ಹೀಗಿದ್ದಿದ್ರೆ ಹೇಗಿರೋದು?

ನಮ್ಮದು ’ಎಸ್ಸೆಮ್ಮೆಸ್ ಜನರೇಶನ್ನು’ ಅಂತ ಮೊಬೈಲ್ ಫೋನ್ ಅಲರ್ಜಿ ಇರುವ ನಮ್ಮ ಹಿರಿಯರು ಸಾರಿಬಿಟ್ಟಿದ್ದಾರೆ. ನಾವೂ ಅದನ್ನ ಶಿರಬಾಗಿಸಿ ಒಪ್ಪಿಕೊಳ್ಳುತ್ತೇವೆ. ಆದರೆ ಅಕಸ್ಮಾತ್ತು ಪುರಾತನಕಾಲದಲ್ಲೆ ಈ ಮೊಬೈಲ್ ಟೆಕ್ನಾಲಜಿ ಇದ್ದಿದ್ರೆ ಹ್ಯಾಗಿರೋದು, ದೂಸ್ರಾ ಮಾತು ಯಾಕೆ, ಮಹಾಭಾರತ ಯುದ್ಧದ್ ಟೈಮ್ನಲ್ಲಿ ಸೆಲ್ಫೋನು ಇದ್ದಿದ್ರೆ ಎಸ್ಸೆಮ್ಮೆಸ್ಸುಗಳು ಹ್ಯಾಗಿರ್ತಿದ್ವೂ ಅಂತ ಚೇತನ್ ಊಹಿಸಿಕೊಂಡು ’ಸುಧಾ’ ಗೊಂದು ಡಯಲಾಗ್ ಎಸ್ಸೆಮ್ಮೆಸ್ ಮಾಡಿದ್ರಂತೆ. ಫನ್ನೀಮ್ಯಾನ್ ಗುಣ ಇದನ್ನ ಸ್ಕ್ಯಾನ್ ಮಾಡಿ ಮೆಯಿಲ್ ಮಾಡಿದ. ನಕ್ಕೂ ನಕ್ಕೂ ಸಾಕಾಯಿತು. ನಾನೊಬ್ಳೇ ನಗೋದ್ಯಾಕೆ, ನೀವೂ ನನ್ ನಗೂನ ಶೇರ್ ಮಾಡಿರಲ್ಲ!! ನೋ ಸೀರಿಯಸ್ ಥಾಟ್ಸ್ ಪ್ಲೀಸ್!! ಥ್ಯಾಂಕ್ಸ್ ಸುಧಾ!!

ಸಂದರ್ಭ: ದ್ರೋಣರ ನೇತೃತ್ವದಲ್ಲಿ ಕೌರವರ ಪಡೆ ಚಕ್ರವ್ಯೂಹ ರಚಿಸಿ ಪಾಂಡವ ಸೇನೆಯನ್ನು ಕಾಯುತ್ತಿದೆ. ಚಕ್ರವ್ಯೂಹ ಭೇದಿಸಲು ಯಾರು ಬರುತ್ತಾರೆಂಬ ಕುತೂಹಲದಲ್ಲಿದ್ದಾರೆ. ಇಲ್ಲಿ ವಿಶೇಷ ಏನೆಂದರೆ ಅತಿರಥ ಮಹಾರಥರೆಲ್ಲರ ಕೈಯಲ್ಲೂ ಮೊಬೈಲ್ ಇದೆ. (ಪಾಂಡವರಲ್ಲಿಯೂ ಸಹ) ಎಲ್ಲರೂ ಒಬ್ಬರಿಗೊಬ್ಬರು ಎಸ್ಸೆಮ್ಮೆಸ್ ಕಳುಹಿಸುತ್ತಿದ್ದಾರೆ.

ದುರ್ಯೋಧನ: ಸಂಶಪ್ತಕ – where are you?

ಸಂಶಪ್ತಕ: v r miles away from ಕುರುಕ್ಷೇತ್ರ. ಕೃಷ್ಣಾರ್ಜುನರು ನಮ್ಮೊಂದಿಗೆ ಯುದ್ಧ ಮಾಡುತ್ತಿದ್ದಾರೆ.

ದು: Good. ಸಂಜೆಯವರೆಗೆ ಅವರಿಲ್ಲಿಗೆ ಬರಕೂಡದು. ಇವತ್ತಿನ ಚಕ್ರವ್ಯೂಹದಲ್ಲಿ ಪಾಂಡವರಲ್ಲೊಬ್ಬನ ಬಲಿ ಖಚಿತ.

ಸಂ: Yes sir.

ದು: But ಕೃಷ್ಣನ ಮೇಲೊಂದು ಕಣ್ಣಿಡು. He can do anything. ಆತ ನಮ್ಮ ಶಕುನಿಮಾಮನ ತರಹದ ಆಸಾಮಿ.

