಗಿ ಬರೆದಿರುವ ಬರೆದಿರುವ ಇದೇ ಮನುಷ್ಯ ಚೇತನಾ ಹಾಗು ಸುಪ್ರೀತರು ಸಹಲೇಖಕರಾಗಿರುವ ಓಶೋ ಬಗೆಗಿನ ಬ್ಲಾಗ್ ಆದ www.hakkihadu.blogspot ನ ಸಹಲೇಖಕನಾಗಿರುವುದು. ಎಲ್ಲಿ ಓಶೋ, ಎಲ್ಲಿ ವೆಂಕಟೇಶ್?

ಯಾಕೆ ವೆಂಕಟೇಶ್, ನಿಮಗೆ ನಿಮ್ಮ ಸಹಲೇಖಕಿಯ ಬಗ್ಗೆ ತಿಳಿದಿಲ್ಲವೆ? ಈ ಕೆಳಗಿನ ಮಾತುಗಳು ಉದ್ದೇಶಪೂರ್ಣವೆ ಅಥವ ಈ ವಿಕೃತಬುದ್ಧಿ ನಿಮ್ಮ ಸ್ಪ್ಲಿಟ್ ಪರ್ಸನಾಲಿಟಿಯ ಕಡೆಗೆ ಬೆರಳು ಮಾಡುತ್ತದೆಯೆ? ಈ ಕೆಳಗಿನ ಕಮೆಂಟುಗಳನ್ನು ಪ್ರಕಟಿಸುತ್ತಿರುವ ಒಂದೇ ಉದ್ದೇಶ – Mr. Venkatesh – whoever-you -are, I will not give you the pleasure of relishing your words. I give them back to you. Eat them and be content with your MCP attitude. I warn you for the first and last time that If I see another mail from you on my blog, I will lodge a complaint against you, what if you are in Haryana or Alaska. I know very well that people like you are sick and need counseling. Therefore this warning. Mind your language before saying anything about a person, especially a woman. I can understand why you could not stand my blog post. ನನಗೆ ಟೈಟಲ್ಲುಗಳ ನೀಡಲು, ನನ್ನ ಸ್ನೇಹಿತೆಯ ಬಗ್ಗೆ ಅಸಹ್ಯವಾಗಿ ಮಾತನಾಡಲು ನಿಮಗೆಷ್ಟು ಧೈರ್ಯ?

ಈ ಕೆಳಗೆ ವೆಂಕಟೇಶರ ಮೊನ್ನೆಯ ಕಮೆಂಟು, ಅದರ ನಂತರ ಹಿಂದಿನ ಕಮೆಂಟುಗಳು ಹಾಗೂ ನಮ್ಮ ಉತ್ತರಗಳನ್ನು ನಿಮಗಾಗಿ ನೀಡಿದೇನೆ.

 

 

 Venkatesh
venkven@webdunia.com | 125.20.36.178

ಮಿಸ್. ಕಿರು’ಚಾಟರ್ ಬಾಕ್ಸ್,
ಪರವಾಗಿಲ್ವೆ ಗೆದ್ದೆನೆಂಬ ತಮ್ಮ ಅಟ್ಟಹಾಸ, ಕುಹಕ ಯಾವುದೇ ಅತ್ಯಾಚಾರಿಗಿಂತ ಕಡಿಮೆಯೇನಿಲ್ಲ……
ತಾವು ಉತ್ತರವಾಗಿ ಬಳಸಿರುವ ಕಲಹ ಕೌಶಲ ಪದಗಳು, ವೈಯುಕ್ತಿಕ ಮಟ್ಟದ ಆರೋಪಗಳನ್ನು ತುಂಬ ಸಲೀಸಾಗಿ ಉಪಯೋಗಿಸಿದ್ದಿರಾ..
ಇದು ಚರ್ಜೆ ಹುಟ್ಟು ಹಾಕುವವರ ಸ್ಥಿಮಿತ, ಹಾಗು ಲಕ್ಷಣವಂತೂ ಅಲ್ಲ. ಒಬ್ಬರ ತೇಜೋವಧೆಗೆ ಯಾವುದೇ ಮಟ್ಟಕ್ಕೆ ಹೋಗಬಲ್ಲಿರೆಂದು ಕಾಣಿಸುತ್ತದೆ.
ಇನ್ನು ಅಸಮಾನತೆ, ಅತ್ಯಾಚಾರ ಇವುಗೆಳೆಲ್ಲದರ ದುಷ್ಪರಿಣಾಮ ಸಮಾಜದ ಎಲ್ಲರೂ ಅನುಭವಿಸುತ್ತಿರುತ್ತಾರೆ. ರೀತಿ ಬೇರೆಯಿರಬಹುದು. ತನ್ನ ಮಾನಸಿಕ ಕಹಿಯನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಂಡು ಸಣ್ಣ ಮಕ್ಕಳ ತಫ್ಫಿನಲ್ಲೂ ಭವಿಶ್ಯದ ಪೀಡಕನಂತೆ ಭಾವಿಸಿಕೊಂಡು ಅವರ ಮೇಲೆ ಎರಗುವ, ಪರಚುವ ನಿಮ್ಮಂತ ಮನೋವಿಕಾರಿ ಮಾನಿನಿಯರನ್ನು ಹುಡುಗರು ಅನುಭವಿಸಿರುತ್ತಾರೆ. ಬಾಲ್ಯದಲ್ಲಿ ಅದು ಉಂಟುಮಾದುವ ಆಘಾತಗಳು ಕಡಿಮೆಯೇನಲ್ಲ.
ಹಾಗೆ ಇಲ್ಲಿ ಬಹಳ ಉರಿ ಬಿದ್ದಿರುವುದು ಸಂಸ್ಕ್ರತಿ ವಿಷಯದಲ್ಲಿ, ದೇಶದ ಪ್ರತಿಯೊಬ್ಬರಿಗೂ ಅದರ ಸಂಸ್ಕ್ರತಿಯನ್ನು ಟೀಕಿಸುವ, ಅಭಿಪ್ರಾಯ ಹೊಂದುವ ಅದಿಕಾರವಿದ್ದೆ ಇದೆ. ನಾವು ನಮ್ಮದಲ್ಲದೇ ಬೇರೆ ದೇಶದ ಸಂಸ್ಕ್ರತಿಯನ್ನು ಟೀಕಿಸಲು ಬರುವುದಿಲ್ಲ. ತಮ್ಮ ಮನೆಯ, ಜನಾಂಗದ ಆಚರಣೆಗಳನ್ನೆ ದೇಶದ ಸಂಸ್ಕ್ರತಿಯನ್ನಾಗಿ ಬಿಂಬಿಸಲು, ಪ್ರಚಾರ ಮಾಡ ಹೊರಟವರಿಗೆ ಹೀಗೆ ಉರಿ ಬೀಳುವುದು ಸಹಜ. ತಮ್ಮ ಲೇಖನದಲ್ಲಿ ಎಲ್ಲಾ ಗಂಡಸರೂ ದುರುದ್ದೇಶದಿಂದಲೇ ನೋಡುತ್ತಿದ್ದರು ಎಂದಿದ್ದೀಯೆ ಹಳದಿಯಾಗಿ ನೋಡುವುದು ಅಭ್ಯಾಸ ಆಗಿಬಿಟ್ಟಿರಬೇಕು. ಚರ್ಚೆ ಹುಟ್ಟುಹಾಕುವವರು ಹೀಗೆಲ್ಲಾ ಬಾಯಿಮಾಡಿ, ನೈಲ್ ಪಾಲಿಷ್ ನ ಪಂಜವನ್ನು ತೋರಿಸಿದರೆ ಬಂದವರು ಆಯ್ತು ಮೇಡಮ್ ಯಾವಗಲೂ ಬ್ರಾಂಡೆಡ್ ಖಾರದಪುಡಿಯನ್ನೆ ಉಪಯೋಗಿಸಿ ಎಂದು ಅಚ್ಚ ಅಚ್ಚ ಹೇಳಿ ಹೋಗಬೇಕಾಗುತ್ತದೆ ಇನ್ನು ಚಿಂತನೆ ಖಾರದಪುಡಿಗಿಂತ ಮುಂದೆ ಎಲ್ಲಿ ಹೋಗುತ್ತದೆ.
            ಇನ್ನು ಚೇತನಾ, ನಾಲಿಗೆ ಇರುವಷ್ಟು ಹರಿಬಿಟ್ಟಿದ್ದೀಯೇ, ಅಪ್ಪಟ ಗಂಡಸ್ತನದ ಬಗ್ಗೆ ಮಾತಾಡಿದ್ದೀ. ಅವಶ್ಯಕತೆಯಿಲ್ಲದಿದ್ದರೂ.
ನಿನ್ನನ್ನು ನೀನು ಗೂಷ್ಲು ಎಂದು ಕರೆದುಕೊಂಡಿರುವುದು ಸರಿ, ಹೀಗೆ ಹೇಳಿಕೊಂಡಿರುವುದು ತಾವು ತಮ್ಮ ಅಪ್ಪಟ ಹೆಣ್ತನದ ಬೇಲಿ ಹಾರಿರುವ ಮತ್ತು ಹಾರುವ ಕುರುಹು ತವಕ ತೋರಿಸುತ್ತದೆ ಅಂತ ನಾನು ಹೇಳಬೇಕಾಗುತ್ತದೆ.
ಇದನ್ನೆಲ್ಲಾ ಓದಿದ ಮೇಲೆ ಚಾಟರ್ ಬಾಕ್ಸ್ ಮತ್ತೆ ಸಿಡಿಯುತ್ತದೆ ಅದರೆ ತಮ್ಮ ಕಲಹ ಚಾತುರ್ಯವನ್ನ ಬೀದಿನಲ್ಲಿ ಮಟ್ಟಕ್ಕೆ ಕೊಂಡು ಹೋಗುವುದಿಲ್ಲ ಎಂದುಕೊಂಡಿದ್ದೇನೆ.
ಮತ್ತೆ ನೋಡಲು ಹೋಗುವುದಿಲ್ಲ, ಏಕೆಂದರೆ ಎಲ್ಲರೂ ಕಿರುಚಾಟರ್ ಬಾಕ್ಸ್ ಗಳಂತೆಯೇ ಕಾಣುವ ಅಪಾಯವಿದೆ.

