ಹೀಗೆ ಶುರು ಮಾಡೋಣವೆ?

ಕ್ಷಮಿಸ್ಬಿಡಿ, ಪ್ಲೀಸ್!

ನಿಮ್ಮನ್ನ ’ಏನು ಮಾಡಬಹುದು?’ ಅಂತ ಕೇಳಿ ಒಂದು ಮೂರು ದಿನ ನಾನೆ ಮಾಯವಾಗಿಹೋಗಿದ್ದೆ. ಒಂದು ಸಣ್ಣ ಜವಾಬ್ದಾರಿ ಬೆನ್ನಮೇಲಿತ್ತು. ನಿಭಾಯಿಸ್ಲೇಬೇಕಾಗಿತ್ತು. ಇಲ್ಲಿ ಬಂದುನೋಡಿದ್ರೆ ನಿಮ್ಮ ಕಮೆಂಟುಗಳು ನನ್ನ ಜವಾಬ್ದಾರೀನ ಚುಚ್ಚಿ ನೆನಪುಮಾಡಿದ್ವು. ಈ ವಿಷಯದ ಬಗ್ಗೆ ಸುಮಾರು ಜನ ಸ್ನೇಹಿತ, ಸ್ನೇಹಿತೆಯರು ಕಾಳಜಿಯಿಂದ ಪ್ರತಿಕ್ರಿಯಿಸಿದ್ದಾರೆ. ನಿಜ ಹೇಳಬೇಕೂ ಅಂದ್ರೆ ನಾನು ಈ ಥರದ ಚರ್ಚೇನೆ ಆಗುತ್ತೆ ಅನ್ಕೊಂಡಿರ್ಲಿಲ್ಲ. ಈಗ ಈ ಮಾತುಕತೆ ಇಲ್ಲಿಗೆ ನಿಲ್ಲಬಾರದು ಅನ್ನೋದು ನಿಮ್ಮೆಲ್ಲರ ಆಶಯವೂ ಕೂಡ ಅಂದುಕೊಂಡಿದೀನಿ. ನಾವು ಬ್ಲಾಗರುಗಳು ಬರಿ ಅಕ್ಷರ ಕುಟ್ಟಿ ಸುಮ್ನಾಗೋದಾದ್ರೆ ನಮ್ಗೂ, ಆಷಾಢಭೂತಿಗಳಿಗೂ ಏನೂ ವ್ಯತ್ಯಾಸ ಇರೊಲ್ಲ ಅಲ್ವ? ನಮ್ಮ ಕೈಲಿ ದೊಡ್ಡ ಮಟ್ಟದ ಬದಲಾವಣೆಗಳು ಸಾಧ್ಯವಾಗದೆ ಹೋಗಬಹುದು. ಆದರೆ ಶ್ರೀ ಮಾಡಿದ ತರಹ ನಮಗೆ, ನಮ್ಮ ಸುತ್ತಮುತ್ತ ಯಾರೊ ಹೆಣ್ಣುಮಕ್ಕಳಿಗೆ ತೊಂದರೆ ಆದಾಗ ದನಿಯೆತ್ತಿ ನಿಲ್ಲುವ ಧೈರ್ಯ ಬಂದರೆ ಸಾಕು. ನಮ್ಮಿಂದ ನಾಲಕ್ಕು ಹೆಣ್ಣುಮಕ್ಕಳು ಅರಿತು ಬೆದರದೆ ಓಡಾಡುವ ಹಾಗಾದರೆ ಸಾಕು. ನಮ್ಮಲ್ಲಿ ಅರ್ಧ ಜನ ಹೆಣ್ಣುಮಕ್ಕಳ ಮುಖದಮೇಲೆ ಕಂಡುಬರುವ ಹೆದರುಪುಕ್ಕಲುತನವೂ ಕಾಮಣ್ಣರುಗಳ ಅರಿವಿಗೆ ಬಂದು ಈವ್ ಟೀಸಿಂಗಿಗೆ ಕಾರಣವಾಗಿರೋದು ಸುಳ್ಳಲ್ಲ. ಆಫೀಸು, ಮಾರ್ಕೆಟು, ಬಸ್ಟಾಂಡು, ಫುಟ್ಪಾತು, ಮಾಲ್..ಎಲ್ಲ ಕಡೇನೂ ಇದೇ ಕತೆ. ಕೆಲವು ಕಡೆ ಖುಲ್ಲಂಖುಲ್ಲಾ ನಡೆದ್ರೆ ಕೆಲವುಕಡೆ ಈ ಹರಾಸ್ಮೆಂಟು ಪರೋಕ್ಷ ರೂಪ ತಾಳಿ ನಿದ್ದೆ ಕೆಡಿಸತ್ತೆ. ಆದರೆ We can make a difference by standing up against it. ಸಹಿಸ್ಕೊಳೋದು ತಪ್ಪು ಮಾಡಿದಷ್ಟೆ ತಪ್ಪು. ಮೊದಮೊದಲು ಕಷ್ಟವಾದೀತು. ಆಮೇಲೆ ಧೈರ್ಯ ಬಂದೇ ಬರತ್ತೆ. ಇದು ನಮ್ಮ ಜೀವನ. ಇದರ ಬಗ್ಗೆ ಒಳ್ಳೆಯದು, ಕೆಟ್ಟದು ಮಾತನಾಡುವ ಹಕ್ಕು ನಾವು ಕೊಟ್ಟವರಿಗೆ ಮಾತ್ರ ಇರೋದು. ಯಾವನೋ ಬೀದೀಲಿ ಹೋಗೋನಿಗೆ ನಮ್ಮ ಬಗ್ಗೆ ಅಸಹ್ಯ ಮಾತಾಡುವ, ನಮಗೆ ಅಸಹ್ಯವಾದ್ದನ್ನ ಮಾಡೋ ಹಕ್ಕು ಇಲ್ಲವೇ ಇಲ್ಲ. ಅದನ್ನ ಕಾನೂನು ಕೂಡ ಪುರಸ್ಕರಿಸೊಲ್ಲ ಅಂದಮೇಲೆ ಇನ್ನೇನು?

