ನಾನು ಹುಡುಕುತ್ತಿದ್ದ ಹಾಡು!!

ನನ್ನ ಖುಶಿಗಳನ್ನ, ಬೇಜಾರುಗಳನ್ನ ಬಹಾಳ ದಿನಗಳಿಂದ ನನ್ನ ಹತ್ತಿರವೆ ಇಟ್ಟುಕೊಂಡು ಸಾಕಾಗಿದೆ. ನಿಮ್ಮ ಹತ್ತಿರವೂ ಹಂಚಿಕೊಳ್ಳುವಾ ಅಂತ. ಆದರೂ ಯಾಕೊ ಬ್ಲಾಗರುಗಳೂ ಸಪ್ಪೆಯಾಗಿಬಿಟ್ಟಹಾಗಿದಾರೆ. ಮುಂಚೆ ಒಂದು ಗಂಟೇಲಿ ಕಡಿಮೆ ಅಂದರು ಮೂರುನಾಕು ಹೊಸ ಪೋಸ್ಟುಗಳು ವರ್ಡ್‌ಪ್ರೆಸ್ ಡ್ಯಾಶ್‌ಬೋರ್ಡಿನಲ್ಲೆ ಕಂಡಿರೋವು. ಅದಲ್ಲದೆ ಬ್ಲಾಗ್‌ಸ್ಪಾಟಿನವು ಬೇರೆ. ಬ್ಲಾಗ್ ಲೋಕದ ಈ ನೂತನ ತಲ್ಲಣದ ಬಗ್ಗೆ ರಿಸರ್ಚ್ ಮಾಡುವಾ ಅಂತ ಯೋಚಿಸಿದರೆ ಅದರಲ್ಲಿ ಹೊಳೆದಿದ್ದು ಎರಡು ಅಥವಾ ಮೂರು ಪದಗಳು – ತಲ್ಲಣ, ತಳಮಳ ಮತ್ತು ತಲೆಮಾರು. ಇತ್ತೀಚೆಗೆ ಎಲ್ಲರೂನು ಇವುಗಳ ಸುತ್ತಲೆ ಗಿರ್ಕಿ ಹಾಕುವ ಹಾಗಿದೆ.

ತಲ್ಲಣವನ್ನು ಬಿಟ್ಟುಹಾಕಿ, ಏನಾದರು ಚಟ್‌ಪಟಾ ತಿನ್ನುವ ಅಂತ ಸಂಜೆ ಅಪರೂಪಕ್ಕೆ ಹೊರಬಿದ್ದ  ನನಗೆ ತುಮಕೂರಿನ ರಸ್ತೆಯಲ್ಲಿ ಹೊಸ ರೆಸ್ಟೊರೆಂಟೊಂದು ಕಣ್ಣಿಗೆ ಬಿತ್ತು. ಹೆಸ್ರು ’ಸಿಲ್ವರ್ ಆಪಲ್’ ಅಂತ. ಅಲ್ಲಿ ವಾಕರಿಕೆ ಬರೋವಷ್ಟು ಹಾಟ್ ಚಾಕೊಲೆಟ್ ಕೇಕ್ ತಿಂದು ಊಟ ಮಾಡಲಿಕ್ಕೇ ಆಗಲಿಲ್ಲ!! ಹಾಗೇ ಪೆಂಡಿಂಗ್ ಇದ್ದ ವ್ಯಾಸರಾಯ ಬಲ್ಲಾಳರ ಪುಸ್ತಕವೊಂದನ್ನು ಕೈಗೆತ್ತಿಕೊಂಡರೆ ನಮ್ಮ ’ಮ್ಯಾಕ್ಸಿಮಮ್ ಸಿಟಿ’ಯ ಕತೆಗಳು ಆವರಿಸಿಕೊಂಡು ಪ್ರೇತಗಳ ಹಾಗೇ ಕಾಡಲು ಶುರುವಿಟ್ಟವು. ಯಾವುದೊ ಸಿನೆಮಾದ ಬಗ್ಗೆ ಅರ್ಧ ಬರೆದು ತಲೆ ತುರಿಸಿಕೊಂಡರು ಮುಂದೆ ಹೋಗಲಾಗಲಿಲ್ಲ. ಪ್ರೋಕ್ರಾಸ್ಟಿನೇಶನ್ ಅನ್ನುವದು ಎಂಥ ಕಚಡ ರೋಗವು, ಅದರ ಆಳಗಳೇನು ಅನ್ನುವದು ಕಳೆದ ಕೆಲ ತಿಂಗಳುಗಳಲ್ಲಿ ಚೆನ್ನಾಗಿಯೇ ತಿಳಿಯಿತು. ನಾಟ್ ಎನಿಮೋರ್!! ಅಂತ ನನಗೆ ನಾನೇ ಒದ್ದುಕೊಂಡು ಮೈಕೊಡವಿ ಎದ್ದಿದೇನೆ.

