ಒಂದು ದನಿ.

apparitionii1

ನನ್ನ ಗೆಳತಿಯೊಬ್ಬಳು ಸುಮ್ಮನೆ ಆತ್ಮಹತ್ಯೆ ಮಾಡಿಕೊಂಡುಬಿಟ್ಟಳು. ಅದಾದ ಎಂಟು ವಾರಕ್ಕೆ ಸರಿಯಾಗಿ ಇದು ಯಾರಿಂದಲೊ ನನಗೆ ತಿಳಿಯಿತು. ಕೆಲಕಾಲದ ಹಿಂದೆ ಸಂತಸದಿಂದ ಫೋನು ಮಾಡಿದ್ದ ಆಕೆಗೆ ಏನಾಯಿತೆಂದು ನನಗೆ ಅರ್ಥವೇ ಆಗಲಿಲ್ಲ. ಎಲ್ಲಕಿಂತ ಹೆಚ್ಚಾಗಿ ನನ್ನ ಕಾಡಿದ ವಿಷಯವೆಂದರೆ ಆಕೆ ಹುಟ್ಟಿನಲ್ಲಿ ನನಗಿಂತ ಕೇವಲ ಮೂರು ದಿನ ಸಣ್ಣವಳಾಗಿದ್ದಿದ್ದು. ನಮ್ಮ ಯೋಚನೆಗಳು, ಆಕಾಂಕ್ಷೆಗಳು, ಬೇಸರಗಳು, ಅಭ್ಯಾಸಗಳು, ಹವ್ಯಾಸಗಳು, ಎಲ್ಲವೂ ಒಂದೇ ರೀತಿ ಇದ್ದಿದ್ದು. ಬಾಕಿ ಗೆಳತಿಯರು ಮಲಗಿ ಗೊರಕೆ ಹೊಡೆಯುತ್ತಿದ್ದರೆ ನಾವು ರಾತ್ರಿಗಟ್ಟಲೆ ಹಾಸ್ಟೆಲಿನ ಬೆಂಚುಗಳನ್ನು ಸವೆಸುತ್ತ ನಾಳೆಯಿಲ್ಲವೆಂಬ ಹಾಗೆ ಹರಟುತ್ತಿದ್ದೆವು. ಆಕೆ ಚೆಂದವಾಗಿ ಹಾಡುತ್ತಿದ್ದಳು. ‘ಜಾನೆ ಕ್ಯೋಂ ಲೋಗ್ ಮುಹಬ್ಬತ್ ಕಿಯಾ ಕರ್ತೇ ಹೈಂ..’, ‘ಮನಸೆ ಓ ಮನಸೇ..’, ‘ಶೀಶಾ ಹೋ ಯಾ ದಿಲ್ ಹೋ’.. ಎಂದು ಮುಂತಾಗಿ ಆಕೆ ಹಾಡುತ್ತಿದ್ದರೆ ಹಾಸ್ಟೆಲು ಸ್ತಬ್ಧವಾಗಿಬಿಡುವುದು. ನಮ್ಮ ಕೆಟ್ಟ ಸೆನ್ಸ್ ಆಫ್ ಹ್ಯೂಮರ್ ಯಾರನ್ನೂ ಬಿಡುತ್ತ ಇರಲಿಲ್ಲ. ನಮ್ಮ ಬೇಸರಗಳು ಕೂಡ ನಮ್ಮ ನಗುವಿನೊಡನೆ ಸೇರಿ ಚೆಲ್ಲಾಪಿಲ್ಲಿಯಾಗಿಬಿಡುತ್ತಿದ್ದವು. ರಜೆಗಳಲ್ಲಿ ಆಕೆಯಷ್ಟೆ ಉರುಟಾದ ಅಕ್ಷರದ ಪತ್ರಗಳು ನನ್ನ ಕೈಸೇರುತ್ತ ಇದ್ದವು.
ಯಾರ ಸಾವೂ ನನ್ನನ್ನು ಇಷ್ಟು ಕಾಡಿರಲಿಲ್ಲ. ಭಯ ಹುಟ್ಟಿಸುವಷ್ಟು.. ಆಕೆಯೊಡನೆ ಆಕೆ ಇನ್ನೂ ಇದ್ದಾಳೆಂಬಂತೆ ಭಾವಿಸಿ ಮಾತಾಡುವಷ್ಟು… ಆಕೆಯ ಇಷ್ಟದ ಹಾಡುಗಳನ್ನು ಕೇಳಿದಾಕ್ಷಣ ಕಿವಿಮುಚ್ಚಿಕೊಳ್ಳುವಷ್ಟು… ಆಮೇಲಿಂದ ಬರೆಯಲೇ ಹಿಂಸೆ ಅನಿಸುವಷ್ಟು…ನನ್ನ ಫೋನಿನಲ್ಲಿ ಇನ್ನೂ ಅವಳ ಮೆಸೇಜಿದೆ. ಕಿವಿಯಲ್ಲಿ ಆಕೆ ಹೇಳಿದ ಕೊನೆಯ ಮಾತುಗಳು ಇನ್ನೂ ರಿಂಗಣಿಸುತ್ತಿವೆ – ’ನೀನು ಖುಶಿಯಾಗಿದೀಯ ತಾನೆ? ನಂಗಷ್ಟೆ ಸಾಕು. ಒಂದ್ಸಾರಿ ಸಿಗು. ಏನೇನೋ ಸಖತ್ ಹೇಳೋದಿದೆ..’. ಒಮ್ಮೆ ಬಂದು ಮಾತನಾಡಿಬಿಡೆ ಎಂದು ಆಕೆಯನ್ನು ಕರೆಯುತ್ತಲೆ ಇರುತ್ತೇನೆ. ಆಕೆ ಬರಲಾರಳು ಅನ್ನುವ ಹತಾಶೆ ಕೊರೆದು ತಿನ್ನುತ್ತದೆ. ನೋವಿಗೆ ಮಾತು ಬಂದರೆ ಕಡಿಮೆಯಾಗುವದಂತೆ. ನನ್ನ ಪಾಲಿಗೆ ಪದಗಳೇ ಮಾತು. ಕೆಳಗಿನ ಥಾಮಸ್ ಹಾರ್ಡಿಯ ಕವಿತೆ ‘ದ ವಾಯ್ಸ್’ ಅನ್ನು ಅವಳಿಗಾಗಿ ಈಗ ಕೂತು ಅನುವಾದಿಸಿದ್ದೇನೆ. ಗೀತಿ, ಇದು ನಿನಗೇನೆ.