ಈ ಬಗ್ಗೆ ಮಾತಾಡುವಾ. ಯಾವಾಗ? ಎಲ್ಲಿ? ಸಜೆಸ್ಟ್ ಮಾಡ್ತೀರ?

-ಅಕ್ಕರೆಯೊಡನೆ, ಟೀನಾ.

36 thoughts on “ಹೀಗೆ ಶುರು ಮಾಡೋಣವೆ?

  1. ತವಿಶ್ರೀ,
    Bravo1 Bravo! ಅಂತು ಇಂತು ಒಂದು ಮೇಲ್ ಕ್ಯಾರೆಕ್ಟರು ಇಲ್ಲಿ ಎಂಟ್ರಿಕೊಟ್ಟು ನಮ್ಮೊಡನೆ ಕೂತು ಮಾತನಾಡುವ ಇಂಡಿಕೇಶನ್ನು ಕೊಟ್ಟಿದ್ದಕ್ಕೆ ಧನ್ಯವಾದ.
    ಎಲ್ರಿಗು,
    ಅರೆ, ಇಲ್ಲಿ ನಾವೇನೂ ಗಂಡಸರ ಮೇಲೆ ಯುದ್ಧಕ್ಕೆ ಇಳೀತಿಲ್ಲ ಸ್ವಾಮಿ. ನೀವೂ ನಮ್ಮ ಜತೆ ಮಾತುಕತೆಗೆ ಇಳಿದರೆ ಈ ಚರ್ಚೆಯ ವಿಭಿನ್ನ ಆಯಾಮಗಳು ಗೋಚರವಾಗಬಹುದೋ ಏನೊ. ಚಕೋರರು ಈಗಷ್ಟೆ ’ಮಾನಿನಿಯರ ದಂಡು’ ಅಂತ ತಮಾಶಿ ಮಾಡಿದರು. ಆದರೆ ಮಾನನೀಯರೂ ಇಲ್ಲಿ ಜತೆಸೇರದ ಹೊರತು ಕೆಲಸ ಸಂಪೂರ್ಣವಾಗದು ಎನ್ನುವದು ನನ್ನ ಅಭಿಪ್ರಾಯ. ಹೆಲೋಓಓಓಓಓ.. ಉತ್ರ ಹೇಳೋರು ಯಾರಾದ್ರು ಇದೀರಾಆಆಆಆಆ…
    -ಟೀನಾ.

  2. ನಾವಿದ್ದೀವಲ್ಲಾ ಉತ್ತರ ಹೇಳೋಕೆ, ಚರ್ಚೆ ಮಾಡೋಕೆ. ತವಿಶ್ರೀ ಜತೆಗೆ ನಾನೂ ಇರ್ತೀನಿ. ಹೇಗಿದ್ದರೂ ನಮ್ಮ ಮೇಲೆ ಯುದ್ಡಕ್ಕೆ ಇಳಿಯೋಲ್ಲ, ದಾಳಿ ಮಾಡೋಲ್ಲ ಅಂತ ಬೇರೆ ಗ್ಯಾರಂಟಿ ಕೊಟ್ಟಿದ್ದೀರಲ್ಲಾ?..ಹ್ಹ….ಹ್ಹ….ಹ್ಹ…
    ಸರಿ, ಯಾವಾಗ ಸೇರೋಣ ಅಂತ ಹೇಳಿ, ಶ್ರೀ ಹೇಳಿದಂತೆಯೇ ಭಾನುವಾರವಾದರೆ ಓಕೆ.
    ನಾವಡ

  3. ನಾನಂತೂ ಯಾವತ್ತಿಗೂ ರೆಡಿ. ಬಹಳಷ್ಟು ಫ್ರೀ ಕಾಫಿ ಇರಬೇಕಷ್ಟೆ. ಯಾಕೆಂದರೆ… ಐಡಿಯಾಗಳು ಬರಬೇಕಲ್ಲ. “A mathematician is a machine for turning coffee into theorems.” ಹಾಗೇ ಬ್ಲಾಗರ್ಸ್‍ಗೆ ಐಡಿಯಾಗಳು ಬರಬೇಕೆಂದರೆ ಕಾಫಿ ಬೇಕು.