 

Older comments from Venkatesh and our replys

 

From ಹೀಗೆ ಶುರು ಮಾಡೋಣವೆ?, 2008/04/29 at 6:52 PM
Venkatesh said,
April 3, 2008 @ 06:30 p04 · Edit

ಹುಹ್ ಏನ್ರಿ ಇದು ರೂಲು ದೊಣ್ಣೆ, ಖಾರದ ಪುಡಿ, ಕರಾಟೆ ಎಲ್ಲಾ ಕಲಿಯುವುದು… ಆತ್ಮ ರಕ್ಷಣೆಗಾಗಿ ಇದೆಲ್ಲಾ ಆಗೊ ಹೋಗೊ ಮಾತಾ? ನಮ್ಮದು ಏನು ದರಿದ್ರ ಸಂಸ್ಕ್ರತಿನೋ, ದೇಶಾನೋ? ಇದನ್ನೆಲ್ಲಾ ವ್ಯಾನಿಟಿ ಬ್ಯಾಗಿನಲ್ಲಿಟ್ಟುಕೊಂಡವರ ಮನಸ್ಸು ಆರೋಗ್ಯದಿಂದ ಸಮಾಜದ ಕಡೆ ನೋಡುವಂತಾಗಬೇಕಲ್ಲಾ, ಕಣ್ಣಿಗೆ ಕಾಣುವ ಹುಡುಗರೆಲ್ಲಾ , ಗಂಡಸರೆಲ್ಲಾ ಮನುಷ್ಯರಂತೆ ಕಾಣದೆ ರೂಲು ದೊಣ್ಣೆ, ಖಾರದ ಪುಡಿಯಂತೆ ಕಂಡರೆ ಸ್ವಸ್ಥ ಸಮಾಜ ನಿರ್ಮಾಣ ಆಗಲು ಸಾಧ್ಯವೇ? ಇಲ್ಲಿ ಸಿಂಧುರವರು ಇದನ್ನೆಲ್ಲಾ ತಿಳಿದು ಓದಿಯೂ ಏನಾದರೂ ಉಪಯುಕ್ತ ಇನಿಶಿಯೇಟಿವ್ ಮಾಡೋಣ ಅಂದಿದ್ದಾರೆ ಹೌದು ಹಾಗೆ ಮಾಡುವುದರ ಮೂಲಕವೇ ಸ್ವಾಸ್ಥ್ಯ ಸಾಧ್ಯ. ಕರಾಟೆಯನ್ನು ಒಂದು ವಿದ್ಯೆ, ಕಲೆ, ಫಿಟ್ ನೆಸ್ ಗಾಗಿ ಕಲಿಯೋದು ಆರೋಗ್ಯಕರವಾದದ್ದು, ಸಣ್ಣ ಹೆಣ್ಣುಮಕ್ಕಳಿಗೆ ನೀನು ಗಂಡು ಪ್ರಾಣಿಗಳಿಗೆ ಚಚ್ಚಲು ಕಲಿತುಕೊ ಅಂತ ಕಳಿಸಿದರೆ ಆ ಹುಡುಗಿ ತನ್ನ ಮುಂದಿರುವ ಸಮಾಜದ ಬಗ್ಗೆ ಏನು ಯೋಚಿಸಬೇಕು.
ಒಮ್ಮೆ ತೇಜಸ್ವಿಯವರಿಗೆ ಅವರ ಆರೋಗ್ಯಕರ ಚೇತೋಹಾರಿ ಬರಹದ ಬಗ್ಗೆ ಕೇಳುತ್ತಿದ್ದಾಗ ಅಥವಾ ಅಂಥ ಒಂದು ಸಂಧರ್ಬದಲ್ಲಿ ತೇಜಸ್ವಿಯವರೆಂದರು ಅವರು ವಯಸ್ಕರ ಶಿಕ್ಷಣದ ಪುಸ್ತಕಗಳನ್ನು ನೋಡಿದರಂತೆ ಅದರಲ್ಲಿ ಇದ್ದ ವಿಷಯಗಳು, “ರೇಪ್ ಗೆ ಓಳಗಾದಾಗ ಹೆಣ್ಣು ಏನು ಮಾಡಬೇಕು?” “ಪೋಲಿಸ್ ಕಂಪ್ಲೇಂಟ್, ಕೋರ್ಟ್ ಮೂಲಕ ರಕ್ಷಣೆ, ಇಂತಹ ವಿಷಯಗಳಿದ್ದವಂತೆ, ಸೋ ಅಕ್ಷರಲೋಕಕ್ಕೆ ಕಾಲಿಡುವವರಿಗೆ ಮೊದಲಿಗೆ ಇಂತಹ ಭೀಕರ ಲೋಕದ ಪರಿಚಯದ ಮೂಲಕ ಸ್ವಾಗತ ಮಾಡಹೋದರೆ ಅವರ ಕಲಿಯುವಾಸೆ ಇಂಗಿ ಹೋಗುತ್ತದೆ. ನನಗೆ ತೇಜಸ್ವಿಯವರ ಈ ಹೇಳಿಕೆ ನನಗೆ ಬಹಳ ಮಹತ್ವದೆನಿಸಿತು. ನಾನು ಹಲವು ವರ್ಷಗಳ ಮೊದಲು ನನಗಿರುವಂತೆ ಪುಸ್ತಕ ಓದುವ ಅಭ್ಯಾಸ ನನ್ನ ಅಕ್ಕ, ತಮ್ಮ, ತಂಗಿಯರಿಗೂ ಹತ್ತಿಸಲು ಪ್ರಯತ್ನ ಮಾಡುತ್ತಿದ್ದೆ ಅವರು ಓದಲು ಹಿಂಜರಿಯುತ್ತಿದ್ದರು ಬಹುಶ: ಕಥೆ ಕಾದಂಬರಿಗಳಲ್ಲಿ ಬರುವ ಚಿತ್ರ ವಿಚಿತ್ರ ಸನ್ನಿವೇಶಗಳನ್ನು ಅರಗಿಸಿಕೊಳ್ಳಲು ಒಳಗೆ ಶಕ್ತಿ, ಧೈರ್ಯ, ಬೇಕಾಗುತ್ತದೆ ಅದು ಸುಪ್ತವಾಗಿ ಅವರನ್ನು ತಡೆಯುತ್ತದೆ ಎನಿಸುತ್ತದೆ.
ಅಂತೆಯೇ ಈ ಬ್ಲಾಗ್ [ಅತ್ಯಚಾರದ] ಓದುವಾಗಲು ತಥ್ ಎನಿಸುತ್ತದೆ.

