ಪಡಖಾನೆಯ ಹುಡುಗಿ – ಜೇನುಗಣ್ಣ ಹುಡುಗನಿಗೆ

ನಿನಗೆನ್ನ ಮೇಲೆ ಪ್ರೇಮವಿದೆಯೆ
ಕೇಳಲು ಸಮಯ ಸಾಲದಾಯಿತು
ನಿನ್ನ ಜೇನಕಂಗಳು
ನನ್ನೊಳಗಿಳಿವ ಪರಿಗೆ ಮರುಳಾದೆ
ಮಾತು ಮರೆತು ಹೋದವು

ಅದಕೆಂದೆ ಈಗ ಹೇಳುವೆ,

ಅಲ್ಲಿ ನೀನು ಚೆಲ್ಲಿಬಿಡುವ
ಹುಣ್ಣಿಮೆ ಬೆಳಕು ನನ್ನ
ನೀರಡಿಕೆಯನು ಹಿಗ್ಗಿಸುತ್ತದೆ

ಹಗುರಾಗಿ ನೀನು ನಕ್ಕಾಗ
ನಶೆಯೇರಿದಂತಾಗಿ
ಹಾವಿನಂತೆ
ಒಳಗೊಳಗೇ ಮಿಸುಕಾಡುವೆ

ಇಲ್ಲಿ ನಾನು ಒಂಟಿಯಾದಾಗೆಲ್ಲ
ನೀನು ಪಿಸುಗುಟ್ಟಿದಂತಾಗಿ
ಪುಳಕಗೊಳ್ಳುವೆ

ಒಮ್ಮೊಮ್ಮೆ  ನಾ ಸೋಕಿದಾಗ
ಅಪರಾಹ್ನದ ಕೊಳದಂತೆ ಮಿನುಗುವ
ನಿನ್ನ ಕಂಗಳ ನೆನೆನೆನೆದು
ಬೆವರುವೆ

ಆದರೆ,
ನಾನು ನಿಜವಾಗಿ ಕೇಳಬೇಕೆಂದಿದ್ದು
ನಿನ್ನ ಕಣ್ಣ  ಸತ್ಯಗಳು
ನಿನ್ನೂರ ಮಲೆಯ ಮರಗಳಷ್ಟೆ
ಗಟ್ಟಿಮುಟ್ಟು, ಒರಟು ಹಾಗೂ
ಪ್ರಾಮಾಣಿಕವಾಗಿರಲಿ
ಎಂದು ಮಾತ್ರ.

ಚಿತ್ರಕೃಪೆ: www.thepioneerwoman.com 

Advertisements

12 thoughts on “ಪಡಖಾನೆಯ ಹುಡುಗಿ – ಜೇನುಗಣ್ಣ ಹುಡುಗನಿಗೆ

 1. cooooooooooooool
  ಬಹಳ ಚಂದ ಇದೆ .

  “ನಾನು ನಿಜವಾಗಿ ಕೇಳಬೇಕೆಂದಿದ್ದು
  ನಿನ್ನ ಕಣ್ಣ ಸತ್ಯಗಳು
  ನಿನ್ನೂರ ಮಲೆಯ ಮರಗಳಷ್ಟೆ
  ಗಟ್ಟಿಮುಟ್ಟು, ಒರಟು ಹಾಗೂ
  ಪ್ರಾಮಾಣಿಕವಾಗಿರಲಿ
  ಎಂದು ಮಾತ್ರ. ”

  ಅಬ್ಬಬ್ಬ . ಬರೀತಾ ಇರಿ ಟೀನಾ

 2. ಹುಡುಗರಿಗೆ ಅಷ್ಟೊಂದು ಒಳಾರ್ಥ ಅರ್ಥವಾಗುವುದಿಲ್ಲ ಟೀನಾ ಅವರೆ 🙂
  “ಒಮ್ಮೊಮ್ಮೆ ನಾ ಸೋಕಿದಾಗ
  ಅಪರಾಹ್ನದ ಕೊಳದಂತೆ ಮಿನುಗುವ” ಇದು ಅರ್ಥವಾಗಲಿಲ್ಲ 😦

 3. ಚೇತೂ, ಸುಧೇಶ್, ಜೋಮನ್, ಸುನಾಥ್,
  ನಿಮ್ಮ ಈ ಮಾತುಗಳೆ ನನ್ನಂಥ ಇನ್ಸಿಗ್ನಿಫಿಕೆಂಟ್ ಬರಹಗಾರ್ತಿಯನ್ನ ಜೀವಂತವಾಗಿಡುವುದು!!
  ಮನಸ್ವಿನಿ,
  ಖಂಡಿತಾ ಬರೀತಿರ್ತೀನಿ. ಬರೀದಿದ್ರೆ ತಲೆ ಕೆಟ್ ಮೊಸರಾಗ್ ಹೋಗತ್ತೆ!! ಪ್ರೀತಿಯಿರಲಿ.
  ಎಂ.ಡಿ,
  ಕವಿತೆ ಆಯಿತು ನಿಮಗೆ ಅರ್ಥವಾದರೆ .
  ತಲೆ ಕೆಡಿಸಿಕೊಳ್ಳಬೇಡಿ, ಇಲ್ಲದಿದ್ದರೆ !!
  ಎಲ್ಲದಕು ಒಳಾರ್ಥ ಇರಬೇಕು ಅಂತೇನೂ ಇಲ್ಲ.
  ಕವಿತೆ, ಓದುವವರಿಗೆ ಕಂಡ ಹಾಗೆ – ಅಲ್ಲ?
  😉
  ಟೀನಾ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s