ನೆನ್ನೆ ಗಣರಾಜ್ಯೋತ್ಸವದ ದಿನ ಮಂಗಳೂರಲ್ಲಿ ಕೆಲವು ಗಂಡಸರು(ಹೆಹ್!) ಒಂದು ರಾಜಕೀಯ ಸಂಘಟನೆಯ ಹೆಸರಿನಡಿ ನಡೆಸಿದ ‘ಸ್ಟಿಂಗ್ ಆಪರೇಷನ್’ನ ಫೂಟೇಜುಗಳನ್ನು ನೋಡುತ್ತ ಇದ್ದರೆ ಮೈ ಉರಿದುಹೋಗತೊಡಗಿತು. ಅಲ್ಲಿರುವವರು ಹೆಣ್ಣುಮಕ್ಕಳಿಗೆ ಸಹಾಯಹಸ್ತ ಚಾಚುವ ಬದಲು ತಮ್ಮಕ್ಯಾಮೆರಾಗಳ ಜತೆ ಬಿಜೀಯಾಗಿದ್ದಿದ್ದು ಇನ್ನೂ ರೇಜಿಗೆ ಹುಟ್ಟಿಸಿತು. ಹಲ್ಲೆ ನಡೆಸಿದವರ ಗಂಡಸುತನ ಕೇವಲ ಹೆಣ್ಣುಹುಡುಗಿಯರ ಮೇಲೆ ಮಾತ್ರ ಹೆಚ್ಚಾಗಿ ವಿಜೃಂಭಿಸಿದ್ದು. ಅವರ ತಲೆಗೂದಲಿಗೆ ಕೈಹಾಕಿ ಎಳೆಯುವಾಗ, ಅವರ ತಲೆಗಳಿಗೆ ಹೊಡೆದು ಓಡುವಾಗ, ಅವರನ್ನು ಕೆಳಗೆ ಹೊಡೆದು ಬೀಳಿಸುವಾಗ, ಅಶ್ಲೀಲ ಪದಗಳನ್ನುಪಯೋಗಿಸಿ ನಿಂದಿಸುವಾಗ ಇವರು ಸಂಸ್ಕೃತಿಯ ರಕ್ಷಣೆ ಮಾಡುತ್ತಿದ್ದರೊ, ಅಥವ ತಮ್ಮ ಮಾನಗೆಟ್ಟ ಸಂಸ್ಕೃತಿಹೀನತೆಯ ಪ್ರದರ್ಶನ ಮಾಡುತ್ತಿದ್ದರೊ ಅರ್ಥವಾಗಲೆ ಇಲ್ಲ ನನಗೆ. ಅಲ್ಲ, ಸಂಸ್ಕೃತಿಯ ರಕ್ಷಣೆಯ ಹೆಸರಿನಲ್ಲಿ ಪುಂಡಾಟ ನಡೆಸುವ ಇಂತಹ ಮುಖೇಡಿಗಳಿಗೆ ಹೆಣ್ಣುಮಕ್ಕಳೆ ಯಾವಾಗಲು ಸಿಗುವುದು ದುರಂತ. ಯಾವ ಸಂಸ್ಕೃತಿಯ ರಕ್ಷಣೆ ಮಾಡುತ್ತಿದ್ದಾರೆ ಇವರು? ನಮ್ಮ ಶಹರಗಳಲ್ಲಿ ಒಂದು ದೊಡ್ಡ ಮಾಫಿಯಾದಂತೆ ಹರಡಿರುವ ವೇಶ್ಯಾವಾಟಿಕೆ, ಮಾದಕವಸ್ತು ಹಾಗೂ ನೀಲಿಪರದೆಯ ಧಂಧೆಯವರನ್ನ ನೇರವಾಗಿ ಎದುರಿಸುವ ತಾಕತ್ತಿದೆಯೆ ಇವರಿಗೆ? ಇವರಿಗೂ ಅಫಘಾನಿಸ್ತಾನದಲ್ಲಿ ಬುರುಖಾ ಹಾಕದಿರುವ, ಶಾಲಾಕಾಲೇಜುಗಳಿಗೆ ಹೋಗುವ ಹೆಣ್ಣುಮಕ್ಕಳನ್ನು ಆಸಿಡ್ ಎರಚಿ ಶಿಕ್ಷಿಸುತ್ತೇವೆಂದು ಹೊರಟಿರುವ ತಾಲಿಬಾನ್ ಉಗ್ರರಿಗೂ ಏನು ವ್ಯತ್ಯಾಸ?
