‘ಫ್ರಾಂಕೆನ್ ಸ್ಟೈನನ ತಾಯಿ’

shelley11

ಆಕೆಯ ಹುಟ್ಟೇ ವಿಶೇಷವಾದ್ದಾಗಿತ್ತು. ಆಕೆ ಜನಿಸಿದ್ದು ಫ್ರೆಂಚ್ ಕ್ರಾಂತಿ ನಡೆಯುತ್ತಿದ್ದಾಗ. ಗುಪ್ತ ಪ್ರಣಯವೊಂದರ ಫಲ ಅವಳು. ಆಕೆ ಜನಿಸಿದ ಘಳಿಗೆ ಗಾಥಿಕ್ ಕಥೆಯೊಂದರ ಭಾಗದಂತೆ ಇತ್ತು – ಎಲ್ಲೆಲ್ಲು ಬಿರುಗಾಳಿ, ಶಕುನಗಳು, ಬೆಚ್ಚಿಬೀಳಿಸುವ ಘಟನೆಗಳು, ಹಾಗೂ ಆಕೆಯ ಬರವನ್ನು ಸಹಸ್ರಾರು ಜನರಿಗೆ ತನ್ನ ನೆನಪೋಲೆಗಳ ಮುಖಾಂತರ ಸಾರಿದ ಆಕೆಯ ತಂದೆ. ಆಕೆ ತನ್ನ ಹೆಸರು ಬರೆಯಲು ಕಲಿತಿದ್ದು ತನ್ನದೇ ಹೆಸರುಳ್ಳ ತಾಯಿಯ ಸಮಾಧಿಯ ಮೇಲೆ ಬರೆದಿದ್ದ ಅಕ್ಷರಗಳಿಂದ! ಬಾಲ್ಯದಲ್ಲು ಆಕೆಯನ್ನು ಒಂದು ವಿಶೇಷ ವ್ಯಕ್ತಿಯಂತೆ ನಡೆಸಿಕೊಳ್ಳಲಾಯಿತು. ಆಕೆ ದಿನಬೆಳಗಾಗೆದ್ದು ನೋಡುತ್ತಿದ್ದದ್ದೇ ಕವಿಗಳು ಹಾಗೂ ಲೇಖಕರನ್ನು. ಕೊಲ್ರಿಜ್, ಚಾರ್ಲ್ಸ್ ಲ್ಯಾಂಬ್ ಮೊದಲಾದವರು ಆಗಾಗ್ಗೆ ಆಕೆಯ ಮನೆಗೆ ಭೇಟಿ ನೀಡುತ್ತಿದ್ದರು. ಆಕೆಯ ಬಗ್ಗೆ ಆಗಲೆ ಬಹಳಷ್ಟು ಚರ್ಚೆಗಳು, ನಿರೀಕ್ಷೆಗಳು ಹುಟ್ಟಿಕೊಳ್ಳಲಾರಂಭಿಸಿದವು. ಆದರೆ ಆಕೆ ಬದುಕಿದ್ದು ಈ ಎಲ್ಲ ನಿರೀಕ್ಷೆಗಳಿಗೆ ವಿರುದ್ಧವಾಗಿ. ಆಕೆ ಮೇರಿ ಶೆಲ್ಲಿ.
ರೊಮ್ಯಾಂಟಿಕ್ ಪಂಥದ ಪ್ರಮುಖ ಬರಹಗಾರರಾದ ಶೆಲ್ಲಿ, ಬೈರನ್ ಮತ್ತು ಕೀಟ್ಸರ ಜತೆಗೆ ಮೇರಿ ಶೆಲ್ಲಿಯ ಹೆಸರು ಕೇಳಬರುತ್ತದೆ. ಆದರೆ ರೊಮ್ಯಾಂಟಿಕ್ ಚಳುವಳಿಯಿಂದ ವಿಕ್ಟೋರಿಯನ್ ಚಳುವಳಿಯವರೆಗೂ ಬದುಕಿದ ಅಪರೂಪದ ಬರಹಗಾರ್ತಿ ಮೇರಿ ಶೆಲ್ಲಿ. ತಾಯಿ ಪ್ರಖ್ಯಾತ ಮಹಿಳಾವಾದಿ ಮೇರಿ ವೂಲ್ಸ್ಟೊನ್ ಕ್ರಾಫ್ಟ್. ತಂದೆ ವಿಲಿಯಂ ಗಾಡ್ವಿನ್, ಖ್ಯಾತ ಬರಹಗಾರ. ಜನನ ಆಗಸ್ಟ್ 30, 1797 ರಂದು.
