ಮಾನ್ಸೂನು

ಚಿಮಣಿಯಿಂದ
ಬುಸು
ಬುಸು
ಹೊಗೆ
ಒಲೆಯ ಮುಂದೆ
ಕುಕ್ಕರುಗಾಲು ಹಾಕಿದ
ಅಪ್ಪ
ಹೊರಗೆ
ಪಿರಿ
ಪಿರಿ
ಮಳೆ
ಜಾರುವ ಪಾಚಿಹಾದಿ
ವಾರೆ ಸುರುಳಿ
ಕಣ್ಣೊಳಗೆ ಹಸಿರು
ಚಳಿಯ ಧ್ಯಾನಿಸುತ್ತ
ಒದ್ದೆ ಸೌದೆಯ ವಾಸನೆ
ಸೇದುತ್ತ
ಇದ್ದರೆ
ಏನೇನೊ ಜ್ಞಾಪಕ
ತವಕ.

ಪುಟ್ಟ ತರಲೆ ಹುಡುಗಿ
ತುಡುಗು
ಮಾಡುವ
ಹಾಗೆ
ಅ  ತ್ತಿಂ   ದಿ   ತ್ತ
ಗೂರಾಡುವ
ಬಿಳಿಹೊಗೆ
ಮಾಡಿಂದ
ಸುರಿವ
ನೀರಪರದೆ
ಮತ್ತೆಲ್ಲ
ಮೌನವಾದರು
ಮನಕ್ಕೆ
ಮಳೆ
ವೀಣೆ
 

Advertisements

17 thoughts on “ಮಾನ್ಸೂನು

 1. ಏನು ಹೇಳಲಿ ನಿಮ್ಮ ಈ ಮಾನ್ಸೂನಿಗೆ!!
  ನನ್ನೂರು, ಅಲ್ಲಿನ ಮಳೆಗಾಲ, ಮಳೆಯನ್ನು ನೋಡುತ್ತಾ ಬಿಸಿಯಾದ ಕಾಫಿ (ಬೆಲ್ಲದ ಕಾಫಿ!), ವಾರಗಟ್ಟಲೆ ಮಾಯವಾಗುತ್ತಿದ್ದ ಕರೆಂಟ್, ಭೀಕರವಾಗಿ ನನ್ನೂರ ಪಕ್ಕದಲ್ಲೆ ಹರಿಯುವ ತುಂಗೆ …. ಎಲ್ಲವೂ ನೆನಪಾದವೂ.. ಇದೆ ಒಲೆಯಲ್ಲಿ ಹಪ್ಪಳ,ಹಲಸಿನ ಬೀಜ ಸುಟ್ಟು ತಿಂದಿದ್ದೂ ನೆನಪಾಯಿತು!! 🙂
  ರಚ್ಚೆ ಹಿಡಿದ ಮಗುವಿನ ಅಳುವಿನಂತೆ ಒಂದೆ ಸಮನೆ ಧೋ ಎಂದೋ ಅಥವಾ ಒಂದೇ ರಾಗ ಯಾವುದೋ ಹಾಡಿನಂತ ಪಿರಿ ಪಿರಿ ಮಳೆ, ಜಗುಲಿಯ ತುದಿಯಲ್ಲಿಯೋ ಕುಳಿತು ಸುಮ್ಮನೆ ನೋಡುತ್ತಾ ಕುಳಿತಾಗ ಮಳೆಯ ಪರದೆಯ ಆಚೆಯ ಬಿಂಬಗಳು, ದೂರದಲ್ಲೆಲ್ಲೋ ಗದ್ದೆಗಳು ಮುಗಿದ ತಾವಿನಿಂದ ಆರಂಭಗೊಂಡ ಕಾಡುಗಳ ಮಧ್ಯದಲ್ಲಿ ಇದೆಯೋ ಇಲ್ಲವೋ ಎಂಬಂತಿರುವ ಗುಡಿಸಲಿನ ಮಾಡಿನಿಂದ ಸಣ್ಣಗೆ ಏಳುತ್ತಿರುವ ಹೊಗೆ, ಇವೆಲ್ಲವೂ ಈ ಮಾನ್ಸೂನಿನ ಇನ್ನಷ್ಟು ಝಲಕುಗಳು..!!

 2. ಪ್ರೀತಿಯ ಟೀನಾ,

  ಚೊಲೋ ಅಂದ್ರೆ ಚೊಲೋ ಇದೆ. ಉರಿಯುತ್ತಿರುವ ಹಸಿ ಕಟ್ಟಿಗೆಯ ವಾಸನೆ, ಮತ್ತು ಈಗಾಗಲೆ ಉರಿದು ನಿಗಿನಿಗಿ ಹೊಳೆಯುತ್ತಿರುವ ಕೆಂಡದ ಕಾವಿನ ಮಿಶ್ರ ಹಿತವನ್ನ ಮನಸ್ಸಿಗೆ ಉಂಟುಮಾಡುವ ಅಭಿವ್ಯಕ್ತಿ.
  ಮತ್ತೆ ಮತ್ತೆ ಓದುತ್ತಿದೀನಿ. ಇಂತದೇ ಎಂದು ಹೇಳಬರದ ಸುಖ.