ಮಾನ್ಸೂನು ಮೋಡಗಳು ಏನು ಓಡುತ್ತವಲ್ಲ, ಯಾರಿಗೊ ಅಪಾಯಿಂಟ್‌ಮೆಂಟ್ ಕೊಟ್ಟಿರುವ  ಹಾಗೆ! ಮಳೆಗಾಲದಲ್ಲಿ ಎಲ್ಲರಿಗೆ ಆಲಸ್ಯ ಬಂದರೆ, ನನಗೆ ಕೆಟ್ಟ ಉತ್ಸಾಹ!! “ನಿಂದು ವಾಟರ್ ಸೈನ್, ಅದಕ್ಕೆ ನಿಂಗೆ ನೀರಿನ ಹತ್ತಿರ ಇದ್ದರೇ ಖುಶಿ” ಅಂತ ಯಾರೊ  ಹೇಳಿದ್ದ ನೆನಪು. ಅದಕ್ಕೆ ಸರಿಯಾಗಿ ಈಗ ಶಾಲೆ ಬಿಡುವ ಸಮಯದಲ್ಲೆ ಮಳೆ ಬೇರೆ. ಅರ್ಥಾತ್  ಸೃಷ್ಟಿಯ ’ಡಿಂಗಾಲಲ ಹೊಯ್ ಹೊಯ್’ಟೈಮ್. ದಿನಾ ನೆಂದುಕೊಂಡು ಅವಳು ಖುಶಿಯಾಗಿ ಬರುವುದು. ನಾನು ಥೇಟ್ ನಮ್ಮಮ್ಮ ಮಾಡುತ್ತಿದ್ದ ಥರವೆ ಟವಲು, ಸ್ವೆಟರು ಹಿಡಿದುಕೊಂಡು ಅವಳ ಮೇಲೆ ಪೌನ್ಸ್ ಮಾಡಲು ಕಾದಿರುವುದು. ಬಲೇ ಕೆಟ್ಟ ಪಿಳ್ಳೆ ಅದು. ಪೇಂಟಿಂಗ್ ಮಾಡೋಕೆ ನೀರು ಬೇಕು ಅಂತ ಲೋಟದಲ್ಲಿ ಮಳೆ ನೀರು ಹಿಡಿಯುತ್ತ ಕೂತಿರುತ್ತೆ. ಹೋಂವರ್ಕ್ ಮಾಡ್‌ಬೇಕೂ ಅಂದ್ರೆ ಥರಾವರಿ ನಾಟಕ ಆಡತ್ತೆ. ಅಮ್ಮನ್ ಹತ್ತಿರ ಹೇಳಿದರೆ ’ಹಿಸ್ಟರಿ ರಿಪೀಟ್ಸ್’ ಅಂತ ಉದ್ಗರಿಸಿ  ’ಹಾಗೇ ಆಗಬೇಕು ಮಗಳೆ’ ಅನ್ನುವಹಾಗೆ ನಗ್ತಾರೆ. ಎಲ್ಲರು ಒಬ್ಬರಾದ ಮೇಲೊಬ್ಬರಹಾಗೆ ಸರತಿಯಲ್ಲಿದೀವಿ ಅಲ್ಲವೆ? ನನ್ನಮ್ಮ, ನಾನು, ನನ್ನ ಮಗಳು..