ಯಾರು ಕೊಟ್ಟರು ಹಕ್ಕು ಅವರಿಗೆ ಹೆಣ್ಣುಮಕ್ಕಳನ್ನು ಮುಟ್ಟಲು? ಹೇಗೆ ಹೇರಬಲ್ಲರು ಅವರು ನಮ್ಮ ಮೇಲೆ ಅವರ ಬಲವಂತದ ಸೋಕಾಲ್ಡ್ ‘ಸಂಸ್ಕೃತಿ’ಯ ಐಡಿಯಾವನ್ನ? ಹಾಗಿದ್ದರೆ ಯಾಕೆ ಧರಿಸುವುದಿಲ್ಲ ಅವರೆಲ್ಲ ಕೆಲಸಕ್ಕೆ ನಮ್ಮ ಸಂಸ್ಕೃತಿಯ ಪ್ರತೀಕವಾದ ಪಂಚೆ, ಶರಟು, ಟವೆಲುಗಳನ್ನ? ಅವರಿಗೆ ಮಾತ್ರ ಲೇಟೆಸ್ಟ್ ಫ್ಯಾಶನ್ನಿನ ಪ್ಯಾಂಟುಶರಟು, ಸೂಟುಬೂಟು. ಡ್ರೆಸ್ ಕೋಡ್ ಅಂತಿರೋದು ಬರೀ ಹೆಣ್ಮಕ್ಕಳಿಗೆ ಮಾತ್ರಾನೆ? ಇದನ್ನೆಲ್ಲ ಮಾಡುವುದು ಮಾತ್ರ ಸಂಸ್ಕೃತಿ ಅನ್ನೋದಾದರೆ ನನಗೆ ಆ ಸಂಸ್ಕೃತಿಗೆ ನಾನು ಸೇರಿದವಳಲ್ಲ ಅನ್ನುವುದಕ್ಕೆ ಹೆಮ್ಮೆಯಾಗುತ್ತದೆ. ನಾನು ಏನು ಉಟ್ಟುಕೊಳ್ಳಬೇಕು, ನಾನು ಎಲ್ಲಿ ಹೋಗಬೇಕು, ಹೇಗಿರಬೇಕು ಎಂದು ನಿರ್ಧರಿಸುವದು ಸಂಪೂರ್ಣವಾಗಿ ನನ್ನ ಹಕ್ಕು. ಅದನ್ನು ಯಾವನೋ ಮೂರನೆಯವ ಎಲ್ಲಿಯೋ ಕೂತು ನಿರ್ಧರಿಸಲು ಸಾಧ್ಯವಿಲ್ಲ. ನಮ್ಮದು ಇನ್ನೂ ಗಣತಂತ್ರ ಇರುವ ರಾಷ್ಟ್ರವಾಗಿರುವುದು ನಮ್ಮ ಪುಣ್ಯ. ಏಕೆಂದರೆ ಈ ಘಟನೆಯ ಹಿಂದಿರುವವರಿಗೆ ಯಾವುದೇ ರಾಜಕೀಯ ಆಕಾಂಕ್ಷೆಗಳು ಇದ್ದಿದ್ದಾದರೆ ಅದನ್ನು ಅವರು ಇನ್ನು ಮುಂದೆ ಮರೆಯುವುದೊಳ್ಳೆಯದು. ತಮ್ಮ ಕಾಲ ಮೇಲೆ ಕೊಡಲಿಯೇಟು ಹಾಕಿಕೊಳ್ಳುವ ಕೆಲಸವನ್ನೇ ಮಾಡಿರುವುದು ಅವರು.