ಒಂದು ದನಿ
ನೆನಪಾಗುವ ಹೆಣ್ಣೆ, ಹೇಗೆಲ್ಲ ನನ್ನ ಕರೆವೆ, ಕರೆವೆ ನನ್ನನೇ
ಹೇಳುವೆ, ಆಗಿನಂತೆ ನೀನಿಲ್ಲ ಇಂದು
ನನ್ನ ಸರ್ವಸ್ವವಾಗಿದ್ದಾಗ ಬದಲಾದ ಹಾಗಿರದೆ
ಮೊದಲು, ನಮ್ಮ ಹಗಲು ಚೆಲುವಿದ್ದಾಗ ಇದ್ದಂತಿರುವಿಯೆಂದು

ನನಗೆ ಕೇಳುವುದು ನಿನ್ನ ದನಿಯೆ? ಹಾಗಿದ್ದರೊಮ್ಮೆ ಕಾಣಿಸಿಕೊ
ನಾ ನಿನ್ನ ಕಾಣಲೆಂದು ಶಹರದ ಬಳಿ ಬಂದಾಗ
ನನಗಾಗಿ ಕಾಯುತ್ತಿದ್ದ ನಿನ್ನಂತೆ, ಹೌದು, ನನಗೆ ಗೊತ್ತಿದ್ದ ನಿನ್ನಂತೆ.
ಅದೇ ಅಸಲೀ ನೀಲಿಹವೆಯಂತಹ ದಿರಿಸಿನಲಿ!!

ಅಥವಾ ಇದು ನೀನು ಶಾಶ್ವತವಾಗಿ ಹತ್ತಿರವೋ ದೂರವೋ
ಕೇಳಬರದಂತೆ ಅಸ್ತಿತ್ವ ಕಳೆದುಕೊಂಡ ಬಳಿಕ
ಬರೆ ಒದ್ದೆ ಹುಲ್ಲುಗಾವಲುಗಳೆಡೆಯಿಂದ ನನ್ನೆಡೆ
ಆಲಸಿಯಂತೆ ಹಾದುಬರುವ ತಿಳಿಗಾಳಿ ಮಾತ್ರವೆ?

ಹಾಗಾಗಿ ನಾನಿಲ್ಲಿ ಸುತ್ತ ಬೀಳುವ ಎಲೆಗಳ
ನಡುವೆ ಸಂದೇಹಿಸುತ್ತ ಮುನ್ನಡೆಯುತಿರುವೆ,
ಉತ್ತರದಿಕ್ಕಿನ ಹವೆ ಮುಳ್ಳಿರಿದೆಡೆ ಕೊಂಚ ಒಸರುವುದು
ಮತ್ತು ಹೆಣ್ಣೊಬ್ಬಳೆನ್ನ ಕರೆಯುತಿರುವಳು

ಚಿತ್ರಕೃಪೆ: ’Apparition’ by www.streetmorrisart.com

Advertisements

8 thoughts on “ಒಂದು ದನಿ.