 
Tina said,
April 4, 2008 @ 06:30 p04 · Edit

ಶ್ರೀಯುತ ವೆಂಕಟೇಶ ಅವರೆ,
ನಿಮ್ಮ ಬಗ್ಗೆ ನನಗೆ ಅಯ್ಯೊ ಪಾಪ ಎಂತಲೂ ಅನಿಸುವದಿಲ್ಲ. ಯಾವ ಪ್ರಪಂಚದಲ್ಲಿ ಬದುಕುತ್ತಿದೀರಿ ನೀವು? ರೇಪು, ವಯಸ್ಕರ ಶಿಕ್ಷಣ, ಪೋಲೀಸು ಕಂಪ್ಲೇಂಟು, ಕೋರ್ಟು ಮೂಲಕ ರಕ್ಷಣೆ ಇತ್ಯಾದಿಗಳ ಬಗ್ಗೆ ಓದಿದರೆ ಅಕ್ಷರಲೋಕಕ್ಕೆ ಕಾಲಿಡುವವರು ಹಿಂಜರಿಯುತ್ತಾರೆಯೆ? ಹಾಗಿದ್ದರೆ ಇವತ್ತಿನ ನ್ಯೂಸ್ ಪೇಪರುಗಳು, ಟೀವಿ ಚ್ಯಾನೆಲ್ಲುಗಳು ನಿಮ್ಮ ಸ್ಟಾಂಡರ್ಡಿನ ಪ್ರಕಾರ ತಮ್ಮ ಕಚೇರಿಗಳಿಗೆ ಬೀಗ ಜಡಿದುಕೊಂಡು ಮನೆಗೆ ಹೋಗಬೇಕು. ಯಾಕೆಂದರೆ ನಿಮ್ಮ ಅನಕ್ಷರಕುಕ್ಷಿ ಅಥವ ಹೊಸತಾಗಿ ಅಕ್ಷರಸ್ಥರಾಗಿರುವ ನಿಮ್ಮಂತೆ ಪುಸ್ತಕ ಓದಲು ಹಿಂಜರಿಯುವ ಅಕ್ಕತಂಗಿಯರು ಟೀವಿ ನೋಡಿದರೆ, ನ್ಯೂಸು ಓದಿದರೆ ಮಾನಸಿಕವಾಗಿ ಬಹಳ ತೊಂದರೆ ಪಟ್ಟುಕೊಂಡಾರು ಅಲ್ಲವೆ? ಛೇ ಛೇ! ಅವ್ರಿಗೆ ಏನೂ ನೋಡದೆ ಅಡುಗೆಮನೆಯಲ್ಲಿ ತೆಪ್ಪಗೆ ಬೇಯಿಸಿ ಬಡಿಸಲು ತಾಕೀತುಮಾಡಿ. ನಿಮ್ಮ ಮನೆಯ ಹೆಣ್ಣುಮಕ್ಕಳು ಪ್ರಪಂಚದ ಯಾವ ತೊಂದರೆಯೂ ಇಲ್ಲದ ಹಾಗೆ ಅಲ್ಲಿ ಸೇಫಾಗಿರುತ್ತಾರೆ. ಇನ್ನು ನಮ್ಮ ಸಂಸ್ಕೃತಿಯ ಬಗ್ಗೆ, ದೇಶದ ಬಗ್ಗೆ ನಿಮಗಿರೋ ಐಡಿಯದ ಬಗ್ಗೆ ನನಗೆ ಚೆನ್ನಾಗಿ ಅರಿವಾಗಿದೆ. ಕರಾಟೆ ಆರೋಗ್ಯವರ್ಧನೆಗಾಗಿ ಫಿಟ್ನೆಸ್ಸಿಗಾಗಿ ಕಲಿಯುವ ವಿದ್ಯೆಯಲ್ಲ ಮಹಾಸ್ವಾಮೀ, ಅದು ಆತ್ಮರಕ್ಷಣೆಗಾಗಿಯೇ ಇರುವ ವಿದ್ಯೆ. ನಿಮ್ಮ ಜನರಲ್ ನಾಲೆಡ್ಜಿಗೆ ನನ್ನ ನಮಃಸ್ಕಾರ! ರೂಲುದೊಣ್ಣೆ ಖಾರದಪುಡಿಗಳೆಲ್ಲ ಗಂಡಸರಾಗಿ ಕಾಣುವದಿಲ್ಲ ಸ್ವಾಮೀ, ಅದು ಕೇವಲ ಹೆಂಗಸರನ್ನು ಹೆಂಗಸರಂತೆ ಕಾಣದೆ ತಮ್ಮ ಖಯಾಲಿ ಪೂರಯಿಸಿಕೊಳ್ಳಲು ಮಾಧ್ಯಮದಂತೆ ಕಾಣುವ ನರಾಧಮರ ಮೇಲೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಉಪಯೋಗಿಸಲು ಮಾತ್ರ. ಹೌದು, ನಿಮಗೇಕೆ ಇಷ್ಟೊಂದು ಹಿಂಸೆ ಅನ್ನಿಸುತ್ತಿದೆ? ನಾವು ನಿಮ್ಮ ವಿಷಯಾನ ಇಲ್ಲಿ ಚರ್ಚಿಸ್ತಾ ಇಲ್ಲ! ಕಣ್ಣುಬಿಟ್ಟು ಈ ಬರಹವನ್ನ ಮೊದಲು ಓದಿ. ಸಣ್ಣ ಹೆಣ್ಣುಮಕ್ಕಳಿಗೆ ಗಂಡುಪ್ರಾಣಿಗಳಿಗೆ ಚಚ್ಚಲು ಕಲಿತುಕೊ ಎಂದು ಕಲಿಸಲಾಗುವುದಿಲ್ಲ, ತಮ್ಮನ್ನು ಸಾವಿರಾರು ವರುಷಗಳಿಂದ ’ನೀನು ಅಬಲೆ’ ಅಂತ ತಲೆಗೆ ತುಂಬಿಸುತ್ತ ಬಂದಿದೆಯಲ್ಲ ನಮ್ಮ ಪ್ರಜ್ನೆ? ಅದನ್ನ ತೆಗೆದುಹಾಕಿ ’ನೀನು ಸಬಲೆ, ಯಾರಿಗೂ ಕಡಿಮೆಯಿಲ್ಲ’ ಅನ್ನುವ ಧೈರ್ಯವನ್ನ ತುಂಬುವ ಕೆಲಸ ಇದು. ನಿಮ್ಮ ಯೋಚನೆಗೆ ಬಹುಶಃ ನಿಲುಕಲಿಕ್ಕಿಲ್ಲ ಬಿಡಿ ಸಾರ್. ಮತ್ತೆ ನಿಮ್ಮ ಮನೆಯ ಹೆಣ್ಣುಮಕ್ಕಳಿಗೆ ಕೂಡ ಇದು ಅನ್ವಯಿಸುತ್ತದೆ. ಅವ್ರ ಸುಪ್ತಪ್ರಜ್ನೆಯ ಬಗ್ಗೆ ಕೂಡ ನೀವು ಆಳ ಅಧ್ಯಯನ ನಡೆಸಿ ಅವ್ರು ಪುಕ್ಕಲುಗಳು ಅಂತ ಡಿಸೈಡು ಮಾಡಿಯಾಗಿದೆ. ಇನ್ನೇನು ಹೇಳಲಿ? ಪಾಪ ಟೀವಿ ಸೀರಿಯಲ್ಲುಗಳನ್ನು ನೋಡಿಯೂ ಗಡಗಡ ನಡುಗುತ್ತಿರುತ್ತಾರೇನೊ ಅವರು?
ನಮ್ಮಲ್ಲಿ ಪುರುಷದ್ವೇಷವಿಲ್ಲ ಎಂದು ನಾವು ನಿಮಗೇಕೆ ಸಮಜಾಯಿಶಿ ಕೊಡಲಿ?

ನನಗೆ ನಿಮ್ಮ ಥರದವರ ಬಗ್ಗೆ, ನೀವುಗಳು ಹೀಗೆಲ್ಲ ತೇಜಸ್ವಿ, ಸಂಸ್ಕೃತಿ ಅಂತೆಲ್ಲ ಮಾತನಾಡುತ್ತ ನಡೆಸುವ ಮಾನಸಿಕ ಅತ್ಯಾಚಾರದ ಬಗ್ಗೆ ’ಅಸಹ್ಯ’ ಅನ್ನಿಸತ್ತೆ.
chetana chaitanya said,
April 5, 2008 @ 06:30 p04 · Edit

ನಮಸ್ತೇ ವೆಂಕಟೇಶ್,

ನಾಚಿಕೆಯಾಗ್ಬೇಕು ನಿಮಗೆ. ದಿನದಿನವೂ ಹೆಣ್ಣುಮಕ್ಕಳ ಮೇಲೆ ನಡೀತಿರೋ ಲೈಂಗಿಕ ಅತ್ಯಾಚಾರಗಳ ಬಗ್ಗೆ ತಿಳಿದಿದ್ದೂ ( ತಿಳಿಯದಿದ್ದರೆ ಅಯ್ಯೋ ಪಾಪ!) ಹೀಗೆಲ್ಲ ಕಮೆಂಟು ಮಾಡಿರುವುದು ನಿಮ್ಮ ‘ಲೆವೆಲ್’ ಅನ್ನು ಸೂಚಿಸುತ್ತದೆ. ನಮ್ಮದು ಏನು ದರಿದ್ರ ಸಂಸ್ಕೃತೀನೋ, ದೇಶಾನೋ ಅಂತ ಹೇಳಿರುವ ನಿಮ್ಮ ದರಿದ್ರ ಮನಸ್ಥಿತಿಗೆ ನನ್ನ ಧಿಕ್ಕಾರ. ನಿಮ್ಮಂಥವರು ಮಾಡೋದೆಲ್ಲವನ್ನೂ ಸಹಿಸ್ಕೊಳ್ಳುತ್ತ ಬಿದ್ದಿರಬೇಕು,
ಸಣ್ನದೊಂದು ಪ್ರತಿಭಟನೆಯನ್ನೂ ತೋರಬಾರದು ಅನ್ನುವ ನಿಮ್ಮ ದಬ್ಬಾಳಿಕೆಯ ಮನೋಭಾವ ನಿಜಕ್ಕೂ ಅನುಕಂಪ ತರಿಸ್ತಿದೆ.
ಅಥವಾ ನೀವ್ಯಾಕೆ ಹೆಗಲು ಮುಟ್ಟಿ ನೋಡ್ಕೊಳ್ತಿದೀರಿ? ಅನ್ನೋ ಅನುಮಾನವೂ ಮೂಡ್ತಿದೆ.
ಬಿಟ್ಬಿಡಿ. ಅದೆಲ್ಲ ಆರೋಗ್ಯಕ್ಕೆ ಒಳ್ಳೆಯದಲ್ಲ.
ನಾವು ಪುರುಷ ದ್ವೇಷಿಗಳಲ್ಲ. ಇದೇ ಬರಹಕ್ಕೆ ಪ್ರತಿಕ್ರಿಯಿಸಿರುವ ಸಹೃದಯೀ ಗಂಡಸರನ್ನು ನೋಡಿ ನಾಚಿಕೊಳ್ಳಿ.
ನಮ್ಮೆಲ್ಲ ಪ್ರಯತ್ನಕ್ಕೂ ಜೊತೆಯಾಗಬಲ್ಲ ಅಂಥವರು ‘ಅಪ್ಪಟ ಗಂಡಸರು’
ನಿಮ್ಮ ಬಗ್ಗೆ ಏನನ್ನಬೆಕೋ ತಿಳೀತಿಲ್ಲ.
ಸಧ್ಯಕ್ಕೆ, ‘ಅಸಹ್ಯ’ ಅನ್ನಿಸುತ್ತಿದೆ ಅಷ್ಟೇ.

ವಂದೇ,
ಚೇತನಾ ತೀರ್ಥಹಳ್ಳಿ
Venkatesh said,
April 7, 2008 @ 06:30 p04 · Edit

ಟೀನಾ ಜಿ,
ಅಕ್ಷರ ಕಲಿಯುವುದು ಬೇರೆ, ಪುಸ್ತಕ ಓದುವ ಹವ್ಯಾಸ ಬೇರೆ ಕೆಲವರಿಗೆ ಒಗ್ಗುತ್ತದೆ, ಕೆಲವರಿಗೆ ಒಗ್ಗುವುದಿಲ್ಲ.
ಇದನ್ನು ಈ ಸಂದರ್ಭದಲ್ಲಿ ಹೆಳಿದೆನೆ ಹೊರತು ಜೆನೆರಲೈಸ್ ಮಾಡಿಲ್ಲ. ಆದರೆ ನೀವು ಜನರಲೈಸ್ ಮಾಡಿಕೊಂಡಿದ್ದೀರ.
ಮಹಿಳೆಯರು ಆತ್ಮರಕ್ಷಣೆಗಾಗಿಯೇ ಕೈಗೊಳ್ಳಬೇಕಾದ ದುರದ್ರಷ್ಟಕರ ಅನಿವಾರ್ಯತೆ ಬಗ್ಗೆ ಹೇಳಿದ್ದೇನೆ ಆಷ್ಟೆ.
ನಿಮ್ಮ ಬರಹವೇನು ಅಪ್ರಸ್ತುತ ಎಂದೇನೂ ನಾನು ಹೇಳಿಲ್ಲ.
ಮಹಿಳೆಯರ ಪ್ರಚೋದಕ ರೀತಿ, ನೀತಿ,ಉಡುಗೆಗಳೇ ಕಾರಣ ಎಂದೇನಾದರೂ ಹೇಳಿದ್ದರೆ ನೀವು ಹೀಗೆ ಹಾರಾಡಬಹುದಿತ್ತು, ಆದ್ದರಿಂದ ಮಾನಸಿಕ ಪ್ರಬುದ್ದತೆಯ ಸರ್ಟಿಫಿಕೇಟನ್ನು ಯಾರಿಗೆ ಅನ್ವಯಿಸುತ್ತದೋ ನೋಡಿಕೊಳ್ಳೀ.
Tina said,
April 8, 2008 @ 06:30 p04 · Edit