ಸಂಸ್ಕೃತಿಯೆನ್ನುವುದು ನಿಂತು ನಾರುವ ಕೊಳಚೆಯಲ್ಲ, ಅದು ಹರಿವ ನದಿ. ಕೆಲವರು ಇನ್ನೂ ಅಪ್ಪ ಹಾಕಿದ ಆಲದ ಮರಕ್ಕೇ ನೇತುಹಾಕಿಕೊಳ್ಳುತ್ತೇನೆ ಎಂದು ಹೊರಡುವದನ್ನು ನೋಡಿದರೆ ಬೇಸರವಾಗುತ್ತದೆ. ಶತಮಾನಗಳಿಂದಲೂ ಅದೇ ದರಿದ್ರ ಬೆದರಿಕೆಗಳು, ಮೂಲೆಗುಂಪು ಮಾಡುವ ಸ್ಟೀರಿಯೋಟೈಪುಗಳು. ನೆನ್ನೆ ರಾತ್ರಿ ಉದಯ ಚ್ಯಾನೆಲ್ಲಿನಲ್ಲಿ ಈ ವಿಷಯವಾಗಿ ನಡೆದ ಚರ್ಚೆಯೊಂದರಲ್ಲಿ, ಹಲ್ಲೆಯನ್ನು ಡಿಫೆಂಡ್ ಮಾಡುವ ಭರದಲ್ಲಿ ಸೇನೆಯ ಪ್ರತಿನಿಧಿಯೊಬ್ಬರು ‘ನೀವು ಹೆಣ್ಮಕ್ಕಳು ಸೀತಾಮಾತೆಯ ಹಾಗಿರಿ, ನಾವು ನಿಮ್ಮ ಕಾಲು ತೊಳೆದು ಅದೇ ನೀರು ಕುಡೀತೇವೆ. ಸೀತೆಯನ್ನು ಪೂಜಿಸಿದ ಲಕ್ಷ್ಮಣ ಶೂರ್ಪನಖಿಯ ಮೂಗೂ ಕೊಯ್ದ ಅನ್ನೊದು ನೆನಪಿಡಿ!’ ಎಂದು ಸೂಕ್ಷ್ಮ ಬೆದರಿಕೆಯನ್ನು ಕೂಡ ಒಡ್ಡಿದರು. ಅದರ ಜತೆಗೇ ಸುಪ್ರೀಂ ಕೋರ್ಟು ಹೆಣ್ಣುಮಕ್ಕಳು ಬಾರು ಪಬ್ಬುಗಳಲ್ಲಿ ಕೆಲಸ ಮಾಡುವುದು ಅವರ ಹಕ್ಕು ಎಂದು ಹೊರಡಿಸಿರುವ ಸಂವಿಧಾನಾತ್ಮಕ ಆದೇಶದ ವಿರುದ್ಧ ಗಣರಾಜ್ಯ್ಯೋತ್ಸವದ ದಿವಸವೇ ಕೆಂಡಕಾರಿದರು! ಸೀತಾಮಾತೆಯ ಹಾಗೆ ಇರಬೇಕು ಅನ್ನುವ ಡಯಲಾಗು ಹಳೆಯದಾಯಿತು, ಅದನ್ನು ನಾವು ಮರೆತೂ ಬಿಟ್ಟಿದೇವೆ, ಯಾಕೆಂದರೆ ನಾವು ಹಾಗಿರಲು ಇಂದು ಸಾಧ್ಯವಿಲ್ಲ.
ಎಲ್ಲರೂ ಖಡಕ್ಕಾಗಿ ಈ ವಿಷಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಒಬ್ಬ ರಾಜಕೀಯ ನಾಯಕರು ಈ ವಿಷಯಕ್ಕೆ ಅನಗತ್ಯ ಪಬ್ಲಿಸಿಟಿ ನೀಡಲಾಗುತ್ತದೆ ಎಂದು ಬೇಸರಿಸಿಕೊಂಡಿದ್ದಾರೆ. ಒಬ್ಬ ರಾಜಕೀಯ ನಾಯಕನ ಮಗಳು ಅಥವಾ ಮಗನಿಗೆ ಎಷ್ಟು ಅಗತ್ಯ ಹಾಗೂ ಅನಗತ್ಯ ಪಬ್ಲಿಸಿಟಿ ನೀಡಲಾಗುತ್ತದೆ ಎಂದು ನಮಗೆ ಮಹಾನ್ ರಾಹುಲ್ ಮಹಾಜನನ ಕೇಸಿನಿಂದಲೆ ತಿಳಿದುಬಂದಾಗಿದೆ!! ಮತ್ತೆ ಕಾನೂನನ್ನು ಯಾರೊ ಗೂಂಡಾಗಳು ಕೈಗೆತ್ತಿಕೊಂಡ ಇಂತಹ ಘಟನೆಗಳಿಗೆ ಪಬ್ಲಿಸಿಟಿ ನೀಡದಿದ್ದರೆ ಇನ್ನಾವುದಕ್ಕೆ ನೀಡಬೇಕು? ಚುರುಕು ಮುಟ್ಟಲಿ ನಮ್ಮ ರಾಜಕೀಯ ನಾಯಕ, ನಾಯಕಿಯರಿಗೆ. ಮಂಗಳೂರು ಘಟನೆಯ ಪ್ರಚಾರಕ್ಕಾಗಿ ನಮ್ಮ ಮೀಡಿಯಾದವರಿಗೆ ಸಾವಿರ ಧನ್ಯವಾದ ಹೇಳಬೇಕು. ಈ ವಿಷಯವಾಗಿ ಹಲ್ಲೆ ಮಾಡಿದವರಿಗೆ ಏನು ಶಿಕ್ಷೆ ನೀಡಲಾಗುತ್ತದೆ ಎಂದು ನಾವೆಲ್ಲ ಕಾದುನೋಡುತ್ತಿದ್ದೇವೆ. ಪಬ್ಬಿನಲ್ಲಿ ಹೆಣ್ಣುಮಕ್ಕಳು ಕೂರುವದು ತಪ್ಪು ಅನ್ನುವವರು ಬೀದಿಬೀದಿಗಳಲ್ಲಿ ಕುಡಿದು ವಾಲಾಡುವ, ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಪ್ರತಿದಿನವೂ ನರಕ ತೋರಿಸುವ ಗಂಡಸರನ್ನು ಹಿಡಿದು ಏಕೆ ಬುದ್ಧಿ ಕಲಿಸಲು ಮುಂದಾಗಬಾರದು? ಸಂಸ್ಕೃತಿಯನ್ನು ಬೆಳೆಸಬಯಸುವವರು ಮಾಡಬಹುದಾದ ಕೆಲಸಗಳ ದೊಡ್ಡ ಪಟ್ಟಿಯೇ ಇದೆ. ಸಂಸ್ಕೃತಿ ಬಲವಂತದ ಹೇರುವಿಕೆಯಿಂದ ಉಳಿಯುವುದಿಲ್ಲ, ಬೆಳೆಯುವುದರಿಂದ, ಬದಲಾಗುವುದರಿಂದ ಉಳಿಯುತ್ತದೆ.
ಟೀನಾ,
ನೀವು ಹೇಳೋದು ಖರೆ ಅದ. ಸಂಸ್ಕೃತಿ ಅಂಬೋದು ಹೆಣ್ಣುಮಕ್ಕಳಿಗೆ ಮಾತ್ರ; ಗಂಡಸರು ಬೇಕಾಬಿಟ್ಟಿಯಾಗಿ ಇರಬಹುದು ಅನ್ನೋದು ತಪ್ಪು.What a man is permitted to do, a woman also should be permitted to.
Right On TINA.
I agree with your views 100%. Its as shameful as some cops(Lady!!) beating poor couples in a park in Madhyapradesh last year.
These guys need to be educated first and political force should understand using these kind of people for their gain.
Just my 2 cents.
Regards
SP
ಟೀನಾ ನಿಮ್ಮ ವಿರೋಧ ಪ್ರಶಂಸನೀಯ.
ಹೆಂಗಸರು ತಮ್ಮ ಹಕ್ಕುಗಳು ಸಂರಕ್ಷಣೆಗೆ ಅವರೇ ಹೋರಾಡಬೇಕು.
ಒಳ್ಳೆಯ ಅನಿಸಿಕೆ.
ನನ್ನಿ!
ಟೀನಾ, ಸರಿಯಾಗಿ ಹೇಳಿದ್ದೀರಿ. ಈ ಸಂಸ್ಕೃತಿ ಅನ್ನೋ ಪದವನ್ನು ಅರ್ಥ ಮಾಡಿಕೊಳ್ಳದೆ ಜನ ಇದು ನಮ್ಮ ಸಂಸ್ಕೃತಿ ಅಲ್ಲ ಅಂತ ಹೇಳ್ತಾರೆ, ಹಾಗಾದರೆ ನಮ್ಮ ಸಂಸ್ಕೃತಿ ಯಾವುದು? ೧೦೦ ವರ್ಷ ಹಿಂದಿನದಾ? ೧೦೦೦ ವರ್ಷ ಹಿಂದಿನದಾ ಅಥವಾ ಪುರಾಣದಲ್ಲಿ ಹೇಳಿರೋದಾ? ತಾಲಿಬಾನಿಗೂ ನಮಗೂ ವ್ಯತ್ಯಾಸ ಇದೆ, ಆದರೆ ಇವ್ರು ಆ ಗ್ಯಾಪನ್ನ ಕಡಿಮೆ ಮಾಡೋ ಪ್ರಯತ್ನದಲ್ಲಿದಾರೆ.