  4. ಟೀನಾ ಮತ್ತು ಟೀಮ್…
    ನಿಮ್ಮ ಎರಡು ಪೋಸ್ಟ್ ಮತ್ತು ಪ್ರತಿಕ್ರಿಯೆಗಳನ್ನು ಇದೀಗ ಓದಿದೆ (ಸಿಂಧುಗೆ ಥ್ಯಾಂಕ್ಸ್).
    ಒಂದೆಡೆ ಸೇರಿ, ಮಾತುಕತೆಯಾಡಿ, ಏನೋ ಪರಿಹಾರದ ದಾರಿ ಕಂಡುಕೊಳ್ಳುವುದು ಒಳ್ಳೆಯ ಆರಂಭ.

    ಅದರ ಜೊತೆಗೆ, ಯಾವುದಾದರೂ “ಕರಾಟೆ ಶಾಲೆ”ಯವರು ಬೆಂಗಳೂರಿನ ಶಾಲೆಗಳಲ್ಲಿನ ಹೆಣ್ಣು ಮಕ್ಕಳಿಗೆ ಕರಾಟೆ ಕಲಿಸುತ್ತಾರಾ? ಶಾಲೆಗಳಲ್ಲಿ ಅದಕ್ಕೆ ಸಮಯಾವಕಾಶ ಕೊಡುತ್ತಾರಾ? ಮಕ್ಕಳ ಹೆತ್ತವರು ಅದಕ್ಕೆ ಅನುಮತಿ ಕೊಡುತ್ತಾರಾ? ಮುಖ್ಯವಾಗಿ ಮಕ್ಕಳು ಅದನ್ನು ಕಲಿಯಲು ತಯಾರಿರುತ್ತಾರಾ? ಇದನ್ನೆಲ್ಲ ತಿಳಿಯಿರಿ.

    ನಾನು ಶಾಲೆಗೆ ಹೋಗುತ್ತಿದ್ದಾಗ (ದ.ಕ.ಜಿಲ್ಲೆಯಲ್ಲಿ), ಆಮೇಲೆ ಬೆಂಗಳೂರಲ್ಲಿ ಬಸ್ಸುಗಳಲ್ಲಿ ಓಡಾಡುತ್ತಿದ್ದಾಗ, ಬೇಗನೇ ಕೈಗೆ ಸಿಗುವಂತೆ (ಹೆಚ್ಚಾಗಿ ಕೈಬಳೆಯಲ್ಲಿ) ಸೇಫ್ಟಿ ಪಿನ್ ಇಟ್ಟುಕೊಳ್ಳುತ್ತಿದ್ದೆ. ಎಷ್ಟೋ “ಹರಿದಾಡುವ” ಕೈ-ಕಾಲುಗಳಿಗೆ ನನ್ನ ಪಿನ್ನು ಪಾಠ ಕಲಿಸಿದೆ. ಸದ್ದಿಲ್ಲದೆ ಕಿರುಕುಳ ನಿಲ್ಲಿಸಿದ್ದೆ.

    ಹೆಣ್ಣುಮಕ್ಕಳಿಗೆ ತಮ್ಮಲ್ಲಿ ಆತ್ಮ ವಿಶ್ವಾಸವೂ ಬೇಕು. ಬೀದಿಯಲ್ಲಿ (ಬಸ್-ಸ್ಟಾಪ್’ನಲ್ಲಿ) ಯಾರಾದರೂ ಕೆಕ್ಕರಿಸಿ ನೋಡುತ್ತಿದ್ದಾರೆ ಅಂದ ಮಾತ್ರಕ್ಕೆ ನಾವು ಬೇರೆ ಕಡೆ ನಡೆದರೆ, ನೋಟ ತಿರುಗಿಸಿದರೆ, ನಮ್ಮ ಭಯ ಅವರಿಗೆ ಸಾಬೀತಾದಂತೆ. ಕೆಕ್ಕರಿಸಿದವರತ್ತ ತಿರುಗಿ ಕೆಕ್ಕರಿಸಿದರೆ, “ದೃಷ್ಟಿ ಯುದ್ಧ” ನಡೆಸಿದರೆ, ಹೆಚ್ಚಾಗಿ ಹಿಂದೆಗೆಯುತ್ತಾರೆ.

    ಇವೆಲ್ಲಕ್ಕಿಂತ ಮಿಗಿಲಾಗಿ… ಸಮಯ-ಸಂದರ್ಭ-ಪರಿಸರ ಇವುಗಳ ಪ್ರಜ್ಞೆ ಹೆಂಗಸರಿಗೆ ಬೇಕೇ ಬೇಕು.