ವೆಂಕಟೇಶ್,
ಯಾಕೊ ನಿಮ್ಮ ಮೂಡೇ ಬದಲಾದಹಾಗಿದೆ ಈ ಸಾರಿ! ನಾನು ಜನರಲೈಸ್ ಮಾಡುವ ಪೇಟೆಂಟನ್ನ ನೀವು ತೆಗೆದುಕೊಂಡುಬಿಟ್ಟಿದೀರಿ ಅಂದುಕೊಂಡಿದ್ದೆ, ಸದ್ಯ ಇನ್ನೂ ಆ ವಿಭಾಗ ಫ್ರೀಯಾಗಿ ಉಳಿದುಕೊಂಡಿದೆ ಎಂದು ತಿಳಿದು ಸಮಾಧಾನವಾಗಿದೆ. ನಿಮ್ಮ ಪದಗಳಿಗೆ ನನ್ನ ಪ್ರತಿಕ್ರಿಯೆಯನ್ನ ಓದಿದೀರಿ ತಾನೆ? ಅದರ ಹಿಂದೆಯೆ ನಿಮ್ಮ ಕಮೆಂಟು ಕೂಡ ಇತ್ತಲ್ಲ, ಅದನ್ನ ಇನ್ನೊಂದು ಸಲ ನೀವೇ ಸರಿಯಾಗಿ ಓದಿದ್ದರೆ ಚೆನ್ನಾಗಿತ್ತು. ಬರೆಯೋದು ಬರೆದುಬಿಟ್ಟು ’ನೀವು ಜನರಲೈಸ್ ಮಾಡಿದೀರ’ ಅಂತ ನುಣುಚಿಕೊಳ್ಳೋ ಹಿಪಾಕ್ರಸಿ ನನಗೆ ಹೊಸತೇನಲ್ಲ. ಸ್ವಾಮಿ, ನನ್ನ ಮಾನಸಿಕ ಪ್ರಬುದ್ಢತೆಯ ಬಗ್ಗೆ ನನಗೆ ಖಾತ್ರಿ ಇದೆ, ಅದ್ರ ಬಗ್ಗೆ ತಾವು ಬರೆದು ಬೆರಳು ನೋಯಿಸಿಕೊಳ್ಳುವ ತೊಂದರೆ ತೆಗೆದುಕೊಳ್ಳದಿದ್ದರೇನೆ ಒಳಿತು. “ಮಹಿಳೆಯರು ಆತ್ಮರಕ್ಷಣೆಗಾಗಿಯೇ ಕೈಗೊಳ್ಳಬೇಕಾದ ದುರದ್ರಷ್ಟಕರ ಅನಿವಾರ್ಯತೆ ಬಗ್ಗೆ ಹೇಳಿದ್ದೇನೆ ಆಷ್ಟೆ.” ಅಂದಿದೀರಿ, ಅಂಥಾ ಕಾಳಜಿ ನಿಮ್ಮ ಹಿಂದಿನ ಕಮೆಂಟಿನಲ್ಲಿ ನನಗೆ ಎಲ್ಲಿಯೂ ಕಾಣಲಿಲ್ಲವಲ್ಲ!! ನಾನು ಯಾವ ವಿಷಯದ ಬಗ್ಗೆ ಹಾರಾಡಬಹುದು ಎಂದು ಕೂಡ ನೀವು ಊಹಿಸಿಬಿಟ್ಟಿದೀರ. ವಾಹವಾ! ನಾನು ಈ ರೀತಿ ತಮ್ಮ ಸಮಯ ವ್ಯಯ ಮಾಡಿದ್ದಕ್ಕೆ ವಿಪ್ರೀತ ಗಿಲ್ಟೀ ಫೀಲಿಂಗು ಸಾರ್! ಪುನಃ ತಮ್ಮ ಕೈ ಬಾಯಿ ನೋಯಿಸಿಕೊಳ್ಳುವ ಗೋಜಿಗೆ ಹೋಗಬೇಡಿರಿ. ಧನ್ಯವಾದ.

Ganesh K said,
April 11, 2008 @ 06:30 p04 · Edit

ಸೀರೆ ಉಟ್ಟುಕೊಂಡವರ ಮೇಲೆ ಅತ್ಯಾಚಾರಗಳಾಗುವುದಿಲ್ಲ. ಸೆಕ್ಸಿಯಾದ figure hugging, skimpy ಬಟ್ಟೆ ಹಾಕಿಕೊಂಡವರ, ಜೀನ್ಸ್, ಟೀ ಶರ್ಟ್ ಹಾಕಿಕೊಂಡವರ ಮೇಲೆ ರೇಪ್ ಆಗೋ ಚಾನ್ಸ್ ಇರ್ತವೆ ಅನ್ನೋ ಮಾತು ಕೇವಲ ವಿವೇಚನಾರಹಿತವಾದದ್ದು, ಬಾಲಿಶವಾದದ್ದು ಹಾಗೂ ಪಜ್ಞಾ ಶೂನ್ಯವಾದದ್ದು ಅನ್ನಿಸುತ್ತದೆ. ಆದರೆ ಡ್ರೆಸ್ ಕೋಡ್ ಅಂದರೆ ಬೇರೆಯವರಿಗೆ ಮುಜುಗರ ಆಗದ ರೀತಿಯಲ್ಲಿ, ಪ್ರಚೋದಕ ಅನ್ನಿಸದ ರೀತಿಯಲ್ಲಿ ಇರಬೇಕೆಂಬ ಸದಾಶಯ ತಪ್ಪಲ್ಲವೆಂದು ಭಾವಿಸುವೆ. ವೆಂಕಟೇಶರ ಮೊದಲ ಪ್ರತಿಕ್ರಿಯೆಯೇ ಒಂದು ದಿಕ್ಕಿನಲ್ಲಿದ್ದರೆ ನಂತರದ್ದು ಇನ್ನೊಂದು ದಿಕ್ಕಿನಲ್ಲಿದೆ. ಎರಡರ ನಡುವೆ ಸಾಮ್ಯತೆ ಇಲ್ಲ. ಅವರು ಸಮರ್ಥನೆಯ ಆಸೆ ಕೈಬಿಡುವುದು ಉತ್ತಮ.

ಬೆಂಗಳೂರಿನಲ್ಲಿ ಐ.ಟಿ. ಸಾಫ್ಟ್ವ್ ವೇರ್ ಎಂಜಿನಿಯರುಗಳ ಮೇಲೆ ದಿನವೂ ನೆಡೆಯುವ ಹಲ್ಲೆಗಳನ್ನ ನೋಡಿದರೆ(ನಾನಿಲ್ಲಿ ಹೇಳುತ್ತಿರುವುದು ಪುರುಷರ ಬಗ್ಗೆ) ಸ್ತ್ರೀಯರು ತಮ್ಮ ಆತ್ಮರಕ್ಷಣೆಗೆ ತಕ್ಕುದಾದ ತಯ್ಯಾರಿ ಮಾಡಿಕೊಳ್ಳುವುದು ಉತ್ತಮ. ವೆಂಕಟೇಶರಿಗೆ ಉತ್ತರಿಸುವಾಗ, ಸ್ತ್ರೀಯರು ಮಾಡಿಕೊಳ್ಳಬೇಕಾದ ತಯ್ಯಾರಿಗಳ ಬಗ್ಗೆ ಸ್ತ್ರೀಯರು ಚರ್ಚಿಸಿದರೆ, ಪುರುಷರೇಕೆ ಪುರುಸೊತ್ತು ಮಾಡಿಕೊಂಡು ಬಂದು ಅಡಸಾ ಬಡಸಾ ಕಾಮೆಂಟ್ ಹಾಕೋದು ಅನ್ನೋದನ್ನ ನೇರವಾಗೇ, ಖಡಕ್ಕಾಗಿ ಹೇಳಿದ್ದರೆ ಚೆನ್ನಾಗಿರ್ತಿತ್ತು ಟೀನಾ.

ಟೀನಾ ಒಂದು ಉತ್ತಮ ಚರ್ಚೆಯನ್ನ ಹುಟ್ಟುಹಾಕಿದ್ದಾರೆ. ಅವರಿಗೆ ಧನ್ಯವಾದಗಳು.
ಗಣೇಶ್.ಕೆ

Advertisements

19 thoughts on “ಪರಿಚಯ: ಹೀಗೊಬ್ರಿದಾರೆ ವೆಂಕಟೇಶ್ ಅಂತ!!

 1. Tina:

  When an argument reaches the level of ad hominem and abuse, neither the argument nor the person making it can be taken seriously. However, rather than completely ignoring this and letting the person feel all smug about it, give it back to him once. Give him a piece of your mind once and then let us stop indulging him. This retaliation, of course, serves only to vent your anger. Nothing more. Further, the other bloggers will also note down his email id so we know how to deal with him when one of the others receives a comment from him.

  The other thing is – there will be several such situations. So, the sooner we all learn to deal with them, the better.

  On a lighter note, you should really congratulate yourself. Once one starts getting hate comments and mails, it means one’s opinions are being taken seriously! I wish I get some hate mails.

  Regards,

 2. I hate to generalise, but its an old disease of uncouth men to indulge in vulgarity the moment they percieve defeat in an argument with a woman! disgusting!! It just shows he knows he has lost it. good that you decided to speak out. hopefully it serves as a lesson to others!