ಈ ಘಟನೆ ನಡೆದದ್ದು ಒಳ್ಳೆಯದೇ ಆಯಿತು ಅಂತ ಅನ್ನಿಸಿದೆ.
ಇದರ ಹಿಂದೆ ಮೀಡಿಯಾದವರ ತಪ್ಪೇ ಇರಲಿ, ಕಾಂಗ್ರೆಸ್‍ನವರು hype ಮಾಡುತ್ತಿರಲೀ, ಅಥವಾ ಇನ್ನು ಯಾವುದೇ ರಾಜಕೀಯವಿರಲಿ … ಇಂತಹದೊಂದು ಘಟನೆ ದೇಶವ್ಯಾಪಿಯಾಗಿ ಬೆಳಕಿಗೆ ಬಂತು ಅನ್ನೋದೇ ಮುಖ್ಯ.
ಕಪಿ ಸೇನೆಯ ಮಂಗಗಳಿಗೆ ಸ್ವಲ್ಪ ಲಗಾಮು ಬಿದ್ದೀತು ಅಂತ. ಪೂರ್ತಿಯಾಗಿ ಇವರೆಲ್ಲಾ ಸರಿಯಾಗುತ್ತಾರೆ ಅಂತ ನನಗೆ ನಂಬಿಕೆ ಇಲ್ಲ. asylum ಒಳಗೆ ಕೂಡಿಟ್ಟರೆ ಏನಾದ್ರೂ ಸರಿ ಹೋಗ್ಬಹುದು. ಅದೂ ಡೌಟೇ !!!
ಇದೊಂಥರಾ ನಶೆ, ಅಮಲು ಇದ್ದ ಹಾಗೆ.
ಧರ್ಮದ ಹೆಸರಿನಲ್ಲಿ ಕೊಲ್ಲುತ್ತಾರಲ್ಲ ಅವರ ಹಾಗೆ. ಅವರ ಕೈಯಲ್ಲಿ ಗನ್‍ಗಳಿವೆ. ಇವರ ಕೈಗೆ ಇನ್ನೂ ಬಂದಿಲ್ಲ ಅಷ್ಟೆ. ಅದರ ಮೊದಲೇ sense ಇರುವಂತಹ ಪ್ರಜೆಗಳು ಎಚ್ಚೆತ್ತುಕೊಂಡರೆ ನಮಗೇ ಒಳ್ಳೆಯದು.
ಟಿನಾ, ಒಳ್ಳೆಯ ಕೆಲಸ. ಹೆಣ್ಣು ಅನ್ನೋ ಕಾರಣಕ್ಕಾಗಿ ಒಂದು ವ್ಯಕ್ತಿಯ ಮೇಲೆ ಹಲ್ಲೆ ಅಲ್ಲಿ ನನ್ನ ವಿರೋಧವಿದೆ. ಪಬ್ ಸಂಸ್ಕೃತಿಗೆ ವಿರೋಧವಿಲ್ಲ ಎಂದಲ್ಲ. ಪಬ್ ಸಂಸ್ಕೃತಿಯನ್ನು ವಿರೋಧಿಸಲು ಪ್ರಜಾಸತ್ತಾತ್ಮಕವಾದ ನೂರೆಂಟು ದಾರಿಗಳಿವೆ. ಇದು ರಾಮರಾಜ್ಯವಲ್ಲ ಪ್ರಜಾರಾಜ್ಯ. ಇದು ಈ ಸಂಸ್ಕೃತಿಯ ಪೊಳ್ಳು ವಕ್ತಾರರಿಗೆ ನೆನಪಿರಲಿ.