  5. ಚೇತನಾ, ಶ್ರೀ, ಶ್ರೀಮಾತಾ, ನಾವಡ, ಪ್ರಸಾದ್, ತವಿಶ್ರೀ, ಚಕೋರ, ಸುಪ್ತದೀಪ್ತಿ ಹಾಗು ನಾನು..
    ಬರೆ ಇಷ್ಟೆ ಜನಾನೆ? ನಾಲಕ್ಕೇ ಜನ ಸೇರಿದರು ಪರವಾಯಿಲ್ಲ ನಿಜವಾಗಿ ಆಸಕ್ತಿ, ಕಾಳಜಿ ಇರುವವ್ರು ಖಂಡಿತ ಬನ್ನಿ. ಎಲ್ಲರಿಗು ಆಹ್ವಾನ ಕಳಿಸುವದಂತೂ ಗ್ಯಾರಂಟಿ.
    ಯಾವುದಾದರು ಭಾನುವಾರ ಅಂತ ಫಿಕ್ಸಾಗಿದೆ. ಈ ವಾರದೊಳಗೆ ಸಿಂಧು ಏನೋ ಕುಕ್ ಮಾಡಿ ತಿಳಿಸ್ತೀನಿ ಅಂದಿದಾರೆ. ವೆನ್ಯೂ ಬಗ್ಗೇನೆ ಯೋಚನೆ. ಒಂದು ಹತ್ತು ಜನರಾದರೆ ನನ್ನ ಪುಟ್ಟ ಗೂಡೇ ಸಾಕಾಗಬಹುದು. ಆದರೆ ಯಾರನ್ನಾದರು ಆಹ್ವಾನಿಸುವದಾದರೆ ಕೊಂಚ ಹಿಂಸೆಯೇ. ನಾನೂ ಚೇತನಾ ಇನ್ಫಾರ್ಮಲ್ಲಾಗಿ ಯಾವುದಾದರು ಪಾರ್ಕಿನಲ್ಲಿ ಗುಂಪುಸೇರಿಕೊಂಡು ಮಾತನಾಡಬಹುದಲ್ಲ ಎಂದೂ ಯೋಚನೆ ಮಾಡಿದ್ವಿ. ಹಾಗೆ ನೋಡೋದಾದರೆ ನನ್ನ ಮನೆಯ ಬಳಿ ಒಂದು ತಕ್ಕ ಮಟ್ಟಿಗೆ ಶಾಂತವಾಗಿರೋ ಪಾರ್ಕಿದೆ. ಡಿಸ್ಟರ್ಬೆನ್ಸು ಕಡಿಮೆ ಇರೋ ಯಾವುದಾದರು ಕೆಫೆಟೇರಿಯಾ ಯಾರಿಗಾದ್ರು ಗೊತ್ತಿದ್ದರೆ ಮುಂದಿನ ವಿಚಾರ ಮಾತನಾಡಬಹುದು. ಇನ್ನು ಈ ಟಾಪಿಕ್ಕಿನಲ್ಲಿ ಆಸಕ್ತಿ ವಹಿಸಬಹುದಾದ, ಸಲಹೆ ನೀಡಬಹುದಾದ ಒಂದೆರಡು ಜನರನ್ನು ನಾನೂ ಸಂಪರ್ಕಿಸುತ್ತೇನೆ.
    ಏನಾಗತ್ತೆ ನೋಡುವಾ.

  6. ನಾವೂ ಬರಬಹುದೋ? :)ಬಂದ್ರೆ ನಮಗೆ ಸೆಕ್ಯುರಿಟಿ ಕೊಡಬೇಕಾಗುತ್ತೆ. ಇಲ್ಲವೇ ನಾನೂ ಇನ್ನು ಮುಂದೆ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುದಿಲ್ಲಾ ಅಂತಾ ಪ್ರಮಾಣ ಮಾಡಬೇಕು.

    ಅಥವಾ ಪ್ರೇಕ್ಷಕರ ಗ್ಯಾಲರಿಯ ಪಾಸು ಕೊದ್ತೀರೋ? 🙂

  7. ಸಂತೋಷ,
    ಎಲ್ಲ ಮಾತು ಹಾಗಿರ್ಲಿ, ನೀವು ಬರೆ ಒಂದು ಅನುಭವದಿಂದ ಹೀಗಂದುಕೊಂಡುಬಿಟ್ರೆ ಹ್ಯಾಗೆ? ನೀವು ನಮ್ಮ ಸ್ನೇಹಿತರ ಬಳಗ. ಕಿತ್ತಾಟ ನಡೆದರೆ ಸ್ನೇಹಿತರ ಜತೆ ಓಡಾದೋದು, ಮಾತಾಡೋದು ಬಿಟ್ಬಿಡ್ತೀವಾ? ಖಂಡಿತ ಬನ್ನಿ. ಈ ಭೇಟಿ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಡಿಯದೆ ಹೋದರು, ನಮ್ಮ ವಿಚಾರವಿನಿಮಯದಲ್ಲಿ ಹೊಸತೇನಾದರು ಕಂಡುಬರಬೋದು. ಆಮೇಲೆ ಇಲ್ಲಿ ಬನ್ನಿ ಅಂತ ಕರೆಯೋ ಅವಶ್ಯಕತೆ ಸೈತ ಇಲ್ಲ. ಬರದಿದ್ರೆ ಚೆನ್ನಾಗಿರೊಲ್ಲ ಅಂತ ಹೇಳಬಹುದು ನಾನು!! 🙂