ಕೇವಲ ಹದಿನಾರನೆ ವಯಸ್ಸಿನಲ್ಲಿ ಆಕೆ ತನ್ನ ತಂದೆಯ ಶಿಷ್ಯ ಕವಿ ಶೆಲ್ಲಿಯನ್ನು ಪ್ರೇಮಿಸಿ ಅತನೊಡನೆ ಯುರೋಪಿಗೆ ಪಲಾಯನ ಮಾಡಿದಳು. ಬ್ಯಾರೊನೆಟ್ ಒಬ್ಬಾಕೆಯನ್ನು ಆಗಲೇ ಮದುವೆಯಾಗಿದ್ದ ಶೆಲ್ಲಿ ಅಸಂತುಷ್ಟನಾಗಿದ್ದ. ಇಬ್ಬರೂ ಹಲವಾರು ಬಾರಿ ಯುರೋಪಿಗೆ ಹೋಗಿಬಂದರು. ಎಲ್ಲೆಡೆ ಇವರ ಸಂಬಂಧಕ್ಕೆ ಅಪಾರ ವಿರೋಧ ವ್ಯಕ್ತವಾಯಿತು. ಮೇರಿಯ ತಂದೆ ಗಾಡ್ವಿನ್ ಆಕೆಯನ್ನು ವಾಪಾಸು ಮನೆಗೆ ಸೇರಿಸಿಕೊಳ್ಳಲಿಲ್ಲ. ಮೇರಿ ತನ್ನ ಪ್ರಿಯಕರನನ್ನು ಬಿಡಲು ಸಿದ್ಧಳಿರಲಿಲ್ಲ. 1816ರಲ್ಲಿ ಇಬ್ಬರೂ ಸ್ವಿಜರ್ಲ್ಯಾಂಡಿನ ಲೇಕ್ ಜಿನೀವಾಗೆ ಕವಿ ಬೈರನ್ ಮತ್ತು ಆತನ ಸ್ನೇಹಿತ ಪಾಲಿಡೊರಿಯ ಸಂಗಡ ಪ್ರಯಾಣ ಬೆಳೆಸಿದರು. ಅಲ್ಲಿ ಬೈರನ್ ತಾವೆಲ್ಲರೂ ಒಂದೊಂದು ಭೂತಪಿಶಾಚಿಗಳ ಕಥೆಯನ್ನು ಬರೆಯಬೇಕೆಂದು ಸಲಹೆ ನೀಡಿದ. ನಾಲ್ವರೂ ಕೂತು ಕಥೆ ಬರೆದರು. ಆ ನಾಲ್ಕೂ ಕಥೆಗಳಲ್ಲಿ ಪ್ರಕಟವಾದ ಕಥೆ ಮೇರಿ ಶೆಲ್ಲಿಯದು. ಅದರ ಶೀರ್ಷಿಕೆ ‘ಫ್ರಾಂಕೆನ್ ಸ್ಟೈನ್’. ಮೇರಿಗೆ ಆಗ ಕೇವಲ ಹತ್ತೊಂಬತ್ತು ವರುಷ.
ಅದೇ ವರುಷ ಶೆಲ್ಲಿಯ ಹೆಂಡತಿ ಹ್ಯಾರಿಯೆಟ್ ಆತ್ಮಹತ್ಯೆ ಮಾಡಿಕೊಂಡಳು. ಶೆಲ್ಲಿ ಮತ್ತು ಮೇರಿ ಮದುವೆ ಮಾಡಿಕೊಂಡರು. ಈ ಮದುವೆಯ ಇಂಗ್ಲೆಂಡಿನಲ್ಲಿ ಬಹಳ ಆಕ್ರೋಶ, ವಿರೋಧಗಳನ್ನು ದಂಪತಿಗಳು ಎದುರಿಸಬೇಕಾಯಿತು. ಹಿಂಸೆ ತಡೆಯಲಾರದೆ ಇಬ್ಬರೂ ಇಟಲಿಗೆ ವಲಸೆ ಹೋದರು. ಆದರೆ ಅಲ್ಲಿ ತನ್ನ ಎರಡೂ ಮಕ್ಕಳ ಸಾವಿನಿಂದ ಮೇರಿ ಚೇತರಿಸಿಕೊಳ್ಳಲಾಗದಷ್ಟು ನೋವು ಅನುಭವಿಸಿದಳು. ಆದರೆ ಶೆಲ್ಲಿ ಆಕೆಯನ್ನು ಹೆಚ್ಚು ಬರೆಯಲು ಹಾಗೂ ಸ್ವತಂತ್ರವಾಗಿ ಬದುಕಲು ಪ್ರೋತ್ಸಾಹಿಸಿದ. ಒಂದು ಗಂಡುಮಗುವೂ ಆಯಿತು. ಇನ್ನೇನು ಎಲ್ಲ ಸರಿಹೋಯಿತು ಎನ್ನುವಾಗ ಇಪ್ಪತ್ನಾಲ್ಕರ ಹರೆಯದ ಮೇರಿಯನ್ನು ಶೆಲ್ಲಿಯ ಆತ್ಮಹತ್ಯೆ ಧೃತಿಗೆಡಿಸಿತು. ಆಕೆಯ ಬಳಿ ಕವಡೆಕಾಸೂ ಇರಲಿಲ್ಲ. ತಂದೆಯ ಬಳಿಗೆ ವಾಪಾಸು ಬಂದ ಆಕೆಯನ್ನು ಎಲ್ಲರು ತಿರಸ್ಕರಿಸಿದರು. ಬಡತನದ ಬಾಳು. ಆಕೆಗೆ ಬೇಸರವಿದ್ದರು ತಂದೆ ಹಾಗೂ ಮಗನನ್ನು ನೋಡಿಕೊಳ್ಳಲು ವೃತ್ತಿನಿರತ ಲೇಖಕಿಯಾಗಿ ಕೆಲಸ ಮಾಡಿದಳು. ಶೆಲ್ಲಿಯ ಮರಣಾನಂತರದ ಇಪ್ಪತ್ತೊಂಬತ್ತು ವರ್ಷಗಳನ್ನು ಆಕೆ ಕಳೆದಿದ್ದು ಹೀಗೆ. ಮೆಲ್ಲನೆ ಆಕೆಯ ಸುತ್ತ ಕವಿಗಳು, ಲೇಖಕರು ಹಾಗೂ ರಾಜಕಾರಣಿಗಳ ಒಂದು ಗುಂಪು ಹುಟ್ಟಿಕೊಂಡಿತು. ತನ್ನ ಮಧ್ಯವಯಸ್ಸಿನಲ್ಲಿ ಮೇರಿ ತನ್ನ ತಾಯಿ ಪ್ರತಿಪಾದಿಸಿದ ಸಾಂಪ್ರದಾಯಿಕ ಮಹಿಳಾವಾದವನ್ನು ಅಪ್ಪಿಕೊಂಡಳು. ಆಕೆಯ ಈ ನಿರ್ಧಾರ ಆಗಿನ ಸಾಮಾಜಿಕ ಪರಿಸ್ಥಿತಿಯ ಆಳವಾದ ಅಧ್ಯಯನದಿಂದ ಮೂಡಿಬಂದಿದ್ದಾಗಿತ್ತು.
1851ರಲ್ಲಿ ಮೇರಿ ಮೆದುಳಿನ ರಕ್ತಸ್ರಾವದಿಂದ ಮರಣ ಹೊಂದಿದಳು. ಇಂದಿಗೂ ‘ಫ್ರಾಂಕೆನ್ ಸ್ಟೈನ್’ ಅನ್ನು ವಿಶ್ವಸಾಹಿತ್ಯ ಪರಂಪರೆಯ ಅತ್ಯುತ್ತಮ ಗಾಥಿಕ್ ಕಾದಂಬರಿಯೆಂದು ಪರಿಗಣಿಸಲಾಗುತ್ತದೆ. ಆಕೆಯ ‘ಫ್ರಾಂಕೆನ್ ಸ್ಟೈನ್’ನ ನಾಯಕ ವಿಕ್ಟರ್ ಫ್ರಾಂಕೆನ್ ಸ್ಟೈನ್ ಓರ್ವ ವಿಜ್ನಾನಿ. ಜೀವಸೃಷ್ಟಿಯ ತಂತ್ರಜ್ನ್ಯಾನವನ್ನು ಸಾಧಿಸಿಕೊಂಡವ. ತಾನು ದೇವರಿಗೆ ಸರಿಸಮಾನನೆಂಬ ಮತ್ತಿನಲ್ಲಿ ಆತ ಮನುಷ್ಯನಂತೆ ಇರುವ ಆದರೆ ಅಪಾರ ಬಲಶಾಲಿಯಾದ ‘ಜೀವಿ’ಯೊಂದನ್ನು ಸೃಷ್ಟಿಸುತ್ತಾನೆ. ನಂತರ ಆ ಜೀವಿ ಮಾಡುವ ಅನಾಹುತಗಳನ್ನು ಕಂಡು ಹೌಹಾರುತ್ತಾನೆ. ತನ್ನ ‘ಫ್ರಾಂಕೆನ್ ಸ್ಟೈನ್’ನಲ್ಲಿ ತಂತ್ರಜ್ನ್ಯಾನದ ಅನಾಹುತಗಳ ಬಗ್ಗೆ ಸಾರಿದ್ದ ಮೇರಿ ಮರಣ ಹೊಂದಿದ ವರುಷವೇ ಇಂಗ್ಲೆಂಡಿನಲ್ಲಿ ತಂತ್ರಜ್ನಾನದ ಬೆಳವಣಿಗೆಯನ್ನು ಬಿಂಬಿಸಲೆಂದು ಒಂದು ಬೃಹತ್ ಪ್ರದರ್ಶನ ಚಾಲನೆಗೊಂಡಿತು. ಇದು ಕವಿಸಮಯವೇ, ವಿಪರ್ಯಾಸವೆ?