 1. ಆತ್ಮೀಯರ ಸಾವನ್ನ ಉಂಡವರಿಗೆ ಗೊತ್ತು ಆ ಹೊತ್ತಲ್ಲಿ ಉಕ್ಕಿ ಬಂದ ದುಃಖದ ವ್ಯಾಪ್ತಿ ಎಂಥಹದ್ದೆಂದು. ಅದರಲ್ಲೂ ಗೆಳೆಯ- ಗೆಳತಿಯರಾದರಂತೂ ಮುಗಿದೇ ಹೋಹಿತು; ಆ ವೇದನೆಯನ್ನ ಸವೆದು ಹೋದ ಶಬ್ದಗಳಲ್ಲಿ ವರ್ಣಿಸಲಸಾಧ್ಯವಾದದ್ದು. ನಿಮ್ಮ ಅನುವಾದದ ಪದ್ಯ ಓದಿ ನನ್ನ ಕಣ್ಣು ಒದ್ದೆ ಯಾದವು..! ನಿಮ್ಮೊಳಗಿನ ಭಾವುಕತೆಗೆ ನನ್ನೆದೆಯಾಳದ ಅಭಿನಂದನೆಗಳು.
  ನಾಗು,ತಳವಾರ್.

 2. Hi, realy its breaks the heart when our dear friends take such extreme steps. Even I had lost one of my close frind who commited suicide by hanging. Till the date I can’t forget my last meeting and last discussion with him. Your tribute your friend with a good poem is nice.
  -Shiva Prasad T R
  TV9, New Delhi

 3. ನಾ.ತಳವಾರ್ ಅವ್ರೆ,
  ಇಂಥ ಬೇಸರ ಯಾರಿಗೂ ಬರುವುದು ಬೇಡ. ನಿಮ್ಮ ಭಾವುಕತೆಗೆ ನನ್ನ ವಂದನೆ.

  ಶಿವಪ್ರಸಾದ್,
  ನಿಮ್ಮ ಸ್ನೇಹಿತನ ಬಗ್ಗೆ ತಿಳಿದು ಬೇಸರವಾಯಿತು. For all those who have crossed over, we can only hope they are in peace now.

 4. ಟೀನಾ ,

  ಆತ್ಮೀಯರ ಅಗಲುವಿಕೆಯ ದುಃಖ ಮರೆವಿನಿಂದ ದೂರ ಅಲ್ಲವೆ? ಸದಾ ಅವರು ನೆನಪಾಗಿ ಕಾಡುವಾಗ ತೀವ್ರ ವೇದನೆ ! ಅದರಲ್ಲೂ ಈ ರೀತಿಯ ದುರಂತವಾದರಂತೂ ,ಇನ್ನೂ ಹೆಚ್ಚು ನೋವು . ನಿಮ್ಮ ನೋವಿನಲ್ಲಿ ನಾನೂ ಸಹಭಾಗಿಯಾಗುತ್ತೇನೆ.
  ” ಅಥವಾ ಇದು ನೀನು ಶಾಶ್ವತವಾಗಿ ಹತ್ತಿರವೋ ದೂರವೋ
  ಕೇಳಬರದಂತೆ ಅಸ್ತಿತ್ವ ಕಳೆದುಕೊಂಡ ಬಳಿಕ
  ಬರೆ ಒದ್ದೆ ಹುಲ್ಲುಗಾವಲುಗಳೆಡೆಯಿಂದ ನನ್ನೆಡೆ
  ಆಲಸಿಯಂತೆ ಹಾದುಬರುವ ತಿಳಿಗಾಳಿ ಮಾತ್ರವೆ? ”

  ಎಂಬ ಸಾಲುಗಳು ಹೃದಯ ತಟ್ಟಿದವು .

 5. ಸುನಾಥ,
  ಈ ಕವಿತೆ ಅನುವಾದಿಸುವಾಗ ಗೀತಾಳಿಗೋಸ್ಕರ ಮಾತ್ರವಾಗಿತ್ತು. ಆದರೆ ಈಗ ಅಂಥ ಹಲವಾರು ಮರೆಯಾದ ಆದರೆ ಮಾಸದ ಗೆಳೆಯ-ಗೆಳತಿಯರಿಗಾಗಿ ಇದು ಶ್ರದ್ಧಾಂಜಲಿ ಎಂದುಕೊಳ್ಳುವೆ.

  ಗೆಳತಿಯರಾದ ಚಿತ್ರಾ ಮತ್ತು ಶಮ,
  ನಿಮ್ಮ ಸಾಂತ್ವನದ ಮಾತುಗಳಿಗಾಗಿ ಧನ್ಯವಾದ.

  ಆಟಂ ನೈಟಿಂಗೇಲ್,
  ನನಗೂನೂ.. ಆಗಾಗ..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s