  8. @ ಸುಪ್ತದೀಪ್ತಿ – ಕರಾಟೆ ಕಲಿತರೆ ಒಳ್ಳೆಯದು – ನನ್ನ ಮಗಳು ಎರಡು ವರ್ಷ ಕರಾಟೆ ಅಭ್ಯಾಸ ಮಾಡಿ ಮಧ್ಯಕ್ಕೇ ಬಿಟ್ಟಳು – ಮಗ ಈಗ ಬ್ಲಾಕ್ ಬೆಲ್ಟ್ ಆಗಲಿದ್ದಾನೆ – ಅವರಿಬ್ಬರಿಂದಲೂ ಸಹಾಯ ತೆಗೆದುಕೊಳ್ಳಬಹುದು

    @ ಟೀನಾ ಆದರೆ ೧೮ ವರ್ಷಗಳಿಂದ ನಾವಿರೋದು ಮುಂಬಯಿಯಲ್ಲಿ! ಇನ್ನು ೮-೧೦ ವರ್ಷಗಳು ಬೆಂಗಳೂರಿನ ಕಡೆಗೆ ವರ್ಗವಾಗೋದು ಸಂದೇಹನೀಯ. ಮಕ್ಕಳಿಗೆ ಶಾಲಾ ಕಾಲೇಜು ರಜೆಯ ಸಮಯದಲ್ಲಿ ನಾವು ಬೆಂಗಳೂರಿನಲ್ಲಿ ಇರುತ್ತೇವೆ. 🙂

    ನನ್ನನ್ನು ಹೇಗೆ ಬಳಸಿಕೊಳ್ಳಬಹುದೋ ಹಾಗೆ ಬಳಸಿಕೊಳ್ಳಿ.

  9. ಸಂತೋಷ್, ನಿಮ್ಮ ತಂಟೆಗೆ ಯಾರಾದ್ರೂ ಬಂದ್ರೆ ನಾನ್ ನೋಡ್ಕೋತೀನಿ, ಧೈರ್ಯವಾಗಿ ಬನ್ನಿ;)
    ಭಿನ್ನಾಭಿಪ್ರಾಯಗಳಿಗೆ ಅಷ್ಟೆಲ್ಲ ಹೆದರೋ ಅವಶ್ಯಕತೆ ಇಲ್ಲ ಬಿಡ್ರೀ, ಅದನ್ನ personal levelಗೆ ತರಬೇಕಾಗಿಲ್ಲ, ತರೋದು ಸರಿಯೂ ಅಲ್ಲ – ಏನಂತೀರ?:)

  10. ಟೀನಾ ಮೇಡಮ್,
    ದಯವಿಟ್ಟು ಕ್ಷಮಿಸಿ. ನನ್ನನ್ನೂ ಲೆಕ್ಕಕ್ಕೆ ಹಿಡಿದಿದ್ರೆ, JB ಜೊತೆ ನನಗೂ ಒಂದು ಟಿಕೆಟ್ ತರಬೇಕಾದೀತು. ಆದ್ದರಿಂದ ನಾವಿಬ್ಬರೂ “ಪರದೇಶಿ” ಸಲಹೆಗಾರರು; ಹಾಗೆಯೇ ಇದ್ದುಬಿಡುತ್ತೇವೆ- ಸದ್ಯಕ್ಕೆ.

  11. ಜೆಬಿ,
    ಕಾಯ್ತಿರಿ, ಟಿಕೆಟು ಬರ್ತಾ ಇದೆ! ಅದು ಯಾವ ಕ್ಲಾಸು ಅಂದರೆ..ನೋಡೇ ಗಾಭರಿಯಾಗಿಬಿಡಬೇಕು ಅಂಥ ಕ್ಲಾಸಿನದು!! ಆಮೇಲೆ ದೋಸೇನ ಕುಕ್ ಮಾಡೊಲ್ಲ, ಹುಯ್ಯುತ್ತಾರೆ ಕಣ್ರಿ!!

    ಸುಪ್ತದೀಪ್ತಿ, ತವಿಶ್ರೀ
    😦 ಇರ್ಲಿ ಇರ್ಲಿ, ನೀವು ಬಂದಾಗ ಸುಮಾರು ಕೆಲಸ ರೆಡಿ ಮಾಡಿ ಇಡ್ತೇವೆ. ಅಲ್ಲಿವರೆಗು ವಿಶ್ರಾಂ!!