ಸಂ: D’nt worry. V can handle him. But ನಿಮ್ಮ ಕೆಲಸ ಆದ ತಕ್ಷಣ ನನಗೊಂದು missed call ಕೊಡಿ.

ದು: Ok. ಅಲ್ಲಿ ಮುಂದಕ್ಕೆ ಹೋದಹಾಗೆ network ಸಿಗಬಹುದಾ?

ಸಂ: ya.

************************

ದುರ್ಯೋಧನ to ಜಯದ್ರಥ

ದು:R u there? ಪಾಂಡವ ಸೇನೆ ಬಂತಾ?

ಜ: ya

ದು: ಭೀಮನನ್ನ ಒಳಬಿಡಬೇಡ. ಹೇಳಿದ್ದು ನೆನಪಿದೆ ತಾನೆ?

ಜ: I have done my job. But ಅರ್ಜುನನ ಮಗ ಒಳನುಗ್ಗಿದ್ದಾನೆ.

ದು: Oh… poor boy!

ಸ್ವಲ್ಪ ಸಮಯದ ನಂತರ

ದು-ದ್ರೋಣ: Sir, this boy getting tough what to do?

ದ್ರೋಣ: ಏನಾದರೂ ಮಾಡಬೇಕು. Other wise very difficult. ನಾಲ್ಕೂ ಕಡೆಯಿಂದ ಸುತ್ತುವರೆಯಿರಿ. ಕರ್ಣ ಹಿಂದಿನಿಂದ attack ಮಾಡಲಿ. Forward this message to karna, Dushyasana and Shakuni.

***************************

ಅರ್ಜುನ to ಭೀಮ: Where are you? ಕುರುಕ್ಷೇತ್ರದಲ್ಲಿ ಏನಾಗುತ್ತಿದೆ? ಚಕ್ರವ್ಯೂಹದಲ್ಲಿ ಯಾರಿದ್ದಾರೆ?

ಭೀಮ: Ur son ಅಭಿಮನ್ಯು.

ಅ: What!! ನೀವ್ಯಾರೂ ಅವನ ಜತೆ ಹೋಗಲಿಲ್ಲವೆ?

ಭೀ: Sorry Arjuna. ಜಯದ್ರಥ ನಮ್ಮನ್ನು entranceನಲ್ಲಿ ತಡೆದು ನಿಲ್ಲಿಸಿದ.

ಅ: Oh shit!! ನನಗ್ಯಾಕೆ call ಮಾಡಲಿಲ್ಲ?

ಭೀ: ಪ್ರಯತ್ನಿಸಿದೆ. ಆದರೆ Not reachable ಬರುತ್ತಿತ್ತು.

ಅ: Oh god! Only ಅಭಿಮನ್ಯು. ಆ ದುಷ್ಟರ ನಡುವೆ!!

*********************

ಅರ್ಜುನ to ಅಭಿಮನ್ಯು: R u ok my son?

ಅಭಿಮನ್ಯು: No dad. ನನಗೆ ಮೋಸ ಮಾಡಿದರು.

ಅರ್ಜುನ: What hapnd?

ಅಭಿಮನ್ಯು: ಇದು ಧರ್ಮಯುದ್ಧ ಅಲ್ಲ dad. ನನಗೆ ಮೋಸದಿಂದ ಸ್ಕೆಚ್ ಹಾಕಿದ್ದಾರೆ.

ಅರ್ಜುನ: ಏನಾಯ್ತು ಮಗು? Where r u now?

ಅಭಿಮನ್ಯು: ಸ್ಪಾಟ್ ನಲ್ಲೆ ಇದ್ದೀನಿ dad. Goodbye dad. Goodbye to this cruel world.

– ಚೇತನ್ ಶೆಟ್ಟಿ ಮೂಡಬಿದಿರೆ (ಸುಧಾ ೫ ಏಪ್ರಿಲ್ ೨೦೦೭, ಪುಟ ೫೯) ಚಿತ್ರ: ಪ್ರಕಟವಾದ ಲೇಖನದೊಡನೆ ಇದ್ದದ್ದು.  

 

Advertisements

8 thoughts on “ಹೀಗಿದ್ದಿದ್ರೆ ಹೇಗಿರೋದು?

 1. “Goodbye dad. Goodbye to this cruel world….”