 3. ಟೀನಾ,

  ಈ ವೆಂಕಟೇಶ್ ಅನ್ನುವ ಮನುಷ್ಯ ಇಷ್ಟು ದಿನವಾದ ಮೇಲೆ ನಿನಗೆ ಮೆಲ್ ಮಾಡಿದ್ದು ಯಾಕೆ?
  ಇಷ್ಟಕ್ಕೂ ಈತ ಹರಿಹಾಯ್ದಿರುವ ಪರಿ ನೊಡಿದರೆ ಅದು ಆತನ ‘ಮಟ್ಟ’ವನ್ನು ಸೂಚಿಸುತ್ತದೆಯಲ್ಲದೆ ಮತ್ತೇನೂ ಅಲ್ಲ!
  ಇಷ್ಟಕ್ಕೂ ಬ್ಲಾಗ್ ಬರಹಗಳಲ್ಲಿ – ಇಷ್ಟವಾಯಿತು / ಆಗಿಲ್ಲ; ಚೆನ್ನಾಗಿದೆ / ಚೆನ್ನಾಗಿಲ್ಲ; ನಿಮ್ಮ ವಾದವನ್ನು ಒಪ್ಪುವೆ/ ಒಪ್ಪೋದಿಲ್ಲ; ಇದು ಸರಿ / ತಪ್ಪು- ಈ ಎಲ್ಲ ಬಗೆಯ ಕಮೆಂಟುಗಳಿಗೂ ಸದಾ ಸ್ವಾಗತವಿದ್ದೇ ಇದೆ. ಆದರ ಹೊರತಾಗಿ ವೆಂಕಟೇಶರು ನೀನು ಬ್ಲಾಗಲ್ಲಿ ಬರೆಯದ ಸಂಗತಿಯನ್ನು ಆರೋಪಿಸಿ ಕಮೆಂಟಿಸಿದ್ದು ಸರಿ ಬರದೆ ನೀನು ಪ್ರತಿಕ್ರಿಯಿಸಿದೆ. ಆ ಕಮೆಂಟಿನಲ್ಲಿ ಅವರ ಸಣ್ಣತನ ಎದ್ದು ತೋರಿದ್ದರಿಂದ ನನೂ ದನಿಗೂಡಿಸಿದೆ.
  – ಇವೆಲ್ಲವೂ ಮೇಲ್ನೋಟಕ್ಕೆ ಸುಸ್ಪಷ್ಟ.
  ಆದರೆ, ಈಗ ಯಾಕೆ ಈ ಮನುಷ್ಯ ( ಸಧ್ಯಕ್ಕೆ ಹಾಗೇ ಪರಿಗಣಿಸೋಣ) ಅನವಶ್ಯಕ ಮೇಲ್ ಮಾಡಿ ಮತ್ತೆ ಕಿಚ್ಚು ಹಚ್ಚಿದ್ದಾರೆ?
  ಇವರನ್ನ ಹಾಗೇ ಬಿಡಬಹುದೇ? ಯಾಕೆ ಸುಮ್ಮನೆ ಬಿದಬೇಕು?
  ನಿಜವಾಗ್ಲೂ, ಸುಪ್ರೀ ಬ್ಲಾಗಲ್ಲಿ ಸಹಲೆಖಕನಾಗಿ ಎಂಟ್ರಿ ಕೊಟ್ಟಿರುವುದು ಈತನೇ ಅಂತ ನಂಗೊತ್ತಿರಲಿಲ್ಲ!

  ಇರಲಿ.
  ಮೊದಲು, ವೆಂಕಟೇಶರ ಈ (ಕು) ಕೃತ್ಯಕ್ಕೆ ಸಹಬ್ಲಾಗಿಗರ ಪ್ರತಿಕ್ರಿಯೆ ಕೇಳೋಣ.
  ಆಮೆಲೆ ಮುಂದಿನ ವಿಚಾರ…

  ಪ್ರೀತಿಯಿಂದ,
  ಚೇತನಾ.

 4. I read a couple of lines of Mr.Venkatesh’s comments, and concluded that he is a prankster who is unnecessarily trying pick up fights without cogen t arugment of any kind. I care a rats behind about the mental composure of himself and his family to read/write books and it is totally irrelevant to the topic.

  I would suggest to tina/chetana to ignore such pesky people and continue their good work
  🙂

  Regards,

  Mayura

 5. ಅರೆ ಸ್ವಾಮಿ ವೆಂಕಟೇಶ್, – ತೇಜಸ್ವಿ ಅವರು, ಹೊಸದಾಗಿ ಸಾಕ್ಸರರಾಗ್ತಿರೊ ಹಿರಿಯರಿಗೆ ಓದೊಕೆ, ಕಲಿಸೊಕೆ ಮುಜುಗರ ಆಗೋ ವಿಷಯ ಅವರ ಪಠ್ಯದಲ್ಲಿ ಇದೆ ಅಂದ್ರೆ ಹೊರತು, ಯಾರೂ ಬೇರೆ ಎಲ್ಲೂ ಅಂತ ವಿಷಯ ಬರಿಬಾರದು, ಓದ್ಬಾರದು ಅಂತ ಅಲ್ಲ!.

  ನಿಮ್ಮ ಕಲ್ಪನೆಯ ‘ಸ್ವಸ್ಥ ಸಮಾಜ’ ದಲ್ಲಿ, ಗಂಡಸರೆಲ್ಲ ‘ರಾಮ’ ಅನ್ಸುತ್ತೆ. ಅದ್ಬುತ! .. ಸರಿ ಆದ್ರೆ, ಆ ಕಾಲ ಬರೋವರೆಗೂ, ಈಗಿನ ದಿನನಿತ್ಯದ ಪರಿಸ್ಥಿತಿ ನೋಡಿ, (ನೀವು ದಿನ ಪೇಪರ್ ಓದ್ತಿರಿ ತಾನೆ?, ಅಥವ ಬರಿ ಸಾಹಿತ್ಯ ಮಾತ್ರನಾ?) ಆಪತ್ತಿನ (ಕಾಮುಕ, ಕಳ್ಳ-ಕಾಕ) ಸಮಯದಲ್ಲಿ ಆತ್ಮರಕ್ಸ್ಣಣೆಗೆ ತಯಾರಾಗಿರಬೇಕು ಅಂತ ನಮ್ಮ ಕಾಲದ ಹೆಣ್ನುಮಕ್ಕಳು ಯೋಚನೆ ಮಾಡೋದಾದ್ರೆ ‘ಭೇಷ್’ ಅನ್ನೋದ್ ಬಿಟ್ತು, ‘ದೇಶ- ಸಂಸ್ಕ್ರತಿ’ ಅಂತ ಪುರಾಣ ಶುರು ಮಾಡ್ತೀರಲ್ಲಾ? ಸಾಲದಕ್ಕೆ ನಿಮ್ಮ ಸಂಸ್ಕ್ರತಿ ತೋರಿಸೊ ಏಕವಚನ, ಅಶ್ಲೀಲ.. ಛೇ..

  ನೀವು ಮತ್ತೆ ಬರೋಲ್ಲ ಅಂತ ಆಶ್ವಾಸನೆ ಕೊಟ್ತಿದ್ರು, ನಂಬಿಕೆ ಇಲ್ಲದೆ ಇಷ್ವೆಲ್ಲ ಬರೀಬೇಕಾಯ್ತು.

  ಟೀನಾ ರವರೆ, ಸದ್ಯ ಗೊರ್ ಗಾಂವ್, ಹರ್ಯಾಣದಲ್ಲಿರೋ ಶಿವಮೊಗ್ಗಾ ವೇಂಕಟೇಶ್ ವಿಳಾಸ, ಪ್ರವರ ಬೇಕಿದ್ರೆ ತಿಳಿಸಿ. ಈತ ಇಷ್ಟಕ್ಕೆ ತಿದ್ಕೋಳೊ ಹಾಗೆ ಕಾಣೋಲ್ಲ 😦 .

  ಗುರು

 6. ಟೀನಾ ಅಕ್ಕ,
  ನಾನು ಸುಪ್ರೀತ್. ಮೊನ್ನೆ ಚೇತನಕ್ಕ ವೆಂಕಟೇಶ್ ಬಗ್ಗೆ ವಿಚಾರಿಸಿದಾಗಲೇ ನನಗೆ ಅನುಮಾನವಾಯಿತು. ಇವತ್ತು ನಿಮ್ಮ ಬ್ಲಾಗ್ ನೋಡಿದೆ…
  ನೀವು ಹೇಳಿದ ಹಾಗೆ ಈ ವ್ಯಕ್ತಿಗೆ ಸ್ಪ್ಲಿಟ್ ಪರ್ಸನಾಲಿಟಿ ಇರಬಹುದೇ ಎಂಬುದು ನನ್ನ ಸಂಶಯ ಕೂಡ. ಏಕೆಂದರೆ ನನ್ನ ಬ್ಲಾಗುಗಳಿಗೆ ಪ್ರತಿಕ್ರಿಯೆ ಬರೆಯುವಾಗಿನ ಅವರ ಸಹೃದಯತೆಗೂ ಇಲ್ಲಿನ ವಿಕೃತಿಗೂ ಅಜಗಜಾಂತರ. ನನಗೆ ನಂಬುವುದಕ್ಕೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರಿಗೆ ಒಂದು ಇ-ಮೇಲ್ ಕಳುಹಿಸಿ ಸ್ಪಷ್ಟನೆ ಕೇಳಿರುವೆ. ಅವರಿಂದ ಉತ್ತರ ಬರುವವರೆಗೂ ನನಗೆ ಯಾವುದೇ ತೀರ್ಮಾನಗಳಿಗೆ ಬರಲು ಸಾಧ್ಯವಾಗುವುದಿಲ್ಲ..
  ಓಶೋ ಬಗ್ಗೆ ಅವರ ಆಸಕ್ತಿಯನ್ನು ಕಂಡು ನಾನು ಅವರನ್ನು ಓಶೋ ಬ್ಲಾಗಿಗೆ ಸಹ ಲೇಖಕರನ್ನಾಗಿ ಸೇರಿಸಿಕೊಂಡೆ. ಅವರ ಬಗ್ಗೆ ನನಗೇನೂ ತಿಳಿದಿಲ್ಲವಾದ್ದರಿಂದ ನಾನು ದುಡುಕುವುದಿಲ್ಲ…

  ಹೆಚ್ಚಿನ ಸಂಗತಿ ತಿಳಿದ ತಕ್ಷಣ ನನಗೆ ತಿಳಿಸಿ….