ಸರತಿ ಅಂದಾಗ ನೆನಪಾಯ್ತು. ನೆನ್ನೆ ನನ್ನ ಫೇವರೆಟ್ ಸೀರಿಯಲ್‌ನ ಡೌನ್‍ಲೋಡ್ ಮಾಡಿಕೊಂಡು ನೋಡುತ್ತಿದ್ದೆ. ಅದರಲ್ಲಿ ಒಂದು ಹಾಡು ತೇಲಿಬಂತು. ಅದನ್ನ ಕೇಳಿದ ಕೂಡಲೆ ಅನ್ನಿಸಿತು, ನಾನು ಇಲ್ಲಿಯತನಕ ಹುಡುಕುತ್ತಿದ್ದ ಹಾಡು ಇದೇನೆ ಅಂತ. ಸ್ವಲ್ಪ ಎಕ್ಸಾಜರೇಶನ್ ಆಯಿತು ಅಂತೀರ? ಅದು ನನ್ನ ಇನ್ನೊಂದು ಹೆಸರಲ್ಲವೆ? ಇರಲಿ. ಹಾಡಿನ ಯುಟ್ಯೂಬ್ ಲಿಂಕನ್ನ ಕೆಳಗ್ ಕೊಟ್ಟಿದೇನೆ.

ಹೇಗಿದೀರ ಎಲ್ರೂ?

Advertisements

15 thoughts on “ನಾನು ಹುಡುಕುತ್ತಿದ್ದ ಹಾಡು!!

 1. ಮರುಕೋರಿಕೆ (Pingback): ನಾನು ಹುಡುಕುತ್ತಿದ್ದ ಹಾಡು!! | indiarrs.net Featured blogs from INDIA.

  • ಮಂಜುನಾಥ್,
   ಪ್ರೋತ್ಸಾಹದ ಮಾತುಗಳಿಗೆ ಧನ್ಯವಾದಗಳು. ಕಮೆಂಟಿಗರು ಕಂಜೂಸುಗಳಾಗದಿದ್ದರೆ ಸಾಕು, ಬ್ಲಾಗಿಗರು ಹೆಚ್ಚು ಖುಶಿಪಡುತ್ತಾರೆ.

 2. ಚಾಕಲೇಟಿನಲ್ಲಿ ಮಾತ್ರವೇ ಆಂಟಿಡಿಪ್ರೆಸೆಂಟ್ ಇದೆ ಹೊರತು ಚಾಕಲೇಟು ಕೇಕಿನಲ್ಲಿ ಇಲ್ಲದಿರಲೂಬಹುದು ಎಂದು ನೀವು ತಿಳಿದಿದ್ದರೆ, ಇಷ್ಟೊಂದು ಕೇಕು ತಿನ್ನುತ್ತಿರಲಿಲ್ಲ ಅಲ್ಲವೇ? ಅಥವಾ ಹೌದೇ?

  ಅದಿರಲಿ, ಹೋಗಿ ಹೋಗಿ ಧಾರಾವಾಹಿಗಳನ್ನು ಭಟ್ಟಿ ಇಳಿಸಿ ನೋಡಿದ್ದೇಕೆ ಎಂಬುದು ನಮಗರ್ಥವಾಗದ ತನಿಖೆಗೆ ಅರ್ಹವಾದ ವಿಷಯ. ಯಾಕೆಂದರೆ ನಾಲ್ಕು ವರ್ಷದ ಬಳಿಕದ ಕಂತು ನೋಡಿದರೂ ನಮಗೆ ಕಥೆ ಅರ್ಥವಾಗೋ ಥರಾ ಇವೆ ಇಂದಿನ ಚೂಯಿಂಗ್ ಗಮ್ ಧಾರಾವಾಹಿಗಳು. ಅದಕ್ಕೆ ಕಾಲೆಳೆದೆ…

  ಮತ್ತೊಂದು ಮನವಿ: ನಮ್ಮದು anveshi.net . ನಿಮ್ಮ ಬ್ಲಾಗು ರೋಲಿನಲ್ಲಿ ತಪ್ಪಾಗಿ ಲಿಂಕಾಗಿದೆ. ಬ್ಲಾಗು ರೋಲಿನಲ್ಲಿ ಲಿಂಕಿಸಿದ್ದಕ್ಕೆ ಧನ್ಯವಾದ.