pic coutesy: www.education.mcgill.ca

Advertisements

9 thoughts on “‘ಫ್ರಾಂಕೆನ್ ಸ್ಟೈನನ ತಾಯಿ’

  1. ನಮಸ್ತೆ ಟೀನಾ ಅವರಿಗೆ,

    ಒಬ್ಬ ವಿಶಿಷ್ಟ ವ್ಯಕ್ತಿಯ ಪರಿಚಯ ಮಾಡಿಕೊಟ್ಟೀದ್ದೀರ 🙂

    ಆದರೆ, ಒಂದು ಗಮನಿಸಿದೆ, ’ವಿಜ್ಞಾನ’ ಬರಬೇಕಾದ ಕಡೆ ’ವಿಜ್ನಾನ’ ಬಂದಿದೆ. ಹಾಗೆ, ’ತಂತ್ರಜ್ಞಾನ’ ಕೂಡ. ಇದು ನನಗೂ ಬಹಳ ದಿನ ಗೊತ್ತಿರಲಿಲ್ಲ, ಹಾಗಾಗಿ ನಿಮಗೂ ಉಪಯೋಗವಾಗಬಹುದೆಂದು ಹೇಳುತ್ತಿದ್ದೇನೆ.

    ’ಜ್ಞ’ ಅಕ್ಷರ ಪಡೆಯಲು j type ಮಾಡಿ ‘ಒಂದು’ ಸಂಖ್ಯೆಯ ಪಕ್ಕದಲ್ಲಿದೆಯಲ್ಲಾ ( ಅದರ ಹೆಸರು ಮರೆತಿದೆ) ಅದನ್ನು shift ಒತ್ತಿ, ಮತ್ತೆ j type ಮಾಡಬೇಕು, ನೀವು ಒತ್ತುವ ಅಕ್ಷರಗಳ ಆರ್ಡರ್ ಹೀಗಿರುತ್ತದೆ – j ~ j

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s