  ಕಾಳಜಿಯಿಂದ
  ಸುಪ್ರೀತ್.ಕೆ.ಎಸ್( supreeth.student@gmail.com)

 7. ಸ್ಪ್ಲಿಟ್ ಪರ್ಸನಾಲಿಟಿ ಇದೆ ಅಂತ ಅನಿಸ್ತಿದೆಯಾ…? ಹಂಗಾದ್ರೆ ಆತ ಮೇ 19ರಿಂದ ಜೂನ್ 19ರ ನಡುವೆ ಹುಟ್ಟಿರ್ತಾನೆ, ಆತನ ಸನ್ ಸೈನ್ GEMINI ಇರ್ಬೇಕು! 😛 ಮೊದ್ಲು ಆತ ಯಾರು, ಯಾಕ್ ಹಂಗ್ ಮಾಡ್ತಾನೆ ಅಂತ ಗೊತ್ತಾದ್ರೆ ಹೇಳಿ, ಅಗತ್ಯ ಬಿದ್ರೆ ನಿಮ್ಹಾನ್ಸ್-ನಲ್ಲೋ ಕಂಕನಾಡಿ ಫಾದರ್ ಮುಲ್ಲರ್ಸಲ್ಲೋ ಜಾಗ ಖಾಲಿ ಇದೆಯಾ ನೋಡೋಣ! 🙂 ಪಾಪ, ಏನಾದ್ರು ಸಹಾಯ ಆಗೂದಾದ್ರೆ ಆಗ್ಲಿ. 🙂

 8. ಟೀನಾ ಮತ್ತು ಗೆಳೆಯರೇ,
  ನನಗೂ ನಿಜಕ್ಕೂ ಹೇಸಿಗೆ ಅನಿಸುತ್ತೆ. ಓಶೋ ಓದಿಕೊಂಡು ಹೀಗೇ ಇರೋದಾದ್ರೆ ಅವರ ಮನಃಸ್ಠಿತಿಯ ಬಗ್ಗೆಯೂ ಶಂಕೆ ಪಡಬೇಕಾಗುತ್ತೆ. ಬ್ಲಾಗ್ ನಲ್ಲಿ ನಾವು ಹೇಳದ ಅಭಿಪ್ರಾಯಗಳನ್ನು ತಾವೇ ಆರೋಪಿಸಿಕೊಂಡು ಅದಕ್ಕೆ ವಿತಂಡವಾದ ಮಾಡುವವರು “ಕೊಳಚೆ ಮೇಲಿನ ನೊಣಗಳು”. ಅಂಥವರ ಬಗ್ಗೆ ತಲೆ ಕೆಡಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ.
  ಕಾಮೆಂಟ್ ಡಿಲೀಟ್ ಮಾಡುವುದರ ಜತೆಗೆ ಹೀಗೆ ಮಾನ (ಇದ್ದಿದ್ದರೆ) ಹರಾಜು ಹಾಕುವುದು ಉತ್ತಮ. ಆಗ ಉಳಿದವರು ಇಂಥವರ ಸಹವಾಸದಿಂದ ದೂರ ಇರಬಹುದು.
  ತಮ್ಮ ಮನೆಯೆಂಬ ದಂತಗೋಪುರದಲ್ಲಿ ಬದುಕುತ್ತಾ, ಹೊರಗೆಲ್ಲಾ ಕ್ಷೇಮ ಎಂದುಕೊಂಡು ಪಾಪ್ ಕಾರ್ನ್ ತಿನ್ನುತ್ತಾ ಟೈಮ್ ಪಾಸ್ ಮಾಡೋ ಇಂಥ ಮಂದಿ ಬಗ್ಗೆ ಉದಾಸೀನ ಮಾಡುವುದು ಸೂಕ್ತ. ಬ್ಲಾಗ್ ನಲ್ಲಿ ಆರೋಗ್ಯ್ಕಕರ ಚರ್ಚೆಗೆ ಒಳಗೊಳ್ಳುವ ಮನಸ್ಸಿದ್ದರೆ ಪಾಲ್ಗೊಳ್ಳಬೇಕು. ಇಲ್ಲವಾದರೆ ದೂರ ಇದ್ದು ಬಿಡಬೇಕು, ಹೀಗೆ ತಮ್ಮ ಮನಸ್ಸಿನ ಒಳಗಿನ ರಾಡಿಯನ್ನೆಲ್ಲಾ ಹೀಗೆ ಸುರಿದು ಪರಿಸರ ಹಾಳು ಮಾಡುವಂಥದ್ದು ಅವರ ಬೌದ್ಧಿಕ ಮಟ್ಟಕ್ಕೆ ಹಿಡಿಯುವ ಕನ್ನಡಿ. ತಿರುಪತಿ ವೆಂಕಟೇಶನೇ ಇಂಥವರಿಗೆ ಸದ್ಬುದ್ಡಿ ಕೊಟ್ಟು ನಮ್ಮನ್ನು ಕಾಪಾಡಬೇಕು !
  ನಾವಡ

 9. ಟೀನಾರವರೇ
  ಯಾರದ್ದೋ ಹೆಸರಲ್ಲಿ ಯಾರಿಗೋ ಬಸುರು ಮಾಡೋ ಅನಾಮಧೇಯನೊಬ್ಬನ್ನ ಕುರಿತು ಚಿಂತಿಸಿ ಫಲವಿಲ್ಲ ಬಿಡಿ. ಆದರೆ ತಾಂತ್ರಿಕವಾಗಿ ಹುಡುಕಾಡಿದರೆ ಆತನ ಪತ್ತೆ ಮಾಡಬಹುದು ಅನ್ನುವುದು ನನ್ನ ಅನಿಸಿಕೆ. ಹಾಗೊಂದು ಪ್ರಯತ್ನ ಮಾಡಿ ನೋಡೋಣ. ಭಯೋತ್ಪಾದಕರ ಹಾವಳಿಯಿಂದ ಯಾವುದೇ ಸಿಸ್ಟ್‌ಮ್‌ನಿಂದ ಏನೇ ಮಾಡಿದರೂ ಪತ್ತೆ ಹಚ್ಚುವ ತಂತ್ರಜ್ಞಾನ ಇವತ್ತು ಲಭ್ಯವಿದೆ. ಆ ದಿಸೆಯಲ್ಲಿ ಒಂದು ಪ್ರಯತ್ನ ಮಾಡಿ ನೋಡೋಣ.

 10. Hi Tina,

  There are always this breed of people whereever you go. You need not take him too seriously. Why throw stone on the dirt – knowing too well that it would splash back. You cannot escape from this kind of people in this world – but you can always STOP such people from entering your world. His writing very clearly indicates that his mind is sick. Ignoring such people is the best punishment. When he has no people to listen to he would opt not to react.
  Taking these things too personal will only spoil your peace of mind. If he is not a known person it would do good to stop any kind of communication. If he is a person known to you or your friends – make it clear to him that he is not FIT TO BE in your group of contacts.

  Radhika

 11. ಪ್ರಿಯ ಟೀನಾ,

  ವೈಯಕ್ತಿಕ ಒತ್ತಡಗಳಿಂದಾಗಿ ಬ್ಲಾಗ್ ಲೋಕದಿಂದ ಹೊರಹೋಗಿದ್ದೆ. ಈವತ್ತು ಬಂದು ನೋಡಿದರೆ ನಿಮ್ಮಲ್ಲಿ ಕುರುಕ್ಷೇತ್ರವಾಗಿದೆ. ನನ್ನ ಬ್ಲಾಗಿಗೆ ಆಗಾಗ ಬಂದು ನೀವು ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದರಿಂದ, ಅದೊಂದು ಹಂಗಿಗೆ ಕಟ್ಟುಬಿದ್ದು ಇಲ್ಲಿ ಬರೆಯುತ್ತಿದ್ದೇನೆ.

  ತುಂಬ ರಾಡಿಯಾಗಿದೆ. ದಯವಿಟ್ಟು ನಿಲ್ಲಿಸಿ. ಬ್ಲಾಗ್‌ಗಳಲ್ಲಿ ಗಂಧದ ಮರಗಳ ಗುದ್ದಾಟ ಮಾತ್ರ ನಡೆಯಲಿ.