 3. ಪ್ರಿಯ ಅನ್ವೇಷಿ,
  ಬಹಳ ದಿನಗಳ ನಂತರ ಹೊರಬಿದ್ದಿದ್ದರಿಂದ ಸೂರ್ಯನ ರಶ್ಮಿಯು ತಗುಲಿ ತಲೆಕೆಟ್ಟದ್ದರ ಪರಿಣಾಮವೇ ಇರಬಹುದು..ಚಾಕೊಲೆಟ್ ಕೇಕಿನಲ್ಲಿಯೂ ಚಾಕೊಲೆಟ್ ಇರುತ್ತದೆ ಎಂಬ ಅಂಶವು ಮರೆತುಹೋಗಿ ಭ್ರಾಂತಳಾಗಿದ್ದೆ.
  ಇನ್ನು ಧಾರಾವಾಹಿಗಳ ವಿಚಾರಕ್ಕೆ ಬರುವುದಾದಲ್ಲಿ, ಹಾಳುಬ್ರೇಕುಗಳಿಲ್ಲದೆ ಧಾರಾವಾಹಿಗಳನ್ನು ನೋಡುವ ಮಜವೇ ಬೇರೆ..ಸುಮಾರು ಎಪಿಸೋಡು ಮಿಸ್ ಮಾಡಿದ್ದೆ..ಆದರೆ ಅವನ್ನು ಚ್ಯೂಯಿಂಗ್ ಗಮ್‌ಗಳನ್ನಾಗಿಯೂ ಬಳಸಿಕೊಳ್ಳಬಹುದು ಎಂಬ ನಿಮ್ಮ ವಿಚಾರಧಾರೆ ಅದ್ಭುತವಾದುದು. ಆ ವಿಧಾನವನ್ನು ದಯಮಾಡಿ ತಿಳಿಸೋಣವಾಗಲಿ.
  ಬಹಳ ತಡವಾಗಿ ಲ್ಯಾಂಕ್ಸ್(ಲಿಂಕ್+ಥ್ಯಾಂಕ್ಸ್ – ಬ್ರ್ಯಾಂಜೆಲೀನಾ, ಸೈಫೀನಾ ಟೈಪ್‌ನಲ್ಲಿ..) ಹೇಳಿದಿರಿ. ಬಹಳ ಹಿಂದೆಯೆ ನಿಮ್ಮನ್ನ ಲಿಂಕಿಸಿದ್ದೆ..ಲಿಂಕನ್ನ ಸರಿಮಾಡಿದೇನೆ.

 4. ಟೀನಾ ಅವರೇ,

  ತು೦ಬಾ ಖುಷಿ ಆಯಿತು ಅ೦ತೋ ನೀವು ಬ್ಲಾಗ್ ಲೋಕದ usual ಧಾಟಿಗೆ ಮರಳಿದ್ದು ನೋಡಿ ತು೦ಬಾ ಸ೦ತೋಷ ಆಯಿತು. ನೋಡಿ ನೀವು ಹಿ೦ದೆ ಬರುವುದನ್ನೇ ಎಷ್ಟು ಜನ ಕಾದು ಕೂತಿದ್ದಾರೆ ಅನ್ನುವುದನ್ನು!

  ಮಳೆಯ ನೆನವರಿಕೆಯ ಈ ಬರಹ ಕುಶಿ ನೋಡಿತು. ನಿಮ್ಮದೇ ಲಘು ಹಾಸ್ಯ ಧಾಟಿಯ ಈ ತರಹದ lively ಬರಹಗಳನ್ನು ಓದದೇ ತು೦ಬಾ ಮಿಸ್ ಮಾಡಿಕೊ೦ಡಿದ್ದೆ! ಇನ್ನು ಮುಂದೆ ಇ೦ತಹ ಬರಹಗಳನ್ನು ಅವ್ಯಾಹತವಾಗಿ ನಿಮ್ಮಿಂದ ನಿರೀಕ್ಷಿಸೋಣವೇ?