  ಪ್ರೀತಿಯಿಂದ
  ಸಿಂಧು

 3. ಮಾಡಿಂದ
  ಸುರಿವ
  ನೀರಪರದೆ
  ಮತ್ತೆಲ್ಲ
  ಮೌನವಾದರು
  ಮನಕ್ಕೆ
  ಮಳೆ
  ವೀಣೆ..
  ನಿಜ ಅಲ್ವಾ… ಮೀಟಿದ ತಂತಿಯ ಹಾಗೆ ಮಳೆ ನಮ್ಮಲ್ಲೂ ಅದಮ್ಯ ಕಂಪನ ಉಂಟು ಮಾಡುತ್ತೆ…
  ಮೊನ್ನೆ ರಮೇಶ್ ಮಳೆ ಕುರಿತು ತುಂಬಾ ಸುಂದರವಾದ ಲೇಖನ ಬರೆದಿದ್ದರೂ (ಉದಯವಾಣಿ)…
  ಮಳೆ ನಮ್ಮ ಕಣ್ಣು, ಕಿವಿ, ಸ್ಕಿನ್ ಹೀಗೆ ನಮ್ಮ ಇಂದ್ರಿಯಗಳನ್ನು ಮಳೆ ತಟ್ಟುತ್ತದೆ… ಅಂತಾ…
  ನಿಮ್ಮ ಪದ್ಯದ ಪದಗಳು ಅಂಥ ಕಂಪನ ಉಂಟು ಮಾಡುತ್ತೆ….. ನೈಸ್ ಒನ್….

 4. ಟೀನಾ,

  ಖಂಡಿತ ಒದ್ದೆ ಸೌದೆ….. ತುಂತುರು ಮಳೆಗೆ ತೋಯ್ದ ನೆಲ… ಅವುಗಳ ಪರಿಮಳವೇ ಒಂದ್ರೀತಿ….. ಚೆನ್ನಾಗಿದೆ ಕವನ

 5. ನಿಮ್ಮ ಮಳೀ ಮಾತ್ ಓದಿ ನನಗ ನಮ್ಮೂರ ಬ್ಯಾಸಗಿ ನೆನಪಾಯ್ತು. ಮಳಿಗಿ ನಮಗ ಆಗಿಬರುದಿಲ್ಲ. ಶ್ರಾವಣದಾಗ ಎರಡ ದಿನಾ ಜಿಟಿ ಜಿಟಿ ಬಂದ್ರ ಸಾಕು “ಈ ಸೂ….. ಮಗಂದು(ತಪ್ಪ ತಿಳಿಬ್ಯಾಡ್ರಿ. ನಾವು ಹೊಗಳ್ಳಿಕ್ಕಿ ಮತ್ತ ಬೈಲಿಕ್ಕಿ ಹಿಂಗೆ ಅಂತಿವಿ) ಯಾವಾಗ ನಿಂದರ್ತದ” ಅಂತ ಅನಸ್ತಿತ್ತು.ನಮಗ ಮಳಿ ಧೊ ಧೊ ಅಂತ ಎರಡ್ ತಾಸ್ ಬಂದ ನಿಂದರ್ಬೆಕು.
  ಆದ್ರ ಬ್ಯಾಸಗಿ ಮಾತ್ರ ಮಸ್ತ್ ಇರ್ತಿದ್ದು. 45 48 ಬಿಸಿಲಾಗ ಮನಿ ಗ್ವಾಡಿ ಹೊರಗಿನ ರಸ್ತಿ ಎಲ್ಲಾ ಕೆಂಡದಂಗ ಸುಡತಿರ್ಬೆಕಾದ್ರ ಮೈಮ್ಯಾಲ ಖಬರ ಇರಲಾರದಂಗ ಒಡ್ಯಾಡತಿಡ್ವಿ.
  ಈಗ ಇಲ್ಲಿ 20 ರ ಬಿಸಲ ಬಂತಂದ್ರು ಎ ಮಸ್ತ್ ಅದ ಅಲ್ಲಾ ವಾತವರಣ? ಅನ್ಕೊತಾ ಜಿಂದಗ್ಯಾಗ ಕಾಣಲಾರ್ದ್ ಮಂಜ ಬರಫ ಎಲ್ಲಾ ನೊಡ್ಕೊತ್ತ ಬದಕ ಬೆಕಾಗ್ಯದ…
  ನಿಮ್ಮ ಈ ಪ(ಗ)ದ್ಯ ಓದಿ ಎಲ್ಲಾ ನೆನಪಿಗಿ ಬಂತು….

 6. ಟೀನಾ ಅವರೆ,
  ಹಳೇದನ್ನ ಮರೆಯೋಣವೆಂದ್ರೆ…. ಇಂಥ ಕವನಗಳನ್ನೆಲ್ಲಾ ಬರ್ದು ಇಪ್ಪತ್ತು ವರ್ಷಗಳ ಹಿಂದಕ್ಕೆ ಓಡಿಸಿಬಿಟ್ರಿ ನಮ್ಮನ್ನು….

  “ಒದ್ದೆ ಸೌದೆಯ ವಾಸನೆ
  ಸೇದುತ್ತ
  ಇದ್ದರೆ
  ಏನೇನೊ ಜ್ಞಾಪಕ”
  ನಮಗೂ ಬಂತು…

 7. ಮಾನ್ಸೂನು ಮಾರುತದ
  ಮಳೆಯಲ್ಲಿ ತೋಯ್ಡು ಒದ್ದೆಯಾಗಿ
  ಬಿಸಿ ಬಿಸಿ ನೀರಲ್ಲಿ ಮಿಂದು
  ಒಲೆದಂಡೆಯಲಿ ಕುಳಿತು ಚಳಿ ಕಾಯಿಸುತ್ತಾ
  ಸುಟ್ಟು ತಿಂದ ಹಪ್ಪಳದಷ್ಟೇ ಗರಿಗರಿಯಾದ ಕವಿತೆ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s