    ವಿಕಾಸ್,
    ಬರ್ಲಾ ಅಂದ್ರೇನು? ಕೇಳೋದೇನಿದೆ? ಬರ್ತಾ ಇರ್ಬೇಕು ಅಷ್ಟೆ!! 😉

    ಮನಸ್ವಿನಿ,
    ಸೇರಿಸ್ಕೊಳ್ಳೋದೇನಿಲ್ಲ ಕಣ್ರಿ, ಬಂದು ಸೇರಿದರಾಯಿತು!! ಯಾವಾಗಲು ಸ್ವಾಗತ ನಿಮಗೆ!! 🙂

    ಸಂತೋಷ,
    ಸದ್ಯಕ್ಕೆ ಪ್ರತಾಪಸಿಂಹರ ಬದಲು ನನ್ನನಿಮ್ಮಂಥ ಬ್ಲಾಗೀಕುರಿಗಳೆ ಸಾಕನ್ನಿಸತ್ತೆ. 🙂 ಆಮೇಲೆ ಪ್ರತಾಪಸಿಂಹರದು ಕನ್ನಡ ಬ್ಲಾಗಿದೆಯೆ?

    – ಟೀನಾ.

  12. ಯಾವ ದಿನ, ವಾರ, ತಿಥಿ, ನಕ್ಷತ್ರ, ಎಲ್ಲಿ, ಹೇಗೆ ಯಾವುದೂ ಇನ್ನೂ ನಿರ್ಧಾರ ಆದಂತಿಲ್ಲ… ಬೇಗ ನಿರ್ಧಾರ ಮಾಡಿಯಪ್ಪಾ! ಶುಭಸ್ಯ ಶೀಘ್ರಂ. ಅಲ್ಲಿ ಏನೇನು ಮೀಟಿದ್ರಿ ಅಂತ ನಂಗೊಂದು ಮಾತು ತಿಳಿಸಿ!

  13. ಸೇಫ್ಟಿಪಿನ್ ಸಾಬ್ರೆ,
    ಅಂಗಡಿಯೇನು, ನಮ್ಮ ಮೀಟಿಂಗೇನಾದ್ರು ಇಂಟರ್ನ್ನ್ಯಾಶನಲ್ ಲೆವೆಲಿಗೆ (!) ಹೋಗುವ ಹಾಗಾದರೆ ನಿಮಗೆ ಒಂದು ಮಲ್ಟಿನ್ಯಾಸನಲ್ ಕಂಪನಿಯನ್ನೆ ತೆರೆಯಬೇಕಾಗಿ ಬರಬಹುದು. ಸದ್ಯಕ್ಕೆ ನಿಮ್ಮದೊಂದು ಸ್ಟಾಲು ಇದ್ದರೆ ಒಳ್ಳೇದು!! 😉

    ಶ್ರೀಪ್ರಿಯೆ,
    ಮತ್ತೊಂದು ಶ್ರೀ!! ಇದೆಲ್ಲ ಬ್ಲಾಗಿನ ಮುಖಾಂತರವೆ ನಡೀತಿರೋದರಿಂದ ಸೊಲ್ಪ ತಡ ಆದೀತು. ಏನು ಮಾತಾಡಿದಿವಿ, ಗಲಾಟೆ ಮಾಡಿದಿವಿ ಅಂತ ನಿಮಗೆ ಹೇಳದೆ ಇರಲು ಆದೀತೆ?

    -ಟೀನಾ.

  14. ಛೆ…ಛೆ…ಛೆ…ಸೇಫ್ಟಿ ಪಿನ್ ಸಾಬ್ರು ನನ್ನ ಐಡಿಯ ಐಜಾಕ್ ಮಾಡ್ಬುಟ್ರಲ್ಲ? ನಾನು ಸದ್ಯದ ಕೆಲ್ಸ ಬುಟ್ಬುಟ್ಟು, ಬೆಂಗ್ಳೂರ್ಗ್ ಬಂದು ಓಸಾ ಪಿನ್ ಕಂಪ್ನಿ ಸುರು ಅಚ್ಕಳಾವ ಅಂತಿದ್ದೆ 😦 ಮೀಟಿಂಗು ಇಂಟರ್ ನ್ಯಾಸನಲ್ ಲೆವೆಲ್ಲಿಗೆ ಬರ್ಲಪ್ಪಾ. ನಮ್ಗೂ ವಸಿ ಕಾಸು ಮಾಡಾಕಾಯ್ತದೆ.