  ಯಾಕೋ ಹಾಡಿನ ಲಿಂಕು ನನಗೆ ಕಾಣಿಸುತ್ತಲೇ ಇಲ್ಲ 😦

 5. ಟೀನಾ ಅವರೇ,

  ಅ೦ತೂ ಹಿ೦ದೆ ಬಂದ್ರಲ್ಲ 🙂 ನಿಮ್ಮ ಲಘು ಹಾಸ್ಯ ಧಾಟಿಯ lively ಬರಹಗಳನ್ನು ತುಂಬಾ ಮಿಸ್ ಮಾಡಿಕೊಂಡಿದ್ದೆ! ನಿಮ್ಮ ಅನುವಾದಿತ ಬರಹಗಳನ್ನು ಓದಿ ಸ್ವಲ್ಪ ಬೇಸರ ಆಗಿದೆ. [ನೀವು ಅನುವಾದ ಚೆನ್ನಗಿಏ ಮಾಡುತ್ತೀರಾ, ಅದು ಬೇರೆ ವಿಷಯ 🙂 ]ಆದ್ದರಿ೦ದ ನಿಮ್ಮ ಬರಹಗಳು ತುಂಬಾ ಬರಲಿ….

  ಮಳೆಯ ನೆನೆವರಿಕೆಯ ಈ ಬರಹ ತುಂಬಾ ಇಷ್ಟ ಆಯಿತು. ಯಾಕೋ ಹಾಡಿನ ಲಿ೦ಕು ಕಾಣಿಸುತ್ತಲೇ ಇಲ್ಲ ನನಗೆ!

 6. ಸುಧೇಶ್,
  ಇನ್ನು ಮುಂದೆ ಬರ್ದೆ ಬರೀತೀನಿ, ಮುಂಬಯಿಯಿಂದ ಕಮೆಂಟ್ ಬರೋದಾದರೆ.. ಅನುವಾದದ ಕಥೆಗಳನ್ನ ಮ್ಯಾಗಜೀನಿಗಾಗಿ ಮಾಡಿದ್ದು.. ಏನೋ ಹೊಟ್ತೆಪಾಡು, ಬಿಡಿ.
  ಇನ್ನು ಮೇಲೆ, ಫುಲ್ ಗಲಾಟೆ!!
  ಲಿಂಕು ಸರಿಯಾಗಿಯೆ ಇದೆ.. ಇನ್ನೊಮ್ಮೆ ಟ್ರೈ ಮಾಡಿ ಇಲ್ಲದಿದ್ದರೆ ಈ ಲಿಂಕ್ ನೋಡಿ:

  ನನ್ನಲ್ಲಿ ಓಪನ್ ಆಗುತ್ತಿದೆ.

  • ಪ್ರಿಯ ವೀಣಾ,
   ಕೆಲವು ದಿನ ನನಗು ಹೀಗೇ ಅನ್ನಿಸಿತು. ಮತ್ತೆ ಕೆಲಸದ ಒತ್ತಡ, ಆರೋಗ್ಯ, ಮನೆವಾರ್ತೆ ಅಂತೆಲ್ಲ ಏನೇನೋ ತಾಪತ್ರಯಗಳು. ಬ್ಲಾಗ್ ಲೋಕವೂ ಥಂಡಾ ಹೊಡೆದುಕೊಂಡಿದೆ, ನೀರಸ ಅನ್ನಿಸುತ್ತ್ದ್ದಇದ್ದದ್ದೂ ಹೌದು. ಆದರೆ ಇದು ವಾಪಾಸು ಸೆಳೆಯುವದನ್ನ ಬಿಡದು. ಬರೆಯೋದನ್ನ ಬಿಡಬೇಡಿ. ಏನೆ ಆಗಲಿ. ಬರೀತಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s