 12. ಪ್ರಿಯ ಸ್ನೇಹಿತರೆ,
  ಇಲ್ಲಿಯವರೆಗಿನ ನಿಮ್ಮೆಲ್ಲರ ಪ್ರತಿಕ್ರಿಯೆಗಳನ್ನ ನೋಡುತ್ತ ಇದೇನೆ. ಇದೆಲ್ಲದರ ನಂತರ ನಂದೊಂದೆರಡು ಮಾತು, ಇದಕ್ಕೆಲ್ಲ ಮಂಗಳ ಹಾಡುವ ಮುನ್ನ.
  ಸುಮಾರು ಜನರು ಇಲ್ಲಿ ಮಿಶ್ರ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದೀರಿ. ಕೆಲವರು ಇದನ್ನ ನಿರ್ಲಕ್ಷ್ಯ ಮಾಡಿಬಿಡೋದು ಒಳ್ಳೇದು, ಸುಮ್ಮನೆ ಕೆಸರಿಗೆ ಕಲ್ಲು ಸಿಡಿಸುವ ಕೆಲಸ ಬೇಡ ಎಂದರೆ ಕೆಲವರು ಆತನನ್ನು ಸುಮ್ಮನೆ ಬಿಡುವುದು ಬೇಡ, ಅತನ ಪ್ರವರ ಹುಡುಕಿ ತಕ್ಕ ಶಾಸ್ತಿ ಮಾಡಲೆಬೇಕು ಎನ್ನುವವರು.
  ಮೊದಲು ಬೆಳಗ್ಗೆದ್ದು ವೆಂಕಟೇಶರ ಕಮೆಂಟು ಓದಿದಾಗ ನನಗೂನೂ ಅನ್ನಿಸಿದ್ದು ಈ ಕಮೆಂಟನ್ನ ಡಿಲಿಟ್ ಮಾಡಿ ಎಲ್ಲ ಮರೆತು ಕೂರುವಾ ಅಂತ. ಆಮೇಲೆ ಯೋಚನೆ ಮಾಡಿದೆ. ಆದರೆ ನಾನು ಈಗ ಸುಮ್ಮನಾಗಿಬಿಟ್ಟರೆ ಆತ ಹೀಗೇ ತನ್ನ ಮೂಗಿನ ನೇರಕ್ಕೆ ತೋಚಿದಂತೆ ಎಲ್ಲಕಡೆ ಬರೆಯಲು ನಾನೇ ದಾರಿ ಮಾಡಿಕೊಟ್ಟಂತೆ ಆಗುವುದಿಲ್ಲವೆ? ಇದಿಷ್ಟೇ ಕಾರಣವಲ್ಲ, ನನ್ನ ಹಲವಾರು ಸಹಬ್ಲಾಗಿಣಿಯರು ಇಂತಹ ಅಸಹ್ಯ ಭಾಷೆ ಬಳಸಲಾದ (ಇದು ಬಹಳ ಡೀಸೆಂಟಾಗಿದೆ ಅನ್ನಬಹುದು, ಅವುಗಳಿಗೆ ಹೋಲಿಸಿದರೆ!!) ಕಮೆಂಟುಗಳನ್ನು ಡಿಲಿಟ್ ಮಾಡಿ ಸುಮ್ಮನಾದ ಬಗ್ಗೆ, ಅದಾದ ಮೇಲೂ ಪುನಃ ಇಂತಹ ಹಲವಾರು ಕಮೆಂಟುಗಳು ಬರುತ್ತಲೆ ಇರುವುದರ ಬಗ್ಗೆ ಹೇಳುವುದ ಕೇಳೀ ಕೇಳೀ ರೋಸಿಹೋಗಿದ್ದೆ. ನಾನು ಸುಮ್ಮನೆ ಕೂತರೆ ನಾನು ಅತ್ಯಾಚಾರದ ವಿರುದ್ಧ ಪ್ರತಿಭಟಿಸುವುದರ ಬಗ್ಗೆ ಬರೆದದ್ದಕ್ಕೆ, ನಾನು ಇಂದಿನವರೆಗೂ ಬದುಕಿರುವುದರ ರೀತಿನೀತಿಗೆ ಅರ್ಥವೆಲ್ಲಿರುತ್ತೆ? ಇಗ್ನೋರ್ ಮಾಡುವುದು ತೊಂದರೆಗೆ ಸಲ್ಯೂಶನ್ನಲ್ಲ. ಅದನ್ನ ಎದುರಿಸಿ ನಿಲ್ಲುವುದು ನನ್ನ ಪ್ರಕಾರ ಸಲ್ಯೂಶನ್ ನೀಡದಿದ್ದರು ನನಗೆ ನಾನು ಇದಕ್ಕೆ ಬಗ್ಗಿ ಸುಮ್ಮನಾಗಲಿಲ್ಲ ಅನ್ನುವ ಸಮಾಧಾನ ನೀಡುತ್ತದೆ. ನನ್ನ ಕಾಲೇಜು ದಿನಗಳಲ್ಲು ನನ್ನ ಬಹಳಷ್ಟು ಸ್ನೇಹಿತೆಯರು ಅಶ್ಲೀಲ ಕಮೆಂಟುಗಳನ್ನ ಕೇಳಿಯೂ ಕೇಳದವರ ಹಾಗೆ ಇರುತ್ತಿದ್ದರೆ ನಾನು ಅಂಥವರ ಬಳಿ ಹೋಗಿ ಸಮಜಾಯಿಶಿ ಕೇಳುವುದೋ, ಜಗಳ ಆಡುವುದೋ ಮಾಡುತ್ತಿದ್ದೆ. ಆದರೆ ಪುನಃ ಅಂಥವರು ನನಗೆ ತೊಂದರೆ ಕೊಡುವ ಸಾಹಸ ಮಾಡುತ್ತಿರಲಿಲ್ಲ. ಹೋಗ್ಲಿಬಿಡು, ಜಸ್ಟ್ ಇಗ್ನೋರ್ ಎಂದು ಸುಮ್ಮನಾಗುವುದು ನಮಗೇಕೆ ಅಭ್ಯಾಸವಾಗಿಹೋಗಿದೆ?
  ಇದು ರಾಡಿಯಾಗಿರುವುದರ ಬಗ್ಗೆ ನನಗೂ ಅರಿವಿದೆ. ಆದರೆ ಸುಮ್ಮನಾಗಿದ್ದರೆ ನನ್ನನ್ನು ನಾನು ಎಂದಿಗೂ ಕ್ಷಮಿಸಿಕೊಳ್ಳಲಾಗುತ್ತಿರಲಿಲ್ಲ ಸುಧನ್ವ. ಮೇಲಾಗಿ ಚೇತನಾ ನನ್ನ ಸ್ನೇಹಿತೆ. What he said about her was unforgivable. ಯಾವಾಗಲು ಗಂಧದ ಮರಗಳ ಗುದ್ದಾಟವೆ ನಡೆಯುವುದು ಸಾಧ್ಯವಿಲ್ಲ. ಇಲ್ಲಿ ಆಗಾಗ ಹೊಲಸನ್ನೂ ತೊಳೆಯುವ ಕೆಲಸ ನಡೆಸಬೇಕಾಗುತ್ತದೆ. ಇಲ್ಲವಾದರೆ ಕೊನೆಗೆ ಗಂಧದ ಪರಿಮಳವನ್ನೂ ಮೀರಿ ಅದು ನಾತ ಬೀರಲಾರಂಭಿಸುತ್ತದೆ. (ನಾನು ನಿಮ್ಮ ಬ್ಲಾಗಿನಲ್ಲಿ ಕಮೆಂಟು ಮಾಡುತ್ತೇನೆಂಬ ಹಂಗಿಗೆ ಬಿದ್ದು ನೀವು ಬರೆದದ್ದು ನೋವು ಉಂಟುಮಾಡಿತು.)
  ಸುಪ್ರೀತ್, ನಿಮ್ಮ ಅಕ್ಕನಿಗೆ ನೀವಿಟ್ಟ ಹೆಜ್ಜೆ ಸರಿ ಅನ್ನಿಸಿತು. 🙂
  ಚಕೋರ, ನಾವಡ, ವಿನಾಯಕ, ಗುರು, ರಾಧಿಕಾ, ಶ್ರೀಮಾತಾ, ಶ್ರೀ, ನಯನೀ, ಸಿಂಧು, ಪ್ರಸಾದ್, ಚೇತೂ, ತವಿಶ್ರೀ, ಜ್ಯೋತಿ, ಮಯೂರ, ಶೆಟ್ಟರು – ಎಲ್ಲ ಸ್ನೇಹಿತರು ಒಂದಲ್ಲ ಒಂದು ರೀತಿಯಲ್ಲಿ ನನ್ನ ಪ್ರತಿಭಟನೆಗೆ ದನಿಗೂಡಿಸಿದೀರಿ. ಕೋಟಿ ಧನ್ಯವಾದಗಳು.

  ಆತ್ಮೀಯತೆಯೊಡನೆ,
  ಟೀನಾ.

 13. ಪ್ರೀತಿಯ ಟೀನಾ,

  ವೈಯಕ್ತಿಕ ಕೆಲಸ ಮತ್ತು ಒತ್ತಡಗಳಿಂದಾಗಿ ನಿಮ್ಮ ಕಿಟಕಿಯಲ್ಲಿ ಇಣುಕಿನೋಡಿರಲಿಲ್ಲ. ಮೊದಲಿಗೆ ಈ ಬಗ್ಗೆ ನೀವು ಸಲಹೆ ಕೇಳಿ ಬರೆದ ಪತ್ರೋತ್ತರದ ವಿಷಯ ನನ್ನನ್ನು ದಿನವೂ ಕೊರೆಯುತ್ತಿತ್ತು.

  ಗಂಧದೊಡನೆ ಗುದ್ದಾಟ, ಬಚ್ಚಲ ರೊಚ್ಚು, ನಾವು ನಂಬಿದ ವಿಚಾರಗಳನ್ನ ನಡೆನುಡಿಯಲ್ಲಿ ಅಳವಡಿಸಿಕೊಳ್ಳುವುದು ಎಲ್ಲವೂ ಇಂದಿನ ಬದುಕಿನ ಒಂದೊಂದು ಮುಖ. ಎಲ್ಲರೂ ಒಂದೇ ದಾರಿಯಲ್ಲಿ ಅದೇ ಹೆಜ್ಜೆಗಳ ಮೇಲೆ ನಡೆಯಬೇಕಿಲ್ಲ. ಅಸಹ್ಯ ಕಮೆಂಟುಗಳನ್ನ, ನಡವಳಿಕೆಗಳನ್ನ ಉದಾಸೀನ ಮಾಡಿ ನಡೆಯುವುದು ಕೆಲವರ ಸ್ವಭಾವ ಮತ್ತು ಹೋರಾಟದ ಸ್ಟ್ರಾಟಜಿ. ಆದರೆ ಹಾಗೆಯೇ ಮನಸ್ಸಿಗೆ ಕಿರಿಕಿರಿಯುಂಟುಮಾಡುವ ಸಂಗತಿಗಳ ಮೂಲ ಹುಡುಕಿ ಅದರ ಬೇರನ್ನೇ ಕಿತ್ತೆಸೆಯುವುದು ಇನ್ನೊಬ್ಬರ ಸ್ವಭಾವ ಮತ್ತು ಸ್ಟ್ರ್ಟಾಟಜಿ. ಈ ಎರಡೂ ಸ್ಥೈರ್ಯ ಮತ್ತು ತಾಳ್ಮೆಯನ್ನ ಬೇಡುವ ಸ್ವಭಾವಗಳು. ಯಾವುದನ್ನೂ ಹೆಚ್ಚು ಕಡಿಮೆ ಎಂದು ಹೇಳಲಾಗುವುದಿಲ್ಲ.

