ಪಡಖಾನೆಯ ಹುಡುಗಿ – ಬೆಳಕು ಮತ್ತು ಪಾಪಗಳು

woman

ನೆನ್ನೆ ನನ್ನ ಹಳೆಯ ಹೆಸರ
ಕರೆದ ನಿನ್ನ ದನಿಯಲಿ
ಅದೇ ಹೊಳಪು ಸುರಿಯಿತು
ಕಿಟಕಿಯಾಚೆ ಮಕ್ಕಳು ಸಿಕ್ಕ
ಕಾಗೆ ಬಂಗಾರ ನುರಿನುರಿದು
ಮೈತುಂಬ ಸವರುತ್ತ ನಕ್ಕರು
ನಾನೂ ಈ ಖಾಲಿ ಬಟ್ಟಲಿಗೆ
ನಿನ್ನ ಬೆಳಕ ಮೊಗೆದುಕೊಳ್ಳಲೆ
ಯೋಚನೆ ಮಾಡಿದೆ.
 ನನ್ನ ಕಿಟಕಿತುಂಬ
ಸಾಲು ಪರದೆ
ನಿನ್ನ ಹಳೆಯ ಬೆಳಕ
ಕಳೆಯಲು ಧೈರ್ಯ ಸಾಲದೆ.

***

ನೀನು ಕಲ್ಲಾದ ದಿನದಿಂದ
ಹುಡುಕೀಯ ಒಮ್ಮೆಯಾದರು
ನನ್ನ ತಪ್ಪುಗಳನೊಂದನಾದರು
ಬೇಸರಿಸಿ ಹಳಿದೀಯ ಒಮ್ಮೆ
ಹುಬ್ಬುಗಂಟಿಕ್ಕಿ ಎಂದೆ
ಬೇಕಾಗಿ ಸಾವಿರ ಪಾಪಗಳ ಮಾಡಿ
ವಿರಾಮದಲಿ ನಿನ್ನ ದಿಟ್ಟಿಸುತ
ಒಳಗೊಳಗೆ ಉಸಿರುಗಟ್ಟಿ ಹೊರಗೆ
ಹುಸಿನಗುತ ಬಣ್ಣಿಸಿ ಹೇಳುವೆ
ನಿನ್ನೊಳಗೊಂದು ಸಣ್ಣ ನಡುಕ
ಕಂಡ  ಘಳಿಗೆ
ನನಗೆ ನನ್ನ ಬೆಳಕು.

***

ನನಗೇಕೆ ನಿನ್ನ ಕೆಣಕುವ ತೆವಲು?
ಕೇಳುವರು, ಹಂಗಿಸುವರು ಜನ
ಅವರಿಗೇನು ತಿಳಿದೀತು
ಪ್ರೇಮದ್ವೇಷಗಳ ಲೆಕ್ಕಾಚಾರ?
ನನ್ನ ಅವಸಾನದಕೆ ಕಾಯುವ ನಿನ್ನ ಉತ್ತುಂಗ
ನಿನ್ನ ನೋವಲೆ ಅರಳುವ ನನ್ನ ಆತ್ಮ 
ನಿನಗಾಗಿ ನಾ ಮಾಡುವ ಪಾಪಗಳು ಹಾಗೂ
ನನಗಾಗೆ ನೀ ಸೂಸುವ ಬೆಳಕು
ಇದಕೆಲ್ಲ ಅವರು ’ಮರುಳುತನ’ವೆನ್ನುವರು
ನಮ್ಮ ಪಾಪಗಳು ಮತ್ತು ಬೆಳಕು
ಕೂಡಲು ಕಾಯುತ್ತ ಇರುವವು.

ಚಿತ್ರಕೃಪೆ: www.toruiwaya.com

6 thoughts on “ಪಡಖಾನೆಯ ಹುಡುಗಿ – ಬೆಳಕು ಮತ್ತು ಪಾಪಗಳು

  1. ಬಹಳ ದಿನಗಳ ನಂತರ ನಿಮ್ಮ ಪಡಖಾನೆಯ ಹುಡುಗಯನ್ನು ಮತ್ತೊಮ್ಮೆ ಹಾಡಲು ಹಚ್ಚಿದ್ದಕ್ಕೆ ಧನ್ಯವಾದಗಳು!!🙂

  2. ಟೀನಾ,
    ಒಂದು ಸುಂದರವಾದ ಕವನವನ್ನು ಓದಲು, ಮನಸ್ಸು ತುಂಬಿ ಅನುಭವಿಸಲು, ಕೊಟ್ಟಿದ್ದಕ್ಕೆ ಧನ್ಯವಾದಗಳು

  3. ’ಹುಡುಗಿ’ಯ ತೆವಲು ಆಪ್ತವೆನ್ನಿಸುತ್ತೆ. I can relate to it at certain levels.

  4. ತುಂಬಾ ಆಪ್ತವಾಗಿದೆ ಟೀನ. ನಿಮ್ಮ ಕವನಗಳು ಯಾವಾಗಲೂ ನನಗಿಷ್ಟ. ಹೀಗೇ ಬರೀತಾ, ಹಂಚಿಕೊಳ್ತಾ ಇರಿ.
    -ಮೀರ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s