  15. ಈ ಚೇತನಾ,ಶ್ರೀ, ಶ್ರೀ, ಶ್ರೀ ಮತ್ತು ಟೀನಾ ಅವರ ಚಾಟೋಕ್ತಿಗಳಿಂದ ಪ್ರೇರಿತನಾಗಿ ನಾನೂ ಗಂಡಸರನ್ನು ದ್ವೇಷಿಸಲು ಆರಂಭಿಸಿದ್ದೇನೆ.
    ಹಾಗೆಂದ ಮಾತ್ರಕ್ಕೆ ಮೊದಲು ‘ಪ್ರೀತಿಸುತ್ತಿದ್ದೆ’ ಎಂದು ತಪ್ಪು ತಿಳಿದುಕೊಳ್ಳಬೇಡಿ.
    ಅದಕ್ಕೇ ಈ ಕಾರ್ಯಕ್ರಮಕ್ಕೆ ಒಂದು ಸೂಕ್ತ ‘ರಾಷ್ಟ್ರಗೀತೆ’ ಯನ್ನು ಸಿದ್ಧಪಡಿಸಿದ್ದೇನೆ. ಅದನ್ನು ಬ್ಲಾಗಿನಲ್ಲಿ ಹಾಕಿದ್ದೇನೆ.
    ಟ್ಯೂನು ಹಾಕೋರ್ಯಾರಾದ್ರೂ ಇದೀರಾ?

  16. ಈ ಮಹಿಳಾ ಆಯೋಗಕ್ಕೆ ನಮ್ಮ ಸ್ನೇಹಿತ ಸಾಹೇಬರೊಬ್ರು ಒಂದು ಹೆಸ್ರು ಸೂಚಿಸಿದ್ದಾರೆ… SPAM– Safty Pin Association for “MahiLe”– ಮಹಿಳೆಯರಿಗಾಗಿ ಮಹಾವೇದಿಕೆ(?)

    ಅವರು ದೂರದೂರಿನಲ್ಲಿ ಇರೋದ್ರಿಂದ ಬಚಾವಾಗಿದ್ದಾರೆ ಅಂತಲೂ ತಿಳಿಸಿದ್ದೇನೆ.

  17. ಈ ಮಹಿಳಾ ಆಯೋಗಕ್ಕೆ ನಮ್ಮ ಸ್ನೇಹಿತ ಸಾಹೇಬರೊಬ್ರು ಒಂದು ಹೆಸ್ರು ಸೂಚಿಸಿದ್ದಾರೆ… SPAM…..