  ಆದರೆ ಪ್ರಶ್ನೆ ಏಳುವುದು, ಪೆಟ್ಟು ನಮಗೇ ತಾಗಿದಾಗ, ನಮ್ಮ ಮನಸ್ಸನ್ನೇ ಮುರಿದಾಗ ನಾವು ಹೇಗೆ ವರ್ತಿಸುತ್ತೇವೆ ಎನ್ನುವುದು. ಬೇರೆಯವರಿಗೆ ಆಗಿದ್ದು ನನಗೂ ಆಗಬಹುದು ಎಂಬ ಎಚ್ಚರ ಮತ್ತು ಸಹಜೀವನದಲ್ಲಿ ಜೊತೆಗಾರ/ಜೊತೆಗಾತಿ ಬೇಸರಪಟ್ಟಾಗ ಅವರ ನೋವಿಗೆ ಪ್ರತಿಸ್ಪಂದಿಸುವುದು ನಮ್ಮೆಲ್ಲರ ಅಗತ್ಯ.

  ನೀವು ಮೊದಲು ಪತ್ರ ಬರೆದಾಗ ಈ ಬಗ್ಗೆ ಸಲಹೆ ಕೇಳಿದ್ದಿರಿ, ನಾನು ನನಗೆ ಅನ್ನಿಸಿದ್ದನ್ನು ಮತ್ತು ಇತರರೂ ನಿಮಗೆ ತಿಳಿಸಿದ್ದಾರೆ. ನಂತರ ನಿಮ್ಮ ಮನಸ್ಸಿಗೆ ಒಪ್ಪಿದಂತೆ ನೇರವಾಗಿ ನಡೆದ ಸಂಗತಿಯನ್ನು ಅರುಹಿದ್ದೀರಿ. ಇದಕ್ಕೆ ನನ್ನ ಸಂಪೂರ್ಣ ಸಹಮತ ಮತ್ತು ಬೆಂಬಲ.

  ಈ ವೆಂ… ನೆಂಬ ಮಹಾನುಭಾವ ಈಗ ಬಹುಶ: ನೀರೊಳಗಿದ್ದೂ ಬೆವರುತ್ತಿರಬಹುದು. ಅಭಿವ್ಯಕ್ತಿ ಎಲ್ಲರಿಗೂ ಇರುವ ಸ್ವಾತಂತ್ರ್ಯ. ಅದಕ್ಕೆ ವಿಚಾರ ಮತ್ತು ಸತ್ಯದ ಬೆನ್ನೆಲುಬಿದ್ದರೆ ಗಟ್ಟಿ ನಿಲ್ಲುತ್ತದೆ. ಇಲ್ಲದಿದ್ದರೆ ಈ ವೆಂ…. ಮಹಾನುಭಾವನ ಪೊಳ್ಳು ಮಾತುಕತೆಗಳ ಹಾಗೆ ತನ್ನ ಹೆಜ್ಜೆಗೇ ತಾನೇ ನಲುಗಿ ಪುಡಿಯಾಗುತ್ತದೆ.

  ನಿಮ್ಮ ಧೈರ್ಯಕ್ಕೆ ಮತ್ತು ನೇರಬರಹ ನಡೆನುಡಿಗಳಿಗೆ ಜೊತೆಯಾಗಿ ನನ್ನ ಹೆಜ್ಜೆಯಿದೆ. ಅಕ್ಷರಗಳಿವೆ.

  ಪ್ರೀತಿಯಿಂದ
  ಸಿಂಧು

 14. Tina,
  Forwarding this comment by one of my freinds.

  Dear CheT

  In your Zone i found the link to Tina’s ‘naavEn maaDabahudu’ Went through Venkatesh views. i wanted to write to her zone directly but could not find’ send mail’ section or something to that extent.

  First of all Venkatesh is under the impression that Karate is for physical fitness which is totally wrong. It is a martial art…to defeat a person physically or to defend oneself from physical threat. I think he didnot try to understand what Tina was trying to express though she has written it simply. May be he derives some sadistic satisfaction in commenting pervesely.

  But the core of the matter still stands allwaa?? what have you all decided?? Remember the incident recently in Mumbai where a lady was molested inspite of being accompanied by two male relatives. How come the onlookers watched mutely??

  I recall here an episode that occured on my way from Teerthalli to Bangalore. it was a private bus. After the lights were out i heard a female voice begging for help to save her from her male co passenger who was drunk and was molesting her. The conductor who came to find out what the commotion was scolded her saying ‘ enri adu nimma galaaTe’.. She explained to him and he just went away without a second glance in her direction. She also pitifully asked the other travellers in bus to help her, but in vain. My husband was fast asleep and was unaware of the scene going on. I woke him up saying please exchange your seat with the lady in front. He sleepy eyed went across and the girl came and was crying and saying her thanks over and over again. Once the lights were on i casually looked at the girl. she was neither good looking ( in the traditional sense) nor was she dressed provocatively and the man slinked away at the next stop.. of course this happened almost 17 years ago. Times have changed a bit in the sense there are provisions for ladies seat and all. But my only anger is there were around 35 people in the bus who could have turned the man out. I could not refrain from commenting loudly to the girl saying if only their family members were involved probably they would have reacted. Nobody lifted their heads nor glanced in our directions. For many of those people were familiar to me.
  Now iam always giving word of caution to my own teenaged daughters on how to behave and how not to.
  Will write again
  Bye
  Malathi S

 15. ಟೀನಾ ಅವರೆ,
  ಬ್ಲಾಗ್ ತುಂಬಾ ಚೆನ್ನಾಗಿದೆ, ನನ್ನ ಗೆಳತಿ ರಾಧಿಕ ನಿಮ್ಮ ಬ್ಲಾಗ್ ಲಿಂಕನ್ನು ಕೊಟ್ಟು , ನೋಡು ಓದಿ ಪ್ರತಿಕ್ರಿಯಿಸು ಎಂದಾಗ ಇದರಲ್ಲಿ ಎನೋ ವಿಷೇಶ ಇರಬೇಕೆಂದುಕೋಂದಿದ್ದು ಸುಳ್ಳಾಗಲಿಲ್ಲ.
  ನಿಮ್ಮ ಎಲ್ಲ ಪೋಸ್ಟ್ ಗಳನ್ನು ಒಂದರ ನಂತರ ಇನ್ನೊಂದನ್ನು ಓದಿ (ಇಲ್ಲಿ ಅವೆರಡರ ಕೊಂಡಿ ಯನ್ನು ಹಾಕಿ) ಪೂರ್ತಿ ಅರ್ಥವಾಯ್ತು.
  ಹೀಗೆ ಸ್ವಲ್ಪ ದಿನದ ಹಿಂದೆ, ಪ್ರತಾಪ್ ಸಿಂಹ ಬರೆದಿದ್ದ ಲೇಖನ ಹೆಚ್ಚು ಕಮ್ಮಿ ಇದೇ ವಿಚಾರದೊಳಗೋಂಡಿದ್ದು, ಅದಕ್ಕೆ ಪ್ರತಿಕ್ರಯಿಸಿದ್ದ ಅವರ ಕಟ್ಟಾಭಿಮಾನಿಗಳ ನಡುವೆ ಬಾಯಿ ಹಾಕಿ ಸುಮ್ಮನೆ ಹೊಲಸು ಮಾತು ಕೇಳಲು ಮನಸ್ಸು ಒಪ್ಪಿರಲಿಲ್ಲ….
  ನಿಮ್ಮ ಲೇಖನ ಓದಿದ ನಂತರ ಒಂದೆರಡು ಲೈನಾದರು ಬರೆಯಬೇಕೆನಿಸಿತು. ನೀವು ತೆಗೆದುಕೊಂಡಿರುವ ತೀರ್ಮಾನ ಸರಿಯಾಗಿದೆ.. ಎಷ್ಟು ದಿನ ನಾವು ಸಹಿಸುತಾ ಬರುತ್ತೆವೋ ಅಲ್ಲಿಯ ವರೆಗೆ ಇದು ತಪ್ಪಿದ್ದಲ್ಲ, ಅದಕ್ಕಾಗಿ ಎನಾದರು ಮಾಡಲೇಬೇಕು. ಹಾಗಿ ಶ್ರಿಯುತ ವೆಂಕಟೇಶ್ ಎಂಬ ಎಮ್.ಸಿ.ಪಿ ಯವರ ಬರಹವನ್ನು ಬಹಿರಂಗವಾಗಿ ಬರೆದದ್ದು ಹಾಗು ಜನರ ಪ್ರತಿಕ್ರಿಯೆಗಳಿಗೆ ಬೆನ್ನು ತಟ್ಟಿದ್ದು ಒಂದು ಒಳ್ಳೆಯು ಕೆಲ್ಸ…

  ಹೀಗೆ ಇಲ್ಲಿ ಒಂದು blanknoise project ಇದೆ , ಸಮಯ ವಿದ್ದಾಗ ಓದಿ.
  http://blog.blanknoise.org/

  ———————————————————————————————————————-
  Are the you the person whom I saw in one of the episodes of JaaNara Jagali hosted by Smt. Sudha Bargur?
  On a lighter note, nimmanna naavu dinakke omdu sala nenpiskoteevi hege gotta…
  I generally offer beverages to my husband like, neev en togoteera?
  Cofee na , “TeeNa” ? 🙂

  Best Regards,
  Veena

 16. Dear TINA,
  it seems the person is not from Haryana, but from Mumbai, as per my investigations. If you give me more details, I can track him easily. The problem with blog is that it is difficult to trace the IP. But fortunately he has left a mark, which is very much helpful in locating him. If you just give a complaint with the IP 125.20.36.178, you can track him and nail him.
  It is foolishness on their part to think that they are untraceable, but in reality, they cannot escape!
  Regards
  Beluru Sudarshana
  BTW, your article on CONTACT is good. I watched it long back and it is a different movie altogether for the message it conveys.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s