  ಏನ್ರೀ ಟೀನಾ, ಎಷ್ಟು ಒಳ್ಳೆ ಮೂಡಲ್ಲಿದ್ದೆ. ಇಂಥಾ ದುರಂತ ಅಂತ್ಯದ ಕಥೆನ ಇಲ್ಲಿ ಹಾಕ್ಬಿಟ್ಟು ನನ್ನ ಅಳಿಸ್ಬಿಟ್ರಲ್ಲಾ.. ಅದೇನೋ ಅಂತಾರಲ್ಲ.. ಇಲಿಗೆ ಪ್ರಾಣಸಂಕಟ, ಬೆಕ್ಕಿಗೆ ಚೆಲ್ಲಾಟ ಅಂತ…..(ಭಾಗವತರು ಬಿಕ್ಕಿ ಬಿಕ್ಕಿ ಅಳುವರು)

 2. ಮಹಾಭಾರತದಲ್ಲಿ ಎಸ್ಸೆಮ್ಮೆಸ್ ಜೋಕ್ ಓದಿ ತುಂಬಾ ಖುಷಿಯಾಯಿತು. ನಿಜಕ್ಕೂ ಮನುಷ್ಯ ಸೃಜನಶೀಲತೆಯಿಂದಿರಬೇಕೆಂದರೆ ಇಂತಹ ಚಟುವಟಿಕೆಗಳಲ್ಲಿ ತೊಡಗಬೇಕು,

 3. ನಮಸ್ತೇ,

  ಬರುವ ಸೋಮವಾರ ಹದಿನೆಂಟನೆ ತಾರೀಖು ಸಂಜೆ ಆರು ಗಂಟೆಗೆ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ನಲ್ಲಿ ನನ್ನ ಪುಸ್ತಕ ‘ಭಾಮಿನಿ ಷಟ್ಪದಿ’ ಬಿಡುಗಡೆಯಾಗಲಿದೆ.

  ಅವತ್ತು ಪ್ರೊ. ವಿವೇಕ್ ರೈ, ಜಿ.ಪಿ.ಬಸವ ರಾಜು ಅವರು ವೇದಿಕೆಯಲ್ಲಿರುತ್ತಾರೆ. ಗೆಳತಿ, ಬರಹಗಾರ್ತಿ ಟೀನಾ ಪುಸ್ತಕದ ಬಗ್ಗೆ ಮಾತನಾಡುತ್ತಾಳೆ. ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿ ಅವತ್ತು ನೀವು ಇರುತ್ತೀರಿ.

  ನಿಮ್ಮೆಲ್ಲರ ಸ್ನೇಹ- ಪ್ರೀತಿಗಳ ಸವಿಯನ್ನು ಈ ಒಂದು ವರ್ಷದಿಂದ ಉಣ್ಣುತ್ತಲೇ ಬಂದಿದ್ದೇನೆ. ನಿಮಗೆಲ್ಲರಿಗೂ ನಾನು ಋಣಿ.
  ನೀವು ‘ಸೋಮವಾರ’ ಇತ್ಯಾದಿ ಯಾವ ನೆವವನ್ನೂ ಹೇಳದೆ ಅಂದಿನ ಕಾರ್ಯಕ್ರಮಕ್ಕೆ ಬಂದರೆ ನನಗೆ ಬಹಳ ಬಹಳ ಖುಷಿಯಾಗುತ್ತದೆ. ನೀವೆಲ್ಲರೂ ಖಂಡಿತ ಬರಲೇಬೇಕು.
  ಇದು ನನ್ನ ಪ್ರೀತಿಪೂರ್ವಕ ಒತ್ತಾಯ.

  ಕಾದಿರುತ್ತೇನೆ.

  ವಂದೇ,
  ಚೇತನಾ ತೀರ್ಥಹಳ್ಳಿ

 4. ನಾನು ನಕ್ಕು ನಕ್ಕು ಸುಸ್ತಾಗಿಬಿಟ್ಟೆ.. ತುಂಬ ಚನ್ನಾಗಿದೆ… ಹೌದು ಅವರೆಲ್ಲರ ಮೊಬೈಲ್ ನಂಬರ್ ಯಾವ ಸೀರೀಸ್ ನಲ್ಲಿ ಇರ್ತಿತ್ತೇನೋ ಅಂತ ಯೋಚನೆ ಮಾಡುತ್ತಾ ಇದೀನಿ! ಪಾಂಡವರು 501,502, 503, 504 505, ಶಕುನಿ -0420. !!!!!!!!!!

  ಹೌದು ಮೊಬೈಲ್ ಕಂಪೆನಿಗಳ ಹೆಸರು ಎನಿಡ್ತಾ ಇದ್ರೋ ಏನೋ, ಕಾಲ್ ಚಾರ್ಜಸ್ ಹೇಗೆ ಇರ್ತಿತ್ತೋ ಏನೋ, ಇನ್ಕಮಿಂಗು ಫ್ರೀ ಇರ್ತಿತ್ತೋ ಇಲ್ವೋ, ರೀಚಾರ್ಜ್ ಮಾಡ್ಸೋಕೆ ಎಲ್ಲಿಗೆ ಹೋಗ್ತಿದ್ರೋ ಏನೋ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s