    ..ಇದನ್ನ ಹೇಳಿದ್ದು ನಾನಲ್ಲ. ನಂಬಿ ಪ್ಲೀಸ್ 🙂

  18. ಮಿಸ್. ಕಿರು’ಚಾಟರ್ ಬಾಕ್ಸ್,
    ಪರವಾಗಿಲ್ವೆ ಗೆದ್ದೆನೆಂಬ ತಮ್ಮ ಅಟ್ಟಹಾಸ, ಕುಹಕ ಯಾವುದೇ ಅತ್ಯಾಚಾರಿಗಿಂತ ಕಡಿಮೆಯೇನಿಲ್ಲ……
    ತಾವು ಉತ್ತರವಾಗಿ ಬಳಸಿರುವ ಕಲಹ ಕೌಶಲ ಪದಗಳು, ವೈಯುಕ್ತಿಕ ಮಟ್ಟದ ಆರೋಪಗಳನ್ನು ತುಂಬ ಸಲೀಸಾಗಿ ಉಪಯೋಗಿಸಿದ್ದಿರಾ..
    ಇದು ಚರ್ಜೆ ಹುಟ್ಟು ಹಾಕುವವರ ಸ್ಥಿಮಿತ, ಹಾಗು ಲಕ್ಷಣವಂತೂ ಅಲ್ಲ. ಒಬ್ಬರ ತೇಜೋವಧೆಗೆ ಯಾವುದೇ ಮಟ್ಟಕ್ಕೆ ಹೋಗಬಲ್ಲಿರೆಂದು ಕಾಣಿಸುತ್ತದೆ.
    ಇನ್ನು ಅಸಮಾನತೆ, ಅತ್ಯಾಚಾರ ಇವುಗೆಳೆಲ್ಲದರ ದುಷ್ಪರಿಣಾಮ ಸಮಾಜದ ಎಲ್ಲರೂ ಅನುಭವಿಸುತ್ತಿರುತ್ತಾರೆ. ರೀತಿ ಬೇರೆಯಿರಬಹುದು. ತನ್ನ ಮಾನಸಿಕ ಕಹಿಯನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಂಡು ಸಣ್ಣ ಮಕ್ಕಳ ತಫ್ಫಿನಲ್ಲೂ ಭವಿಶ್ಯದ ಪೀಡಕನಂತೆ ಭಾವಿಸಿಕೊಂಡು ಅವರ ಮೇಲೆ ಎರಗುವ, ಪರಚುವ ನಿಮ್ಮಂತ ಮನೋವಿಕಾರಿ ಮಾನಿನಿಯರನ್ನು ಹುಡುಗರು ಅನುಭವಿಸಿರುತ್ತಾರೆ. ಬಾಲ್ಯದಲ್ಲಿ ಅದು ಉಂಟುಮಾದುವ ಆಘಾತಗಳು ಕಡಿಮೆಯೇನಲ್ಲ.
    ಹಾಗೆ ಇಲ್ಲಿ ಬಹಳ ಉರಿ ಬಿದ್ದಿರುವುದು ಸಂಸ್ಕ್ರತಿ ವಿಷಯದಲ್ಲಿ, ದೇಶದ ಪ್ರತಿಯೊಬ್ಬರಿಗೂ ಅದರ ಸಂಸ್ಕ್ರತಿಯನ್ನು ಟೀಕಿಸುವ, ಅಭಿಪ್ರಾಯ ಹೊಂದುವ ಅದಿಕಾರವಿದ್ದೆ ಇದೆ. ನಾವು ನಮ್ಮದಲ್ಲದೇ ಬೇರೆ ದೇಶದ ಸಂಸ್ಕ್ರತಿಯನ್ನು ಟೀಕಿಸಲು ಬರುವುದಿಲ್ಲ. ತಮ್ಮ ಮನೆಯ, ಜನಾಂಗದ ಆಚರಣೆಗಳನ್ನೆ ದೇಶದ ಸಂಸ್ಕ್ರತಿಯನ್ನಾಗಿ ಬಿಂಬಿಸಲು, ಪ್ರಚಾರ ಮಾಡ ಹೊರಟವರಿಗೆ ಹೀಗೆ ಉರಿ ಬೀಳುವುದು ಸಹಜ. ತಮ್ಮ ಲೇಖನದಲ್ಲಿ ಎಲ್ಲಾ ಗಂಡಸರೂ ದುರುದ್ದೇಶದಿಂದಲೇ ನೋಡುತ್ತಿದ್ದರು ಎಂದಿದ್ದೀಯೆ ಹಳದಿಯಾಗಿ ನೋಡುವುದು ಅಭ್ಯಾಸ ಆಗಿಬಿಟ್ಟಿರಬೇಕು. ಚರ್ಚೆ ಹುಟ್ಟುಹಾಕುವವರು ಹೀಗೆಲ್ಲಾ ಬಾಯಿಮಾಡಿ, ನೈಲ್ ಪಾಲಿಷ್ ನ ಪಂಜವನ್ನು ತೋರಿಸಿದರೆ ಬಂದವರು ಆಯ್ತು ಮೇಡಮ್ ಯಾವಗಲೂ ಬ್ರಾಂಡೆಡ್ ಖಾರದಪುಡಿಯನ್ನೆ ಉಪಯೋಗಿಸಿ ಎಂದು ಅಚ್ಚ ಅಚ್ಚ ಹೇಳಿ ಹೋಗಬೇಕಾಗುತ್ತದೆ ಇನ್ನು ಚಿಂತನೆ ಖಾರದಪುಡಿಗಿಂತ ಮುಂದೆ ಎಲ್ಲಿ ಹೋಗುತ್ತದೆ.
    ಇನ್ನು ಚೇತನಾ, ನಾಲಿಗೆ ಇರುವಷ್ಟು ಹರಿಬಿಟ್ಟಿದ್ದೀಯೇ, ಅಪ್ಪಟ ಗಂಡಸ್ತನದ ಬಗ್ಗೆ ಮಾತಾಡಿದ್ದೀ. ಅವಶ್ಯಕತೆಯಿಲ್ಲದಿದ್ದರೂ.
    ನಿನ್ನನ್ನು ನೀನು ಗೂಷ್ಲು ಎಂದು ಕರೆದುಕೊಂಡಿರುವುದು ಸರಿ, ಹೀಗೆ ಹೇಳಿಕೊಂಡಿರುವುದು ತಾವು ತಮ್ಮ ಅಪ್ಪಟ ಹೆಣ್ತನದ ಬೇಲಿ ಹಾರಿರುವ ಮತ್ತು ಹಾರುವ ಕುರುಹು ತವಕ ತೋರಿಸುತ್ತದೆ ಅಂತ ನಾನು ಹೇಳಬೇಕಾಗುತ್ತದೆ.
    ಇದನ್ನೆಲ್ಲಾ ಓದಿದ ಮೇಲೆ ಚಾಟರ್ ಬಾಕ್ಸ್ ಮತ್ತೆ ಸಿಡಿಯುತ್ತದೆ ಅದರೆ ತಮ್ಮ ಕಲಹ ಚಾತುರ್ಯವನ್ನ ಬೀದಿನಲ್ಲಿ ಮಟ್ಟಕ್ಕೆ ಕೊಂಡು ಹೋಗುವುದಿಲ್ಲ ಎಂದುಕೊಂಡಿದ್ದೇನೆ.
    ಮತ್ತೆ ನೋಡಲು ಹೋಗುವುದಿಲ್ಲ, ಏಕೆಂದರೆ ಎಲ್ಲರೂ ಕಿರುಚಾಟರ್ ಬಾಕ್ಸ್ ಗಳಂತೆಯೇ ಕಾಣುವ ಅಪಾಯವಿದೆ.

Leave a reply to ಸುಪ್ತದೀಪ್ತಿ ಪ್ರತ್ಯುತ್ತರವನ್ನು ರದ್ದುಮಾಡಿ