-ವಿಶಾಲಮತಿ
ಟೀನಾ,
ನಿಮ್ಮ ಅಭಿಪ್ರಾಯಕ್ಕೆ ನನ್ನದೂ ಸಂಪೂರ್ಣ ಸಹಮತವಿದೆ . ಧರ್ಮ , ಸಂಸ್ಕೃತಿಯ ರಕ್ಷಣೆ ಹೆಸರಲ್ಲಿ ಅತ್ಯಂತ ಹೇಯವಾಗಿ ವರ್ತಿಸಿದವರಿಗೆ ,ವರ್ತಿಸುವವರಿಗೆ ಕಠಿಣ ಶಿಕ್ಷೆಯಾಗಬೇಕು ! ನಮ್ಮಲ್ಲಿ ಇಂಥ ಕೃತ್ಯಗಳು ನಡೆಯುವಾಗ , ತಾಲಿಬಾನ್ ಅನ್ನು ಖಂಡಿಸುವ ಹಕ್ಕು ನಮಗಿದೆಯೆ?
” ಸಂಸ್ಕೃತಿ ಬಲವಂತದ ಹೇರುವಿಕೆಯಿಂದ ಉಳಿಯುವುದಿಲ್ಲ, ಬೆಳೆಯುವುದರಿಂದ, ಬದಲಾಗುವುದರಿಂದ ಉಳಿಯುತ್ತದೆ.” ಎಂಬ ನಿಮ್ಮ ಮಾತು ೧೦೦ ಕ್ಕೆ ೧೦೦ ಸತ್ಯ !
ಈ ವಿಷಯದ ಬಗ್ಗೆ ನಾನೂ ಸಹ ನನಗನ್ನಿಸಿದ್ದನ್ನು ಬ್ಲಾಗಿನಲ್ಲಿ ಹಂಚಿಕೊಂಡಿದ್ದೇನೆ . ಭೇಟಿ ಕೊಡಿ.
!
Thanks for voicing this strongly. Incidents such as these not only bring out the filth from within the “upholders”, but also their apologists and supporters — many of them bloggers! It only shows how far we are still from a free society.
ಹಾಯ್,
ಪ್ರತಿ ವರ್ಷದ ಹಾಗೆ ಅಮ್ಮನ ಹುಟ್ಟು ಹಬ್ಬದ ಅಂಗವಾಗಿ ಮಾತೃ ಉತ್ಸವ ಮಾರ್ಚ್ ತಿಂಗಳ ಎರಡನೇ ಭಾನುವಾರ ಅಂದರೆ ಎಂಟನೇ ತಾರೀಖಿನಂದು ನಡೆಸಲಿದ್ದೇವೆ. ಅಂದವಾದ ಅಮ್ಮನಿಗೆ ಸಂಬಂಧಿಸಿದ ಒಳ್ಳೆಯ ಸೂಕ್ತಿಗಳು ಇದ್ದರೆ ಬೇಕು. ನಿಮ್ಮಲ್ಲಿದ್ದರೆ ಫೆಬ್ರವರಿ ಎರಡನೇ ತಾರೀಖಿನೊಳಗೆ ನನಗೆ ಕಳುಹಿಸುವಿರಾ ? ಬರೆದವರ ಹೆಸರೂ ಇದ್ದರೆ ಅನುಕೂಲ.
ಅಂದ ಹಾಗೆ, ಆಹ್ವಾನ ಕಳುಹಿಸುವೆ … ತಪ್ಪದೆ ಬನ್ನಿ
ಧನ್ಯವಾದಗಳು,
ಶಮ, ನಂದಿಬೆಟ್ಟ
http://minchulli.wordpress.com
ನನಗೆ ಇ-ಮೈಲ್ ಅಲ್ಲಿ ಬಂದುದು
ಟೀನಾ ಮೇಡಂಗೆ ಇಷ್ಟ ಆಗಬಹುದು
ಟೀನಾ ಅವರೇ, ನಿಮ್ಮ ಮಾತು ಸರಿ. ” ಸಂಸ್ಕೃತಿ ಬಲವಂತದ ಹೇರುವಿಕೆಯಿಂದ ಉಳಿಯುವುದಿಲ್ಲ, ಬೆಳೆಯುವುದರಿಂದ, ಬದಲಾಗುವುದರಿಂದ ಉಳಿಯುತ್ತದೆ.”. ಆದರೆ, ಮಾಧ್ಯಮದವರನ್ನು ಬಾಯ್ತುಂಬಾ ಹೊಗಳೋ ಮುಂಚೆ ವಸ್ತು ಸ್ಥಿಥಿ ಅರಿತುಕೊಳ್ಳಿ. ನಮ್ಮ ಮಂಗಳೂರಲ್ಲಿ ಸಾವಿರ ಸಮಸ್ಯೆಗಳಿದ್ದರೂ ಅವುಗಳನ್ನಾವುದೇ ಲೆಕ್ಕಿಸದೇ ಯಾವುದೋ ಒಂದು ಪಬ್ನಲ್ಲಾದ ಘಟನೆಯನ್ನು ಎಳೆದು ವಾರಗಟ್ಟಲೆ ಟೀವಿ, ಪತ್ರಿಕೆಗಳಲ್ಲಿ ಹಾಕಿದುದರ ಹಿಂದೆ ಮಾಧ್ಯಮದವರ ಸಾಧನೆಗೆ ಏನು ಹೇಳಲೋ ತಿಳಿಯದು. ಇಲ್ಲಿ ಎಷ್ಟ್ ಪಬ್ಗಳಿವೆ, ಹಾಗೂ ಎಷ್ಟು ವರುಷಗಳಿಂದ ಓಡುತ್ತಿವೆ, ಇಲ್ಲಿಯವರೆಗೆ ಅವುಗಳ ಮೇಲೆ ಏಕೆ ದಾಳಿಗಳಾಗಿಲ್ಲ? ಇತ್ತೀಚೆಗೆಂಬಂತೆ ಶುರುವಾದ ಅಮ್ನೇಷಿಯ ಮೇಲೆಯೇ ದಾಳಿ ಯಾಕಾಯಿತು? ಇದೆಲ್ಲ ಬಲ್ಲಿರಾ, ಯೋಚಿಸಿದ್ದೀರಾ? ಹೊಡೆದಾಟಗಳು ಯಾವ ಊರಲ್ಲಿಲ್ಲ ಹೇಳಿ, ಈ ಒಂದು ಘಟನೆಗೇ ಮಾತ್ರ ಮಾಧ್ಯಮಗಳೆಲ್ಲ ಏಕೆ ಹೆಚ್ಚು ಒತ್ತು ನೀಡುತ್ತಿವೆ? ನಡೆದ ಘಟನೆ ಖಂಡನೀಯವಾದುದೇ, ನಿಜ. ಆದ್ರೆ, ವಾರಗಟ್ಟಲೆ ದೇಶದಲ್ಲಿ ಬೇರೇನು ನಡೆಯಲೇ ಇಲ್ಲವೆಂಬಂತೆ ಅದನ್ನೇ ಏಕೆ ಜಗಿಯುತ್ತಿದ್ದಾರೆ? ಅದರಿಂದ ಪ್ರಚಾರ ಯಾರಿಗೆ ದೊರಕಿದಂತಾಯಿತೆಂದು ನಿಮಗೇ ತಿಳಿಯುವುದು…
Please read and participate
http://thepinkchaddicampaign.blogspot.com/
ನೀವು ಬರೆದದ್ದು ಸರಿಯಾಗಿದೆ ಟೀನಾ…ಆದರೆ ಸೇನೆಯವರಿರಲಿ, ಮಹಿಳಾ ಸಂಘಟನೆಗಳಿರಲಿ, ಮಿನಿಸ್ಟರ್‍ಗಳಿರಲಿ ಒಂದೇ ವರ್ಗಕ್ಕೆ ಸೀಮಿತವೇ….ಮೂಲ್ಕಿಯ ಅಶ್ವಿನಿಯಂತಹವರನ್ನು ಕೇಳುವವರು ಯಾರೂ ಇಲ್ಲವೇಕೆ?
ನಮಸ್ತೆ.. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ… ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.
ಟೀನಾ… ನೀವು ಬಸವೇಶ್ವರ ನಗರದಲ್ಲಿ ಇರುವವರಾದ್ದರಿಂದ ತುಂಬಾ ಹತ್ತಿರ . ದಯವಿಟ್ಟು ಬನ್ನಿ…
ಶುಭವಾಗಲಿ,
– ಶಮ, ನಂದಿಬೆಟ್ಟ
Hello there,
ನೀವು ವಿರೋದಿಸಿ ಬರೆದ ಲೇಖನ ಚೆನ್ನಾಗೆ ಇದೆ… ಅದರೆ ವಸ್ತು ಸ್ತಿತಿ ಅರ್ಥ ಮಾಡಿಕೊಳ್ಳದೆ ಬರಿ ಕೋಪ ಅಸಮಧಾನ ತುಂಬಿ ಬರೆದಂತಿದೆ..